ಭಾರತದಲ್ಲಿ ಲಭ್ಯವಿರುವ ಬಜೆಟ್ ಬೆಲೆಯ ಎಲೆಕ್ಟ್ರಿಕ್ ಕಾರುಗಳಿವು

ಗಗನಕ್ಕೇರುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ ವಾಹನ ಸವಾರರನ್ನು ಅನಿವಾರ್ಯವಾಗಿ ಎಲೆಕ್ಟ್ರಿಕ್ ವಾಹನ ಖರೀದಿಸುವಂತೆ ಮಾಡಿದೆ. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಾಹನ ತಯಾರಕ ಕಂಪನಿಗಳು ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ.

ಭಾರತದಲ್ಲಿ ಲಭ್ಯವಿರುವ ಬಜೆಟ್ ಬೆಲೆಯ ಎಲೆಕ್ಟ್ರಿಕ್ ಕಾರುಗಳಿವು

ಭಾರತದಲ್ಲಿ Tata Motors, MG Motor, Hyundai ಸೇರಿದಂತೆ ಹಲವು ಕಂಪನಿಗಳು ತಮ್ಮ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿವೆ. ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸ ಬಯಸಿರುವವರಿಗೆ ಯಾವ ಕಾರುಗಳನ್ನು ಖರೀದಿಸಬೇಕೆಂಬ ಗೊಂದಲ ಉಂಟಾಗುವುದು ಸಹಜ. ಈ ಲೇಖನದಲ್ಲಿ ಬಜೆಟ್ ಬೆಲೆಯ ಎಲೆಕ್ಟ್ರಿಕ್ ಕಾರುಗಳಾದ Tata Tigor EV, Nexon EV, MG ZS EV ಹಾಗೂ Hyundai Kona ಎಲೆಕ್ಟ್ರಿಕ್ ಕಾರುಗಳ ಬಗೆಗಿನ ವಿವರಗಳನ್ನು ನೋಡೋಣ.

ಭಾರತದಲ್ಲಿ ಲಭ್ಯವಿರುವ ಬಜೆಟ್ ಬೆಲೆಯ ಎಲೆಕ್ಟ್ರಿಕ್ ಕಾರುಗಳಿವು

ಮೊದಲು ಈ ನಾಲ್ಕು ಎಲೆಕ್ಟ್ರಿಕ್ ಕಾರುಗಳ ನಡುವಿನ ಬೆಲೆ ವ್ಯತ್ಯಾಸವನ್ನು ನೋಡೋಣ. ಟಾಟಾ ಮೋಟಾರ್ಸ್ ಕಂಪನಿಯು ಇತ್ತೀಚಿಗಷ್ಟೇ ತನ್ನ ಟಿಗೋರ್ ಎಲೆಕ್ಟ್ರಿಕ್ ಕಾರ್ ಅನ್ನು ಅನಾವರಣಗೊಳಿಸಿತ್ತು. ಈ ಕಾರಿನ ಬೆಲೆಯನ್ನು ಇನ್ನೂ ಘೋಷಿಸಲಾಗಿಲ್ಲ. ಆದರೆ ಈ ಎಲೆಕ್ಟ್ರಿಕ್ ಕಾರಿನ ಬೆಲೆ ರೂ. 9 ಲಕ್ಷಗಳಿಂದ ರೂ. 10 ಲಕ್ಷಗಳಾಗುವ ನಿರೀಕ್ಷೆಗಳಿವೆ.

ಮಾದರಿಗಳು ಬೆಲೆಗಳು (ಎಕ್ಸ್ ಶೋರೂಂ ದರ)
ಟಾಟಾ ಟಿಗೋರ್ ಇವಿ ₹ 9 -₹ 10 ಲಕ್ಷ (ಅಂದಾಜು)
ಟಾಟಾ ನೆಕ್ಸಾನ್ ಇವಿ ₹ 13.99 - ₹ 16.85 ಲಕ್ಷ
ಎಂಜಿ ಝಡ್‌ಎಸ್ ಇವಿ ₹ 20.99 - ₹ 24.18 ಲಕ್ಷ
ಹ್ಯುಂಡೈ ಕೋನಾ ಇವಿ ₹ 23.79 - ₹23.97 ಲಕ್ಷ
ಭಾರತದಲ್ಲಿ ಲಭ್ಯವಿರುವ ಬಜೆಟ್ ಬೆಲೆಯ ಎಲೆಕ್ಟ್ರಿಕ್ ಕಾರುಗಳಿವು

