2020ರ ಡಿಸೆಂಬರ್‌ ತಿಂಗಳ ಕಾರು ಮಾರಾಟ ವರದಿಯನ್ನು ಪ್ರಕಟಿಸಿದ ಹೋಂಡಾ

ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು 2020ರ ಡಿಸೆಂಬರ್‌ ತಿಂಗಳಿನ ಕಾರು ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ವರದಿ ಪ್ರಕಾರ ಹೋಂಡಾ ಕಂಪನಿಯು ಕಳೆದ ತಿಂಗಳು 8,638 ಯುನಿಟ್‌ಗಳನ್ನು ಮಾರಾಟಗೊಳಿಸಿವೆ.

2020ರ ಡಿಸೆಂಬರ್‌ ತಿಂಗಳ ಕಾರು ಮಾರಾಟ ವರದಿಯನ್ನು ಪ್ರಕಟಿಸಿದ ಹೋಂಡಾ

ಹೋಂಡಾ ಕಂಪನಿಯು 2020ರ ಡಿಸೆಂಬರ್‌ ತಿಂಗಳಿನಲ್ಲಿ ಮಾರಾಟದಲ್ಲಿ ಸಕಾರಾತ್ಮಕ ಬೆಳವಣಿಗೆಯನ್ನು ಸಾಧಿಸಿದೆ. ಇನ್ನು ಹೊಂಡಾ ಕಂಪನಿಯು 2019ರ ಡಿಸೆಂಬರ್ ತಿಂಗಳಲ್ಲಿ 8,412 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. 2019ರ ಡಿಸೆಂಬರ್ ತಿಂಗಳ ಮಾರಾಟವನ್ನು 2020ರ ಡಿಸೆಂಬರ್‌ ತಿಂಗಳಿಗೆ ಹೋಲಿಸಿದರೆ ಶೇ.2.65 ಬೆಳವಣಿಗೆಯನ್ನು ಸಾಧಿಸಿದೆ. 2020ರ ಡಿಸೆಂಬರ್‌ ತಿಂಗಳಲ್ಲಿ ಹೋಂಡಾ ಕಂಪನಿಯು 713 ಯುನಿಟ್‌ಗಳನ್ನು ರಫ್ತು ಮಾಡಿದೆ.

2020ರ ಡಿಸೆಂಬರ್‌ ತಿಂಗಳ ಕಾರು ಮಾರಾಟ ವರದಿಯನ್ನು ಪ್ರಕಟಿಸಿದ ಹೋಂಡಾ

ಡಿಸೆಂಬರ್‌ನಲ್ಲಿನ ಮಾರಾಟದ ಅಂಕಿ ಅಂಶವು ನವೆಂಬರ್‌ನಲ್ಲಿ ಹೋಂಡಾ ಸಾಧಿಸಿದ್ದಕ್ಕಿಂತ ಕಡಿಮೆಯಾಗಿದೆ. 2020ರ ನವೆಂಬರ್‌ನಲ್ಲಿ ಹೋಂಡಾ ಕಂಪನಿಯು 9990 ಯುನಿಟ್‌ಗಳನ್ನು ಮಾರಾಟ ಮಾಡಿತು, ಇದು ಡಿಸೆಂಬರ್‌ನಲ್ಲಿನ ಮಾರಾಟಕ್ಕೆ ಹೋಲಿಸಿದರೆ ಶೇ 14.5 ರಷ್ಟು ಕುಸಿತವನ್ನು ಕಂಡಿದೆ.

MOST READ: ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳಿವು

2020ರ ಡಿಸೆಂಬರ್‌ ತಿಂಗಳ ಕಾರು ಮಾರಾಟ ವರದಿಯನ್ನು ಪ್ರಕಟಿಸಿದ ಹೋಂಡಾ

ಹೋಂಡಾ ಕಾರ್ಸ್ ಇಂಡಿಯಾದ ಹಿರಿಯ ಉಪಾಧ್ಯಕ್ಷ ಮತ್ತು ಮಾರ್ಕೆಟಿಂಗ್ ಮತ್ತು ಸೇಲ್ಸ್ ವಿಭಾಗದ ನಿರ್ದೇಶಕ ರಾಜೇಶ್ ಗೋಯೆಲ್ ಅವರು ಮಾತನಾಡಿ, 2020 ಒಂದು ಸವಾಲಿನ ವರ್ಷವಾಗಿತ್ತು ಆದರೆ ಉದ್ಯಮವು ಉತ್ತಮ ಚೇತರಿಕೆಯನ್ನು ಕಂಡಿದೆ.

