ಎಲೆಕ್ಟ್ರಿಕ್ ಕಾರುಗಳ ಸಬ್ಸಡಿ ಯೋಜನೆಯನ್ನು ರದ್ದುಗೊಳಿಸಿದ ದೆಹಲಿ ಸರ್ಕಾರ

ಹೆಚ್ಚುತ್ತಿರುವ ಇಂಧನಗಳ ಬೆಲೆ ಪರಿಣಾಮ ವಾಹನ ನಿರ್ವಹಣಾ ವೆಚ್ಚದಲ್ಲಿ ಸಾಕಷ್ಟು ಏರಿಕೆಯಾಗಿದ್ದು, ಇಂಧನಗಳ ಬೆಲೆ ಹೊಡೆತಕ್ಕೆ ಸಿಲುಕಿರುವ ವಾಹನ ಮಾಲೀಕರು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಆದ್ಯತೆ ನೀಡುತ್ತಿದ್ದಾರೆ.

ಎಲೆಕ್ಟ್ರಿಕ್ ಕಾರುಗಳ ನೀಡಲಾಗುತ್ತಿದ್ದ ಸಬ್ಸಡಿ ಯೋಜನೆ ಯನ್ನು ರದ್ದುಗೊಳಿಸಿದ ದೆಹಲಿ ಸರ್ಕಾರ

ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿ ವಾಹನಗಳನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರದ ಜೊತೆಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನ ನೀತಿಯನ್ನು ಅಳವಡಿಸಿಕೊಳ್ಳುತ್ತಿದ್ದು, ಹೊಸ ಸಬ್ಸಡಿ ಯೋಜನೆಗಳ ಪರಿಣಾಮ ಇವಿ ವಾಹನ ಬಳಕೆಯಲ್ಲಿ ಸಾಕಷ್ಟು ಏರಿಕೆಯಾಗುತ್ತಿದೆ.

ಎಲೆಕ್ಟ್ರಿಕ್ ಕಾರುಗಳ ನೀಡಲಾಗುತ್ತಿದ್ದ ಸಬ್ಸಡಿ ಯೋಜನೆ ಯನ್ನು ರದ್ದುಗೊಳಿಸಿದ ದೆಹಲಿ ಸರ್ಕಾರ

ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರವು ಫೇಮ್ 2 ಸಬ್ಸಡಿ ಯೋಜನೆಯಡಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪನಿಗಳಿಗೆ ಮತ್ತು ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ಧನಸಹಾಯ ಒದಗಿಸುತ್ತಿದೆ.

ಎಲೆಕ್ಟ್ರಿಕ್ ಕಾರುಗಳ ನೀಡಲಾಗುತ್ತಿದ್ದ ಸಬ್ಸಡಿ ಯೋಜನೆ ಯನ್ನು ರದ್ದುಗೊಳಿಸಿದ ದೆಹಲಿ ಸರ್ಕಾರ

ಫೇಮ್ 2 ಯೋಜನೆಯ ಸಬ್ಸಡಿ ಜೊತೆಗೆ ವಿವಿಧ ರಾಜ್ಯದ ಸರ್ಕಾರಗಳು ಸಹ ಕೆಲವು ವಿನಾಯ್ತಿಗಳನ್ನು ನೀಡುತ್ತಿದ್ದು, ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಜಿಎಸ್‌ಟಿ ವಿನಾಯ್ತಿ, ಗರಿಷ್ಠ ಸಬ್ಸಡಿ ಮತ್ತು ತೆರಿಗೆ ವಿನಾಯ್ತಿಗಳನ್ನು ನೀಡಲಾಗುತ್ತಿದೆ.

