ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲಿರುವ ಟೆಸ್ಲಾ ಮನವಿ ತಿರಸ್ಕರಿಸಿದ ಕೇಂದ್ರ ಸರ್ಕಾರ

ಅಮೆರಿಕದ ಜನಪ್ರಿಯ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿಯಾಗಿರುವ ಟೆಸ್ಲಾ ಇದೇ ವರ್ಷಾಂತ್ಯಕ್ಕೆ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಮಾರಾಟ ಮಾಡುವ ಯೋಜನೆಯಲ್ಲಿದ್ದು, ಹೊಸ ಕಾರುಗಳ ತಾಂತ್ರಿಕ ಅಂಶಗಳನ್ನು ಅರಿಯಲು ಭಾರತೀಯ ರಸ್ತೆಗಳಲ್ಲಿ ಟೆಸ್ಟಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲಿರುವ ಟೆಸ್ಲಾ ಕಂಪನಿಯ ಮನವಿಯನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರ

ಟೆಸ್ಲಾ ಕಂಪನಿಯು ಭಾರತದಲ್ಲಿ ಮೊದಲ ಕಾರು ಎಲೆಕ್ಟ್ರಿಕ್ ಕಾರು ಮಾದರಿಯಾಗಿ ಮಾಡೆಲ್ 3 ಆವೃತ್ತಿಯು ಬಿಡುಗಡೆಯಾಗಲಿದ್ದು, ಹೊಸ ಕಾರು ಮಾದರಿಯ ಮೂಲಕ ಟೆಸ್ಲಾ ಕಂಪನಿಯು ಭಾರತದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಆದರೆ ಹೊಸ ಕಾರನ್ನು ಸದ್ಯಕ್ಕೆ ವಿದೇಶಿ ಮಾರುಕಟ್ಟೆಯಿಂದ ಭಾರತಕ್ಕೆ ಆಮದು ಮಾಡಿಕೊಳ್ಳಲಿರುವ ಟೆಸ್ಲಾ ಕಂಪನಿಯು ಕೇಂದ್ರ ಸರ್ಕಾರಕ್ಕೆ ಮನವಿಯೊಂದನ್ನು ಮಾಡಿತ್ತು.

ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲಿರುವ ಟೆಸ್ಲಾ ಕಂಪನಿಯ ಮನವಿಯನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರ

ವಿದೇಶಿ ವಸ್ತುಗಳಿಗೆ ಜಗತ್ತಿನಲ್ಲೇ ಅತಿ ಹೆಚ್ಚು ಆಮದು ಸುಂಕ ವಿಧಿಸುವ ಭಾರತ ಸರ್ಕಾರವು ಭವಿಷ್ಯದ ವಾಹನಗಳಾದ ಎಲೆಕ್ಟ್ರಿಕ್ ಮಾದರಿಗಳಿಗೆ ಕೆಲವು ವಿನಾಯ್ತಿ ನೀಡುವಂತೆ ಮನವಿ ಮಾಡಿತ್ತು.

ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲಿರುವ ಟೆಸ್ಲಾ ಕಂಪನಿಯ ಮನವಿಯನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರ

ಜಗತ್ತಿನಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಮಟ್ಟದ ಆದ್ಯತೆ ನೀಡುತ್ತಿರುವುದರಿಂದ ಭಾರತ ಸರ್ಕಾರವು ಕೂಡಾ ಇಂಧನ ಆಧರಿತ ವಾಹನಗಳನ್ನು ಹೊರತುಪಡಿಸಿ ಆಮದುಗೊಳ್ಳಿರುವ ಎಲೆಕ್ಟ್ರಿಕ್ ಮಾದರಿಗಳಿಗೆ ಆಮದು ಸುಂಕದಲ್ಲಿ ವಿನಾಯ್ತಿ ನೀಡಬಹುದೆಂಬ ನೀರಿಕ್ಷೆ ಮಾಡಲಾಗಿತ್ತು.

ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲಿರುವ ಟೆಸ್ಲಾ ಕಂಪನಿಯ ಮನವಿಯನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರ

