ಭಾರತದಲ್ಲಿ ರಿಕಾಲ್ ಆಗುತ್ತಿವೆ ದೋಷಪೂರಿತ ಹೋಂಡಾ ಕಾರುಗಳು

ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ತಮ್ಮ ಹಲವು ಕಾರುಗಳಲ್ಲಿ ಫ್ಯೂಯಲ್ ಪಂಪ್‌ನಲ್ಲಿ ಕೆಲವು ದೋಷ ಕಂಡು ಬಂದ ಹಿನ್ನಲೆಯಲ್ಲಿ ಅವುಗಳನ್ನು ರಿಕಾಲ್ ಮಾಡಲು ಪ್ರಾರಂಭಿಸಿದೆ. ವರದಿಗಳ ಪ್ರಕಾರ ಸರಿಸುಮಾರು 77,954 ಕಾರುಗಳನ್ನು ರಿಕಾಲ್ ಮಾಡಲಾಗುತ್ತದೆ.

ಭಾರತದಲ್ಲಿ ರಿಕಾಲ್ ಆಗುತ್ತಿವೆ ದೋಷಪೂರಿತ ಹೋಂಡಾ ಕಾರುಗಳು

2019 ಮತ್ತು 2020ರ ನಡುವೆ ತಯಾರಾದ 77,954 ಹೋಂಡಾ ಕಾರುಗಳಲ್ಲಿ ಇಂಧನ ಪಂಪ್‌ಗಳನ್ನು ಬದಲಿಸಲು ಕಂಪನಿಯು ಸರ್ವಿಸ್ ಕ್ಯಾಂಪನ್ ಪ್ರಾರಂಭಿಸಿದೆ. ವರದಿಗಳ ಪ್ರಖಾರ, ಹೋಂಡಾ ಅಮೇಜ್, ನಾಲ್ಕನೇ ತಲೆಮಾರಿನ ಸಿಟಿ, ಡಬ್ಲ್ಯುಆರ್-ವಿ, ಜಾಝ್, ಸಿವಿಕ್ ಮತ್ತು ಸಿಆರ್-ವಿ ಮಾದರಿಗಳು ರಿಕಾಲ್ ಆಗುತ್ತಿವೆ. ದೋಷಪೂರಿತ ಕಾರು ಸಂಖ್ಯೆಗಳ ಮಾದರಿವಾರು ಮಾಹಿತಿ ಇಲ್ಲಿವೆ.

ಭಾರತದಲ್ಲಿ ರಿಕಾಲ್ ಆಗುತ್ತಿವೆ ದೋಷಪೂರಿತ ಹೋಂಡಾ ಕಾರುಗಳು

ಕಾಂಪ್ಯಾಕ್ಟ್-ಸೆಡಾನ್ ಅಮೇಜ್‌ನ 36,086 ಯುನಿಟ್‌ಗಳು, ಸಿಟಿಯ 20,248 ಯುನಿಟ್‌ಗಳು, ಜಾಝ್ 6,235 ಯುನಿಟ್‌ಗಳು, ಡಬ್ಲ್ಯುಆರ್-ವಿಯ 7 871 ಯುನಿಟ್‌ಗಳು, ಬಿಆರ್-ವಿ 1,737 ಯುನಿಟ್‌ಗಳು, ಸಿವಿಕ್‌ನ 5,170 ಯುನಿಟ್‌ಗಳು ಮತ್ತು ಸಿಆರ್-ವಿ ಎಸ್‌ಯುವಿಯ 607 ಯುನಿಟ್‌ಗಳನ್ನು ಭಾರತದಲ್ಲಿ ರಿಕಾಲ್ ಆಗುತ್ತಿವೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಭಾರತದಲ್ಲಿ ರಿಕಾಲ್ ಆಗುತ್ತಿವೆ ದೋಷಪೂರಿತ ಹೋಂಡಾ ಕಾರುಗಳು

ಈ ವಾಹನಗಳಲ್ಲಿ ಅಳವಡಿಸಲಾದ ಇಂಧನ ಪಂಪ್‌ಗಳು ದೋಷಯುಕ್ತ ಪ್ರಚೋದಕಗಳನ್ನು ಹೊಂದಿರಬಹುದು. ಇದು ಎಂಜಿನ್‌ಗೆ ಇಂಧನ ಪೂರೈಕೆಯ ಮೇಲೆ ಪರಿಣಾಮ ಬೀರಬಹುದು ಮತ್ತು ಎಂಜಿನ್ ಆಫ್ ಅಥವಾ ಸ್ಟಾರ್ಟ್ ಆಗದೇ ಇರಲು ಕಾರಣವಾಗಬಹುದು. ಪ್ರತಿಯಾಗಿ ದಹನ ಪ್ರಕ್ರಿಯೆಯಲ್ಲಿ ತೊಡಗಿರುವ ಇತರ ಭಾಗಗಳ ಹಾನಿಗೊಳಿಸಬಹುದು.

