ಬಿಎಸ್-6 ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ವಿತರಣೆಗೆ ಸಜ್ಜಾದ ಇಸುಝು

ಇಸುಝು ಇಂಡಿಯಾ ಕಂಪನಿಯು ಕಳೆದ ವಾರವಷ್ಟೇ ತನ್ನ ಜನಪ್ರಿಯ ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ಬಿಎಸ್-6 ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಈಗಾಗಾಲೇ ಪ್ರಮುಖ ಡೀಲರ್ಸ್‌ಗಳಲ್ಲಿ ಸ್ಟಾಕ್ ಮಾಡಲಾಗುತ್ತಿದೆ.

ಬಿಎಸ್-6 ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ವಿತರಣೆಗೆ ಸಜ್ಜಾದ ಇಸುಝು

ಸದ್ಯ ಕೋವಿಡ್ ಪರಿಣಾಮ ವಿಧಿಸಲಾಗಿರುವ ಲಾಕ್‌ಡೌನ್‌ದಿಂದ ಹೊಸ ಕಾರಿನ ವಿತರಣೆಯನ್ನು ತಡೆದಿರುವ ಇಸುಝು ಕಂಪನಿಯು ಮುಂದಿನ ವಾರದಿಂದ ಹೊಸ ಸುರಕ್ಷಾ ಮಾರ್ಗಸೂಚಿಗಳೊಂದಿಗೆ ವಿತರಣೆ ಆರಂಭಿಸುವ ಸಿದ್ದತೆಯಲ್ಲಿದ್ದು, ಹೊಸ ಪಿಕ್ಅಪ್ ಮಾದರಿಯು ಈ ಬಾರಿ ಹಲವಾರು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿವೆ.

ಬಿಎಸ್-6 ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ವಿತರಣೆಗೆ ಸಜ್ಜಾದ ಇಸುಝು

ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ವಿನೂತನ ಹೈ-ಲ್ಯಾಂಡರ್ ಬೆಸ್ ವೆರಿಯೆಂಟ್‌ನೊಂದಿಗೆ ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೈ-ಲ್ಯಾಂಡರ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 16.98 ಲಕ್ಷ ಬೆಲೆ ಹೊಂದಿದ್ದರೆ, ಜೆಡ್ ಸೀರಿಸ್ ಮಾದರಿಯು ರೂ. 19.98 ಲಕ್ಷದಿಂದ ರೂ.24.49 ಲಕ್ಷ ಬೆಲೆ ಹೊಂದಿವೆ.

ಬಿಎಸ್-6 ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ವಿತರಣೆಗೆ ಸಜ್ಜಾದ ಇಸುಝು

ಬಿಎಸ್-6 ಇಸುಝು ಡಿ-ಕ್ರಾಸ್ ವಿ-ಕ್ರಾಸ್ ಮಾದರಿಯಲ್ಲಿ ಹೈ-ಲ್ಯಾಂಡರ್ ಮಾದರಿಯು ಬೆಸ್ ವೆರಿಯೆಂಟ್ ಆಗಿ ಮಾರಾಟಗೊಳ್ಳಲಿದ್ದು, ಮ್ಯಾನುವಲ್ ಕಂಟ್ರೋಲ್ ಫೀಚರ್ಸ್ ಹೊಂದಿರುವ ಹೈ-ಲ್ಯಾಂಡರ್ ಪಿಕ್ಅಪ್ ಮಾದರಿಯು ಆರಂಭಿಕ ಪಿಕ್ಅಪ್ ಮಾದರಿಯನ್ನು ಖರೀದಿ ಬಯುಸುವ ಗ್ರಾಹಕರಿಗಾಗಿ ಸಿದ್ದಪಡಿಸಿದೆ.

ಬಿಎಸ್-6 ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ವಿತರಣೆಗೆ ಸಜ್ಜಾದ ಇಸುಝು

ಡಿ-ಕ್ರಾಸ್ ವಿ-ಕ್ರಾಸ್ ಜೆಡ್ ಸರಣಿಯಲ್ಲಿ ಇಸುಝು ಕಂಪನಿಯು ಗ್ರಾಹಕರ ಬೇಡಿಕೆ ಅನುಸಾರವಾಗಿ ಜೆಡ್ 2 ವೀಲ್ಹ್ ಡ್ರೈವ್ ಆಟೋಮ್ಯಾಟಿಕ್, ಜೆಡ್ 4 ವೀಲ್ಹ್ ಡ್ರೈವ್ ಮ್ಯಾನುವಲ್ ಮತ್ತು ಜೆಡ್ ಪ್ರೆಸ್ಟಿಜ್ 4 ವೀಲ್ಹ್ ಡ್ರೈವ್ ಆಟೋಮ್ಯಾಟಿಕ್ ಮಾದರಿಗಳನ್ನು ಪರಿಚಯಿಸಲಾಗಿದೆ.

ಬಿಎಸ್-6 ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ವಿತರಣೆಗೆ ಸಜ್ಜಾದ ಇಸುಝು

ಹೊಸ ಪಿಕ್‌ಅಪ್ ವಾಹನದಲ್ಲಿ ಮರುವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್, ಟೈಲ್‌ಗೆಟ್ ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದ್ದು, ಹೊಸ ಪಿಕ್ಅಪ್ ಎಸ್‌ಯುವಿಯ ಒಳಭಾಗದ ತಾಂತ್ರಿಕ ಅಂಶಗಳಲ್ಲೂ ಬದಲಾವಣೆ ಮಾಡಲಾಗಿದೆ. ಬೆಸ್ ವೆರಿಯೆಂಟ್‌ ಸೇರಿದಂತೆ ಜೆಡ್ ಸರಣಿಯಲ್ಲೂ ಹಲವಾರು ಪ್ರೀಮಿಯಂ ಫೀಚರ್ಸ್‌ಗಳಿದ್ದು, ಬಿ-ಎಲ್ಇಡಿ ಪ್ರೊಜೆಕ್ಟರ್, ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಟೈಲ್‌ಲೈಟ್ಸ್, 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಸೇರಿದಂತೆ ಆರಾಮದಾಯಕ ಆಸನ ಸೌಲಭ್ಯ ಜೋಡಿಸಿದೆ.

