ದಸರಾ ಆಫರ್- Nissan ಮತ್ತು Datsun ಕಾರುಗಳ ಖರೀದಿ ಮೇಲೆ ಸ್ಪೆಷಲ್ ಡಿಸ್ಕೌಂಟ್

ಕೋವಿಡ್-19 ಪರಿಣಾಮ ಕಾರು ಮಾರಾಟದಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದ ಪ್ರಮುಖ ಆಟೋ ಕಂಪನಿಗಳು ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ವಾಹನ ಮಾರಾಟ ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಆಫರ್‌ಗಳು ಮತ್ತು ಸರಳ ಸಾಲ ಸೌಲಭ್ಯಗಳ ಮೂಲಕ ಗ್ರಾಹಕರನ್ನ ಸೆಳೆಯುತ್ತಿವೆ.

ದಸರಾ ಆಫರ್- Nissan ಮತ್ತು Datsun ಕಾರುಗಳ ಖರೀದಿ ಮೇಲೆ ಸ್ಪೆಷಲ್ ಡಿಸ್ಕೌಂಟ್

ಎರಡನೇ ಅಲೆಯ ಕೋವಿಡ್ ನಿರ್ಬಂಧಗಳಿಂದಾಗಿ ಕಳೆದ ಏಪ್ರಿಲ್, ಮೇ ಮತ್ತು ಜೂನ್ ಅವಧಿಯಲ್ಲಿ ಭಾರೀ ಪ್ರಮಾಣದ ಮಾರಾಟ ಕುಸಿತ ಕಂಡಿದ್ದ ಆಟೋ ಕಂಪನಿಗಳು ಇದೀಗ ಸಾಕಷ್ಟು ಸುಧಾರಣೆ ಕಂಡಿದ್ದು, ಮುಂಬರುವ ಹಬ್ಬದ ಋತುಗಳಲ್ಲಿ ಮತ್ತಷ್ಟು ಬೇಡಿಕೆ ಹೆಚ್ಚಳವಾಗುವ ನೀರಿಕ್ಷೆಯಲ್ಲಿವೆ. ಈ ನಿಟ್ಟಿನಲ್ಲಿ ಗ್ರಾಹಕರನ್ನು ಸೆಳೆಯುತ್ತಿರುವ ಪ್ರಮುಖ ಆಟೋ ಕಂಪನಿಗಳು ಹಲವಾರು ಆಫರ್‌ಗಳನ್ನು ನೀಡುತ್ತಿದ್ದು, ನಿಸ್ಸಾನ್ ಮತ್ತು ದಟ್ಸನ್ ಕೂಡಾ ಗರಿಷ್ಠ ಆಫರ್ ಘೋಷಣೆ ಮಾಡಿವೆ.

ದಸರಾ ಆಫರ್- Nissan ಮತ್ತು Datsun ಕಾರುಗಳ ಖರೀದಿ ಮೇಲೆ ಸ್ಪೆಷಲ್ ಡಿಸ್ಕೌಂಟ್

ನಿಸ್ಸಾನ್ ಮತ್ತು ದಟ್ಸನ್ ಕಂಪನಿಗಳು ವಿವಿಧ ಕಾರುಗಳ ಖರೀದಿ ಮೇಲೆ ಕನಿಷ್ಠ ರೂ. 40 ಸಾವಿರದಿಂದ ಗರಿಷ್ಠ ರೂ. 1 ಲಕ್ಷದಷ್ಟು ಆಫರ್ ಲಭ್ಯವಿರಲಿದ್ದು, ಹೊಸ ಆಫರ್‌ಗಳಲ್ಲಿ ಕ್ಯಾಶ್‌ಬ್ಯಾಕ್, ಎಕ್ಸ್‌ಚೆಂಜ್, ಲೊಯಾಲಿಟಿ ಆಫರ್, ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ಆಕ್ಸೆಸರಿಸ್‌ಗಳ ಮೇಲೆ ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದೆ.