ಭಾರತದಲ್ಲಿ ವಿದೇಶ ವಸ್ತುಗಳಿಗೆ ವಿಧಿಸುವ ಆಮದು ಸುಂಕ ಕುರಿತು ಟ್ವಿಟ್ ಮಾಡಿದ್ದ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಕೂಡಾ ಭಾರತ ಸರ್ಕಾರದಿಂದ ಉತ್ತಮ ಪ್ರಕ್ರಿಯೆ ನೀರಿಕ್ಷೆಯಲ್ಲಿದ್ದೇವೆ ಎಂದಿದ್ದರು. ಆದರೆ ವಿದೇಶಿಯ ಮಾರುಕಟ್ಟೆಗಳಿಂದ ಭಾರತಕ್ಕೆ ಆಮದುಗೊಳ್ಳುವ ಎಲೆಕ್ಟ್ರಿಕ್ ವಾಹನಗಳಿಗೆ ವಿನಾಯ್ತಿ ನೀಡುವ ಯಾವುದೇ ಪ್ರಸ್ತಾವನೆ ನಮ್ಮಲ್ಲಿ ಇಲ್ಲವೆಂದು ಕೇಂದ್ರದ ವಿದ್ಯುತ್ ಮತ್ತು ಭಾರೀ ಕೈಗಾರಿಕೆಗಳ ರಾಜ್ಯ ಸಚಿವ ಕ್ರಿಶನ್ ಪಾಲ್ ಗುರ್ಜಾರ್ ಸ್ಪಷ್ಟಪಡಿಸಿದ್ದಾರೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲಿರುವ ಟೆಸ್ಲಾ ಕಂಪನಿಯ ಮನವಿಯನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಉತ್ತೇಜನಕ್ಕೆ ಭಾರತದಲ್ಲೇ ನಿರ್ಮಾಣವಾಗುವ ಇವಿ ವಾಹನಗಳಿಗೆ ಫೇಮ್ 2 ಸಬ್ಸಡಿ ಯೋಜನೆಯಡಿ ಹಲವಾರು ವಿನಾಯ್ತಿಗಳನ್ನು ನೀಡಲಾಗುತ್ತಿದ್ದು, ಹೊಸ ಯೋಜನೆಗಳು ಜಾರಿಯಲ್ಲಿರುವಾದ ಆಮದು ಇವಿ ವಾಹನಗಳಿಗಾಗಿ ಪ್ರತ್ಯೇಕ ವಿನಾಯ್ತಿ ಪರಿಗಣಿಸಲು ಸಾಧ್ಯವಿಲ್ಲವೆಂದು ಕ್ರಿಶನ್ ಪಾಲ್ ಗುರ್ಜಾರ್ ಪ್ರಕ್ರಿಯೆಸಿದ್ದಾರೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲಿರುವ ಟೆಸ್ಲಾ ಕಂಪನಿಯ ಮನವಿಯನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರ

ಸದ್ಯ ಭಾರತದಲ್ಲಿ ವಿದೇಶಿಯಿಂದ ಆಮದುಗೊಳ್ಳುವ ವಾಹನಗಳಿಗೆ ಮೂಲ ಬೆಲೆ ಆಧರಿಸಿ ಶೇ.60(ರೂ.30 ಲಕ್ಷದೊಳಗಿನ ವಾಹನಗಳು) ಮತ್ತು ಶೇ. 100(ರೂ.30 ಲಕ್ಷ ಮೇಲ್ಪಟ್ಟ ವಾಹನಗಳು) ಸುಂಕ ವಿಧಿಸಲಿದ್ದು, ಕೇಂದ್ರ ಸರ್ಕಾರದ ಕೆಲವು ಕಠಿಣ ಕ್ರಮಗಳು ಭವಿಷ್ಯ ವಾಹನಗಳು ಭಾರತದ ಪ್ರವೇಶವನ್ನು ತಡೆಯಲಿದೆ ಎನ್ನಲಾಗುತ್ತಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲಿರುವ ಟೆಸ್ಲಾ ಕಂಪನಿಯ ಮನವಿಯನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರದ ಸ್ಪಷ್ಟನೆ ನಂತರ ಟೆಸ್ಲಾ ಕಂಪನಿಯು ಯಾವುದೇ ರೀತಿಯ ಮಾಹಿತಿ ಹಂಚಿಕೊಂಡಿಲ್ಲವಾದರೂ ಟೆಸ್ಲಾ ಭಾರತದ ಪ್ರವೇಶ ಮತ್ತಷ್ಟು ಕಠಿಣವಾಗಲಿದ್ದು, ಭಾರತದಲ್ಲೇ ನಿರ್ಮಾಣವಾಗುವ ಇವಿ ವಾಹನಗಳಿಗೆ ಕೇಂದ್ರ ಸರ್ಕಾರವು ಹೆಚ್ಚಿನ ನೆರವು ನೀಡಬೇಕೆಂಬುವುದು ಮತ್ತೆ ಕೆಲವು ಎಲೆಕ್ಟ್ರಿಕ್ ವಾಹನ ಕಂಪನಿಗಳ ಮನವಿಯಾಗಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲಿರುವ ಟೆಸ್ಲಾ ಕಂಪನಿಯ ಮನವಿಯನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರ

ಜೊತೆಗೆ ಭಾರತದಲ್ಲಿ ನಿರ್ಮಾಣವಾಗುವ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಉತ್ತೇಜನ ನೀಡಬೇಕಾದರೆ ಕೆಲವು ಕಠಿಣ ಕ್ರಮ ಅಗತ್ಯ ಎನ್ನುವ ಕೆಲವು ವಾದಗಳಿದ್ದು, ದೇಶಿಯ ಕಂಪನಿಗಳಿಗೆ ಉತ್ತೇಜಿಸುವತ್ತ ಹೊಸ ಯೋಜನೆಗಳನ್ನು ಜಾರಿ ತರುವುದು ಮತ್ತು ಚಾರ್ಜಿಂಗ್ ನಿಲ್ದಾಣಗಳನ್ನು ಹೆಚ್ಚಿಸುವುದು ಸದ್ಯದ ಅತಿ ದೊಡ್ಡ ಸವಾಲೆಂದು ಪರಿಗಣಿಸಲಾಗಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲಿರುವ ಟೆಸ್ಲಾ ಕಂಪನಿಯ ಮನವಿಯನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರ

ಇದಕ್ಕಾಗಿ ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರವು ಇವಿ ನೀತಿ ಅವಡಿಸಿಕೊಳ್ಳುವ ಇವಿ ವಾಹನಗಳ ಖರೀದಿ ಮೇಲೆ ಹೆಚ್ಚಿನ ಮಟ್ಟದ ವಿನಾಯ್ತಿಗಳ ಜೊತೆಗೆ ಉತ್ಪಾದಕ ಕಂಪನಿಗಳಿಗೂ ಪ್ರೋತ್ಸಾಹ ನೀಡಲಾಗುತ್ತಿದ್ದು, ಕೇಂದ್ರ ಸರ್ಕಾರದ ಕಠಿಣ ನಿಯಮಗಳ ನಡುವೆಯೂ ಟೆಸ್ಲಾ ಕಂಪನಿಯು ಕೂಡಾ ದೇಶಿಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲಿರುವ ಟೆಸ್ಲಾ ಕಂಪನಿಯ ಮನವಿಯನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರ

ಆಮದು ಸುಂಕ ವಿನಾಯ್ತಿ ದೊರೆತ್ತಿದ್ದರೆ ಉತ್ತಮ ಬೆಲೆಗಳೊಂದಿಗೆ ಹೆಚ್ಚಿನ ಮಟ್ಟದ ಬೇಡಿಕೆ ನೀರಿಕ್ಷೆಯಲ್ಲಿದ್ದ ಟೆಸ್ಲಾ ಕಂಪನಿಗೆ ಕೇಂದ್ರ ಸರ್ಕಾರದ ನಿರ್ಧಾರವು ಕಠಿಣವಾದರೂ ಭಾರತದಲ್ಲಿ ತನ್ನ ಸಂಭಾವ್ಯ ಗ್ರಾಹಕರಿಂದ ಉತ್ತಮ ಬೇಡಿಕೆ ಪಡೆದುಕೊಳ್ಳುವತ್ತ ಯೋಜನೆ ರೂಪಿಸುತ್ತಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲಿರುವ ಟೆಸ್ಲಾ ಕಂಪನಿಯ ಮನವಿಯನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರ

ಭಾರತದಲ್ಲಿ ಟೆಸ್ಲಾ ನಿರ್ಮಾಣದ ಮಾಡೆಲ್ 3 ಕಾರು ಮಾದರಿಯು ಮೊದಲ ಹಂತದಲ್ಲಿ ಬಿಡುಗಡೆಯಾಗಲಿದ್ದು, ಮಾಡೆಲ್ 3 ನಂತರ ಮಾಡೆಲ್ ಎಸ್, ಮಾಡೆಲ್ ವೈ ಸರಣಿ ಎಲೆಕ್ಟ್ರಿಕ್ ಕಾರು ಮಾದರಿಗಳು ಭಾರತವನ್ನು ಪ್ರವೇಶಿಸಲಿವೆ.

ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲಿರುವ ಟೆಸ್ಲಾ ಕಂಪನಿಯ ಮನವಿಯನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರ

ಮಾಡೆಲ್ 3 ಕಾರು ಮಾದರಿಯು ಪ್ರತಿ ಚಾರ್ಜ್‌ಗೆ 500ಕಿ.ಮೀ ಗೂ ಹೆಚ್ಚು ಮೈಲೇಜ್ ಹೊಂದಿದ್ದು, ಬೆಲೆಯಲ್ಲೂ ಇದು ತುಸು ದುಬಾರಿಯಾಗಿರಲಿದೆ. ಹೊಸ ಕಾರಿಗೆ ಆಮದು ಸುಂಕ ವಿನಾಯ್ತಿ ದೊರೆತಿದ್ದರೆ ಎಕ್ಸ್‌ಶೋರೂಂ ಪ್ರಕಾರ ರೂ. 45 ಲಕ್ಷದಿಂದ ರೂ. 55 ಲಕ್ಷ ಇರಬಹುದೆಂದು ನೀರಿಕ್ಷಿಸಲಾಗಿತ್ತು. ಆದರೆ ಆಮದು ಸುಂಕ ವಿನಾಯ್ತಿ ಪ್ರಸ್ತಾಪವನ್ನು ತಿರಸ್ಕಾರವಾಗಿರುವುದರಿಂದ ಹೊಸ ಕಾರಿನ ಬೆಲೆಯು ರೂ. 70 ಲಕ್ಷದಿಂದ ರೂ.80 ಲಕ್ಷಗಳಾಗಬಹುದಾಗಿದೆ.

More from DriveSpark

Article Published On: Thursday, August 5, 2021, 8:45 [IST]
English summary
Central government denying reduction in import duties details
Read more on ಟೆಸ್ಲಾ tesla
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+