ಹೊಸ ಯೋಜನೆಯೊಂದಿಗೆ 600 ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲು ಸಿದ್ದವಾದ EVRE ಮತ್ತು FreshWorld

ಬೆಂಗಳೂರು ಮೂಲದ ಇವೆರೆ(EVRE) ಮತ್ತು ಫ್ರೆಶ್‌ವರ್ಲ್ಡ್(FreshWorld) ಕಂಪನಿಗಳು ಡೆಲಿವರಿ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಸೌಲಭ್ಯವನ್ನು ಹೆಚ್ಚಿಸಲು ಹೊಸ ಯೋಜನೆಯೊಂದನ್ನು ರೂಪಿಸಿದ್ದು, ಹೊಸ ಯೋಜನೆಯಡಿ ಇವೆರೆ ಮತ್ತು ಫ್ರೆಶ್‌ವರ್ಲ್ಡ್ ಕಂಪನಿಗಳು ಮುಂದಿನ ಒಂದು ವರ್ಷದಲ್ಲಿ 500 ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲು ಮುಂದಾಗಿವೆ.

ಹೊಸ ಯೋಜನೆಯೊಂದಿಗೆ 600 ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲು ಸಿದ್ದವಾದ EVRE ಮತ್ತು FreshWorld

ಇವಿ ವಾಹನಗಳಿಗೆ ಪೂರಕವಾಗಿ ಹಲವಾರು ಸ್ಟಾರ್ಟ್ಅಪ್ ಕಂಪನಿಗಳು ಇವಿ ಚಾರ್ಜಿಂಗ್ ಸೌಲಭ್ಯವನ್ನು ಹೆಚ್ಚಿಸುವತ್ತ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಸ್ವದೇಶಿ ಕಂಪನಿಯಾಗಿರುವ ಇವೆರೆ ಮತ್ತು ಫ್ರೆಶ್‌ವರ್ಲ್ಡ್ ಕಂಪನಿಗಳು ಕೂಡಾ ರಾಜಧಾನಿ ಬೆಂಗಳೂರಿನಲ್ಲಿ ಡೆಲಿವರಿ ಇವಿ ವಾಹನಗಳಿಗಾಗಿ ಬೃಹತ್ ಇವಿ ಚಾರ್ಜಿಂಗ್ ನಿಲ್ದಾಣಗಳ ಜಾಲ ತೆರೆಯುವ ಯೋಜನೆಗೆ ಚಾಲನೆ ನೀಡಿವೆ.

ಭಾರತದಲ್ಲಿ ಹೆಚ್ಚುತ್ತಿರುವ ಇವಿ ವಾಹನಗಳಿಗೆ ಪೂರಕವಾಗಿ ವಿವಿಧ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳು ಇವಿ ವಾಹನಗಳ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣ ಪ್ರಕ್ರಿಯೆಯನ್ನು ಹೆಚ್ಚಿಸಿದ್ದು, ಚಾರ್ಜಿಂಗ್ ಕೇಂದ್ರಗಳ ಹೆಚ್ಚಳಕ್ಕೆ ಪ್ರಮುಖ ಕಂಪನಿಗಳು ವಿಶೇಷ ಆಸಕ್ತಿ ವಹಿಸಿವೆ.

ಹೊಸ ಯೋಜನೆಯೊಂದಿಗೆ 600 ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲು ಸಿದ್ದವಾದ EVRE ಮತ್ತು FreshWorld

ಇವೆರೆ ಕಂಪನಿಯು ಈಗಾಗಲೇ ಇವಿ ವಾಹನಗಳಿಗಾಗಿ ಸಣ್ಣ ಪ್ರಮಾಣದ ಚಾರ್ಜಿಂಗ್ ನಿಲ್ದಾಣಗಳ ಸೌಲಭ್ಯ ಒದಗಿಸುತ್ತಿದ್ದು, ಇವೆರೆ ಕಂಪನಿಯು ಇದೀಗ ಹಣ್ಣು ಮತ್ತು ತರಕಾರಿ ಮಾರಾಟ ಮಳಿಗೆಗಳ ಬೃಹತ್ ಜಾಲ ಹೊಂದಿರುವ ಫ್ರೆಶ್‌ವರ್ಲ್ಡ್ ಜೊತೆ ಸಹಭಾಗಿತ್ವ ಯೋಜನೆ ಅಡಿ ಚಾರ್ಜಿಂಗ್ ಸೌಲಭ್ಯವನ್ನು ವಿಸ್ತರಿಸುತ್ತಿದೆ.