ಎಲೆಕ್ಟ್ರಿಕ್ ಕಾರುಗಳ ನೀಡಲಾಗುತ್ತಿದ್ದ ಸಬ್ಸಡಿ ಯೋಜನೆ ಯನ್ನು ರದ್ದುಗೊಳಿಸಿದ ದೆಹಲಿ ಸರ್ಕಾರ

ಎಲೆಕ್ಟ್ರಿಕ್ ವಾಹನಗಳ ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರದ ಫೇಮ್ 2 ಹೊರತುಪಡಿಸಿ ರಾಜ್ಯಗಳ ಮಟ್ಟದಲ್ಲೂ ವಿವಿಧ ರಾಜ್ಯ ಸರ್ಕಾರಗಳು ಸಹ ಹೆಚ್ಚಿನ ಮಟ್ಟದ ಪ್ರೊತ್ಸಾಹ ನೀಡುತ್ತಿದ್ದು, ದೆಹಲಿ ಸರ್ಕಾರವು ಕಳೆದ 1 ವರ್ಷದ ಅವಧಿಯಲ್ಲಿ ಸಾವಿರಾರು ವಾಹನಗಳಿಗೆ ಫೇಮ್ 2 ಜೊತೆಗೆ ರಾಜ್ಯದ ಮಟ್ಟದಲ್ಲೂ ಹೆಚ್ಚಿನ ಸಬ್ಸಡಿ ನೀಡಲಾಗಿದೆ.

ಎಲೆಕ್ಟ್ರಿಕ್ ಕಾರುಗಳ ನೀಡಲಾಗುತ್ತಿದ್ದ ಸಬ್ಸಡಿ ಯೋಜನೆ ಯನ್ನು ರದ್ದುಗೊಳಿಸಿದ ದೆಹಲಿ ಸರ್ಕಾರ

ದೆಹಲಿಯಲ್ಲಿ ಹೊಸ ಸಬ್ಸಡಿ ಯೋಜನೆ ಪರಿಣಾಮ ಕಳೆದ ಕೆಲ ತಿಂಗಳಿನಿಂದ ನೀರಿಕ್ಷೆಗೂ ಮೀರಿ ಬೇಡಿಕೆ ದಾಖಲಾಗಿದ್ದು, ಇವಿ ವಾಹನಗಳ ನೋಂದಣಿ ಹೆಚ್ಚುತ್ತಿದ್ದಂತೆ ದೆಹಲಿ ಸರ್ಕಾರವು ತನ್ನ ಸಬ್ಸಡಿ ಯೋಜನೆಯಲ್ಲಿ ಕೆಲವು ಬದಲಾವಣೆಗೆ ತಂದಿದೆ.

ಎಲೆಕ್ಟ್ರಿಕ್ ಕಾರುಗಳ ನೀಡಲಾಗುತ್ತಿದ್ದ ಸಬ್ಸಡಿ ಯೋಜನೆ ಯನ್ನು ರದ್ದುಗೊಳಿಸಿದ ದೆಹಲಿ ಸರ್ಕಾರ

ದೆಹಲಿ ಸರ್ಕಾರವು ತನ್ನ ಸಬ್ಸಡಿ ಯೋಜನೆಯಲ್ಲಿ ಕಾರುಗಳಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹ ಯೋಜನೆಗಳನ್ನು ಸ್ಥಗಿತಗೊಳಿಸಿದ್ದು, ಕೇಂದ್ರ ಸರ್ಕಾರದ ಫೇಮ್ 2 ಯೋಜನೆ ಅಡಿಯಲ್ಲಿ ಲಭ್ಯವಾಗುವ ಸಬ್ಸಡಿ ಯೋಜನೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಎಲೆಕ್ಟ್ರಿಕ್ ಕಾರುಗಳ ನೀಡಲಾಗುತ್ತಿದ್ದ ಸಬ್ಸಡಿ ಯೋಜನೆ ಯನ್ನು ರದ್ದುಗೊಳಿಸಿದ ದೆಹಲಿ ಸರ್ಕಾರ

ಈ ಹಿಂದೆ ದೆಹಲಿ ಸರ್ಕಾರವು ಕೇಂದ್ರ ಸರ್ಕಾರದ ಫೇಮ್ 2 ಸಬ್ಸಡಿ ಯೋಜನೆಯ ಜೊತೆಗೆ ತನ್ನದೆ ಆದ ಹೊಸ ಸಬ್ಸಡಿ ಯೋಜನೆ ಅಡಿ ಇವಿ ವಾಹನಗಳಿಗೆ ರಸ್ತೆ ತೆರಿಗೆ ವಿನಾಯ್ತಿ, ನೋಂದಣಿ ಶುಲ್ಕವನ್ನು ಮನ್ನಾ ಮಾಡಿತ್ತು.

