Just In
- 1 hr ago
ಅನಾವರಣವಾಯ್ತು ಫೋಕ್ಸ್ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್ಸ್ಪೋರ್ಟ್ 45 ಕಾರು
- 3 hrs ago
35 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಉಚಿತ ಲಸಿಕೆ ನೀಡಲು ಮುಂದಾದ ಟಿವಿಎಸ್ ಕಂಪನಿ
- 5 hrs ago
ವಾರದ ಪ್ರಮುಖ ಸುದ್ದಿ: ಏರ್ಬ್ಯಾಗ್ ಕಡ್ಡಾಯ, ಬಿಡುಗಡೆಗೆ ಸಜ್ಜಾದ ಸಿಟ್ರನ್, ಟೊಯೊಟಾ ನೌಕರರ ಮುಷ್ಕರ ಅಂತ್ಯ!
- 15 hrs ago
ವೆಂಟೊ ಟ್ರೆಂಡ್ಲೈನ್ ವೆರಿಯೆಂಟ್ ಬುಕ್ಕಿಂಗ್ ಪ್ರಕ್ರಿಯೆಗೆ ಸ್ಥಗಿತಗೊಳಿಸಿದ ಫೋಕ್ಸ್ವ್ಯಾಗನ್
Don't Miss!
- Sports
ಐಪಿಎಲ್ 2021: ಅಧಿಕೃತ ವೇಳಾಪಟ್ಟಿ ಬಿಡುಗಡೆ, ಮೊದಲ ಪಂದ್ಯದಲ್ಲಿ ಆರ್ಸಿಬಿಗೆ ಮುಂಬೈ ಎದುರಾಳಿ
- News
ಊಹಾಪೋಹಗಳಿಗೆ ತೆರೆ: ಖ್ಯಾತ ನಟ ಮಿಥುನ್ ಚಕ್ರವರ್ತಿ ಬಿಜೆಪಿ ಸೇರ್ಪಡೆ
- Movies
'ಕೋಟಿಗೊಬ್ಬ' ಸುದೀಪ್ ನೋಡಿ ಅಭಿಮಾನಿಗಳು ಫುಲ್ ಖುಷ್
- Finance
ಕ್ರಿಪ್ಟೋಕರೆನ್ಸಿ ಬಗ್ಗೆ ಕುತೂಹಲದ ಹೇಳಿಕೆ ಕೊಟ್ಟ ಸಚಿವ ಠಾಕೂರ್
- Lifestyle
"ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?"
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಫೀಚರ್ ಪಡೆಯಲಿದೆ ಬಿಎಸ್-6 ಟಾಟಾ ಹೆಕ್ಸಾ
ಟಾಟಾ ಮೋಟಾರ್ಸ್ ತನ್ನ ಹೊಸ ಸಫಾರಿ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದರೊಂದಿಗೆ ಟಾಟಾ ತನ್ನ ಹೆಕ್ಸಾ ಮಾದರಿಯನ್ನು ನವೀಕರಿಸಿ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಗೊಳಿಸಲಿದೆ.

ಸ್ವದೇಶಿ ವಾಹನ ತಯಾರಕ ಕಂಪನಿಯಾದ ಟಾಟಾ ತನ್ನ ಹೆಕ್ಸಾ ಮಾದರಿಯ ಸ್ಪಾಟ್ ಟೆಸ್ಟ್ ಈಗಾಗಲೇ ಭಾರತದಲ್ಲಿ ಪ್ರಾರಂಭಿಸಲಾಗಿದೆ. ಈ ಹೊಸ ಟಾಟಾ ಹೆಕ್ಸಾ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂಗಾಗಿ ಸಾಫ್ಟ್‌ವೇರ್ ನವೀಕರಣವನ್ನು ಮಾಡಲಾಗಿದೆ, ಹೊಸದಾಗಿ ಹೆಡ್-ಯುನಿಟ್ ಮತ್ತು ಆಪಲ ಕಾರ್ ಪ್ಲೇ ಫೀಚರ್ ಅನ್ನು ಪಡೆದುಕೊಳ್ಳಲಿದೆ. ಹಿಂದಿನ ಮಾದರಿಯ ಹೆಕ್ಸಾದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂನಲ್ಲಿ ಕೇವಲ ಆಂಡ್ರಾಯ್ಡ್ ಆಟೋವನ್ನು ಮಾತ್ರ ಹೊಂದಿತ್ತು.