ಹೊಸ ಒಪ್ಪಂದದ ಪ್ರಕಾರ ಫ್ರೆಶ್‌ವರ್ಲ್ಡ್ ಕಂಪನಿಯು ತನ್ನ ಹಣ್ಣು ಮತ್ತ ತರಕಾರಿ ಮಾರಾಟ ಮಳಿಗೆಗಳ ಮುಂಭಾಗದಲ್ಲಿನ ಪಾರ್ಕಿಂಗ್ ಸ್ಥಳಗಳಲ್ಲಿ ಇವಿ ಚಾರ್ಜಿಂಗ್ ಮತ್ತು ಇವಿ ವಾಹನಗಳಿಗಾಗಿಯೇ ಪ್ರತ್ಯೇಕವಾದ ಜಾಗ ಮೀಸಲಿರಿಸಲಿದ್ದು, ಒಟ್ಟು ದೇಶಾದ್ಯಂತ ಒಟ್ಟು 12 ನಗರಗಳಲ್ಲಿ 600 ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲಿವೆ.

ಹೊಸ ಯೋಜನೆಯೊಂದಿಗೆ 600 ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲು ಸಿದ್ದವಾದ EVRE ಮತ್ತು FreshWorld

ನಮ್ಮ ಬೆಂಗಳೂರಿನಲ್ಲಿಯೇ ಇವೆರೆ ಮತ್ತು ಫ್ರೆಶ್‌ವರ್ಲ್ಡ್ ಕಂಪನಿಗಳು ಸುಮಾರು 150 ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲಿದ್ದು, ಹೊಸ ಪಾಲುದಾರಿಕೆ ಯೋಜನೆಯು ಮಾಲಿನ್ಯ ಮುಕ್ತ ವಾಣಿಜ್ಯ ಚಟುವಟಿಕೆಗಳನ್ನು ಉತ್ತೇಜಿಸಲು ನೆರವಾಗಲಿದೆ ಎಂದು ಇವಿಆರ್‌ಇಯ ಸಹ-ಸಂಸ್ಥಾಪಕ ಸಿಇಒ ಕೃಷ್ಣ ಕೆ ಜಾಸ್ತಿ ಮತ್ತು ಫ್ರೆಶ್‌ವರ್ಲ್ಡ್ ಸಂಸ್ಥಾಪಕ ಮತ್ತು ಸಿಇಒ ರಾಜೀವ್ ರಾವ್ ಹೊಸ ಭರವಸೆ ವ್ಯಕ್ತಪಡಿಸಿದ್ದಾರೆ.

ಆರಂಭಿಕವಾಗಿ ಹೊಸ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣ ಕಾರ್ಯಕ್ಕೆ ನಮ್ಮ ಬೆಂಗಳೂರಿನಲ್ಲಿ ಅಧಿಕೃತ ಚಾಲನೆ ನೀಡಿರುವ ಇವೆರೆ ಮತ್ತು ಫ್ರೆಶ್‌ವರ್ಲ್ಡ್ ಕಂಪನಿಗಳು ಶೀಘ್ರದಲ್ಲೇ ಹೊಸ ಚಾರ್ಜಿಂಗ್ ನಿಲ್ದಾಣಗಳನ್ನು ಮುಂಬೈ, ದೆಹಲಿ, ಹೈದ್ರಾಬಾದ್, ಅಹಮದಾಬಾದ್ ಸೇರಿದಂತೆ 12 ನಗರಗಳಲ್ಲಿ ತೆರೆಯಲಿದೆ.

ಹೊಸ ಯೋಜನೆಯೊಂದಿಗೆ 600 ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲು ಸಿದ್ದವಾದ EVRE ಮತ್ತು FreshWorld

ಇನ್ನು ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಆದ್ಯತೆ ನೀಡಲಾಗುತ್ತಿದ್ದು, ಕೇಂದ್ರ ಸರ್ಕಾರದ ಜೊತೆಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನ ನೀತಿಯನ್ನು ಅಳವಡಿಸಿಕೊಳ್ಳುತ್ತಿರುವ ಇವಿ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹವು ಹೊಸ ಬದಲಾವಣೆಗೆ ಕಾರಣವಾಗಿದೆ. ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರವು ಫೇಮ್ 2 ಸಬ್ಸಡಿ ಯೋಜನೆಯಡಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪನಿಗಳಿಗೆ ಮತ್ತು ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಫೇಮ್ 2 ಯೋಜನೆಯ ಸಬ್ಸಡಿ ಜೊತೆಗೆ ವಿವಿಧ ರಾಜ್ಯದ ಸರ್ಕಾರಗಳು ಸಹ ಕೆಲವು ವಿನಾಯ್ತಿಗಳನ್ನು ನೀಡುತ್ತಿವೆ.

