ಕಾನ್ಸೆಪ್ಟ್ ಕಾರಿನ ಬಿಡುಗಡೆಗೂ ಮುನ್ನ ಹೊಸ ಟೀಸರ್ ಬಿಡುಗಡೆಗೊಳಿಸಿದ ಜೆನೆಸಿಸ್

ಐಷಾರಾಮಿ ಕಾರು ತಯಾರಕ ಕಂಪನಿಯಾದ ಜೆನೆಸಿಸ್ ತನ್ನ ಎಲೆಕ್ಟ್ರಿಕ್ ಕೂಪೆ ಕಾನ್ಸೆಪ್ಟ್ ಕಾರಿನ ಹೊಸ ಟೀಸರ್ ವೀಡಿಯೊವನ್ನು ಬಿಡುಗಡೆಗೊಳಿಸಿದೆ. ಇದರಿಂದಾಗಿ ಶೀಘ್ರದಲ್ಲಿಯೇ ಈ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗುವುದು ಖಚಿತವಾಗಿದೆ.

ಕಾನ್ಸೆಪ್ಟ್ ಕಾರಿನ ಬಿಡುಗಡೆಗೂ ಮುನ್ನ ಹೊಸ ಟೀಸರ್ ಬಿಡುಗಡೆಗೊಳಿಸಿದ ಜೆನೆಸಿಸ್

ಈಗ ಬಿಡುಗಡೆಯಾಗಿರುವ ಟೀಸರ್ ಹೊಸ ತಲೆಮಾರಿನ ಎಸೆನ್ಶಿಯಾ ಕಾರಿನ ವಿನ್ಯಾಸದ ಬಗೆಗಿನ ಮಾಹಿತಿಯನ್ನು ನೀಡುತ್ತದೆ. ಈ ವೀಡಿಯೊ ಜೆನಿಸಿಸ್ ಕಂಪನಿಯ ಅಥ್ಲೆಟಿಕ್ ಎಲಿಗೆನ್ಸ್ ವಿನ್ಯಾಸ ತತ್ವಶಾಸ್ತ್ರವನ್ನು ಬಳಸಿಕೊಂಡು ತಯಾರಾಗಿರುವ ಮಾದರಿಯನ್ನು ತೋರಿಸುತ್ತದೆ. ಜಿ 70 ಹಾಗೂ ಜಿವಿ 80 ವಾಹನಗಳಲ್ಲಿಯೂ ಒಂದೇ ವಿನ್ಯಾಸವನ್ನು ಬಳಸಲಾಗಿದೆ.

ಕಾನ್ಸೆಪ್ಟ್ ಕಾರಿನ ಬಿಡುಗಡೆಗೂ ಮುನ್ನ ಹೊಸ ಟೀಸರ್ ಬಿಡುಗಡೆಗೊಳಿಸಿದ ಜೆನೆಸಿಸ್

ಈ ವೀಡಿಯೊದಲ್ಲಿ ಎರಡು ಕೇಸಿಂಗ್‌ಗಳಲ್ಲಿ ಹೆಡ್‌ಲ್ಯಾಂಪ್‌ಗಳಿಂದ ಆವೃತವಾಗಿರುವ ಜೆನೆಸಿಸ್ ಗ್ರಿಲ್ ಅನ್ನು ಕಾಣಬಹುದು. ಎಲ್‌ಇಡಿ ಮ್ಯಾಟ್ರಿಕ್ಸ್‌ನಂತೆ ಕಂಡುಬರುವ ಹೆಡ್‌ಲೈಟ್‌ಗಳು ಜೆನೆಸಿಸ್ ಸರಣಿಯ ಉಳಿದ ಕಾರುಗಳಿಗಿಂತ ಭಿನ್ನವಾಗಿ ಕಾಣುತ್ತವೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕಾನ್ಸೆಪ್ಟ್ ಕಾರಿನ ಬಿಡುಗಡೆಗೂ ಮುನ್ನ ಹೊಸ ಟೀಸರ್ ಬಿಡುಗಡೆಗೊಳಿಸಿದ ಜೆನೆಸಿಸ್

ಆದರೆ ಜೆನೆಸಿಸ್ ಎಸೆನ್ಸ್'ನಲ್ಲಿರುವಂತೆ ಉದ್ದವಾದ ಹಾಗೂ ಕಿರಿದಾದ ಹೆಡ್‌ಲ್ಯಾಂಪ್‌ಗಳಿವೆ. ಈ ಕಾರು ಎಸೆನ್ಸ್‌ನಂತೆಯೇ ಸ್ಲಿಮ್ ಟೇಲ್‌ಲೈಟ್‌ ಹಾಗೂ ಕಾನ್ಕೇವ್ ಹಿಂಭಾಗವನ್ನು ಹೊಂದಿದೆ. ಹ್ಯಾಂಡ್‌ಲೈಟ್‌ಗಳು ಮುಂಭಾಗದ ವ್ಹೀಲ್'ಗಳನ್ನು ಹಾದುಹೋಗುವ ಫೆಂಡರ್‌ಗಳ ಬದಿಗಳಿಗೆ ವಿಸ್ತರಿಸಿವೆ.

