ಹೋಂಡಾ ಅಮೇಜ್, ಜಾಝ್, ಸಿಟಿ ಮತ್ತು ಡಬ್ಲ್ಯುಆರ್-ವಿ ಕಾರುಗಳ ಬೆಲೆಯಲ್ಲಿ ಹೆಚ್ಚಳ

ಆಟೋ ಉತ್ಪಾದನಾ ಬಿಡಿಭಾಗಗಳ ಬೆಲೆ ಹೆಚ್ಚಳ ಪರಿಣಾಮ ಬಹುತೇಕ ವಾಹನ ಉತ್ಪಾದನಾ ಕಂಪನಿಗಳು ಬೆಲೆ ಹೆಚ್ಚಳ ಮಾಡುತ್ತಿದ್ದು, ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ಕೂಡಾ ತನ್ನ ಪ್ರಮುಖ ಕಾರು ಮಾದರಿಗಳ ಬೆಲೆ ಏರಿಕೆ ಮಾಡಿ ಹೊಸ ದರ ಪಟ್ಟಿ ಬಿಡುಗಡೆ ಮಾಡಿದೆ.

ಹೋಂಡಾ ಅಮೇಜ್, ಜಾಝ್, ಸಿಟಿ ಮತ್ತು ಡಬ್ಲ್ಯುಆರ್-ವಿ ಕಾರುಗಳ ಬೆಲೆಯಲ್ಲಿ ಹೆಚ್ಚಳ

2021ರ ಅವಧಿಯಲ್ಲೇ ಈಗಾಗಲೇ ಒಂದು ಬಾರಿ ಪ್ರಮುಖ ಕಾರುಗಳ ಬೆಲೆಯಲ್ಲಿ ಹೆಚ್ಚಳವಾಗಿದ್ದು, ಇದೀಗ ಎರಡನೇ ಬಾರಿಗೆ ಏಪ್ರಿಲ್ ತಿಂಗಳಿನಲ್ಲಿ ಮತ್ತೆ ಹೊಸ ವಾಹನಗಳ ಬೆಲೆಯಲ್ಲಿ ಏರಿಕೆ ಮಾಡಲಾಗುತ್ತಿದೆ. ಹೋಂಡಾ ಕಾರ್ಸ್ ಕಂಪನಿಯು ಕೂಡಾ ಪೂರ್ವ ನಿಗದಿಯೆಂತೆ ತನ್ನ ಪ್ರಮುಖ ಕಾರು ಮಾದರಿಗಳ ಬೆಲೆಯಲ್ಲಿ ಹೆಚ್ಚಳ ಮಾಡಿದ್ದು, ಹೊಸ ದರಪಟ್ಟಿಯ ಪ್ರಮುಖ ಕಾರು ಮಾದರಿಗಳು ಶೇ.1.50ರಿಂದ ಶೇ.2ರಷ್ಟು ದುಬಾರಿಯಾಗಿವೆ.

ಹೋಂಡಾ ಅಮೇಜ್, ಜಾಝ್, ಸಿಟಿ ಮತ್ತು ಡಬ್ಲ್ಯುಆರ್-ವಿ ಕಾರುಗಳ ಬೆಲೆಯಲ್ಲಿ ಹೆಚ್ಚಳ

ಆಟೋ ಕಂಪನಿಗಳು ಈ ಹಿಂದೆ ಪ್ರತಿ ಆರು ತಿಂಗಳಿಗೆ ಒಂದು ಬಾರಿ ವಾಹನಗಳ ದರ ಪರಿಷ್ಕರಣೆ ಮಾಡುತ್ತಿದ್ದವು. ಆದರೆ ಇದೀಗ ಬಿಡಿಭಾಗಗಳ ವೆಚ್ಚವು ನಿರಂತರವಾಗಿ ಹೆಚ್ಚುತ್ತಿರುವ ಪರಿಣಾಮ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬೆಲೆ ಪರಿಷ್ಕರಣೆ ಮಾಡುತ್ತಿದ್ದು, ಹೊಸ ವಾಹನಗಳು ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಬೆಲೆ ಏರಿಕೆ ಕಂಡಿವೆ.

