ಶೀಘ್ರದಲ್ಲೇ ಈ ಎರಡು ನಗರಗಳ ನಡುವೆ ಆರಂಭವಾಗಲಿದೆ ಭಾರತದ ಮೊದಲ ಹೈಡ್ರೋಜನ್ ಬಸ್ ಸಂಚಾರ

ಪೆಟ್ರೋಲ್, ಡೀಸೆಲ್ ವಾಹನಗಳು ಪರಿಸರಕ್ಕೆ ಹೆಚ್ಚಿನ ಹಾನಿಯನ್ನುಂಟು ಮಾಡುತ್ತಿವೆ. ಜೊತೆಗೆ ಕಚ್ಚಾ ತೈಲ ಆಮದಿನಿಂದ ಆರ್ಥಿಕ ಹೊರೆಯು ಎದುರಾಗುತ್ತಿದೆ. ಈ ಕಾರಣಕ್ಕೆ ಕೇಂದ್ರ ಸರ್ಕಾರವು ಹಂತ ಹಂತವಾಗಿ ಪೆಟ್ರೋಲ್, ಡೀಸೆಲ್ ವಾಹನಗಳನ್ನು ಸ್ಥಗಿತಗೊಳಿಸಲು ಮುಂದಾಗಿದೆ.

ಶೀಘ್ರದಲ್ಲೇ ಈ ಎರಡು ನಗರಗಳ ನಡುವೆ ಆರಂಭವಾಗಲಿದೆ ಭಾರತದ ಮೊದಲ ಹೈಡ್ರೋಜನ್ ಬಸ್ ಸಂಚಾರ

ಈ ಹಿನ್ನೆಲೆಯಲ್ಲಿ ಪರ್ಯಾಯ ಇಂಧನ ವಾಹನಗಳ ಬಳಕೆಗಾಗಿ ವಿವಿಧ ಯೋಜನೆಗಳನ್ನು ಆರಂಭಿಸಲಾಗಿದೆ. ಎಲೆಕ್ಟ್ರಿಕ್ ವಾಹನಗಳು ಪೆಟ್ರೋಲ್, ಡೀಸೆಲ್ ವಾಹನಗಳಿಗೆ ಪರ್ಯಾಯ ಆಯ್ಕೆ ಎಂದು ಹೇಳಲಾಗಿದ್ದರೂ, ಹೈಡ್ರೋಜನ್ ಇಂಧನ ವಾಹನಗಳ ಬಳಕೆಗೂ ಆದ್ಯತೆ ನೀಡಲಾಗುತ್ತಿದೆ. ಅದರಂತೆ ದೆಹಲಿ-ಜೈಪುರ ಮಾರ್ಗದಲ್ಲಿ ಭಾರತದ ಮೊದಲ ಹೈಡ್ರೋಜನ್ ಚಾಲಿತ ಬಸ್ ಅನ್ನು ಪರಿಚಯಿಸಲು ಕೇಂದ್ರ ಸರ್ಕಾರವು ನಿರ್ಧರಿಸಿದೆ.

ಶೀಘ್ರದಲ್ಲೇ ಈ ಎರಡು ನಗರಗಳ ನಡುವೆ ಆರಂಭವಾಗಲಿದೆ ಭಾರತದ ಮೊದಲ ಹೈಡ್ರೋಜನ್ ಬಸ್ ಸಂಚಾರ

ಈಗಾಗಲೇ ಮುಂಬೈನಲ್ಲಿ ಹೈಡ್ರೋಜನ್ ಬಸ್‌ನ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ಆದರೆ ಇದೇ ಮೊದಲ ಬಾರಿಗೆ ಎರಡು ದೂರದ ನಗರಗಳ ಮಧ್ಯೆ ಈ ಮಾರ್ಗದಲ್ಲಿ ಹೊಸ ಬಸ್ ಅನ್ನು ಪರಿಚಯಿಸಲು ನಿರ್ಧರಿಸಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಶೀಘ್ರದಲ್ಲೇ ಈ ಎರಡು ನಗರಗಳ ನಡುವೆ ಆರಂಭವಾಗಲಿದೆ ಭಾರತದ ಮೊದಲ ಹೈಡ್ರೋಜನ್ ಬಸ್ ಸಂಚಾರ

