2021ರ ಜನವರಿ ತಿಂಗಳ ಕಾರು ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯು 2021ರ ಜನವರಿ ತಿಂಗಳಿನ ಕಾರು ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ಈ ವರದಿಯ ಪ್ರಕಾರ, ಕಳೆದ ತಿಂಗಳಿನಲ್ಲಿ ಟೊಯೊಟಾ ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ ಕಾರು ಮಾರಾಟದಲ್ಲಿ ಶೇ.92 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

2021ರ ಜನವರಿ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

2021ರ ಜನವರಿ ತಿಂಗಳಲ್ಲಿ ಟೊಯೊಟಾ ಕಳೆದ ತಿಂಗಳಲ್ಲಿ 11,126 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಇನ್ನು 2020ರ ಜನವರಿ ತಿಂಗಳಿನಲ್ಲಿ 5804 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಕಳೆದ ವರ್ಷದ ಜನವರಿ ತಿಂಗಳ ಮಾರಾಟಕ್ಕೆ ಹೋಲಿಸಿದರೆ ದ್ವಿಗುಣವಾಗಿದೆ ಎಂದು ಹೇಳಬಹುದು. ಕಳೆದ ತಿಂಗಳ ಟೊಯೊಟಾ ಕಾರು ಮಾರಾಟದಲ್ಲಿ ಗ್ಲಾಂಝಾ ಮತ್ತು ಅರ್ಬನ್ ಕ್ರೂಸರ್ ಮಾದರಿಗಳನ್ನು ಒಳಗೊಂಡಿದೆ.

2021ರ ಜನವರಿ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಟೊಯೋಟಾ-ಸುಜುಕಿ ಅಲೈಯನ್ಸ್ ಸಹ ಹೊಸ ಮೈಲಿಗಲ್ಲಿಗೆ ಒಂದು ಕಾರಣವಾಗಿದೆ ಎಂದು ಕಂಪನಿ ಹೇಳಿದೆ. ಟೊಯೊಟಾ ತನ್ನ ಮೊದಲ ಬಾರಿ ಪರಿಚಯದ ನಂತರ ಈ ಪಾಲುಗಾರಿಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ 50,000 ಯುನಿಟ್ ಮಾರಾಟವನ್ನು ಮಾರಾಟ ಮಾಡಿದೆ.

MOST READ: 2020ರ ಡಿಸೆಂಬರ್‌ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

2021ರ ಜನವರಿ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಎರಡೂ ಬ್ರ್ಯಾಂಡ್‌ಗಳ ನಡುವಿನ ಪಾಲುಗಾರಿಕೆಯಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿ ಎರಡು ಮಾದರಿಗಳನ್ನು ಮಾರಾಟ ಮಾಡಲಾಗುತ್ತಿದೆ. ಇವುಗಳು ಮಾರುತಿ ಸುಜುಕಿ ಬಲೆನೊ ಮತ್ತು ವಿಟಾರಾ ಬ್ರೆಝಾ ಮಾದರಿಗಳನ್ನು ಆಧರಿಸಿದೆ. ಎರಡೂ ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ.

2021ರ ಜನವರಿ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಮೇಲಿನ ಎರಡು ಮಾದರಿಗಳ ಹೊರತಾಗಿ, ಟೊಯೋಟಾ ಇನ್ನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್ ಕೊಡುಗೆಗಳು ಸಹ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿವೆ. ಎರಡೂ ಮಾದರಿಗಳನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ನವೀಕರಿಸಲಾಗಿದ್ದು, ಆಯಾ ವಿಭಾಗಗಳಲ್ಲಿ ಮಾರಾಟವನ್ನು ಮತ್ತಷ್ಟು ಹೆಚ್ಚಿಸಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

2021ರ ಜನವರಿ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಮೇಲಿನ ಎರಡು ಮಾದರಿಗಳ ಹೊರತಾಗಿ, ಟೊಯೊಟಾ ಇನ್ನೊವಾ ಕ್ರಿಸ್ಟಾ ಮತ್ತು ಫಾರ್ಚೂನರ್ ಮಾದರಿಗಳು ಕೂಡ ಮಾರಾಟದಲ್ಲಿ ಕಂಪನಿಗೆ ಉತ್ತಮ ಕೊಡುಗೆಯನ್ನು ನೀಡಿದೆ. ಎರಡೂ ಮಾದರಿಗಳನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ನವೀಕರಿಸಲಾಗಿದ್ದು, ಆಯಾ ವಿಭಾಗಗಳಲ್ಲಿ ಮಾರಾಟವನ್ನು ಮತ್ತಷ್ಟು ಹೆಚ್ಚಿಸಿದೆ.

2021ರ ಜನವರಿ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಟೊಯೊಟಾ ಕಂಪನಿಯ ಹಿರಿಯ ಉಪಾಧ್ಯಕ್ಷ ಟಿಕೆಎಂ ನವೀನ್ ಸೋನಿ ಅವರು ಮಾತನಾಡಿ, ಕಾರು ಮಾರಾಟದಲ್ಲಿ ಸಕಾರಾತ್ಮಕ ಬೆಳವಣಿಗೆಯನ್ನು ಸಾಧಿಸಿದ್ದೇವೆ ಮತ್ತು ಬುಕ್ಕಿಂಗ್ ನಲ್ಲಿ ಕೂಡ ಗಮನಾರ್ಹ ಏರಿಕೆಗೆ ಸಾಕ್ಷಿಯಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

2021ರ ಜನವರಿ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಲೈಫ್ ಸ್ಟೈಲ್ ಮತ್ತು ಹೆಚ್ಚಿನ ಪರ್ಫಾಮೆನ್ಸ್ ವಾಹನಗಳನ್ನು ಬಯಸುವ ಗ್ರಾಹಕಾರಿಗಾಗಿ ಫಾರ್ಚೂನರ್ ಮತ್ತು ಲೆಜೆಂಡರ್ ಮಾದರಿಗಳನ್ನು ಬಿಡುಗಡೆಗೊಳಿಸಲಾಗುತ್ತದೆ, ಫಾರ್ಚೂನರ್ ಒಂದು ದಶಕದ ಹಿಂದೆ ಬಿಡುಗಡೆಯಾದಗಿನಿಂದ ಇಲ್ಲಿಯವರೆಗೂ ತನ್ನ ವಿಭಾಗದಲ್ಲಿ ನಾಯಕನಾಗಿದೆ ಎಂದು ಅವರು ಹೇಳಿದರು.

2021ರ ಜನವರಿ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

2021ರ ಜನವರಿ ತಿಂಗಳಲ್ಲಿ ಕಾರು ಮಾರಾಟದಲ್ಲಿ ಟೊಯೊಟಾ ಕಂಪನಿಯು ಉತ್ತಮ ಬೆಳವಣಿಗೆಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ನವೀಕರಿಸಿದ ಫಾರ್ಚೂನರ್ ಮತ್ತು ಇನ್ನೊವಾ ಕ್ರಿಸ್ಟಾ ಮಾದರಿಗಳ ಪರಿಚಯವು ಟೊಯೋಟಾದ ಮಾರಾಟವನ್ನು ಹೆಚ್ಚಿಸಲು ಸಹಾಯ ಮಾಡಿದೆ.

Most Read Articles

Kannada
Read more on ಟೊಯೊಟಾ toyota
English summary
Toyota Car Sales Report For January 2021. Read In Kannada.
Story first published: Monday, February 1, 2021, 15:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X