ವಾಣಿಜ್ಯ ನಗರಿಯಲ್ಲಿ ಹೆಚ್ಚಾದ ಎಲೆಕ್ಟ್ರಿಕ್ ವಾಹನ ಮಾರಾಟ ಪ್ರಮಾಣ

ದೇಶದ ಪ್ರಮುಖ ನಗರಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ದೇಶದ ವಾಣಿಜ್ಯ ನಗರಿ ಮುಂಬಯಿಯಲ್ಲೂ ಎಲೆಕ್ಟ್ರಿಕ್ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. 2020-21ರ ಆರ್ಥಿಕ ವರ್ಷದಲ್ಲಿ ಮುಂಬಯಿಯಲ್ಲಿ 1,442 ಯುನಿಟ್‌ಗಳು ಮಾರಾಟವಾಗಿವೆ.

ವಾಣಿಜ್ಯ ನಗರಿಯಲ್ಲಿ ಹೆಚ್ಚಾದ ಎಲೆಕ್ಟ್ರಿಕ್ ವಾಹನ ಮಾರಾಟ ಪ್ರಮಾಣ

ಇದು ಕಳೆದ ವರ್ಷಕ್ಕಿಂತ 115%ನಷ್ಟು ಹೆಚ್ಚಾಗಿದೆ. ಎಲೆಕ್ಟ್ರಿಕ್ ಸ್ಕೂಟರ್‌ಗಳು ಇದರಲ್ಲಿ ಸಿಂಹ ಪಾಲನ್ನು ಹೊಂದಿವೆ. ಇದರ ಜೊತೆಗೆ ಸಿಎನ್‌ಜಿ ವಾಹನಗಳ ಮಾರಾಟದಲ್ಲೂ ಹೆಚ್ಚಳ ಕಂಡು ಬಂದಿದೆ. ಕಳೆದ ಕೆಲವು ದಿನಗಳಿಂದ ಪೆಟ್ರೋಲ್ ಡೀಸೆಲ್ ಬೆಲೆ ತೀವ್ರ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

ವಾಣಿಜ್ಯ ನಗರಿಯಲ್ಲಿ ಹೆಚ್ಚಾದ ಎಲೆಕ್ಟ್ರಿಕ್ ವಾಹನ ಮಾರಾಟ ಪ್ರಮಾಣ

ಇದರಿಂದ ದಿನ ನಿತ್ಯ ಪೆಟ್ರೋಲ್ ಡೀಸೆಲ್ ವಾಹನಗಳನ್ನು ಬಳಸುವ ಜನರು ಈಗ ಪರ್ಯಾಯ ಇಂಧನಗಳತ್ತ ಮುಖ ಮಾಡುತ್ತಿದ್ದಾರೆ. ಎಲೆಕ್ಟ್ರಿಕ್ ವಾಹನಗಳಿಗೆ ಈಗಬೇಡಿಕೆ ಹೆಚ್ಚಾಗುತ್ತಿದೆ. ಸಿಎನ್‌ಜಿ, ಹೈಬ್ರಿಡ್ ವಾಹನಗಳು ಸಹ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿವೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ವಾಣಿಜ್ಯ ನಗರಿಯಲ್ಲಿ ಹೆಚ್ಚಾದ ಎಲೆಕ್ಟ್ರಿಕ್ ವಾಹನ ಮಾರಾಟ ಪ್ರಮಾಣ

ಸಿಎನ್‌ಜಿ ಮಾದರಿಗಳ ಮಾರಾಟವು 2019-2020ರ ಆರ್ಥಿಕ ವರ್ಷಕ್ಕಿಂತ 12%ನಷ್ಟು ಕಡಿಮೆಯಾಗಿದೆ. ಮಾರುತಿ ಸುಜುಕಿ, ಹ್ಯುಂಡೈನಂತಹ ದೊಡ್ಡ ದೊಡ್ಡ ಕಂಪನಿಗಳು ಸಿಎನ್‌ಜಿ ಮಾದರಿ ಕಾರುಗಳನ್ನು ಮಾರಾಟ ಮಾಡುತ್ತಿವೆ.

ವಾಣಿಜ್ಯ ನಗರಿಯಲ್ಲಿ ಹೆಚ್ಚಾದ ಎಲೆಕ್ಟ್ರಿಕ್ ವಾಹನ ಮಾರಾಟ ಪ್ರಮಾಣ

ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು 90%ನಷ್ಟು ಪಾಲನ್ನು ಹೊಂದಿವೆ. ಈ ವರ್ಷ ಜನವರಿ - ಮಾರ್ಚ್ ಅವಧಿಯಲ್ಲಿ 885 ಎಲೆಕ್ಟ್ರಿಕ್ ವಾಹನಗಳನ್ನು ನೋಂದಾಯಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ವರ್ಷ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತಮವಾಗಿದೆ ಎಂದು ಹೇಳಬಹುದು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ವಾಣಿಜ್ಯ ನಗರಿಯಲ್ಲಿ ಹೆಚ್ಚಾದ ಎಲೆಕ್ಟ್ರಿಕ್ ವಾಹನ ಮಾರಾಟ ಪ್ರಮಾಣ

