ಹೊಸ ಹೋಂಡಾ ಸಿವಿಕ್ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಹೋಂಡಾ ತನ್ನ 2022ರ ಸಿವಿಕ್ ಸೆಡಾನ್ ಕಾರಿನ ಚಿತ್ರಗಳನ್ನು ಅಧಿಕೃತವಾಗಿ ಇತ್ತೀಚೆಗೆ ಬಹಿರಂಗಪಡಿಸಿತ್ತು ಕಂಪನಿಯು ಸಿವಿಕ್ ಪ್ರೊಟೊಟೈಪ್ ಮಾದರಿಯನ್ನು 2020ರ ನವೆಂಬರ್‌ನಲ್ಲಿ ಅನಾವರಣಗೊಳಿಸಿತು.

ಹೊಸ ಹೋಂಡಾ ಸಿವಿಕ್ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಇದೀಗ ಹೋಂಡಾ ಕಂಪನಿಯು ಇಂಟಿರಿಯರ್ ಚಿತ್ರವನ್ನು ಬಹಿರಂಗಪಡಿಸಿದೆ. ಹೋಂಡಾ ಹೊಸ ಒಳಾಂಗಣ ವಿನ್ಯಾಸ ತತ್ವಶಾಸ್ತ್ರವನ್ನು ಪ್ರದರ್ಶಿಸಿತು. ಹೋಂಡಾ ಹೊಸ ಒಳಾಂಗಣ ವಿನ್ಯಾಸ ತತ್ವಶಾಸ್ತ್ರವನ್ನು ಪ್ರದರ್ಶಿಸಿತು, ಅದು ಭವಿಷ್ಯದ ಹೋಂಡಾ ಮಾದರಿಗಳ ಒಳಾಂಗಣ ವಿನ್ಯಾಸವನ್ನು ರೂಪಿಸುತ್ತದೆ. 2022ರ ಹೋಂಡಾ ಸಿವಿಕ್ ಈ ಹೊಸ ಪರಿಕಲ್ಪನೆಯನ್ನು ಅಳವಡಿಸಿಕೊಂಡ ಮೊದಲ ಕಾರು.

ಹೊಸ ಹೋಂಡಾ ಸಿವಿಕ್ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

2022ರ ಹೋಂಡಾ ಸಿವಿಕ್ ಕಾರನ್ನು ಹಿಂದಿನ ಮಾದರಿಗೆ ಹೋಲಿಸಿದರೆ ಸಂಪೂರ್ಣವಾಗಿ ಹೊಸ ರೂಪವನ್ನು ಪಡೆದುಕೊಂಡಿದೆ. ಹೊಸ ಹೋಂಡಾ ಸಿವಿಕ್ ಕಾರಿನ ಹೊರಭಾಗದಲ್ಲಿ ಸಂಪೂರ್ಣವಾಗಿ ವಿನ್ಯಾಸ ಬದಲಾವಣೆ ಮಾಡಿದ್ದರೆ ಒಳಭಾಗದಲ್ಲಿ ಕ್ಯಾಬಿನ್ ಅನ್ನು ನವೀಕರಸಲಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ಹೋಂಡಾ ಸಿವಿಕ್ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

2022ರ ಹೋಂಡಾ ಸಿವಿಕ್ ಕಾರು ವಿನ್ಯಾಸ ಬದಲಾವಣೆ ಮಾತ್ರವಲ್ಲದೇ ತಂತ್ರಜ್ಞಾನದ ಸೇರ್ಪಡೆ ಮತ್ತು ಹಲವಾರು ಸುರಕ್ಷತಾ ಫೀಚರ್ ಗಳನ್ನು ಒಳಗೊಂಡಿರುತ್ತದೆ. ಸುಮಾರು 50 ವರ್ಷಗಳಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೋಂಡಾ ಸಿವಿಕ್ ಸೆಡಾನ್ ಮಾರಾಟವಾಗುತ್ತಿದೆ.

