ದುಬಾರಿ ದುನಿಯಾ: ಹೋಂಡಾ ಕಾರುಗಳ ಬೆಲೆಯಲ್ಲಿ ರೂ. 1.12 ಲಕ್ಷದವರೆಗೆ ಹೆಚ್ಚಳ

ಆಟೋ ಬಿಡಿಭಾಗಗಳ ವೆಚ್ಚ ಹೆಚ್ಚುತ್ತಿರುವ ಪರಿಣಾಮ ಬಹುತೇಕ ಕಾರು ಕಂಪನಿಗಳು ತಮ್ಮ ವಾಹನಗಳ ಬೆಲೆಯಲ್ಲಿ ನಿರಂತರವಾಗಿ ಹೆಚ್ಚಳ ಮಾಡುತ್ತಿದ್ದು, ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ದರ ಏರಿಕೆ ಪ್ರಕಟಿಸಿದೆ.

ವಿವಿಧ ಕಾರುಗಳ ಬೆಲೆಯಲ್ಲಿ ಬರೋಬ್ಬರಿ ರೂ. 1.12 ಲಕ್ಷದವರೆಗೆ ಹೆಚ್ಚಳ ಮಾಡಿದ ಹೋಂಡಾ ಕಾರ್ಸ್

ಕೋವಿಡ್‌ಗೂ ಮುನ್ನ ಪ್ರತಿ ಆರು ತಿಂಗಳಿಗೆ ಒಂದು ಬಾರಿ ವಾಹನಗಳ ದರ ಪರಿಷ್ಕರಣೆ ಮಾಡುತ್ತಿದ್ದ ಆಟೋ ಕಂಪನಿಗಳು ಇದೀಗ ಬಿಡಿಭಾಗಗಳ ಕೊರತೆ ಮತ್ತು ಹೆಚ್ಚುತ್ತಿರುವ ವೆಚ್ಚಗಳನ್ನು ನಿರ್ವಹಿಸಲು ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬೆಲೆ ಪರಿಷ್ಕರಣೆ ಮಾಡುತ್ತಿದ್ದು, ಹೊಸ ವಾಹನಗಳು ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಬೆಲೆ ಏರಿಕೆ ಕಂಡಿರುವುದು ವಾಹನ ಮಾಲೀಕತ್ವವನ್ನು ಮತ್ತಷ್ಟು ದುಬಾರಿಯಾಗಿ ಪರಿಣಮಿಸಿದೆ.

ವಿವಿಧ ಕಾರುಗಳ ಬೆಲೆಯಲ್ಲಿ ಬರೋಬ್ಬರಿ ರೂ. 1.12 ಲಕ್ಷದವರೆಗೆ ಹೆಚ್ಚಳ ಮಾಡಿದ ಹೋಂಡಾ ಕಾರ್ಸ್

ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬಹುತೇಕ ಕಂಪನಿಗಳು ತಮ್ಮ ವಾಹನಗಳ ಮೂಲ ದರದಲ್ಲಿ ಶೇ. 1.50ರಿಂದ ಶೇ.2 ರಷ್ಟು ಬೆಲೆ ಹೆಚ್ಚಿಸುತ್ತಿದ್ದು, ಕಳೆದ ಒಂದು ವರ್ಷದಲ್ಲಿ ಬಜೆಟ್ ಕಾರುಗಳ ಬೆಲೆಯಲ್ಲಿ ಸರಾಸರಿಯಾಗಿಯಾಗಿ ರೂ.50 ಸಾವಿರದಿಂದ ರೂ.1.20 ಲಕ್ಷದಷ್ಟು ಬೆಲೆ ಹೆಚ್ಚಳವಾಗಿವೆ.