ಕಾನ್ಸೆಪ್ಟ್ ಕಾರಿನ ಬಿಡುಗಡೆಗೂ ಮುನ್ನ ಹೊಸ ಟೀಸರ್ ಬಿಡುಗಡೆಗೊಳಿಸಿದ ಜೆನೆಸಿಸ್

ಹೊಸ ಕಾನ್ಸೆಪ್ಟ್ ಅಪ್ ಡೇಟ್ ಮಾಡಲಾದ ಶೀಲ್ಡ್ ರೀತಿಯ ಗ್ರಿಲ್ ಅನ್ನು ಹೊಂದಿರುವಂತೆ ಕಾಣುತ್ತದೆ. ಇದನ್ನು ಈಗ ಕಂಪನಿಯ ಎಲ್ಲಾ ಮಾದರಿಗಳಲ್ಲಿ ನೀಡಲಾಗಿದೆ. ಆದರೆ ಮೊದಲು ಎಸೆನ್ಸ್ ಅನ್ನು ಬಿಡುಗಡೆಗೊಳಿಸಿದಾಗ ಅದನ್ನು ನೀಡಲಾಗಿರಲಿಲ್ಲ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕಾನ್ಸೆಪ್ಟ್ ಕಾರಿನ ಬಿಡುಗಡೆಗೂ ಮುನ್ನ ಹೊಸ ಟೀಸರ್ ಬಿಡುಗಡೆಗೊಳಿಸಿದ ಜೆನೆಸಿಸ್

ಈ ವಾಹನದ ಹಿಂಭಾಗದಲ್ಲಿರುವ ಮಸ್ಕ್ಯುಲರ್ ಹಂಚ್ ಎಲೆಕ್ಟ್ರಿಕ್ ವಾಹನದ ಹೊರಭಾಗಕ್ಕೆ ಬಾರ್ಡರ್'ನಂತಿದೆ. ಮುಂಭಾಗದ ಹೆಡ್‌ಲೈಟ್‌ಗಳಲ್ಲಿ ಕಂಡುಬರುವಬೆಳಕಿನ ಮಾದರಿಯನ್ನು ಟೇಲ್‌ಲೈಟ್‌ಗಳು ಸಹ ಹೊಂದಿವೆ.

ಕಾನ್ಸೆಪ್ಟ್ ಕಾರಿನ ಬಿಡುಗಡೆಗೂ ಮುನ್ನ ಹೊಸ ಟೀಸರ್ ಬಿಡುಗಡೆಗೊಳಿಸಿದ ಜೆನೆಸಿಸ್

ಈಗ ಬಿಡುಗಡೆಯಾಗಿರುವ ಟೀಸರ್ ವೀಡಿಯೊ, ಗೇರ್ ಸೆಲೆಕ್ಟರ್ ಹಾಗೂ ಡ್ರೈವ್ ಮೋಡ್ ಟಾಗಲ್'ಗಳ ಬಗ್ಗೆ ಸೂಚನೆ ನೀಡಲು ಇರುವ ಫ್ಲಿಪ್ಪಿಂಗ್ ಆರ್ಬ್ ಬಗ್ಗೆಯೂ ಸಣ್ಣ ನೋಟವನ್ನು ತೋರಿಸುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಈ ಕಾನ್ಸೆಪ್ಟ್ ಮಾದರಿಯಲ್ಲಿ ಅಳವಡಿಸಿರುವ ಎಂಜಿನ್ ಹಾಗೂ ವ್ಯಾಪ್ತಿಯ ಬಗ್ಗೆ ಯಾವುದೇ ಮಾಹಿತಿ ಹೊರ ಬಿದ್ದಿಲ್ಲ. ಆದರೆ ಜೆನೆಸಿಸ್ ಎಸೆನ್ಸ್ ಎಲೆಕ್ಟ್ರಿಕ್ ಕೂಪೆ ಹಲವು ಎಲೆಕ್ಟ್ರಿಕ್ ಮೋಟರ್‌ಗಳನ್ನು ಹೊಂದಿರುತ್ತದೆ . ಈ ಕಾರು 3.0 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ ಎಂದು ಹೇಳಲಾಗಿದೆ.

ಕಾನ್ಸೆಪ್ಟ್ ಕಾರಿನ ಬಿಡುಗಡೆಗೂ ಮುನ್ನ ಹೊಸ ಟೀಸರ್ ಬಿಡುಗಡೆಗೊಳಿಸಿದ ಜೆನೆಸಿಸ್

ಈ ಎಲ್ಲಾ ವಿನ್ಯಾಸಗಳು ಕಂಪನಿಯ ಡಿಸೈನ್ ಲ್ಯಾಂಗ್ವೇಜ್ ಬಗ್ಗೆ ತಿಳಿಸುವುದರ ಜೊತೆಗೆ ಈ ಮಾದರಿಯು ಉತ್ಪಾದನೆಗೆ ಸಿದ್ಧವಾಗಿದೆ ಎಂಬ ಎಲ್ಲಾ ಸೂಚನೆ ನೀಡುತ್ತವೆ. ಜೆನೆಸಿಸ್ ಎಸೆನ್ಸ್ ಕಾನ್ಸೆಪ್ಟ್ ಕಾರನ್ನು ಮೊದಲ ಬಾರಿಗೆ 2018ರ ನ್ಯೂಯಾರ್ಕ್ ಆಟೋ ಶೋದಲ್ಲಿ ಅನಾವರಣಗೊಳಿಸಲಾಯಿತು.

Most Read Articles

Kannada
English summary
Genesis releases new teaser ahead of New Essentia electric launch. Read in Kannada.
Story first published: Wednesday, March 31, 2021, 10:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X