ಹೋಂಡಾ ಅಮೇಜ್, ಜಾಝ್, ಸಿಟಿ ಮತ್ತು ಡಬ್ಲ್ಯುಆರ್-ವಿ ಕಾರುಗಳ ಬೆಲೆಯಲ್ಲಿ ಹೆಚ್ಚಳ

ಆಟೋ ಕಂಪನಿಗಳು ವಿವಿಧ ಕಾರು ಮಾದರಿಗಳಿಗೆ ಅನುಗುಣವಾಗಿ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಶೇ. 1.50ರಿಂದ ಶೇ.2 ರಷ್ಟು ಬೆಲೆ ಹೆಚ್ಚಳವಾಗುತ್ತಿದ್ದು, ಕಳೆದ ಒಂದು ವರ್ಷದಲ್ಲಿ ಬಜೆಟ್ ಕಾರುಗಳ ಬೆಲೆಯಲ್ಲಿ ಸರಾಸರಿಯಾಗಿಯಾಗಿ ರೂ. 50 ಸಾವಿರದಿಂದ ರೂ.1 ಲಕ್ಷದಷ್ಟು ಬೆಲೆ ಹೆಚ್ಚಳವಾಗಿವೆ.

ಹೋಂಡಾ ಅಮೇಜ್, ಜಾಝ್, ಸಿಟಿ ಮತ್ತು ಡಬ್ಲ್ಯುಆರ್-ವಿ ಕಾರುಗಳ ಬೆಲೆಯಲ್ಲಿ ಹೆಚ್ಚಳ

ಮಧ್ಯಮ ಗಾತ್ರದ ಕಾರುಗಳ ಬೆಲೆಯಲ್ಲಿ ರೂ. 60 ಸಾವಿರದಿಂದ ರೂ. 1 ಲಕ್ಷಕ್ಕೂ ಅಧಿಕ ಬೆಲೆ ಹೆಚ್ಚಳವಾಗಿದ್ದು, ವಿದೇಶಿ ಮಾರುಕಟ್ಟೆಗಳಿಂದ ಆಮದುಗೊಳ್ಳುವ ಎಲೆಕ್ಟ್ರಾನಿಕ್ ಸೆಮಿ ಕಂಡಕ್ಟರ್‌ಗಳ ಬೆಲೆ ಹೆಚ್ಚಳವಾಗಿರುವ ಪರಿಣಾಮ ಹೊಸ ವಾಹನ ಖರೀದಿಯು ಮತ್ತಷ್ಟು ಹೊರೆಯಾಗುತ್ತಿದೆ. ಹೊಸ ದರಪಟ್ಟಿದಲ್ಲಿ ಹೋಂಡಾ ಕಾರು ಪ್ರಮುಖ ಕಾರು ಮಾದರಿಗಳಾದ ಅಮೇಜ್, ಜಾಝ್, ಸಿಟಿ ಮತ್ತು ಡಬ್ಲ್ಯುಆರ್-ವಿ ಬೆಲೆಯಲ್ಲಿ ಹೆಚ್ಚಳವಾಗಿದೆ.

ಹೋಂಡಾ ಅಮೇಜ್, ಜಾಝ್, ಸಿಟಿ ಮತ್ತು ಡಬ್ಲ್ಯುಆರ್-ವಿ ಕಾರುಗಳ ಬೆಲೆಯಲ್ಲಿ ಹೆಚ್ಚಳ

ದರ ಹೆಚ್ಚಳ ನಂತರ ಅಮೇಜ್ ಕಾರು ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.6.12 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.99 ಲಕ್ಷ ಬೆಲೆ ಹೊಂದಿದ್ದು, ಜಾಝ್ ಹ್ಯಾಚ್‌ಬ್ಯಾಕ್ ಮಾದರಿಯು ಆರಂಭಿಕವಾಗಿ ರೂ.7.55 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.76 ಲಕ್ಷ ಬೆಲೆ ಪಡೆದುಕೊಂಡಿದೆ.