ವಿವಿಧ ಕಾರುಗಳ ಬೆಲೆಯಲ್ಲಿ ಬರೋಬ್ಬರಿ ರೂ. 1.12 ಲಕ್ಷದವರೆಗೆ ಹೆಚ್ಚಳ ಮಾಡಿದ ಹೋಂಡಾ ಕಾರ್ಸ್

ಮಧ್ಯಮ ಗಾತ್ರದ ಕಾರುಗಳ ಬೆಲೆಯಲ್ಲಿ ರೂ. 80 ಸಾವಿರದಿಂದ ರೂ. 1.50 ಲಕ್ಷದವರೆಗೆ ಬೆಲೆ ಹೆಚ್ಚಳವಾಗಿದ್ದು, ವಿದೇಶಿ ಮಾರುಕಟ್ಟೆಗಳಿಂದ ಆಮದುಗೊಳ್ಳುವ ಎಲೆಕ್ಟ್ರಾನಿಕ್ ಸೆಮಿ ಕಂಡಕ್ಟರ್‌ಗಳ ಬೆಲೆ ಹೆಚ್ಚಳವಾಗುತ್ತಿರುವ ಪರಿಣಾಮ ಹೊಸ ವಾಹನ ಖರೀದಿಯು ಮತ್ತಷ್ಟು ಹೊರೆಯಾಗುತ್ತಿದೆ.

ವಿವಿಧ ಕಾರುಗಳ ಬೆಲೆಯಲ್ಲಿ ಬರೋಬ್ಬರಿ ರೂ. 1.12 ಲಕ್ಷದವರೆಗೆ ಹೆಚ್ಚಳ ಮಾಡಿದ ಹೋಂಡಾ ಕಾರ್ಸ್

2021ರಲ್ಲೇ ಜನವರಿ ಮತ್ತು ಏಪ್ರಿಲ್‌ನಲ್ಲಿ ದರ ಹೆಚ್ಚಳ ಮಾಡಿದ್ದ ಹೋಂಡಾ ಕಂಪನಿಯು ಇದೀಗ ಮೂರನೇ ಬಾರಿಗೆ ಬೆಲೆ ಹೆಚ್ಚಳ ಮಾಡುವುದಾಗಿ ಹೇಳಿಕೊಂಡಿದ್ದು, ಹೊಸ ದರಪಟ್ಟಿಯ ಪ್ರಮುಖ ಕಾರು ಮಾದರಿಗಳು ರೂ.10 ಸಾವಿರದಿಂದ ರೂ. 1.12 ಲಕ್ಷದಷ್ಟು ದುಬಾರಿಯಾಗಿವೆ.

ವಿವಿಧ ಕಾರುಗಳ ಬೆಲೆಯಲ್ಲಿ ಬರೋಬ್ಬರಿ ರೂ. 1.12 ಲಕ್ಷದವರೆಗೆ ಹೆಚ್ಚಳ ಮಾಡಿದ ಹೋಂಡಾ ಕಾರ್ಸ್

ಹೊಸ ದರ ಪಟ್ಟಿಯಲ್ಲಿ ಅಮೇಜ್ ಕಂಪ್ಯಾಕ್ಟ್ ಸೆಡಾನ್ ಕಾರಿನ ಬೆಲೆಯಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ. 10 ಸಾವಿರದಿಂದ ರೂ. 1.12 ಲಕ್ಷದಷ್ಟು ಬೆಲೆ ಹೆಚ್ಚಳವಾಗಿದ್ದು, ದರ ಏರಿಕೆಯ ಅಮೇಜ್ ಕಾರು ಎಕ್ಸ್‌ಶೋರೂಂ ಪ್ರಕಾರ ರೂ. 6.32 ಲಕ್ಷಕ್ಕೆ ಟಾಪ್ ಎಂಡ್ ಮಾದರಿಯು ರೂ. 11.11 ಲಕ್ಷ ಬೆಲೆ ಪಡೆದುಕೊಂಡಿದೆ.

ವಿವಿಧ ಕಾರುಗಳ ಬೆಲೆಯಲ್ಲಿ ಬರೋಬ್ಬರಿ ರೂ. 1.12 ಲಕ್ಷದವರೆಗೆ ಹೆಚ್ಚಳ ಮಾಡಿದ ಹೋಂಡಾ ಕಾರ್ಸ್

ಮಧ್ಯಮ ಗಾತ್ರದ ಕಾರು ಡಬ್ಲ್ಯುಆರ್-ವಿ ಬೆಲೆಯಲ್ಲೂ ಕೂಡಾ ಸಾಕಷ್ಟು ಹೆಚ್ಚಳವಾಗಿದ್ದು, ಹೊಸ ದರ ಪಟ್ಟಿಯಲ್ಲಿ ಡಬ್ಲ್ಯುಆರ್-ವಿ ಕಾರು ರೂ. 14 ಸಾವಿರದಿಂದ ರೂ. 92 ಸಾವಿರದಷ್ಟು ದುಬಾರಿಯಾಗಿದೆ.

