ಬಿಡುಗಡೆಯಾಗಲಿದೆ 1,000ಕ್ಕೂ ಹೆಚ್ಚು ಕಿ.ಮೀ ಮೈಲೇಜ್ ನೀಡುವ GAC Aion LX Plus ಎಲೆಕ್ಟ್ರಿಕ್ ಕಾರು

ಇತ್ತೀಚೆಗೆ ಜಾಗತಿಕವಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳುತ್ತಿದೆ. ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಕಡೆ ಮೊರೆ ಹೋಗುತ್ತಿದ್ದಾರೆ. ಇದರಿಂದ ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಕಡೆ ಹೆಚ್ಚಿನ ಗಮಹರಿಸುತ್ತಿದೆ.

ಬಿಡುಗಡೆಯಾಗಲಿದೆ 1,000ಕ್ಕೂ ಹೆಚ್ಚು ಕಿ.ಮೀ ಮೈಲೇಜ್ ನೀಡುವ GAC Aion LX Plus ಎಲೆಕ್ಟ್ರಿಕ್ ಕಾರು

ಬಹುತೇಕ ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಪಡಿಸುವಲ್ಲಿ ನಿರತರಾಗಿದ್ದಾರೆ. ಇದರ ನಡುವೆ ಜಿಎಸಿ ಗ್ರೂಪ್ ಕಳೆದ ತಿಂಗಳು ಅಯಾನ್ ಬ್ರ್ಯಾಂಡ್ ಅಡಿಯಲ್ಲಿ ತನ್ನ ಹೊಸ ಎಲೆಕ್ಟ್ರಿಕ್ ಕಾರ್ ಅನ್ನು ಅನಾವರಣಗೊಳಿಸಿತು. ಈ ಎಲೆಕ್ಟ್ರಿಕ್ ಕಾರಿಗೆ ಅಯಾನ್ ಎಲ್ಎಕ್ಸ್ ಪ್ಲಸ್ ಎಂಬ ಹೆಸರನ್ನು ನೀಡಲಾಗಿದೆ. ಇದರ ವಿಶೇಷವೆಂದರೆ, ಬರೊಬ್ಬರಿ ಒಂದೇ ಚಾರ್ಜ್‌ನಲ್ಲಿ 1000 ಕಿ.ಮೀ ಚಲಿಸುತ್ತದೆ. ಈ ಹೊಸ ಎಲೆಕ್ಟ್ರಿಕ್ ಕಾರು ಶೀಘ್ರದಲ್ಲೇ ಚೀನಾ ಮಾರುಕಟ್ಟೆಯಲ್ಲಿ ಮಾರಾಟವಾಗಲಿದೆ.

ಬಿಡುಗಡೆಯಾಗಲಿದೆ 1,000ಕ್ಕೂ ಹೆಚ್ಚು ಕಿ.ಮೀ ಮೈಲೇಜ್ ನೀಡುವ GAC Aion LX Plus ಎಲೆಕ್ಟ್ರಿಕ್ ಕಾರು

ಅಯಾನ್ ಎಲ್ಎಕ್ಸ್ ಪ್ಲಸ್ ಕಾರು 2021ರ ನವೆಂಬರ್ ತಿಂಗಳಿನಲ್ಲಿ ಮೊದಲ ಬಾರಿಗೆ ಗುವಾಂಗ್‌ಝೌ ಆಟೋ ಪ್ರದರ್ಶನದಲ್ಲಿ ಜಾಗತಿಕವಾಗಿ ಪಾದಾರ್ಪಣೆ ಮಾಡಿತು. ಈ ಹೊಸ ಎಲೆಕ್ಟ್ರಿಕ್ ಕ್ರಾಸ್‌ಒವರ್ 2022ರ ಜನವರಿ 6 ರಂದು ಜಿಎಸಿ ಗ್ರೂಪ್ ಚೀನಾದಲ್ಲಿ ಬಿಡುಗಡೆಗೊಳಿಸಲಿದೆ.