2020ರ ಡಿಸೆಂಬರ್‌ ತಿಂಗಳ ಕಾರು ಮಾರಾಟ ವರದಿಯನ್ನು ಪ್ರಕಟಿಸಿದ ಹೋಂಡಾ

ಹೋಂಡಾ ಬ್ರ್ಯಾಂಡ್ ಅನ್ನು ಮೆಚ್ಚಿದ ನಮ್ಮ ಗ್ರಾಹಕರಿಗೆ ನಾವು ಕೃತಜ್ಞರಾಗಿರುತ್ತೇವೆ. ಹೊಸ ವರ್ಷದಲ್ಲಿ ಹೋಂಡಾ ಕುಟುಂಬಕ್ಕೆ ಹೆಚ್ಚಿನದನ್ನು ಸ್ವಾಗತಿಸಲು ಎದುರು ನೋಡುತ್ತೇವೆ ಎಂದು ಅವರು ಹೇಳಿದರು.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

2020ರ ಡಿಸೆಂಬರ್‌ ತಿಂಗಳ ಕಾರು ಮಾರಾಟ ವರದಿಯನ್ನು ಪ್ರಕಟಿಸಿದ ಹೋಂಡಾ

ಈ ವರ್ಷದ ಹೋಂಡಾ ಕಂಪನಿಯು ತನ್ನ ಹೊಸ ತಲೆಮಾರಿನ ಸಿಟಿ ಕಾರನ್ನು ಪರಿಚಯಿಸಿತು. ಇದು ಖರೀದಿದಾರರಲ್ಲಿ ಬ್ರ್ಯಾಂಡ್‌ನ ಜನಪ್ರಿಯತೆಯನ್ನು ಹೆಚ್ಚಿಸಿದೆ. ಇದರೊಂದಿಗೆ ಹಿಂದಿನ ತಲೆಮಾರಿನ ಸಿಟಿ ಕಾರು ಕೂಡ ಮಾರಾಟವಾಗುತ್ತಿದೆ.

2020ರ ಡಿಸೆಂಬರ್‌ ತಿಂಗಳ ಕಾರು ಮಾರಾಟ ವರದಿಯನ್ನು ಪ್ರಕಟಿಸಿದ ಹೋಂಡಾ

ಹೊಸ ಹೋಂಡಾ ಸಿಟಿ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದೆ. ಮಾರಾಟದಲ್ಲಿ ಹೋಂಡಾ ಸಿಟಿ ತನ್ನ ಪ್ರತಿಸ್ಪರ್ಧಿಗಳಿಗೆ ಪ್ರಬಲ ಪೈಪೋಟಿಯನ್ನು ನೀಡುತ್ತಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

2020ರ ಡಿಸೆಂಬರ್‌ ತಿಂಗಳ ಕಾರು ಮಾರಾಟ ವರದಿಯನ್ನು ಪ್ರಕಟಿಸಿದ ಹೋಂಡಾ

ಅಲ್ಲದೇ ಹೋಂಡಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಡಬ್ಲ್ಯುಆರ್-ವಿ ಮತ್ತು ಜಾಝ್ ಕಾರುಗಳನ್ನು ಸಣ್ಣ ಕಾಸ್ಮೆಟಿಕ್ ನವೀಕರಣಗಳೊಂದಿಗೆ ಬಿಡುಗಡೆಗೊಳಿಸಿತ್ತು. ಆದರೆ ಸಿಟಿ ಕಾರಿನಷ್ಟು ಇತರೆ ಕಾರುಗಳು ಕಂಪನಿಗೆ ಮಾರಾಟದಲ್ಲಿ ದೊಡ್ಡ ಮಟ್ಟದ ಕೊಡುಗೆಯನ್ನು ನೀಡುತ್ತಿಲ್ಲ.

2020ರ ಡಿಸೆಂಬರ್‌ ತಿಂಗಳ ಕಾರು ಮಾರಾಟ ವರದಿಯನ್ನು ಪ್ರಕಟಿಸಿದ ಹೋಂಡಾ

ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಕಂಪನಿಯು ಕಾರು ಮಾರಾಟದಲ್ಲಿ ಸಕಾರಾತ್ಮಕ ಬೆಳವಣಿಗೆಯನ್ನು ಕಾಣುತ್ತಿದೆ. ಹೋಂಡಾ ಕಂಪನಿಯು ಹೊಸ ಸಬ್-ಮೀಟರ್ ಎಸ್‌ಯುವಿ ಅಭಿವೃದ್ಧಿ ಪಡಿಸಲಿದೆ ಎಂದು ವರದಿಯಾಗಿದೆ. ಈ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕಿಯಾ ಸೊನೆಟ್, ಹ್ಯುಂಡೈ ಕ್ರೆಟಾ ಮತ್ತು ಮಾರುತಿ ಸುಜುಕಿ ಬ್ರೇಝಾ ಕಾರುಗಳಿಗೆ ಪೈಪೋಟಿ ನೀಡುತ್ತದೆ.

Article Published On: Friday, January 1, 2021, 20:57 [IST]
English summary
Honda Registers Growth Of 2.65% In December. Read In Kannada.
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+