ಹೊಸ ಯೋಜನೆಯೊಂದಿಗೆ 600 ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲು ಸಿದ್ದವಾದ EVRE ಮತ್ತು FreshWorld

ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಜಿಎಸ್‌ಟಿ ವಿನಾಯ್ತಿ, ಗರಿಷ್ಠ ಸಬ್ಸಡಿ ಮತ್ತು ತೆರಿಗೆ ವಿನಾಯ್ತಿಗಳನ್ನು ನೀಡಲಾಗುತ್ತಿದ್ದು, ವಾಹನ ಉತ್ಪಾದನಾ ಕಂಪನಿಗಳಿಗೂ ಹಲವಾರು ಪ್ರೋತ್ಸಾಹ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲೆಕ್ಟ್ರಿಕ್ ವಾಹನಗಳ ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರದ ಫೇಮ್ 2 ಹೊರತುಪಡಿಸಿ ರಾಜ್ಯಗಳ ಮಟ್ಟದಲ್ಲೂ ವಿವಿಧ ರಾಜ್ಯ ಸರ್ಕಾರಗಳು ಸಹ ಹೆಚ್ಚಿನ ಮಟ್ಟದ ಪ್ರೊತ್ಸಾಹ ನೀಡುತ್ತಿದ್ದು ಕೇಂದ್ರ ಫೇಮ್ 2 ಜೊತೆಗೆ ವಿವಿಧ ರಾಜ್ಯ ಸರ್ಕಾರಗಳು ಕೂಡಾ ಹೊಸ ಇವಿ ನೀತಿ ಘೋಷಣೆ ಮಾಡುತ್ತಿವೆ.

ಹೊಸ ಯೋಜನೆಯೊಂದಿಗೆ 600 ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲು ಸಿದ್ದವಾದ EVRE ಮತ್ತು FreshWorld

ಹಾಗೆಯೇ ಇವಿ ವಾಹನಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣವು ಇದೀಗ ಹೊಸ ಸವಾಲಾಗಿದ್ದು, ಇವಿ ವಾಹನಗಳು ಹೆಚ್ಚಿದಂತೆ ಅವುಗಳಿಗೆ ಸೂಕ್ತವಾದ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣಕ್ಕೂ ಯೋಜನೆ ಜಾರಿಗೆ ತರಲಾಗಿದೆ. ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಖರೀದಿ ಮಾಡುವ ಗ್ರಾಹಕರಿಗೆ ಮಾತ್ರವಲ್ಲ ಉತ್ಪಾದಕ ಕಂಪನಿಗಳಿಗೂ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಖಾಸಗಿ ಮತ್ತು ಸರ್ಕಾರಿ ಸಹಭಾಗೀತ್ವದಲ್ಲಿ ಚಾರ್ಜಿಂಗ್ ನಿಲ್ದಾಣಗಳು ಒಂದೊಂದಾಗಿ ಕಾರ್ಯನಿರ್ವಹಣೆ ಆರಂಭಿಸುತ್ತಿವೆ.

ಹೊಸ ಯೋಜನೆಯೊಂದಿಗೆ 600 ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲು ಸಿದ್ದವಾದ EVRE ಮತ್ತು FreshWorld

ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಪ್ರಕ್ರಿಯೆಯನ್ನು ವಿವಿಧ ಕಂಪನಿಗಳು ಕಳೆದ ಕೆಲ ತಿಂಗಳಿನಿಂದ ತ್ವರಿತಗೊಳಿದ್ದು, ಪ್ರಮುಖ ಆಟೋ ಉತ್ಪಾದನಾ ಕಂಪನಿಗಳು ಸಹಭಾಗಿತ್ವ ಯೋಜನೆ ಅಡಿ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಹೆಚ್ಚುತ್ತಿರುವ ಇಂಧನ ದರಗಳು ಮತ್ತು ಮಾಲಿನ್ಯ ಸಮಸ್ಯೆಯಿಂದಾಗಿ ಕಳೆದ ಕೆಲವು ವರ್ಷಗಳಿಂದ ವಿದ್ಯುತ್ ವಾಹನಗಳ ಪ್ರಾಮುಖ್ಯತೆಯು ತೀವ್ರವಾಗಿ ಹೆಚ್ಚುತ್ತಿದ್ದು, ಅದಕ್ಕೆ ತಕ್ಕಂತೆ ಎಲೆಕ್ಟ್ರಿಕ್ ವಾಹನಗಳಿಗೆ ಬೇಕಿರುವ ಚಾರ್ಜಿಂಗ್ ಸೌಲಭ್ಯ ಒದಗಿಸುವುದು ಕೂಡಾ ಪ್ರಮುಖವಾಗಿದೆ.

Article Published On: Tuesday, November 2, 2021, 11:33 [IST]
English summary
Evre freshworld partner up to expand charging network details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+