ಬಿಡುಗಡೆಯಾಗಲಿದೆ 1,000ಕ್ಕೂ ಹೆಚ್ಚು ಕಿ.ಮೀ ಮೈಲೇಜ್ ನೀಡುವ GAC Aion LX Plus ಎಲೆಕ್ಟ್ರಿಕ್ ಕಾರು

ಇದು ಮೂಲತಃ ಒಂದೆರಡು ವರ್ಷಗಳ ಹಿಂದೆ ಘೋಷಿಸಲಾದ ಜಿಎಸಿ ಅಯಾನ್ ಎಲ್ಎಕ್ಸ್ ಮಾದರಿಯ ನವೀಕರಿಸಿದ ಆವೃತ್ತಿಯಾಗಿದೆ. ಇದು CLTC (ಚೀನಾ ಲೈಟ್-ಡ್ಯೂಟಿ ಟೆಸ್ಟ್ ಸೈಕಲ್) ನಲ್ಲಿ 1,000 ಕಿ.ಮೀ ಗಿಂತಲೂ ಹೆಚ್ಚು ರೇಂಜ್ ಅನ್ನು ಹೊಂದಿದೆ.

ಬಿಡುಗಡೆಯಾಗಲಿದೆ 1,000ಕ್ಕೂ ಹೆಚ್ಚು ಕಿ.ಮೀ ಮೈಲೇಜ್ ನೀಡುವ GAC Aion LX Plus ಎಲೆಕ್ಟ್ರಿಕ್ ಕಾರು

ಟಾಪ್-ಸ್ಪೆಕ್ ರೂಪಾಂತರವು ದೊಡ್ಡ ಗಾತ್ರದ 144.4 kWh ಬ್ಯಾಟರಿ ಪ್ಯಾಕ್‌ ನೊಂದಿಗೆ ಬರುತ್ತದೆ. ಬ್ಯಾಟರಿಯನ್ನು ಜಿಎಸಿ ಎಲಾಸ್ಟಿಕ್ ಶೀಟ್‌ಗಳೊಂದಿಗೆ ತಯಾರಿಸುತ್ತದೆ ಮತ್ತು ಸಾಂಪ್ರದಾಯಿಕ ಬ್ಯಾಟರಿಗಳಿಗೆ ಹೋಲಿಸಿದರೆ ಇದು ಶೇಕಡಾ 20 ರಷ್ಟು ಚಿಕ್ಕದಾಗಿದೆ ಮತ್ತು ಶೇಕಡಾ 14 ರಷ್ಟು ಹಗುರವಾಗಿರುತ್ತದೆ.

ಬಿಡುಗಡೆಯಾಗಲಿದೆ 1,000ಕ್ಕೂ ಹೆಚ್ಚು ಕಿ.ಮೀ ಮೈಲೇಜ್ ನೀಡುವ GAC Aion LX Plus ಎಲೆಕ್ಟ್ರಿಕ್ ಕಾರು

ಇದು ಪ್ರತಿ ಕೆಜಿಗೆ 205 Wh ಪವರ್ ಸಾಂದ್ರತೆಯನ್ನು ಹೊಂದಿದೆ. ಇದು ಎರಡು-ಸ್ಪೀಡ್ ಗೇರ್ ಬಾಕ್ಸ್ ಮೂಲಕ ಎಲ್ಲಾ ನಾಲ್ಕು ವ್ಹೀಲ್ ಗಳಿಗೆ ಪವರ್ ಅನ್ನು ವರ್ಗಾಯಿಸುವ ಎರಡು ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಬಳಸಿಕೊಳ್ಳುತ್ತದೆ ಮತ್ತು ಸೆಟಪ್ ಒಟ್ಟು 225 ಬಿಹೆಚ್‍ಪಿ ಪವರ್ ಅನ್ನು ಅಭಿವೃದ್ಧಿಪಡಿಸುತ್ತದೆ.