ದಸರಾ ಆಫರ್- Nissan ಮತ್ತು Datsun ಕಾರುಗಳ ಖರೀದಿ ಮೇಲೆ ಸ್ಪೆಷಲ್ ಡಿಸ್ಕೌಂಟ್

ಭಾರತದಲ್ಲಿ ಜಂಟಿಯಾಗಿ ಕಾರು ಉತ್ಪಾದನೆ ಮತ್ತು ಮಾರಾಟ ಸೌಲಭ್ಯವನ್ನು ಹೊಂದಿರುವ ನಿಸ್ಸಾನ್ ಮತ್ತು ದಟ್ಸನ್ ಕಂಪನಿಗಳು ಪೆಟ್ರೋಲ್ ಕಾರು ಮಾದರಿಗಳ ಮಾರಾಟವನ್ನು ಮಾತ್ರ ಹೊಂದಿದ್ದು, ಬಿಎಸ್-6 ಎಮಿಷನ್ ಜಾರಿ ನಂತರ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿ ಪೆಟ್ರೋಲ್ ಕಾರು ಮಾದರಿಗಳನ್ನು ಮಾತ್ರ ಮಾರಾಟ ಮಾಡುತ್ತಿದೆ.

ದಸರಾ ಆಫರ್- Nissan ಮತ್ತು Datsun ಕಾರುಗಳ ಖರೀದಿ ಮೇಲೆ ಸ್ಪೆಷಲ್ ಡಿಸ್ಕೌಂಟ್

ನಿಸ್ಸಾನ್ ಮತ್ತು ದಟ್ಸನ್ ನೀಡುತ್ತಿರುವ ಹೊಸ ಡಿಸ್ಕೌಂಟ್ ಆಫರ್‌ಗಳು ಈ ತಿಂಗಳು ಕೊನೆಯ ತನಕ ಲಭ್ಯವಿರಲಿದ್ದು, ಆಫರ್‌ಗಳಲ್ಲಿ ಕೆಲವು ಕೊಡುಗೆಗಳು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಬದಲಾವಣೆಯಾಗುವ ಸಾಧ್ಯತೆಗಳಿವೆ. ಹಾಗಾದ್ರೆ ನಿಸ್ಸಾನ್ ಮತ್ತು ದಟ್ಸನ್ ನಿರ್ಮಾಣದ ಯಾವ ಕಾರಿನ ಮೇಲೆ ಎಷ್ಟು ಪ್ರಮಾಣದ ಡಿಸ್ಕೌಂಟ್ ಲಭ್ಯವಿದೆ ಎಂಬುವುದನ್ನು ನೋಡೋಣ.

ದಸರಾ ಆಫರ್- Nissan ಮತ್ತು Datsun ಕಾರುಗಳ ಖರೀದಿ ಮೇಲೆ ಸ್ಪೆಷಲ್ ಡಿಸ್ಕೌಂಟ್

ಕಿಕ್ಸ್ ಕಂಪ್ಯಾಕ್ಟ್ ಎಸ್‌ಯುವಿ

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಕಿಕ್ಸ್ ಕಾರಿನ ನಿಸ್ಸಾನ್ ಕಂಪನಿಯು ಬರೋಬ್ಬರಿ ರೂ. 1 ಲಕ್ಷ ಡಿಸ್ಕೌಂಟ್ ನೀಡುತ್ತಿದ್ದು, ಹೊಸ ಆಫರ್‌ನಲ್ಲಿ ಟಾಪ್ ಎಂಡ್ ಮಾದರಿಯ ಮೇಲೆ ರೂ.15 ಸಾವಿರ ಕ್ಯಾಶ್‌ಬ್ಯಾಕ್, ರೂ. ರೂ.70 ಸಾವಿರ ಎಕ್ಸ್‌ಚೆಂಜ್ ಆಫರ್, ಆನ್‌ಲೈನ್ ಬುಕ್ಕಿಂಗ್ ಮೇಲೆ ರೂ.5 ಸಾವಿರದಷ್ಟು ಬೋನಸ್, ರೂ. 10 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ಆಕರ್ಷಕ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುತ್ತಿದೆ.

ದಸರಾ ಆಫರ್- Nissan ಮತ್ತು Datsun ಕಾರುಗಳ ಖರೀದಿ ಮೇಲೆ ಸ್ಪೆಷಲ್ ಡಿಸ್ಕೌಂಟ್

ಕಿಕ್ಸ್ ಕಾರು ಮಾದರಿಯು 1.5-ಲೀಟರ್ ಸಾಮಾನ್ಯ ಪೆಟ್ರೋಲ್ ಮತ್ತು 1.3-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಹೊಂದಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.50 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 14.64 ಲಕ್ಷ ಬೆಲೆ ಹೊಂದಿದೆ.