ಭಾರತದಲ್ಲಿ ರಿಕಾಲ್ ಆಗುತ್ತಿವೆ ದೋಷಪೂರಿತ ಹೋಂಡಾ ಕಾರುಗಳು

ದೋಷಯುಕ್ತ ಇಂಧನ ಪಂಪ್‌ನ ಬದಲಿಯನ್ನು ಭಾರತದಾದ್ಯಂತದ ಬ್ರ್ಯಾಂಡ್‌ನ ಮಾರಾಟಗಾರರಲ್ಲಿ ಉಚಿತವಾಗಿ ನಡೆಸಲಾಗುವುದು. ದೋಷಪೂರಿತ ಹೋಂಡಾ ಕಾರುಗಳ ಹಿಂಪಡೆಯುವಿಕೆಯು ಇಂದಿನಿಂದ ಹಂತ ಹಂತವಾಗಿ ಮಾಡಲಾಗುತ್ತದೆ. ಕಾರನ್ನು ಹಿಂಪಡೆಯಲು ಮಾಲೀಕರನ್ನು ಕಂಪನಿಯು ಪ್ರತ್ಯೇಕವಾಗಿ ಸಂಪರ್ಕಿಸುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಭಾರತದಲ್ಲಿ ರಿಕಾಲ್ ಆಗುತ್ತಿವೆ ದೋಷಪೂರಿತ ಹೋಂಡಾ ಕಾರುಗಳು

ಪರ್ಯಾಯವಾಗಿ, ಗ್ರಾಹಕರು ತಮ್ಮ ಕಾರು ಈ ಅಭಿಯಾನದ ವ್ಯಾಪ್ತಿಗೆ ಒಳಪಡಿಸುತ್ತಾರೆಯೇ ಎಂದು ಸಹ ಪರಿಶೀಲಿಸಬಹುದು. ಹೋಂಡಾ ಹೊಸ ಮೈಕ್ರೋ-ಸೈಟ್ ಅನ್ನು ಸಕ್ರಿಯಗೊಳಿಸಿದೆ, ಗ್ರಾಹಕರು ಸೈಟ್‌ಗೆ ಭೇಟಿ ನೀಡಿದಾಗ, ಅವರಿಗೆ 17-ಅಕ್ಷರಗಳ ಆಲ್ಫಾ-ಸಂಖ್ಯಾ (ವಿಐಎನ್) ವಾಹನ ಗುರುತಿನ ಸಂಖ್ಯೆಯನ್ನು ಒದಗಿಸಲು ಕೇಳಲಾಗುತ್ತದೆ ಮತ್ತು ಅವರ ವಾಹನಗಳು ರಿಕಾಲ್ ಕ್ಯಾಂಪನ್ ಭಾಗವಾಗಿದೆಯೇ ಎಂದು ಪರಿಶೀಲಿಸುತ್ತದೆ.

ಭಾರತದಲ್ಲಿ ರಿಕಾಲ್ ಆಗುತ್ತಿವೆ ದೋಷಪೂರಿತ ಹೋಂಡಾ ಕಾರುಗಳು

ಪ್ರಸ್ತುತ ನಡೆಯುತ್ತಿರುವ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ, ಡೀಲರ್‌ಶಿಪ್‌‍ಗಳಲ್ಲಿ ಪ್ರಸ್ತುತ ಸೀಮಿತ ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಗ್ರಾಹಕರು ಮುಂಚಿತ ಅಪಾಯಿಂಟ್ಮೆಂಟ್ ಪಡೆದು ಡೀಲರ್‌ಶಿಪ್‌‍ಗಳಿಗೆ ಭೇಟಿ ಮಾಡಲು ಕಂಪನಿಯು ಗ್ರಾಹಕರಿಗೆ ವಿನಂತಿಸಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಭಾರತದಲ್ಲಿ ರಿಕಾಲ್ ಆಗುತ್ತಿವೆ ದೋಷಪೂರಿತ ಹೋಂಡಾ ಕಾರುಗಳು

ಹೋಂಡಾ ಕಾರ್ಸ್ ಇಂಡಿಯಾ ತನ್ನ ಕಾರುಗಳ ಮೇಲೆ ಏಪ್ರಿಲ್ ತಿಂಗಳಲ್ಲಿ ಭರ್ಜರಿ ಆಫರ್‌ಗಳನ್ನು ಘೋಷಿಸಿದೆ. ಹೋಂಡಾ ತನ್ನ ಕಾರುಗಳ ಮೇಲೆ ವಿವಿಧ ರೂಪಾಂತರಗಳನ್ನು ಆಧರಿಸಿ ರೂ.38,851 ಗಳವರೆಗೆ ರಿಯಾಯಿತಿಯನ್ನು ನೀಡಲಾಗುತ್ತಿದೆ.

ಭಾರತದಲ್ಲಿ ರಿಕಾಲ್ ಆಗುತ್ತಿವೆ ದೋಷಪೂರಿತ ಹೋಂಡಾ ಕಾರುಗಳು

ಹೋಂಡಾ ಈ ತಿಂಗಳು ಜಾಝ್, ಅಮೇಜ್, ಡಬ್ಲ್ಯುಆರ್-ವಿ ಮತ್ತು ಐದನೇ ತಲೆಮಾರಿನ ಹೋಂಡಾ ಸಿಟಿ ಕಾರುಗಳ ಮೇಲೆ ರಿಯಾಯಿತಿಗಳನ್ನು ಘೋಷಿಸಿದೆ. ಈ ಕಾರುಗಳ ರೂಪಾಂತರವನ್ನು ಆಧರಿಸಿ ರೂ.38,851 ಗಳವರೆಗೆ ಆಫರ್ ಅನ್ನು ನೀಡಲಾಗುತ್ತದೆ. ಇದರಲ್ಲಿ ನಗದು ರಿಯಾಯಿತಿ, ಅಕ್ಸೆಸರಿಸ್ ಮತ್ತು ಎಕ್ಸ್‌ಚೆಂಜ್ ಬೋನಸ್ ಅನ್ನು ಒಳಗೊಡಿದೆ. ಈ ಆಫರ್ ಈ ತಿಂಗಳ ಅಂತ್ಯದವರೆಗೂ ಲಭ್ಯವಿರುತ್ತದೆ.

Most Read Articles

Kannada
Read more on ಹೋಂಡಾ honda
English summary
Honda Cars India Recall Campaign Extended Over Possible Faulty Fuel Pump. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X