ವಿವಿಧ ಕಾರುಗಳ ಬೆಲೆಯಲ್ಲಿ ಬರೋಬ್ಬರಿ ರೂ. 1.12 ಲಕ್ಷದವರೆಗೆ ಹೆಚ್ಚಳ ಮಾಡಿದ ಹೋಂಡಾ ಕಾರ್ಸ್

ಡಬ್ಲ್ಯುಆರ್-ವಿ ಡೀಸೆಲ್ ಕಾರಿನ ಬೆಲೆಯಲ್ಲಿ ಸಾಕಷ್ಟು ಏರಿಕೆಯಾಗಿದ್ದು, ದರ ಏರಿಕೆ ನಂತರ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.8.76 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 11.80 ಲಕ್ಷ ಬೆಲೆ ಹೊಂದಿದೆ.

ವಿವಿಧ ಕಾರುಗಳ ಬೆಲೆಯಲ್ಲಿ ಬರೋಬ್ಬರಿ ರೂ. 1.12 ಲಕ್ಷದವರೆಗೆ ಹೆಚ್ಚಳ ಮಾಡಿದ ಹೋಂಡಾ ಕಾರ್ಸ್

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯಾದ ಅಮೇಜ್ ಕೂಡಾ ಇದೀಗ ಮತ್ತಷ್ಟು ದುಬಾರಿಯಾಗಿದ್ದು, ಹೊಸ ದರಪಟ್ಟಿಯಲ್ಲಿ ರೂ. 11 ಸಾವಿರ ಗರಿಷ್ಠ ಏರಿಕೆಯೊಂದಿಗೆ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.65 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 9.89 ಲಕ್ಷ ಬೆಲೆ ಹೊಂದಿದೆ.

ವಿವಿಧ ಕಾರುಗಳ ಬೆಲೆಯಲ್ಲಿ ಬರೋಬ್ಬರಿ ರೂ. 1.12 ಲಕ್ಷದವರೆಗೆ ಹೆಚ್ಚಳ ಮಾಡಿದ ಹೋಂಡಾ ಕಾರ್ಸ್

ಇನ್ನು ಹೊಸ ದರ ಪಟ್ಟಿಯಲ್ಲಿ 5ನೇ ತಲೆಮಾರಿನ ಸಿಟಿ ಸೆಡಾನ್ ಕಾರು ಮಾದರಿಯು ಕೂಡಾ ರೂ.17 ಸಾವಿರದಷ್ಟು ದುಬಾರಿಯಾಗಿದ್ದು, ದರ ಹೆಚ್ಚಳದ ನಂತರ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.11.16 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 15.11 ಲಕ್ಷ ಬೆಲೆ ಹೊಂದಿದೆ.

ವಿವಿಧ ಕಾರುಗಳ ಬೆಲೆಯಲ್ಲಿ ಬರೋಬ್ಬರಿ ರೂ. 1.12 ಲಕ್ಷದವರೆಗೆ ಹೆಚ್ಚಳ ಮಾಡಿದ ಹೋಂಡಾ ಕಾರ್ಸ್

ಹೊಸ ದರ ಪಟ್ಟಿಯಲ್ಲಿ ಬಹುತೇಕ ಕಾರು ಮಾದರಿಗಳ ಬೆಲೆಯಲ್ಲಿ ಸರಾಸರಿಯಾಗಿ ಶೇ. 1.50 ರಿಂದ ಶೇ.2 ರಷ್ಟು ದುಬಾರಿಯಾಗಿದ್ದು, ಹೊಸ ವಾಹನ ಬಿಡಿಭಾಗಗಳ ಉತ್ಪಾದನೆಯಲ್ಲಿ ಉಂಟಾಗಿರುವ ಬಿಕ್ಕಟ್ಟು ಇದೀಗ ಹೊಸ ಸವಾಲಾಗಿ ಪರಿಣಮಿಸಿದೆ.

Article Published On: Wednesday, August 4, 2021, 19:27 [IST]
English summary
Honda Cars Price Hike Announced.
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+