ಈ ಪಟ್ಟಿಯನ್ನು ನೋಡಿದಾಗ ಟಾಟಾ ಮೋಟಾರ್ಸ್ ಕಂಪನಿಯು ಬಿಡುಗಡೆಗೊಳಿಸಲಿರುವ ಟಿಗೋರ್ ಎಲೆಕ್ಟ್ರಿಕ್ ಕಾರು ಉಳಿದ ಎಲೆಕ್ಟ್ರಿಕ್ ಕಾರುಗಳಿಗಿಂತ ಕಡಿಮೆ ಬೆಲೆಯನ್ನು ಹೊಂದುವ ಸಾಧ್ಯತೆಗಳಿವೆ. ಇದರಿಂದ ಈ ಕಾರು ಭಾರತದ ಹಲವು ಗ್ರಾಹಕರ ಮೊದಲ ಆಯ್ಕೆಯ ಎಲೆಕ್ಟ್ರಿಕ್ ಕಾರ್ ಆಗುವ ನಿರೀಕ್ಷೆಗಳಿವೆ.

ಭಾರತದಲ್ಲಿ ಲಭ್ಯವಿರುವ ಬಜೆಟ್ ಬೆಲೆಯ ಎಲೆಕ್ಟ್ರಿಕ್ ಕಾರುಗಳಿವು

ಚಲನ ಶಕ್ತಿಯ ವಿಷಯದಲ್ಲಿ ಈ ಎಲ್ಲಾ ನಾಲ್ಕು ಎಲೆಕ್ಟ್ರಿಕ್ ಕಾರುಗಳು ಒಂದೇ ರೀತಿಯ ಮೋಟರ್ ಹೊಂದಿವೆ. ಎಂಜಿ ಝಡ್‌ಎಸ್ ಎಲೆಕ್ಟ್ರಿಕ್ ಕಾರಿನಲ್ಲಿರುವ ಎಲೆಕ್ಟ್ರಿಕ್ ಮೋಟರ್ 140 ಬಿ‌ಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಇನ್ನು ಟಾಟಾ ಮೋಟಾರ್ಸ್ ನ ಎರಡೂ ಎಲೆಕ್ಟ್ರಿಕ್ ಕಾರುಗಳು ಒಂದೇ ರೀತಿಯ ಕಾರ್ಯಕ್ಷಮತೆಯನ್ನು ಹೊಂದಿವೆ.

ವಿಶೇಷತೆಗಳು ಟಾಟಾ ಟಿಗೋರ್ ಇವಿ ಟಾಟಾ ನೆಕ್ಸಾನ್ ಇವಿ ಎಂಜಿ ಝಎಸ್ ಇವಿ ಹ್ಯುಂಡೈ ಕೋನಾ
ಪವರ್ 126 ಬಿ‌ಹೆಚ್‌ಪಿ 126 ಬಿ‌ಹೆಚ್‌ಪಿ 140ಬಿ‌ಹೆಚ್‌ಪಿ 133 ಬಿ‌ಹೆಚ್‌ಪಿ
ಟಾರ್ಕ್ 245 ಎನ್ಎಂ 245 ಎನ್ಎಂ 353 ಎನ್ಎಂ 395 ಎನ್ಎಂ
0 - 100 ಕಿ.ಮೀ ವೇಗ - 9.9 ಸೆಕೆಂಡು 8.5 ಸೆಕೆಂಡು 9.7 ಸೆಕೆಂಡು
ಎಲೆಕ್ಟ್ರಾನಿಕ್ ಲಿಮಿಟ್ ಟಾಪ್ ಸ್ಪೀಡ್ - 120 ಕಿ.ಮೀ 140 ಕಿ.ಮೀ 155 ಕಿ.ಮೀ
ಭಾರತದಲ್ಲಿ ಲಭ್ಯವಿರುವ ಬಜೆಟ್ ಬೆಲೆಯ ಎಲೆಕ್ಟ್ರಿಕ್ ಕಾರುಗಳಿವು

ಎಂಜಿ ಝಡ್‌ಎಸ್ ಎಲೆಕ್ಟ್ರಿಕ್ ಕಾರು ಬ್ಯಾಟರಿ ಶಕ್ತಿಯಲ್ಲೂ ಮುಂದಿದೆ. ಹೊಸ ಟಿಗೋರ್ ಇವಿ 26 ಕಿ.ವ್ಯಾ ಬ್ಯಾಟರಿ ಪ್ಯಾಕ್‌ ಹೊಂದಿದ್ದರೆ, ನೆಕ್ಸಾನ್ ಇವಿ 30.2 ಕಿ.ವ್ಯಾ ಬ್ಯಾಟರಿಯನ್ನು ಹೊಂದಿದೆ. ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಕಂಪನಿಯ ಕೋನಾ ಎಲೆಕ್ಟ್ರಿಕ್ ಕಾರು ಪೂರ್ತಿಯಾಗಿ ಚಾರ್ಜ್ ಆದ ನಂತರ 452 ​​ಕಿ.ಮೀಗಳವರೆಗೆ ಚಲಿಸುತ್ತದೆ ಎಂದು ಹೇಳಲಾಗಿದೆ.