ಬಿಡುಗಡೆಯಾಗಲಿದೆ 1,000ಕ್ಕೂ ಹೆಚ್ಚು ಕಿ.ಮೀ ಮೈಲೇಜ್ ನೀಡುವ GAC Aion LX Plus ಎಲೆಕ್ಟ್ರಿಕ್ ಕಾರು

ಈ ಹೊಸ ಜಿಎಸಿ ಅಯಾನ್ ಎಲ್ಎಕ್ಸ್ ಪ್ಲಸ್ ಎಲೆಕ್ಟ್ರಿಕ್ ಕಾರು ಕೇವಲ 2.9 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ ಎಂದು ಹೇಳಲಾಗಿದೆ. ಈ ಎಲೆಕ್ಟ್ರಿಕ್ ಕ್ರಾಸ್‌ಒವರ್‌ನಲ್ಲಿ ಬಳಸಲಾಗುವ ತಂತ್ರಜ್ಞಾನವು ಬ್ರ್ಯಾಂಡ್‌ನ ಪ್ರಕಾರ ಶೀತ ತಾಪಮಾನದಲ್ಲಿ ಸುಧಾರಿತ ಪವರ್ ಸಾಂದ್ರತೆ, ಪವರ್ ಮತ್ತು ಕಾರ್ಯಕ್ಷಮತೆಯೊಂದಿಗೆ ಬ್ಯಾಟರಿಗಳನ್ನು ಹಗುರವಾಗಿ ಮತ್ತು ಚಿಕ್ಕದಾಗಿಸುತ್ತದೆ. ಸಿಲಿಕಾನ್ ಸ್ಪಾಂಜ್ ಟೆಕ್ ಎಂದು ವಿವರಿಸಲಾಗಿದೆ,

ಬಿಡುಗಡೆಯಾಗಲಿದೆ 1,000ಕ್ಕೂ ಹೆಚ್ಚು ಕಿ.ಮೀ ಮೈಲೇಜ್ ನೀಡುವ GAC Aion LX Plus ಎಲೆಕ್ಟ್ರಿಕ್ ಕಾರು

480 kW ವೇಗದ ಚಾರ್ಜರ್‌ನೊಂದಿಗೆ ಬ್ರ್ಯಾಂಡ್ ಇದನ್ನು ಇನ್ನಷ್ಟು ಸುಧಾರಿಸಿದೆ ಎಂಬುದು ಗಮನಿಸಬೇಕಾದ ಸಂಗತಿ. ಇದು ಕೇವಲ ಎಂಟು ನಿಮಿಷಗಳಲ್ಲಿ 0-80 ಶೇಕಡಾ ರಷ್ಟು ಚಾರ್ಜ ಆದರೆ 6c ಚಾರ್ಜ್ ಮಲ್ಟಿಪ್ಲೈಯರ್‌ನೊಂದಿಗೆ ಕೇವಲ ಐದು ನಿಮಿಷಗಳಲ್ಲಿ 30-80 ಶೇಕಡಾ ಚಾರ್ಜ ಆಗುತ್ತದೆ ಎಂದು ಹೇಳಲಾಗುತ್ತಿದೆ.

ಬಿಡುಗಡೆಯಾಗಲಿದೆ 1,000ಕ್ಕೂ ಹೆಚ್ಚು ಕಿ.ಮೀ ಮೈಲೇಜ್ ನೀಡುವ GAC Aion LX Plus ಎಲೆಕ್ಟ್ರಿಕ್ ಕಾರು

ನಿರಂತರವಾಗಿ ಸುಧಾರಿತ ವೇಗದ ಚಾರ್ಜಿಂಗ್ ಸಾಮರ್ಥ್ಯಗಳು ಮತ್ತು ವಿಕಸನಗೊಳ್ಳುತ್ತಿರುವ ಬ್ಯಾಟರಿ ತಂತ್ರಜ್ಞಾನದೊಂದಿಗೆ, ಎಲೆಕ್ಟ್ರಿಕ್ ವಾಹನಗಳ ರೇಂಜ್ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮತ್ತು ವಿಶೇಷವಾಗಿ ಚೀನಾದಲ್ಲಿ ಪ್ರತಿ ದಿನವೂ ಉತ್ತಮಗೊಳ್ಳುತ್ತಿದೆ.