ಸಾರಿಗೆ ತಜ್ಞರ ಪ್ರಕಾರ, ಡೀಸೆಲ್ ಬೆಲೆ ರೂ.90ರ ಆಸು ಪಾಸಿನಲ್ಲಿದ್ದರೆ, ಪೆಟ್ರೋಲ್ ಬೆಲೆ ರೂ.100ಗಳ ಆಸುಪಾಸಿನಲ್ಲಿದೆ. ಈ ಕಾರಣಕ್ಕೆ ಜನರು ಕಡಿಮೆ ಬೆಲೆ ಹಾಗೂ ಕಡಿಮೆ ಮೆಂಟೆನೆನ್ಸ್ ಹೊಂದಿರುವ ಎಲೆಕ್ಟ್ರಿಕ್ ವಾಹನಗಳಿಗೆ ಆದ್ಯತೆ ನೀಡುತ್ತಿದ್ದಾರೆ.

ವಾಣಿಜ್ಯ ನಗರಿಯಲ್ಲಿ ಹೆಚ್ಚಾದ ಎಲೆಕ್ಟ್ರಿಕ್ ವಾಹನ ಮಾರಾಟ ಪ್ರಮಾಣ

ಪೆಟ್ರೋಲ್ ಕಾರುಗಳಿಗೆ ಪ್ರತಿ ಕಿ.ಮೀಗೆ ರೂ.3 - 4 ಖರ್ಚು ಮಾಡಬೇಕಾಗುತ್ತದೆ. ಆದರೆ ಎಲೆಕ್ಟ್ರಿಕ್ ಕಾರಿಗೆ ಪ್ರತಿ ಕಿ.ಮೀಗೆ 50 ಪೈಸೆ ಮಾತ್ರ ಖರ್ಚಾಗುತ್ತದೆ. ಇದರ ಜೊತೆಗೆ ಕೇಂದ್ರ ಸರ್ಕಾರವು ಫೇಮ್ ಹಾಗೂ ಕಾರು ತಯಾರಕ ಕಂಪನಿಗಳ ನೆರವಿನೊಂದಿಗೆ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸುತ್ತಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ವಾಣಿಜ್ಯ ನಗರಿಯಲ್ಲಿ ಹೆಚ್ಚಾದ ಎಲೆಕ್ಟ್ರಿಕ್ ವಾಹನ ಮಾರಾಟ ಪ್ರಮಾಣ

ಕಳೆದ ಹಣಕಾಸು ವರ್ಷದಲ್ಲಿ 10,363 ಯುನಿಟ್‌ ಸಿಎನ್‌ಜಿ ವಾಹನಗಳು ಮಾರಾಟವಾಗಿದ್ದರೆ, 11,785 ಯುನಿಟ್‌ ಡೀಸೆಲ್ ವಾಹನಗಳು ಮಾರಾಟವಾಗಿವೆ.2019-20ರಲ್ಲಿ ಸಿಎನ್‌ಜಿ ವಾಹನ ಮಾರಾಟ ಪ್ರಮಾಣವು 28%ನಷ್ಟು ಕಡಿಮೆಯಾಗಿದ್ದರೆ, ಈ ಪ್ರಮಾಣವು ಈ ಬಾರಿ 12%ನಷ್ಟು ಕಡಿಮೆಯಾಗಿದೆ.

ವಾಣಿಜ್ಯ ನಗರಿಯಲ್ಲಿ ಹೆಚ್ಚಾದ ಎಲೆಕ್ಟ್ರಿಕ್ ವಾಹನ ಮಾರಾಟ ಪ್ರಮಾಣ

ಕ್ಯಾಬ್ ಚಾಲಕರು ಸಹ ಡೀಸೆಲ್ ಎಂಜಿನ್ ವಾಹನಗಳ ಬದಲಿಗೆ ಸಿಎನ್‌ಜಿ ಮಾದರಿ ವಾಹನಗಳನ್ನು ಖರೀದಿಸುತ್ತಿದ್ದಾರೆ. ಸದ್ಯಕ್ಕೆ ಹೈಬ್ರಿಡ್ ಸಿಎನ್‌ಜಿ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಕಡಿಮೆ ಬೆಲೆ ಜೊತೆಗೆ ಹೆಚ್ಚು ದೂರ ಚಲಿಸುವ ಕಾರಣಕ್ಕೆ ಈ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ.

Most Read Articles

Kannada
English summary
Electric vehicle registration increases in Mumbai. Read in Kannada.
Story first published: Tuesday, April 20, 2021, 18:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X