ಬಿಎಸ್-6 ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ವಿತರಣೆಗೆ ಸಜ್ಜಾದ ಇಸುಝು

ಬಿಎಸ್-6 ವಿ-ಕ್ರಾಸ್ ಮಾದರಿಯಲ್ಲಿ ಇಸುಝು ಕಂಪನಿಯು ಈ ಹಿಂದಿನ 2.5-ಲೀಟರ್ ಡೀಸೆಲ್ ಮಾದರಿಯನ್ನು ಸ್ಥಗಿತಗೊಳಿಸಲಾಗಿದ್ದು, ಹೈ ಎಂಡ್ ಮಾದರಿಯಲ್ಲಿದ್ದ 1.9-ಲೀಟರ್ 4-ಸಿಲಿಂಡರ್ ಕಾಮನ್ ರೈಲ್ ಡೀಸೆಲ್ ಎಂಜಿನ್‌ ಮಾದರಿಯನ್ನೇ ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡುತ್ತಿದೆ.

ಬಿಎಸ್-6 ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ವಿತರಣೆಗೆ ಸಜ್ಜಾದ ಇಸುಝು

1.9-ಲೀಟರ್ ಡೀಸೆಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 161-ಬಿಎಚ್‌ಪಿ ಮತ್ತು 360-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಆರಂಭಿಕ ಮಾದರಿಗಳಲ್ಲಿ 2 ವೀಲ್ಹ್ ಡ್ರೈವ್ ಮತ್ತು ಟಾಪ್ ಎಂಡ್ ಮಾದರಿಗಳಲ್ಲಿ ಶಿಫ್ಟ್ ಆನ್-ಫ್ಲೈ 4 ವೀಲ್ಹ್ ಡ್ರೈವ್ ಸಿಸ್ಟಂ ಹೊಂದಿರಲಿದೆ.

ಬಿಎಸ್-6 ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ವಿತರಣೆಗೆ ಸಜ್ಜಾದ ಇಸುಝು

ಹೊಸ ಡಿ-ಮ್ಯಾಕ್ಸ್ ವಿ-ಕ್ರಾಸ್ ಟ್ರಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಕಾಯಿಲ್ ಸ್ಪ್ರಿಂಗ್ ಮತ್ತು ಆಂಟಿ-ರೋಲ್ ಬಾರ್ ಮತ್ತು ಸಾಫ್ಟ್ ರೈಡ್, ಹಿಂಭಾಗದಲ್ಲಿ ಲೀಫ್ ಸ್ಪಿರ್ಗ್ ಡಬಲ್ ವಿಷ್ಬೋನ್ ಅನ್ನು ಒಳಗೊಂಡಿದೆ.

ಬಿಎಸ್-6 ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ವಿತರಣೆಗೆ ಸಜ್ಜಾದ ಇಸುಝು

ಹೊಸ ವಾಹನ ಬ್ರೇಕಿಂಗ್ ಸಿಸ್ಟಂ ಕೂಡಾ ಉತ್ತಮವಾಗಿದ್ದು, ವ್ಯಾಕ್ಯೂಮ್ ಅಸಿಸ್ಟೆಡ್ ಹೈಡ್ರಾಲಿಕ್ ಬ್ರೇಕ್, ಮುಂಭಾಗದಲ್ಲಿ ಡಿಸ್ಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಹೊಂದಿರಲಿದ್ದು, 3,095 ಎಂಎಂ ಉದ್ದದ ವ್ಹೀಲ್‌ಬೇಸ್‌‌ನೊಂದಿಗೆ 5,295 ಎಂಎಂ ಉದ್ದ, 1,860 ಎಂಎಂ ಅಗಲ ಮತ್ತು 1,840 ಎಂಎಂ ಎತ್ತರ ಹೊಂದಿದೆ.

ಬಿಎಸ್-6 ಡಿ-ಮ್ಯಾಕ್ಸ್ ವಿ-ಕ್ರಾಸ್ ಪಿಕ್ಅಪ್ ವಿತರಣೆಗೆ ಸಜ್ಜಾದ ಇಸುಝು

ಸುರಕ್ಷತೆಗಾಗಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್ಸಿ ), ಹಿಲ್ ಸ್ಟಾರ್ಟ್ ಅಸಿಸ್ಟ್ (ಎಚ್‌ಎಎಸ್), ಕ್ರೂಸ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್ (ಎಚ್‌ಡಿಸಿ), ಸೈಡ್ ಏರ್‌ಬ್ಯಾಗ್, ರೂಫ್ ಕರ್ಟನ್, 18-ಇಂಚಿನ ಅಲಾಯ್ ವೀಲ್ಹ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಟ್ರಾಸ್‌ಫರ್‌ಕೇಸ್ ಪ್ರೊಟೆಕ್ಟರ್ ಫೀಚರ್ ಗಳನ್ನು ಒಳಗೊಂಡಿದೆ.

Article Published On: Sunday, May 30, 2021, 11:13 [IST]
English summary
BS6 Isuzu D-Max V-Cross Starts Reaching Dealerships. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+