ಬಿಡುಗಡೆಯಾಗಲಿದೆ 1,000ಕ್ಕೂ ಹೆಚ್ಚು ಕಿ.ಮೀ ಮೈಲೇಜ್ ನೀಡುವ GAC Aion LX Plus ಎಲೆಕ್ಟ್ರಿಕ್ ಕಾರು

ಇದರೊಂದಿಗೆ ಚೀನಾ ಮಾರುಕಟ್ಟೆಯಲ್ಲಿ, ಚೀನಾ ಕಾರು ತಯಾರಕ ಕಂಪನಿಯಾದ ನಿಯೋ ತನ್ನ ಎರಡನೇ ಆಲ್-ಎಲೆಕ್ಟ್ರಿಕ್ ಇಟಿ5 ಸೆಡಾನ್ ಕಾರನ್ನು ಇತ್ತೀಚೆಗೆ ಅನಾವರಣಗೊಳಿಸಿತ್ತು. ಟೆಸ್ಲಾದ ಅತ್ಯಂತ ಜನಪ್ರಿಯ ಮಾಡೆಲ್ 3 ಸೆಡಾನ್‌ಗೆ ಹೊಸ ನಿಯೋ ಇಟಿ5 ಎಲೆಕ್ಟ್ರಿಕ್ ಕಾರು ನೇರವಾಗಿ ಪೈಪೋಟಿ ನೀಡುತ್ತದೆ. ನಿಯೋ ಇಟಿ5 ಎಲೆಕ್ಟ್ರಿಕ್ ಕಾರು ಕಂಪನಿಯ ಹೆಚ್ಚು ದುಬಾರಿ ಇಟಿ7 ಎಲೆಕ್ಟ್ರಿಕ್ ಸೆಡಾನ್ ಅನ್ನು ಅನುಸರಿಸುತ್ತದೆ. ಇದು ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಸೆಡಾನ್‌ನ ಪ್ರತಿಸ್ಪರ್ಧಿಯಾಗಿ ಕಂಡುಬರುತ್ತದೆ.

ಬಿಡುಗಡೆಯಾಗಲಿದೆ 1,000ಕ್ಕೂ ಹೆಚ್ಚು ಕಿ.ಮೀ ಮೈಲೇಜ್ ನೀಡುವ GAC Aion LX Plus ಎಲೆಕ್ಟ್ರಿಕ್ ಕಾರು

ಇನ್ನು ನಿಯೋ ಮುಂದಿನ ವರ್ಷ ಮತ್ತೊಂದು ಎಲೆಕ್ಟ್ರಿಕ್ ವಾಹನವನ್ನು ಅನಾವರಣಗೊಳಿಸುವ ನಿರೀಕ್ಷೆಯಿದೆ. ನಿಯೋ ಇಟಿ5 ಎಲೆಕ್ಟ್ರಿಕ್ ಕಾರು ಬೆಲೆಯು ಸಬ್ಸಿಡಿಗಳ ಮೊದಲು RMB 328,000 ($51,476) ಮತ್ತು BaaS (ಬ್ಯಾಟರಿ-ಆಸ್-ಎ-ಸೇವೆ) ಜೊತೆಗೆ RMB 258,000 ($40,490) ಆಗಿದೆ. ಈ ಹೊಸ ನಿಯೋ ಇಟಿ5 ಎಲೆಕ್ಟ್ರಿಕ್ ಕಾರಿನ ವಿತರಣೆಯನ್ನು 2022ರ ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಾರಂಭವಾಗುತ್ತದೆ. ಟೆಸ್ಲಾ ಮಾಡೆಲ್ 3 ಗೆ ಪ್ರತಿಸ್ಪರ್ಧಿಯಾಗಲಿರುವ ನಿಯೋ ಇಟಿ5 ಎಲೆಕ್ಟ್ರಿಕ್ ಕಾರು ಭಿನ್ನ ಬ್ಯಾಟರಿ ಆಯ್ಕೆಗಳೊಂದಿಗೆ ಲಭ್ಯವಿದೆ.