ದಸರಾ ಆಫರ್- Nissan ಮತ್ತು Datsun ಕಾರುಗಳ ಖರೀದಿ ಮೇಲೆ ಸ್ಪೆಷಲ್ ಡಿಸ್ಕೌಂಟ್

ನಿಸ್ಸಾನ್ ಕಂಪನಿಯು ಹೊಸ ಆಫರ್‌ಗಳಲ್ಲಿ ಕಿಕ್ಸ್ ಕಾರಿನ ಮೇಲೆ ಮಾತ್ರ ಆಫರ್ ನೀಡುತ್ತಿದ್ದು, ತನ್ನ ಹೊಸ ಕಾರು ಮಾದರಿಯಾದ ಮ್ಯಾಗ್ನೈಟ್ ಕಾರಿನ ಮೇಲೆ ಯಾವುದೇ ಆಫರ್ ನೀಡುತ್ತಿಲ್ಲ.

ದಸರಾ ಆಫರ್- Nissan ಮತ್ತು Datsun ಕಾರುಗಳ ಖರೀದಿ ಮೇಲೆ ಸ್ಪೆಷಲ್ ಡಿಸ್ಕೌಂಟ್

ಇನ್ನು ದಟ್ಸನ್ ಕಾರುಗಳ ಮೇಲಿನ ಹೊಸ ಆಫರ್‌ಗಳಲ್ಲೂ ಕೂಡಾ ಕ್ಯಾಶ್‌ಬ್ಯಾಕ್, ಎಕ್ಸ್‌ಚೆಂಜ್, ಲೊಯಾಲಿಟಿ ಆಫರ್, ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ಆಕ್ಸೆಸರಿಸ್‌ಗಳ ಮೇಲೆ ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದೆ.

ದಸರಾ ಆಫರ್- Nissan ಮತ್ತು Datsun ಕಾರುಗಳ ಖರೀದಿ ಮೇಲೆ ಸ್ಪೆಷಲ್ ಡಿಸ್ಕೌಂಟ್

ದಟ್ಸನ್ ಕಂಪನಿಯು ವಿವಿಧ ಕಾರುಗಳ ಖರೀದಿ ಮೇಲೆ ಗರಿಷ್ಠ ರೂ.40 ಸಾವಿರದಷ್ಟು ಆಫರ್ ನೀಡುತ್ತಿದ್ದು, ಆಯ್ದ ರಾಜ್ಯಗಳಲ್ಲಿ ಕಂಪನಿಯು ತನ್ನ ಕಂಪನಿಯ ಕಾರು ಖರೀದಿ ಮೇಲೆ ಹೆಚ್ಚಿನ ಕೊಡುಗೆಗಳನ್ನು ನೀಡುತ್ತಿದೆ.

ದಸರಾ ಆಫರ್- Nissan ಮತ್ತು Datsun ಕಾರುಗಳ ಖರೀದಿ ಮೇಲೆ ಸ್ಪೆಷಲ್ ಡಿಸ್ಕೌಂಟ್

ಹೊಸ ಆಫರ್‌ಗಳು ಈ ತಿಂಗಳ ಕೊನೆಯ ತನಕ ಲಭ್ಯವಿದ್ದು, ರೆಡಿ-ಗೊ, ಗೊ ಮತ್ತು ಗೊ ಪ್ಲಸ್ ಮಾದರಿಗಳ ಮೇಲೆ ಆಫರ್ ನೀಡಲಾಗುತ್ತಿದೆ. ಹೊಸ ಆಫರ್‌ಗಳಲ್ಲಿ ರೆಡಿ-ಗೊ ಎಂಟ್ರಿ ಲೆವಲ್ ಹ್ಯಾಚ್‌ಬ್ಯಾಕ್ ಮಾದರಿಯು ರೂ.40 ಸಾವಿರ ಡಿಸ್ಕೌಂಟ್ ಪಡೆದುಕೊಂಡಿದ್ದು, ಇದರಲ್ಲಿ ರೂ. 15 ಸಾವಿರ ಕ್ಯಾಶ್‌ಬ್ಯಾಕ್, ರೂ.15 ಸಾವಿರ ಎಕ್ಸ್‌ಚೆಂಜ್ ಆಫರ್ ಪಡೆಯಬಹುದಾಗಿದೆ.