ಅಂಕಿ ಅಂಶಗಳು ಟಾಟಾ ಟಿಗೋರ್ ಇವಿ ಟಾಟಾ ನೆಕ್ಸಾನ್ ಇವಿ ಎಂಜಿ ಝಡ್‌ಎಸ್ ಇವಿ ಹ್ಯುಂಡೈ ಕೋನಾ
ಬ್ಯಾಟರಿ ಪ್ಯಾಕ್ 26 ಕಿ.ವ್ಯಾ 30.2 ಕಿ.ವ್ಯಾ 44.5 ಕಿ.ವ್ಯಾ 39.2 ಕಿ.ವ್ಯಾ
ಬ್ಯಾಟರಿ ಮೇಲೆ ವಾರಂಟಿ 8 ವರ್ಷ/ 1.60 ಲಕ್ಷ ಕಿ.ಮೀ 8 ವರ್ಷ/ 1.60 ಲಕ್ಷ ಕಿ.ಮೀ 8 ವರ್ಷ / 1.5 ಲಕ್ಷ ಕಿ.ಮೀ 8 ವರ್ಷ/ 1.60 ಲಕ್ಷ ಕಿ.ಮೀ
ಫಾಸ್ಟ್ ಚಾರ್ಜಿಂಗ್ ಅವಧಿ 60 ನಿಮಿಷಗಳಲ್ಲಿ 80 % 60 ನಿಮಿಷಗಳಲ್ಲಿ 80 % 50 ನಿಮಿಷಗಳಲ್ಲಿ 80 % 57 ನಿಮಿಷಗಳಲ್ಲಿ 80 %
ಸಾಮಾನ್ಯ ಚಾರ್ಜಿಂಗ್ ಅವಧಿ 8.5 ಗಂಟೆಗಳಲ್ಲಿ 80 % 8 ಗಂಟೆಗಳಲ್ಲಿ 100 % 8 ಗಂಟೆಗಳಲ್ಲಿ 100 % 6 ಗಂಟೆ 10 ನಿಮಿಷಗಳಲ್ಲಿ 100 %
ಭಾರತದಲ್ಲಿ ಲಭ್ಯವಿರುವ ಬಜೆಟ್ ಬೆಲೆಯ ಎಲೆಕ್ಟ್ರಿಕ್ ಕಾರುಗಳಿವು

ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಟಾಟಾ ಕಾರುಗಳು ಸುರಕ್ಷಿತವೆಂದು ಹೇಳಲಾಗುತ್ತದೆಯಾದರೂ, ಸುರಕ್ಷತಾ ತಂತ್ರಜ್ಞಾನಗಳಲ್ಲಿ ಈ ನಾಲ್ಕು ಎಲೆಕ್ಟ್ರಿಕ್ ಕಾರುಗಳ ನಡುವಿನ ವ್ಯತ್ಯಾಸಗಳು ಈ ಕೆಳಗಿನಂತೆ ಇವೆ.

