ಹ್ಯುಂಡೈ ಕಾರುಗಳ ಮಾರಾಟದಲ್ಲಿ ಅಗ್ರ ಸ್ಥಾನಕ್ಕೇರಿದ ಕ್ರೆಟಾ
ಹ್ಯುಂಡೈ ಕಂಪನಿಯ ಫೆಬ್ರವರಿ ತಿಂಗಳ ಮಾರಾಟವು ಕಳೆದ ವರ್ಷದ ಫೆಬ್ರವರಿಗಿಂತ ಹೆಚ್ಚಾಗಿದ್ದರೂ ಜನವರಿ ತಿಂಗಳ ಮಾರಾಟಕ್ಕಿಂತ ಕಡಿಮೆಯಾಗಿದೆ. ಕ್ರೆಟಾ ಕಾರಿನ ಮಾರಾಟವು ಸ್ಥಿರವಾಗಿದೆ. ಕ್ರೆಟಾ ಕಳೆದ ತಿಂಗಳು ಹೆಚ್ಚು ಮಾರಾಟವಾದ ಹ್ಯುಂಡೈ ಕಂಪನಿಯ ಕಾರ್ ಆಗಿದ್ದು, ಮಾರಾಟದಲ್ಲಿ ವೆನ್ಯೂವನ್ನು ಹಿಂದಿಕ್ಕಿದೆ.

ಫೆಬ್ರವರಿ ತಿಂಗಳಿನಲ್ಲಿ ಹ್ಯುಂಡೈ ಕ್ರೆಟಾ ಕಾರಿನ 12,428 ಯುನಿಟ್‌ಗಳು ಮಾರಾಟವಾಗಿವೆ. ಕ್ರೆಟಾ ಕಾರಿನ ಮಾರಾಟವು ಕಳೆದ ವರ್ಷದ ಫೆಬ್ರವರಿ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಹೆಚ್ಚಾಗಿದೆ. ಕ್ರೆಟಾ ಎಸ್‌ಯುವಿಯು ಈ ಸೆಗ್'ಮೆಂಟಿನಲ್ಲಿ ಪ್ರಾಬಲ್ಯವನ್ನು ಹೊಂದಿದೆ. ಹ್ಯುಂಡೈ ಕಂಪನಿಯು ಕ್ರೆಟಾ ಹಾಗೂ ವೆನ್ಯೂ ಮಾದರಿಗಳ ನೆರವಿನಿಂದ ಈ ಸೆಗ್'ಮೆಂಟಿನಲ್ಲಿ ಅಗ್ರಸ್ಥಾನದಲ್ಲಿದೆ.

ಕಳೆದ ತಿಂಗಳು ವೆನ್ಯೂ ಎಸ್‌ಯುವಿಯ 11,224 ಯುನಿಟ್‌ಗಳು ಮಾರಾಟವಾಗಿವೆ. ಈ ಎಸ್‌ಯುವಿಯ ಮಾರಾಟವು ಕಳೆದ ವರ್ಷದ ಫೆಬ್ರವರಿ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ 9%ನಷ್ಟು ಹೆಚ್ಚಾಗಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಆದರೆ ಜನವರಿ ತಿಂಗಳಿಗೆ ಹೋಲಿಸಿದರೆ ಈ ಎಸ್‌ಯುವಿಯ ಮಾರಾಟವು 5%ನಷ್ಟು ಕಡಿಮೆಯಾಗಿದೆ. ಹೊಸ ಹ್ಯುಂಡೈ ಐ 10 ಬಿಡುಗಡೆಯಾದ ಹೆಚ್ಚಿನ ಸಂಖ್ಯೆಯಲ್ಲಿಮಾರಾಟವಾಗುತ್ತಿದೆ. ಫೆಬ್ರವರಿ ತಿಂಗಳಿನಲ್ಲಿ ಈ ಕಾರಿನ 10,270 ಯುನಿಟ್‌ಗಳು ಮಾರಾಟವಾಗಿವೆ.