ಹೋಂಡಾ ಅಮೇಜ್, ಜಾಝ್, ಸಿಟಿ ಮತ್ತು ಡಬ್ಲ್ಯುಆರ್-ವಿ ಕಾರುಗಳ ಬೆಲೆಯಲ್ಲಿ ಹೆಚ್ಚಳ

ಡಬ್ಲ್ಯುಆರ್-ವಿ ಬೆಲೆಯಲ್ಲಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.8.62 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 11.50 ಲಕ್ಷ ಬೆಲೆ ಹೊಂದಿದ್ದು, ಸಿಟಿ ಸೆಡಾನ್ ಕೂಡಾ ದುಬಾರಿ ಬೆಲೆ ಪಡೆದುಕೊಂಡಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹೋಂಡಾ ಅಮೇಜ್, ಜಾಝ್, ಸಿಟಿ ಮತ್ತು ಡಬ್ಲ್ಯುಆರ್-ವಿ ಕಾರುಗಳ ಬೆಲೆಯಲ್ಲಿ ಹೆಚ್ಚಳ

ಹೊಸ ದರ ಪಟ್ಟಿಯಲ್ಲಿ ಸಿಟಿ ಸೆಡಾನ್ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.10.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 14.94 ಲಕ್ಷ ಬೆಲೆ ಹೊಂದಿದ್ದು, ಬಹುತೇಕ ಕಾರು ಮಾದರಿಗಳ ಬೆಲೆಯಲ್ಲಿ ಸರಾಸರಿಯಾಗಿ ಶೇ. 1.50 ರಿಂದ ಶೇ.2 ರಷ್ಟು ದುಬಾರಿಯಾಗಿದೆ.

ಹೋಂಡಾ ಅಮೇಜ್, ಜಾಝ್, ಸಿಟಿ ಮತ್ತು ಡಬ್ಲ್ಯುಆರ್-ವಿ ಕಾರುಗಳ ಬೆಲೆಯಲ್ಲಿ ಹೆಚ್ಚಳ

ಸದ್ಯ ಸಿ ಸೆಗ್ಮೆಂಟ್ ಸೆಡಾನ್ ಕಾರು ಮಾರಾಟದಲ್ಲಿ ಸಿಟಿ ಕಾರು ಮಾದರಿಯು ನ್ಯೂ ಜನರೇಷನ್ ಆವೃತ್ತಿಯು ಅಗ್ರಸ್ಥಾನ ಕಾಯ್ದುಕೊಂಡಿದ್ದು, ವಿ, ವಿಎಕ್ಸ್, ಜೆಡ್ಎಕ್ಸ್ ಆವೃತ್ತಿಗಳೊಂದಿಗೆ ಅತ್ಯುತ್ತಮ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಹೊಸ ಸಿಟಿ ಕಾರಿನಲ್ಲಿ ಈ ಬಾರಿ ಡಬಲ್ ಓವರ್‌ಹೆಡ್ ಕ್ಯಾಮ್ ಸೆಟಪ್‌ನೊಂದಿಗೆ ಹೊಸದಾಗಿ 1.5-ಲೀಟರ್ ಪೆಟ್ರೋಲ್ ಎಂಜಿನ್(ಎಲ್15ಬಿ) ನೀಡಲಾಗುತ್ತಿದ್ದು, ಈ ಹೊಸ ಎಂಜಿನ್ 120-ಬಿಎಚ್‌ಪಿ ಮತ್ತು 145-ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಹೋಂಡಾ ಅಮೇಜ್, ಜಾಝ್, ಸಿಟಿ ಮತ್ತು ಡಬ್ಲ್ಯುಆರ್-ವಿ ಕಾರುಗಳ ಬೆಲೆಯಲ್ಲಿ ಹೆಚ್ಚಳ

ಹಾಗೆಯೇ ಡೀಸೆಲ್ ಮಾದರಿಯು 1.5-ಲೀಟರ್ 100-ಬಿಎಚ್‌ಪಿ, 200-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಸ್ಟ್ಯಾಂಡರ್ಡ್ ಆಗಿ ಎರಡು ಮಾದರಿಯಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ.

Article Published On: Saturday, April 17, 2021, 16:12 [IST]
English summary
Honda Increases The Prices Of The Fifth Gen City, Amaze, Jazz & WR-V. Read in Kannada.
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+