ಬಿಡುಗಡೆಯಾಗಲಿದೆ 1,000ಕ್ಕೂ ಹೆಚ್ಚು ಕಿ.ಮೀ ಮೈಲೇಜ್ ನೀಡುವ GAC Aion LX Plus ಎಲೆಕ್ಟ್ರಿಕ್ ಕಾರು

ಇದು 75kWh (ಸ್ಟ್ಯಾಂಡರ್ಡ್ ರೇಂಜ್), 100kWh (ಲಾಂಗ್ ರೇಂಜ್) ಮತ್ತು 150kWh (ಅಲ್ಟ್ರಾಲಾಂಗ್ ರೇಂಜ್) ಆಗಿದೆ. ಸ್ಟ್ಯಾಂಡರ್ಡ್ ಮಾದರಿಯು 75kWh ಆವೃತ್ತಿಯು ಚೀನಾ ಲೈಟ್-ಡ್ಯೂಟಿ ವೆಹಿಕಲ್ ಟೆಸ್ಟ್ ಸೈಕಲ್ (CLTC) ಹೊರಸೂಸುವಿಕೆಯ ಮಾನದಂಡಗಳ ಪ್ರಕಾರ 550 ಕಿಲೋಮೀಟರ್‌ಗಳಿಗಿಂತ ಹೆಚ್ಚು ರೇಂಜ್ ಅನ್ನು ನೀಡುತ್ತದೆ 100kWh ಬ್ಯಾಟರಿ ಪ್ಯಾಕ್‌ನೊಂದಿಗೆ ದೀರ್ಘ ಶ್ರೇಣಿಯ ಇಟಿ5 ರೂಪಾಂತರಗಳು 750 ಕಿಲೋಮೀಟರ್‌ಗಳಷ್ಟು (CLTC) ರೇಂಜ್ ಅನ್ನು ವಿಸ್ತರಿಸುತ್ತವೆ.

ಬಿಡುಗಡೆಯಾಗಲಿದೆ 1,000ಕ್ಕೂ ಹೆಚ್ಚು ಕಿ.ಮೀ ಮೈಲೇಜ್ ನೀಡುವ GAC Aion LX Plus ಎಲೆಕ್ಟ್ರಿಕ್ ಕಾರು

ಅಲ್ಟ್ರಾಲಾಂಗ್ ರೇಂಜ್ ನಿಯೋ ಇಟಿ5 ತನ್ನ 150kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬಿಗ್ ಕಹುನಾ ಆಗಿದ್ದು ಅದು ಒಂದೇ ಚಾರ್ಜ್‌ನಲ್ಲಿ 1,000 ಕಿಲೋಮೀಟರ್‌ಗಳಿಗಿಂತ ಹೆಚ್ಚು (CTLC) ರೇಂಜ್ ಅನ್ನು ನೀಡುತ್ತದೆ. ಇದೇ ರೀತಿ ಅಧಿಕ ರೇಂಜ್ ಹೊಂದಿರುವ ಎಲೆಕ್ಟ್ರಿಕ್ ಕಾರುಗಳು ಚೀನಾ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ.

Most Read Articles

Kannada
English summary
Gac group to launch aion lx plus ev crossover with 1000 plus km range details
Story first published: Friday, December 24, 2021, 20:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X