ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾದ ಎಲೆಕ್ಟ್ರಿಕ್ ಕ್ವಾಡ್ರಿ ಸೈಕಲ್ ವಾಹನ

ಈಗ ಭಾರತವೂ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ವಾಹನ ತಯಾರಕ ಕಂಪನಿಗಳೂ ಸಹ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿಯೇ ಬಿಡುಗಡೆಗೊಳಿಸುತ್ತಿವೆ.

ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾದ ಎಲೆಕ್ಟ್ರಿಕ್ ಕ್ವಾಡ್ರಿ ಸೈಕಲ್

ಈಗ ಎಲೆಕ್ಟ್ರಿಕ್ ಕ್ವಾಡ್ರಿ ಸೈಕಲ್ ಅನ್ನು ಜನಪ್ರಿಯ ಆನ್‌ಲೈನ್ ಶಾಪಿಂಗ್ ತಾಣವಾದ ಅಲಿಬಾಬಾದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗಿದೆ. ಈ ಎಲೆಕ್ಟ್ರಿಕ್ ಕ್ವಾಡ್ರಿ ಸೈಕಲ್ ಅನ್ನು K 5 ಎಂಬ ಕಂಪನಿ ಉತ್ಪಾದಿಸಿದೆ. ಈ ಎಲೆಕ್ಟ್ರಿಕ್ ವಾಹನವು ಕಾರಿನಂತೆ ಕಾಣಿಸಿದರೂ ವಾಸ್ತವವಾಗಿ ಅದು ಕಾರ್ ಅಲ್ಲ. ಇದೊಂದು ಚತುರ್ಭುಜ ಮಾದರಿಯ ವಾಹನವಾಗಿದೆ.

ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾದ ಎಲೆಕ್ಟ್ರಿಕ್ ಕ್ವಾಡ್ರಿ ಸೈಕಲ್

ಈ ವಾಹನದಲ್ಲಿ ಇಬ್ಬರು ಮಾತ್ರ ಪ್ರಯಾಣಿಸಬಹುದು. ಈ ವಾಹನವನ್ನು ಅತ್ಯಂತ ಸಾಧಾರಣ ನೋಟ ಹಾಗೂ ಕನಿಷ್ಠ ಬಳಕೆಯನ್ನು ಹೊಂದಿರುವ ವಾಹನವಾಗಿ ವಿನ್ಯಾಸಗೊಳಿಸಲಾಗಿದೆ. ಈ ಕಾರಣಕ್ಕಾಗಿಯೇ K 5 ಎಲೆಕ್ಟ್ರಿಕ್ ಕಾರ್ ಅನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗಿದೆ.

ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾದ ಎಲೆಕ್ಟ್ರಿಕ್ ಕ್ವಾಡ್ರಿ ಸೈಕಲ್

ಈ ಎಲೆಕ್ಟ್ರಿಕ್ ಕಾರಿನಲ್ಲಿ ಯಾವ ರೀತಿಯ ಫೀಚರ್ ಗಳನ್ನು ನೀಡಲಾಗಿದೆ ಎಂಬ ಬಗ್ಗೆ ಕಂಪನಿಯು ಯಾವುದೇ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ. ಈ ಎಲೆಕ್ಟ್ರಿಕ್ ಕ್ವಾಡ್ರಿ ಸೈಕಲ್ ಬೆಲೆ 2,100 ಅಮೆರಿಕನ್ ಡಾಲರ್ ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ ರೂ. 1.54 ಲಕ್ಷಗಳಾಗಿದೆ. ಗಮನಿಸಬೇಕಾದ ಸಂಗತಿಯೆಂದರೆ ಇದು ಅಂದಾಜು ಬೆಲೆ ಮಾತ್ರ. K 5 ಎಲೆಕ್ಟ್ರಿಕ್ ಕಾರು ಇನ್ನು ಕಡಿಮೆ ಬೆಲೆಯನ್ನು ಹೊಂದುವ ಸಾಧ್ಯತೆಗಳಿವೆ.

ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾದ ಎಲೆಕ್ಟ್ರಿಕ್ ಕ್ವಾಡ್ರಿ ಸೈಕಲ್

ಈ K 5 ಎಲೆಕ್ಟ್ರಿಕ್ ಕ್ವಾಡ್ರಿ ಸೈಕಲ್ ಅನ್ನು ನಮ್ಮ ನೆರೆ ರಾಷ್ಟ್ರಗಳಲ್ಲಿ ಒಂದಾದ ಚೀನಾದಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. ಈ ಕ್ವಾಡ್ರಿ ಸೈಕಲ್ ಅನ್ನು ಜನಪ್ರಿಯ ಆನ್‌ಲೈನ್ ಶಾಪಿಂಗ್ ತಾಣವಾದ ಅಲಿಬಾಬಾ ಮೂಲಕ ಮಾರಾಟ ಮಾಡಲಾಗಿದೆ. ಈ ಎಲೆಕ್ಟ್ರಿಕ್ ಕ್ವಾಡ್ರಿ ಸೈಕಲ್ ಗಂಟೆಗೆ 40 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.

ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾದ ಎಲೆಕ್ಟ್ರಿಕ್ ಕ್ವಾಡ್ರಿ ಸೈಕಲ್

ಈ ವಾಹನವು ಪೂರ್ತಿಯಾಗಿ ಚಾರ್ಜ್ ಆದ ನಂತರ 52 ಕಿ.ಮೀಗಳಿಂದ 66 ಕಿ.ಮೀಗಳವರೆಗೆ ಚಲಿಸುತ್ತದೆ ಎಂದು ಹೇಳಲಾಗಿದೆ. ಆದರೆ ಈ ಇಷ್ಟು ದೂರ ಚಲಿಸಲು ಈ ವಾಹನವನ್ನು ಕನಿಷ್ಠ 8 ಗಂಟೆಗಳ ಕಾಲ ಚಾರ್ಜ್ ಮಾಡಬೇಕು. ಅಂದರೆ K 5 ಎಲೆಕ್ಟ್ರಿಕ್ ಕಾರಿನಲ್ಲಿರುವ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಲು ಎಂಟು ಗಂಟೆಗಳು ಬೇಕಾಗುತ್ತದೆ.

ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾದ ಎಲೆಕ್ಟ್ರಿಕ್ ಕ್ವಾಡ್ರಿ ಸೈಕಲ್

ಈ ಎಲೆಕ್ಟ್ರಿಕ್ ಕ್ವಾಡ್ರಿ ಸೈಕಲ್ ಅನ್ನು ರೀಗಲ್ ರಾಪ್ಟರ್ ಮೋಟಾರ್ಸ್ ಮೂಲಕ ತಯಾರಿಸಲಾಗುತ್ತದೆ. ಈ ಕಂಪನಿಯು ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಹಾಗೂ ಸ್ಕೂಟರ್ ಉತ್ಪಾದನೆಯಲ್ಲಿ ಪರಿಣತಿ ಹೊಂದಿದೆ. ಈಗ ಈ ಕಂಪನಿಯು ವಿಶ್ವದ ಅಗ್ಗದ ಬೆಲೆಯ ಎಲೆಕ್ಟ್ರಿಕ್ ಕಾರನ್ನು ಉತ್ಪಾದಿಸಿ ಚೀನಾದಲ್ಲಿ ಮಾರಾಟ ಮಾಡುತ್ತಿದೆ.

ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾದ ಎಲೆಕ್ಟ್ರಿಕ್ ಕ್ವಾಡ್ರಿ ಸೈಕಲ್

ಚಿಕ್ಕ ಗಾತ್ರದ ಕಾರಣದಿಂದಾಗಿ ಈ ಕಾರು ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಈ ವಾಹನವು ಹಳೆಯ ಕಾಲದ ಟ್ರಕ್‌ನ ಮುಂಭಾಗದಂತಹ ಆಕಾರವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಕ್ವಾಡ್ರಿ ಸೈಕಲ್ ಕಡಿಮೆ ಫೀಚರ್ ಗಳನ್ನು ಹೊಂದಿದೆ. ಈ ವಾಹನವನ್ನು ಭಾರತದಲ್ಲಿ ಬಿಡುಗಡೆಗೊಳಿಸುವುದು ಅನುಮಾನ. ಒಂದು ವೇಳೆ ಆನ್‌ಲೈನ್‌ ಮೂಲಕ ಆಮದು ಮಾಡಿಕೊಂಡರೆ ಆರ್‌ಟಿಒ ಅನುಮತಿ ಪಡೆದು ಬಳಸಬೇಕಾಗುತ್ತದೆ.

ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾದ ಎಲೆಕ್ಟ್ರಿಕ್ ಕ್ವಾಡ್ರಿ ಸೈಕಲ್

Tata Nexon EV ಭಾರತದಲ್ಲಿ ಮಾರಾಟವಾಗುವ ಅಗ್ಗದ ಬೆಲೆಯ ಎಲೆಕ್ಟ್ರಿಕ್ ಕಾರ್ ಆಗಿದೆ. ಈ ಎಲೆಕ್ಟ್ರಿಕ್ ಕಾರಿನ ಆರಂಭಿಕ ಬೆಲೆ ರೂ. 13.99 ಲಕ್ಷಗಳಾಗಿದೆ. Tata Motors ಕಂಪನಿಯು ಇತ್ತೀಚಿಗೆ ಈ ಎಲೆಕ್ಟ್ರಿಕ್ ಕಾರಿನ ಬೆಲೆಯನ್ನು ಹೆಚ್ಚಿಸಿದೆ. ಬೆಲೆ ಹೆಚ್ಚಳದ ನಂತರವೂ Tata Nexon EV ಭಾರತದ ಅಗ್ಗದ ಬೆಲೆಯ ಎಲೆಕ್ಟ್ರಿಕ್ ಕಾರ್ ಆಗಿ ಮುಂದುವರೆದಿದೆ.

ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾದ ಎಲೆಕ್ಟ್ರಿಕ್ ಕ್ವಾಡ್ರಿ ಸೈಕಲ್

Tata Motors ಕಂಪನಿಯು Tata Nexon EVಯ ಎಂಟ್ರಿ ಲೆವೆಲ್ ಕಾರಿನ ಬೆಲೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಈ ಕಾರ್ ಅನ್ನುಹಳೆಯ ದರದಲ್ಲಿಯೇ ಮಾರಾಟ ಮಾಡಲಾಗುತ್ತದೆ. ಆದರೆ ಈ ಎಲೆಕ್ಟ್ರಿಕ್ ಕಾರಿನ ಅತ್ಯಾಧುನಿಕ ಮಾದರಿಗಳಾದ XZ Plus, XZ Plus LUX ಗಳ ಬೆಲೆಯನ್ನು 9 ಸಾವಿರ ರೂಪಾಯಿಗಳಷ್ಟು ಏರಿಕೆ ಮಾಡಲಾಗಿದೆ.

ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾದ ಎಲೆಕ್ಟ್ರಿಕ್ ಕ್ವಾಡ್ರಿ ಸೈಕಲ್

ಕಂಪನಿಯು ಕೆಲವು ತಿಂಗಳ ಹಿಂದೆ ಈ ಮಾದರಿಗಳ ಬೆಲೆಯನ್ನು ಹೆಚ್ಚಿಸಿತ್ತು. Tata Motors ಕಂಪನಿಯು ಈ ತಿಂಗಳು ಮತ್ತೊಮ್ಮೆ ಈ ಕಾರಿನ ಬೆಲೆಯನ್ನು ಏರಿಸುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ. ರೂ. 15.56 ಲಕ್ಷಗಳಿದ್ದ XZ + ಮಾದರಿಯ ಬೆಲೆ, ಬೆಲೆ ಏರಿಕೆಯ ನಂತರ ರೂ. 15.65 ಲಕ್ಷಗಳಾದರೆ, ರೂ. 16.56 ಲಕ್ಷಗಳಿದ್ದ XZ + Lux ಮಾದರಿಯ ಬೆಲೆ, ಬೆಲೆ ಏರಿಕೆಯ ನಂತರ ರೂ. 16.65 ಲಕ್ಷಗಳಾಗಿದೆ.

ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾದ ಎಲೆಕ್ಟ್ರಿಕ್ ಕ್ವಾಡ್ರಿ ಸೈಕಲ್

Tata Motors ಕಂಪನಿಯು ತನ್ನ Tigor ಕಾರಿನ ಎಲೆಕ್ಟ್ರಿಕ್ ಆವೃತ್ತಿಯನ್ನು ಸಹ ಶೀಘ್ರದಲ್ಲಿಯೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಈಗ ಈ ಕಾರ್ ಅನ್ನು ಸರ್ಕಾರಿ ಇಲಾಖೆಗಳಿಗೆ ಹಾಗೂ ಅಲ್ಲಿನ ಅಧಿಕಾರಿಗಳಿಗಾಗಿ ಮಾತ್ರ ಮಾರಾಟ ಮಾಡಲಾಗುತ್ತಿದೆ. Tata Nexon EV ರೀತಿಯಲ್ಲಿಯೇ Tata Tigor ಎಲೆಕ್ಟ್ರಿಕ್ ಕಾರು ಸಹ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಸಾಧ್ಯತೆಗಳಿವೆ.

ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾದ ಎಲೆಕ್ಟ್ರಿಕ್ ಕ್ವಾಡ್ರಿ ಸೈಕಲ್

Tata Motors ಕಂಪನಿಯ ಜೊತೆಗೆ Hyundai ಹಾಗೂ MG Motor ಕಂಪನಿಗಳೂ ಸಹ ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿವೆ. ಮುಂಬರುವ ದಿನಗಳಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Electric quadricycle k5 goes for sale at lowest price through alibaba details
Story first published: Monday, August 30, 2021, 18:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X