ದಸರಾ ಆಫರ್- Nissan ಮತ್ತು Datsun ಕಾರುಗಳ ಖರೀದಿ ಮೇಲೆ ಸ್ಪೆಷಲ್ ಡಿಸ್ಕೌಂಟ್

ದಟ್ಸನ್ ಕಂಪನಿಯು ರೆಡಿ-ಗೊ ಮಾದರಿಯಂತೆ ಗೊ ಹ್ಯಾಚ್‌ಬ್ಯಾಕ್ ಕಾರು ಮಾದರಿಯ ಮೇಲೂ ಆಕರ್ಷಕ ಡಿಸ್ಕೌಂಟ್ ಆಫರ್ ನೀಡುತ್ತಿದ್ದು, ರೂ. 40 ಸಾವಿರ ಮೌಲ್ಯದ ವಿವಿಧ ಆಫರ್‌ಗಳನ್ನು ನೀಡುತ್ತಿದೆ. ಇದರಲ್ಲಿ ರೂ.20 ಸಾವಿರ ಕ್ಯಾಶ್‌ ಡಿಸ್ಕೌಂಟ್, ರೂ. 20 ಸಾವಿರ ಎಕ್ಸ್‌ಚೆಂಜ್ ಬೋನಸ್ ದೊರೆಯಲಿದೆ.

ದಸರಾ ಆಫರ್- Nissan ಮತ್ತು Datsun ಕಾರುಗಳ ಖರೀದಿ ಮೇಲೆ ಸ್ಪೆಷಲ್ ಡಿಸ್ಕೌಂಟ್

ದಟ್ಸನ್ ಗೊ ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.03 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 6.51 ಲಕ್ಷ ಬೆಲೆ ಹೊಂದಿದ್ದು, ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರುವ ಬಜೆಟ್ ಬೆಲೆಯ ಕಾರು ಮಾದರಿಯಾಗಿದೆ.

ದಸರಾ ಆಫರ್- Nissan ಮತ್ತು Datsun ಕಾರುಗಳ ಖರೀದಿ ಮೇಲೆ ಸ್ಪೆಷಲ್ ಡಿಸ್ಕೌಂಟ್

ಇನ್ನು ಗೊ ಪ್ಲಸ್ ಕಾರು ಮಾದರಿಯು ದಟ್ಸನ್ ನಿರ್ಮಾಣದ ಎಂಟ್ರಿ ಲೆವಲ್ ಕಂಪ್ಯಾಕ್ಟ್ ಎಂಪಿವಿ ಕಾರು ಮಾದರಿಯಾಗಿದ್ದು, ಗೊ ಪ್ಲಸ್ ಕಾರು ಮಾದರಿಯ ಮೇಲೂ ರೂ. 40 ಸಾವಿರ ಡಿಸ್ಕೌಂಟ್ ಲಭ್ಯವಿದೆ. ರೂ. 40 ಸಾವಿರ ಮೌಲ್ಯದ ವಿವಿಧ ಆಫರ್‌ಗಳಲ್ಲಿ ರೂ.20 ಸಾವಿರ ಕ್ಯಾಶ್‌ ಡಿಸ್ಕೌಂಟ್, ರೂ. 20 ಸಾವಿರ ಎಕ್ಸ್‌ಚೆಂಜ್ ಬೋನಸ್ ದೊರೆಯಲಿದೆ.

ದಸರಾ ಆಫರ್- Nissan ಮತ್ತು Datsun ಕಾರುಗಳ ಖರೀದಿ ಮೇಲೆ ಸ್ಪೆಷಲ್ ಡಿಸ್ಕೌಂಟ್

ಗೊ ಪ್ಲಸ್ ಕಾರು ಮಾದರಿಯು ಗೊ ಹ್ಯಾಚ್‌ಬ್ಯಾಕ್ ಕಾರು ಮಾದರಿಯಲ್ಲಿರುವಂತೆಯೇ ಎಂಜಿನ್ ಆಯ್ಕೆ ಪಡೆದುಕೊಂಡಿದ್ದು, 1.2-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

ದಸರಾ ಆಫರ್- Nissan ಮತ್ತು Datsun ಕಾರುಗಳ ಖರೀದಿ ಮೇಲೆ ಸ್ಪೆಷಲ್ ಡಿಸ್ಕೌಂಟ್

ದಟ್ಸನ್ ಗೊ ಪ್ಲಸ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.26 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 7 ಲಕ್ಷ ಬೆಲೆ ಹೊಂದಿದ್ದು, ಈ ಹಣಕಾಸು ವರ್ಷದ ಕೊನೆಯಲ್ಲಿ ಕಾರು ಖರೀದಿಸುವ ಗ್ರಾಹಕರಿಗೆ ದಟ್ಸನ್ ಕಾರುಗಳ ಖರೀದಿ ಮೇಲೆ ಅತ್ಯುತ್ತಮ ಆಫರ್‌ಗಳನ್ನು ಪಡೆಯಬಹುದಾಗಿದೆ.

More from DriveSpark

Article Published On: Saturday, October 9, 2021, 13:25 [IST]
English summary
Datsun car discount for festival benefits of up to rs 1 lakh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+