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ದೆಹಲಿಯಲ್ಲಿ ಗೋ ಎಲೆಕ್ಟ್ರಿಕ್ ಎಂಬ ಯೋಜನೆಗೆ ನಿನ್ನೆ ದೆಹಲಿಯಲ್ಲಿ ಚಾಲನೆ ನೀಡಲಾಗಿದೆ. ಈ ಸಂದರ್ಭದಲ್ಲಿಮಾತನಾಡಿದ ಕೇಂದ್ರ ವಿದ್ಯುತ್ ಸಚಿವ ಆರ್.ಕೆ.ಸಿಂಗ್, ದೆಹಲಿ - ಜೈಪುರ ನಡುವೆ ಹೈಡ್ರೋಜನ್ ಚಾಲಿತ ಬಸ್ ಚಲಾಯಿಸಲು ನಿರ್ಧರಿಸಿದ್ದೇವೆ.

ಶೀಘ್ರದಲ್ಲೇ ಈ ಎರಡು ನಗರಗಳ ನಡುವೆ ಆರಂಭವಾಗಲಿದೆ ಭಾರತದ ಮೊದಲ ಹೈಡ್ರೋಜನ್ ಬಸ್ ಸಂಚಾರ

ಇದೇ ಮಾರ್ಗದಲ್ಲಿ ಎಲೆಕ್ಟ್ರಿಕ್ ಬಸ್ ಚಲಾಯಿಸಲು ಸಹ ನಾವು ನಿರ್ಧರಿಸಿದ್ದೇವೆ. ಈ ಹೊಸ ಯೋಜನೆಯನ್ನು ಪ್ರಾಯೋಗಿಕ ಆಧಾರದ ಮೇಲೆ ನಡೆಸಲಾಗುವುದು.ಮೊದಲ ಬಾರಿಗೆ ಎರಡು ಪ್ರಮುಖ ನಗರಗಳ ನಡುವೆ ಹೈಡ್ರೋಜನ್ ಚಾಲಿತ ಬಸ್ ಸಂಚಾರ ನಡೆಸಲಾಗುತ್ತಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಶೀಘ್ರದಲ್ಲೇ ಈ ಎರಡು ನಗರಗಳ ನಡುವೆ ಆರಂಭವಾಗಲಿದೆ ಭಾರತದ ಮೊದಲ ಹೈಡ್ರೋಜನ್ ಬಸ್ ಸಂಚಾರ

ಈ ಪರಿಸರ ಸ್ನೇಹಿ ಬಸ್‌ನ ಇಂಧನ ಆರ್ಥಿಕತೆ ಎಷ್ಟು ಪರಿಣಾಮಕಾರಿಯಾಗಿದೆ ಹಾಗೂ ಅದನ್ನು ಹೇಗೆ ಪ್ರಾಯೋಗಿಕವಾಗಿ ಬಳಕೆಗೆ ತರಲಾಗುತ್ತದೆ ಎಂಬುದರ ಕುರಿತು ಅಧ್ಯಯನಗಳು ನಡೆಯಲಿವೆ ಎಂದು ಅವರು ಹೇಳಿದರು.

ಶೀಘ್ರದಲ್ಲೇ ಈ ಎರಡು ನಗರಗಳ ನಡುವೆ ಆರಂಭವಾಗಲಿದೆ ಭಾರತದ ಮೊದಲ ಹೈಡ್ರೋಜನ್ ಬಸ್ ಸಂಚಾರ

ಹೈಡ್ರೋಜನ್ ಚಾಲಿತ ಬಸ್ ಅನ್ನು ಯಾವಾಗ ನಿಯೋಜಿಸಲಾಗುವುದು ಎಂಬ ವಿವರಗಳನ್ನು ಸಚಿವ ಆರ್.ಕೆ.ಸಿಂಗ್ ಬಹಿರಂಗಪಡಿಸಲಿಲ್ಲ. ಆದರೆ ಈ ಯೋಜನೆಗೆ ಹೆಚ್ಚಿನ ಒತ್ತು ನೀಡಲಾಗುವುದರಿಂದ ಈ ಹೈಡ್ರೋಜನ್ ಚಾಲಿತ ಬಸ್ ಆದಷ್ಟು ಬೇಗ ಬಳಕೆಗೆ ಬರುವ ನಿರೀಕ್ಷೆಗಳಿವೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಶೀಘ್ರದಲ್ಲೇ ಈ ಎರಡು ನಗರಗಳ ನಡುವೆ ಆರಂಭವಾಗಲಿದೆ ಭಾರತದ ಮೊದಲ ಹೈಡ್ರೋಜನ್ ಬಸ್ ಸಂಚಾರ