ಎಲೆಕ್ಟ್ರಿಕ್ ಕಾರುಗಳ ನೀಡಲಾಗುತ್ತಿದ್ದ ಸಬ್ಸಡಿ ಯೋಜನೆ ಯನ್ನು ರದ್ದುಗೊಳಿಸಿದ ದೆಹಲಿ ಸರ್ಕಾರ

ಬ್ಯಾಟರಿ ಪ್ಯಾಕ್ ಆಧರಿಸಿ ದ್ವಿಚಕ್ರ ವಾಹನಗಳಿಗೆ ರೂ.6 ಸಾವಿರದಿಂದ ರೂ.10 ಸಾವಿರ, ತ್ರಿ ಚಕ್ರ ವಾಹನಗಳಿಗೆ ರೂ. 40 ಸಾವಿರ ತನಕ ಮತ್ತು ಕಾರುಗಳಿಗೆ ರೂ. 1.50 ಲಕ್ಷದಿಂದ ರೂ. 2.50 ಲಕ್ಷದ ತನಕ ಸಬ್ಸಡಿ ನೀಡುತ್ತಿತ್ತು. ಹೊಸ ಯೋಜನೆಯ ಪರಿಣಾಮ ಕೆಲ ತಿಂಗಳಿನಿಂದ ಇವಿ ಮಾರಾಟವು ಸಾಕಷ್ಟು ಸುಧಾರಿಸಿದ್ದು, ನೋಂದಣಿ ಪ್ರಮಾಣವು ಹೆಚ್ಚುತ್ತಿದ್ದಂತೆ ಇವಿ ಕಾರುಗಳ ಪ್ರೋತ್ಸಾಹ ಯೋಜನೆಗಳನ್ನು ಹಿಂಪಡೆಯಲಾಗಿದೆ.

ಎಲೆಕ್ಟ್ರಿಕ್ ಕಾರುಗಳ ನೀಡಲಾಗುತ್ತಿದ್ದ ಸಬ್ಸಡಿ ಯೋಜನೆ ಯನ್ನು ರದ್ದುಗೊಳಿಸಿದ ದೆಹಲಿ ಸರ್ಕಾರ

ದೆಹಲಿ ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ಅವರ ಪ್ರಕಾರ, ಎಲೆಕ್ಟ್ರಿಕ್ ಕಾರು ವಿಭಾಗವು ದೆಹಲಿಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದು, ಇವಿ ವಾಹನಗಳನ್ನು ಪ್ರೋತ್ಸಾಹಿಸಲು ದೆಹಲಿ ಸರ್ಕಾರ ಹೊಸ ಪ್ರಯತ್ನಯೊಂದಿಗೆ ಯಶಸ್ವಿಯಾಗಿದೆ ಎಂದಿದ್ದಾರೆ.

ಎಲೆಕ್ಟ್ರಿಕ್ ಕಾರುಗಳ ನೀಡಲಾಗುತ್ತಿದ್ದ ಸಬ್ಸಡಿ ಯೋಜನೆ ಯನ್ನು ರದ್ದುಗೊಳಿಸಿದ ದೆಹಲಿ ಸರ್ಕಾರ

ಹೊಸ ಸಬ್ಸಿಡಿ ಯೋಜನೆ ಪರಿಣಾಮ ಜುಲೈ ಮತ್ತು ಸೆಪ್ಟೆಂಬರ್ ನಡುವೆ ದೆಹಲಿಯಲ್ಲಿ ನೋಂದಾಯಿಸಲಾದ 1.50 ಲಕ್ಷ ವಾಹನಗಳಲ್ಲಿ ಸುಮಾರು 7,869 ಯುನಿಟ್‌ಗಳು ಎಲೆಕ್ಟ್ರಿಕ್ ವಾಹನಗಳಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಿಂದಾಗಿ ಇವಿ ವಾಹನಗಳು ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸುತ್ತಿವೆ.