ಇದೀಗೆ ಹೊಸ ಹೆಕ್ಸಾ ಮಾದರಿಯ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ನವೀಕರಿಸಲಾಗಿದ್ದು, ಇದು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿಯನ್ನು ಹೊಂದಿರಲಿದೆ. ಇನ್ನು ಬಿಡುಗಡೆಯಾಗಲಿರುವ ಹೊಸ ಹೆಕ್ಸಾ ಮಾದರಿಯಲ್ಲಿ ಐಫೋನ್ ಬಳಕೆದಾರರಿಗೆ ತಮ್ಮ ಫೋನ್‌ಗಳನ್ನು ಇನ್ಫೋಟೈನ್‌ಮೆಂಟ್ ಹೆಡ್-ಯೂನಿಟ್‌ಗೆ ಕನೆಕ್ಟ್ ಮಾಡಲು ಅನುವು ಮಾಡಿಕೊಡುತ್ತದೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಟಾಟಾ ಹೆಕ್ಸಾ ಎಸ್‍ಯುವಿಯನ್ನು ಇಂಪ್ಯಾಕ್ಟ್ ವಿನ್ಯಾಸದಡಿಯಲ್ಲಿ ಅಭಿವೃದಿ ಪಡಿಸಲಾಗುತ್ತದೆ. ಇನ್ನು ಇತ್ತೀಚೆಗೆ ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ಟಾಟಾ ಹೆಕ್ಸಾ ಬೇಸ್ ಸ್ಪೇಕ್ 4×4 ರೂಪಾಂತರವಾಗಿದೆ. ಹೊಸ ಟಾಟಾ ಹೆಕ್ಸಾ ಹೆಚ್ಚಿನ ರೂಪಾಂತರಗಳು ಡ್ಯುಯಲ್-ಟೋನ್ ಅಲಾಯ್ ವ್ಹೀಲ್ ಗಳೊಂದಿಗೆ ಬರುತ್ತದೆ.

ಇನ್ನು ಈ ಹೊಸ ಟಾಟಾ ಹೆಕ್ಸಾ ಎಸ್‍ಯುವಿ ಆಕರ್ಷಕ ಲುಕ್ ಅನ್ನು ಹೊಂದಿದೆ. ಹೊಸ ಟಾಟಾ ಹೆಕ್ಸಾ ಎಸ್‍ಯುವಿ ಬೈ-ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ಅದರ ಬಾಡಿವರ್ಕ್ ಸುತ್ತಲೂ ಕ್ರೋಮ್‌ನೊಂದಿಗೆ ಒಳಗೊಂಡಿದೆ.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಈ ಟಾಟಾ ಹೆಕ್ಸಾ ಎಸ್‍ಯುವಿಯ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ. ಇನ್ನು ಈ ಹೊಸ ಎಸ್‍ಯುವಿಯಲ್ಲಿ ಹಿಂದಿನ ಮಾದರಿಯಲ್ಲಿದ್ದ ಅದೇ 2.2-ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ.

ಈ ಎಂಜಿನ್ ಎರಡು ರೀತಿಯಲ್ಲಿ ಟ್ಯೂನ್ ಮಾಡಲಾಲಾಗುತ್ತದೆ. ಹೈ ಸ್ಪೆಕ್ ಮಾದರಿಯ ಎಂಜಿನ್ 154 ಬಿಹೆಚ್‌ಪಿ ಪವರ್ ಮತ್ತು 400 ಎನ್‌ಎಂ ಪೀಕ್ ಟಾರ್ಕ್ ಉತ್ಪಾದಿಸಿದ್ದರೆ, ಲೋ ಸ್ಪೇಕ್ ಮಾದರಿಯು 140 ಬಿಹೆಚ್‌ಪಿ ಪವರ್ ಮತ್ತು 320 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ಟಾಟಾ ಹೆಕ್ಸಾ ಉತ್ತಮ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸುತ್ತೇವೆ. ಹೊಇನ್ನು ಟಾಟಾ ಹೆಕ್ಸಾ ಎಸ್‍ಯುವಿಯು ಏಳು ಸೀಟುಗಳ ಮಾದರಿಯಾಗಿರಲಿದೆ. ಹೊಸ ಟಾಟಾ ಸಫಾರಿ ಎಡಿಷನ್ ಆಫ್-ರೋಡ್ ಸ್ಟೈಲಿಂಗ್ ಅನ್ನು ಹೊಂದಿದೆ.

ಟಾಟಾ ತನ್ನ ಬಹುನಿರೀಕ್ಷಿತ ಸಫಾರಿ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ತಿಂಗಳು ಬಿಡುಗಡೆಗೊಳಿಸಲಾಗುತ್ತದೆ. ಇನ್ನು ಈ ಹೆಕ್ಸಾ ಎಸ್‍ಯುವಿಯನ್ನು ಈ ವರ್ಷದ ಮಧ್ಯಾಂತರ ಅವಧಿಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.