ಅಂಕಿ ಅಂಶಗಳು ಟಾಟಾ ಟಿಗೋರ್ ಇವಿ ಟಾಟಾ ನೆಕ್ಸಾನ್ ಇವಿ ಎಂಜಿ ಝಡ್‌ಎಸ್ ಇವಿ ಹ್ಯುಂಡೈ ಕೋನಾ
ಏರ್ ಬ್ಯಾಗ್ 2 2 6 6
ಇಬಿಡಿ ಹೊಂದಿರುವ ಎಬಿಎಸ್ ಇದೆ ಇದೆ ಇದೆ ಇದೆ
ಇಎಸ್‌ಸಿ - - ಇದೆ ಇದೆ
ಎಲ್‌ಇಡಿ ಹೆಡ್ ಲೈಟ್ ಇಲ್ಲ ಇಲ್ಲ ಇಲ್ಲ ಇಲ್ಲ
ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಇದೆ ಇದೆ ಇಲ್ಲ ಇದೆ
ಕ್ರೂಸ್ ಕಂಟ್ರೋಲ್ ಇಲ್ಲ ಇಲ್ಲ ಇದೆ ಇದೆ
ಆಟೋ ಡಿಮ್ಮಿಂಗ್ ಐ‌ಆರ್‌ವಿ‌ಎಂ ಇಲ್ಲ ಇಲ್ಲ ಇಲ್ಲ ಇಲ್ಲ
ಟಚ್ ಸ್ಕ್ರೀನ್ ಇನ್ಫೋ ಟೆನ್ ಮೆಂಟ್ ಸಿಸ್ಟಂ ಇದೆ ಇದೆ ಇದೆ ಇದೆ
ಕನೆಕ್ಟೆಡ್ ಟೆಕ್ ಇದೆ ಇದೆ ಇದೆ ಇಲ್ಲ
ಸನ್ ರೂಫ್ ಇಲ್ಲ ಇದೆ ಇದೆ (ಪನೋರಾಮಿಕ್ ) ಇದೆ
ವೆಂಟಿಲೇಟೆಡ್ ಸೀಟ್ ಇಲ್ಲ ಇಲ್ಲ ಇಲ್ಲ ಇದೆ
ಪವರ್ಡ್ ಡ್ರೈವರ್ ಸೀಟ್ ಇಲ್ಲ ಇಲ್ಲ ಇದೆ ಇದೆ
ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಇಲ್ಲ ಇಲ್ಲ ಇದೆ ಇದೆ
ಭಾರತದಲ್ಲಿ ಲಭ್ಯವಿರುವ ಬಜೆಟ್ ಬೆಲೆಯ ಎಲೆಕ್ಟ್ರಿಕ್ ಕಾರುಗಳಿವು

ಕಾಂಪ್ಯಾಕ್ಟ್ ಸೆಡಾನ್ ಟಿಗೋರ್ ಇವಿ ಹೊರತು ಪಡಿಸಿದರೆ, ಉಳಿದ ಮೂರೂ ಎಲೆಕ್ಟ್ರಿಕ್ ಕಾರುಗಳು ಒಂದೇ ಬಾಡಿಯನ್ನು ಹೊಂದಿವೆ. ಉದ್ದ, ಅಗಲ, ಎತ್ತರ ಹಾಗೂ ವ್ಹೀಲ್‌ಬೇಸ್‌ಗಳಲ್ಲಿ ಇತರ ಕಾರುಗಳಿಗೆ ಹೋಲಿಸಿದರೆ ಟಿಗೋರ್ ಎಲೆಕ್ಟ್ರಿಕ್ ಕಾರು ಚಿಕ್ಕದಾಗಿದೆ. ಹೊಸ ಟಿಗೋರ್ ಇವಿಯ ಗ್ರೌಂಡ್ ಕ್ಲಿಯರೆನ್ಸ್ ಹಾಗೂ ಕರ್ಬ್ ತೂಕದ ಬಗ್ಗೆ ಇನ್ನೂ ಮಾಹಿತಿ ದೊರೆತಿಲ್ಲ.

ಭಾರತದಲ್ಲಿ ಲಭ್ಯವಿರುವ ಬಜೆಟ್ ಬೆಲೆಯ ಎಲೆಕ್ಟ್ರಿಕ್ ಕಾರುಗಳಿವು

ನಮ್ಮ ಅಭಿಪ್ರಾಯದಲ್ಲಿ ಬೆಲೆ, ಶ್ರೇಣಿಗೆ ಹೋಲಿಸಿದರೆ ಟಾಟಾ ಟಿಗೊರ್ ಇವಿ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರಲಿದೆ. ಜೊತೆಗೆ ಖರೀದಿಗೆ ಸೂಕ್ತವಾದ ಶ್ರೇಣಿಯನ್ನು ಹೊಂದಿದೆ. ಕಾರು ದೊಡ್ಡ ಗಾತ್ರವನ್ನು ಹೊಂದಿರಬೇಕು ಹಾಗೂ ಹೆಚ್ಚು ಸುರಕ್ಷತಾ ಫೀಚರ್ ಗಳು ಎಂದೆನಿಸಿದರೆ ಎಂಜಿ ಝಡ್‌ಎಸ್ ಇವಿ ಖರೀದಿಸಬಹುದು.

Most Read Articles

Kannada
English summary
Budget price electric cars available in indian market details
Story first published: Monday, August 30, 2021, 13:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X