ಎಲೆಕ್ಟ್ರಿಕ್ ಕಾರುಗಳ ನೀಡಲಾಗುತ್ತಿದ್ದ ಸಬ್ಸಡಿ ಯೋಜನೆ ಯನ್ನು ರದ್ದುಗೊಳಿಸಿದ ದೆಹಲಿ ಸರ್ಕಾರ

ಹಾಗೆಯೇ ಆಗಸ್ಟ್ ನಿಂದ ಅಕ್ಟೋಬರ್ ವರೆಗಿನ ಅವಧಿಯಲ್ಲಿ ದೆಹಲಿಯಲ್ಲಿ 22,805 ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿದ್ದು, ಇದರೊಂದಿಗೆ ದೆಹಲಿಯ ಇವಿ ನೋಂದಣಿ ಕಳೆದ ನಾಲ್ಕು ತಿಂಗಳಲ್ಲಿ 31,000 ಯುನಿಟ್‌ಗಳಿಗೆ ಏರಿಕೆಯಾಗಿದೆ.

ಎಲೆಕ್ಟ್ರಿಕ್ ಕಾರುಗಳ ನೀಡಲಾಗುತ್ತಿದ್ದ ಸಬ್ಸಡಿ ಯೋಜನೆ ಯನ್ನು ರದ್ದುಗೊಳಿಸಿದ ದೆಹಲಿ ಸರ್ಕಾರ ಎಲೆಕ್ಟ್ರಿಕ್ ಕಾರುಗಳ ನೀಡಲಾಗುತ್ತಿದ್ದ ಸಬ್ಸಡಿ ಯೋಜನೆ ಯನ್ನು ರದ್ದುಗೊಳಿಸಿದ ದೆಹಲಿ ಸರ್ಕಾರ

ಇವಿ ಕಾರುಗಳ ಬದಲಾಗಿ ಆಟೋ ಚಾಲಕರು, ದ್ವಿಚಕ್ರ ವಾಹನ ಮಾಲೀಕರಿಗೆ ಮತ್ತು ವಿತರಣಾ ವಾಹನಗಳ ಸಬ್ಸಡಿ ಯೋಜನೆ ಅಗತ್ಯವಿರುವುದರಿಂದ ಇವಿ ಕಾರುಗಳ ಪ್ರೋತ್ಸಾಹ ಯೋಜನೆ ಹಿಂಪಡೆಯುತ್ತಿರುವುದಾಗಿ ಸ್ಪಷ್ಟಪಡಿಸಿರುವ ದೆಹಲಿ ಸಾರಿಗೆ ಸಚಿವರು ಹೆಚ್ಚು ಅಗತ್ಯವಿರುವವರಿಗೆ ಸಬ್ಸಿಡಿಗಳನ್ನು ಒದಗಿಸುವುದು ಸರ್ಕಾರದ ಗುರಿಯಾಗಿದೆ ಎಂದಿದ್ದಾರೆ.

ಎಲೆಕ್ಟ್ರಿಕ್ ಕಾರುಗಳ ನೀಡಲಾಗುತ್ತಿದ್ದ ಸಬ್ಸಡಿ ಯೋಜನೆ ಯನ್ನು ರದ್ದುಗೊಳಿಸಿದ ದೆಹಲಿ ಸರ್ಕಾರ

ಇದರೊಂದಿಗೆ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಖರೀದಿ ಮಾಡುವ ಗ್ರಾಹಕರಿಗೆ ಮಾತ್ರವಲ್ಲ ಉತ್ಪಾದಕ ಕಂಪನಿಗಳಿಗೂ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಇವಿ ವಾಹನಗಳು ಹೆಚ್ಚಿದಂತೆ ಅವುಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣಕ್ಕೂ ಯೋಜನೆ ಜಾರಿಗೆ ತರಲಾಗಿದೆ.

Most Read Articles

Kannada
English summary
Delhi govt pulled back electric cars subsidy policy details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X