ಹೈಡ್ರೋಜನ್ ಇಂಧನದಿಂದ ವಿದ್ಯುತ್ ಉತ್ಪಾದಿಸುವ ಹಾಗೂ ಬ್ಯಾಟರಿಯಲ್ಲಿ ಸಂಗ್ರಹಿಸುವ ತಂತ್ರಜ್ಞಾನದಿಂದ ಈ ಬಸ್ ಚಾಲನೆಯಾಗಲಿದೆ. ಹೈಡ್ರೋಜನ್ ಇಂಧನ ಕೋಶ ಹೊಂದಿರುವ ವಾಹನಗಳು ಬ್ಯಾಟರಿಯಲ್ಲಿನ ವಿದ್ಯುತ್ ಬಳಸಿ ವಿದ್ಯುತ್ ಮೋಟರ್‌ಗಳಿಂದ ನಿಯಂತ್ರಿಸಲ್ಪಡುತ್ತವೆ. ಇವು ಬಹುತೇಕ ಎಲೆಕ್ಟ್ರಿಕ್ ವಾಹನಗಳಂತಿರುತ್ತವೆ. ಆದರೆ ಗಾಳಿಯಿಂದ ಬರುವ ಆಮ್ಲಜನಕದ ಮೂಲಕ ಹೈಡ್ರೋಜನ್ ಅನ್ನು ಕೆಮಿಕಲ್ ಆಗಿ ವಿದ್ಯುತ್ ಉತ್ಪಾದಿಸಲು ಪರಿವರ್ತಿಸಲಾಗುತ್ತದೆ. ಈ ವಿದ್ಯುತ್ ಅನ್ನು ಬ್ಯಾಟರಿಯಲ್ಲಿ ಸಂಗ್ರಹಿಸಲಾಗುತ್ತದೆ.

ಶೀಘ್ರದಲ್ಲೇ ಈ ಎರಡು ನಗರಗಳ ನಡುವೆ ಆರಂಭವಾಗಲಿದೆ ಭಾರತದ ಮೊದಲ ಹೈಡ್ರೋಜನ್ ಬಸ್ ಸಂಚಾರ

ಇವುಗಳನ್ನು ಎಲೆಕ್ಟ್ರಿಕ್ ವಾಹನಗಳಿಗಿಂತ ಉತ್ತಮವೆಂದು ಪರಿಗಣಿಸಲಾಗಿದೆ. ಹೈಡ್ರೋಜನ್ ಇಂಧನವು ಕಡಿಮೆ ಬೆಲೆಯನ್ನು ಹೊಂದಿದೆ. ಜೊತೆಗೆ ಕೆಲವೇ ನಿಮಿಷಗಳಲ್ಲಿ ಈ ಇಂಧನವನ್ನು ತುಂಬಿಸಬಹುದು. ಎಲೆಕ್ಟ್ರಿಕ್ ವಾಹನಗಳಂತೆ ಹಲವಾರು ಗಂಟೆಗಳ ಕಾಲ ಚಾರ್ಜ್ ಮಾಡುವ ಅಗತ್ಯವಿಲ್ಲ. ಆದರೆ ಹೈಡ್ರೋಜನ್ ಅನ್ನು ಸುರಕ್ಷಿತವಾಗಿ ಸಂಗ್ರಹಿಸುವುದು ನಿಜಕ್ಕೂ ಸವಾಲಿನ ಕೆಲಸ.

Most Read Articles

Kannada
English summary
Central government to start hydrogen fuel cell bus service from Delhi to Jaipur soon. Read in Kannada.
Story first published: Saturday, February 20, 2021, 17:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X