ಈ ಪ್ರಮಾಣವು ಜನವರಿ ತಿಂಗಳಿಗೆ ಹೋಲಿಸಿದರೆ 5%ನಷ್ಟು ಕಡಿಮೆಯಾಗಿದೆ. ಈ ಕಾರು ಮಾರಾಟದಲ್ಲಿ ಐ 20 ಕಾರ್ ಅನ್ನು ಹಿಂದಿಕ್ಕಿದೆ. ಫೆಬ್ರವರಿ ತಿಂಗಳಿನಲ್ಲಿ ಹ್ಯುಂಡೈ ಐ 20 ಕಾರಿನ 9001 ಯುನಿಟ್‌ಗಳು ಮಾರಾಟವಾಗಿವೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಹೊಸ ಮಾದರಿಯು ಬಿಡುಗಡೆಯಾದ ನಂತರವೂ ಮಾರಾಟದಲ್ಲಿ ಯಾವುದೇ ಹೆಚ್ಚಳ ದಾಖಲಾಗಿಲ್ಲ. ಒರಾ ಕಾರಿನ ಮಾರಾಟವು ಕುಸಿತವನ್ನು ದಾಖಲಿಸಿದೆ. ಫೆಬ್ರವರಿ ತಿಂಗಳಿನಲ್ಲಿ ಒರಾ ಕಾರಿನ 4300 ಯುನಿಟ್‌ಗಳು ಮಾರಾಟವಾಗಿವೆ.

ಹ್ಯುಂಡೈ ಕಂಪನಿಯ ಎಂಟ್ರಿ ಲೆವೆಲ್ ಕಾರ್ ಆದ ಸ್ಯಾಂಟ್ರೊವಿನ 2128 ಯುನಿಟ್‌ಗಳು ಫೆಬ್ರವರಿ ತಿಂಗಳಿನಲ್ಲಿ ಮಾರಾಟವಾಗಿವೆ. ಈ ಕಾರಿನ ಮಾರಾಟವು ಫೆಬ್ರವರಿ ತಿಂಗಳಿನಲ್ಲಿ 49%ನಷ್ಟು ಕಡಿಮೆಯಾಗಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಫೆಬ್ರವರಿ ತಿಂಗಳಿನಲ್ಲಿ ವರ್ನಾ ಕಾರಿನ 2047 ಯುನಿಟ್‌ಗಳು ಮಾರಾಟವಾಗಿವೆ. ಈ ಮೂಲಕ ವರ್ನಾ ಕಾರು ಮಾರಾಟದಲ್ಲಿ 259%ನಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಕಳೆದ ತಿಂಗಳು ಹ್ಯುಂಡೈ ಟಕ್ಸನ್ ಕಾರಿನ 152 ಯುನಿಟ್ ಹಾಗೂ ಅಲಾಂಟ್ರಾ 40 ಕಾರಿನ ಯುನಿಟ್‌ಗಳು ಮಾರಾಟವಾಗಿವೆ.

ಕಂಪನಿಯ ಎಲೆಕ್ಟ್ರಿಕ್ ಎಸ್‌ಯುವಿಯಾದ ಕೋನಾ ಕಾರಿನ 10 ಯುನಿಟ್‌ಗಳು ಫೆಬ್ರವರಿ ತಿಂಗಳಿನಲ್ಲಿ ಮಾರಾಟವಾಗಿವೆ. ಹ್ಯುಂಡೈ ಕಂಪನಿಯು ಕಳೆದ ತಿಂಗಳು ಒಟ್ಟು 51,600 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕಳೆದ ವರ್ಷದ ಫೆಬ್ರವರಿಯಲ್ಲಿ ಹ್ಯುಂಡೈ ಕಂಪನಿಯ 40,010 ಯುನಿಟ್ ಕಾರುಗಳು ಮಾರಾಟವಾಗಿದ್ದವು. ಆದರೂ ಹ್ಯುಂಡೈ ಕಂಪನಿಯ ಮಾರಾಟದಲ್ಲಿ ಜನವರಿ ತಿಂಗಳ ಮಾರಾಟಕ್ಕೆ ಹೋಲಿಸಿದರೆ 1%ನಷ್ಟು ಕುಸಿತ ಕಂಡುಬಂದಿದೆ.

ಹ್ಯುಂಡೈ ಕಂಪನಿಯು ಕಳೆದ ವರ್ಷ ಮಾರುಕಟ್ಟೆಯಲ್ಲಿರುವ ಕಾರುಗಳ ಹೊಸ ಮಾದರಿಗಳನ್ನು ಬಿಡುಗಡೆಗೊಳಿಸಿದೆ. ಹ್ಯುಂಡೈ ಕಂಪನಿಯ ಫೆಬ್ರವರಿ ತಿಂಗಳ ಮಾರಾಟದ ಅಂಕಿ ಅಂಶಗಳ ಬಗ್ಗೆ ಆಟೋಪಂಡಿಟ್ಜ್ ವರದಿ ಪ್ರಕಟಿಸಿದೆ.


Click it and Unblock the Notifications