ಹೊಸ ಹೋಂಡಾ ಸಿವಿಕ್ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಹೊಸ ಹೋಂಡಾ ಸಿವಿಕ್ ಕಾರು ಗ್ರಿಲ್ ಮತ್ತು ನಯವಾದ ಎಲ್ಇಡಿ ಹೆಡ್ ಲ್ಯಾಂಪ್ ಗಳನ್ನು ಹೊಂದಿವೆ. ಇನ್ನು ಹೊಸ ಹೋಂಡಾ ಸಿವಿಕ್ ಕಾರಿನ ಸೈಡ್ ಪ್ರೊಫೈಲ್ ಬಗ್ಗೆ ಹೇಳುವುದಾದರೆ, ಸ್ಪೋರ್ಟ್ಸ್ ಕ್ಯಾರೆಕ್ಟರ್ ಲೈನ್ಸ್ ಆಕರ್ಷಕವಾಗಿದ್ದು, ಇದು ಸಿವಿಕ್ ಕಾರಿನ ಹೆಚ್ಚು ಸ್ಪೋರ್ಟಿ ಲುಕ್ ನೀಡುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಹೊಸ ಹೋಂಡಾ ಸಿವಿಕ್ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಇನ್ನು ಸಿವಿಕ್ ಕಾರಿನ ಹಿಂಭಾಗದ ವಿನ್ಯಾಸದ ಬಗ್ಗೆ ಹೇಳುವುದಾದರೆ, ಹಿಂಭಾಗದಲ್ಲಿಯೂ ಕೂಡ ಗಮನಾರ್ಹ ಬದಲಾವಣೆಗಳನ್ನು ಪಡೆದುಕೊಂಡಿದೆ. ಮೊದಲಿಗಿಂತಲೂ ಅಗಲವಾಗಿದ್ದು, ದೊಡ್ಡ ಟ್ವಿನ್ ಎಲ್ಇಡಿ ಟೈಲ್ ಲ್ಯಾಂಪ್, ಹೊಸ ಸ್ಪಾಯ್ಲರ್ ಮತ್ತು ನವೀಕರಿಸಿದ ಡ್ಯುಯಲ್ ಎಕ್ಸಾಸ್ಟ್ ಟಿಪ್ ಅನ್ನು ಅಳವಡಿಸಲಾಗಿದೆ.

ಹೊಸ ಹೋಂಡಾ ಸಿವಿಕ್ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

2022ರ ಹೋಂಡಾ ಸಿವಿಕ್ ಕಾರು 19 ಇಂಚಿನ ಬ್ಲ್ಯಾಕ್ ವ್ಝೀಲ್ ಅನ್ನು ಹೊಂದಿದೆ. ಇದು ಸೆಡಾನ್‌ನ ಸೋಲಾರ್ ಫ್ಲೇರ್ ಪರ್ಲ್ ಬಣ್ಣದ ಬಾಡಿಯೊಂದಿಗೆ ಹೆಚ್ಚು ಆಕರ್ಷಕವಾಗಿ ಕಾಣುತ್ತಿದೆ. 2022ರ ಹೋಂಡಾ ಸಿವಿಕ್ ಕಾರು ಹಿಂದಿನ ಮಾದರಿಗಿಂತ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ.

MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಹೊಸ ಹೋಂಡಾ ಸಿವಿಕ್ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಇನ್ನು ಸಿವಿಕ್ ಸೆಡಾನ್ ಕ್ಯಾಬಿನ್ ವಿನ್ಯಾಸವು ಆಕರ್ಷಕವಾಗಿದೆ. ಸಿಂಪಲ್ ಆಗಿ ಬಹಳ ಸ್ಟ್ಯಾಂಡರ್ಡ್ ಆಗಿ ಡ್ಯಾಶ್ ಬೋರ್ಡ್ ಅನ್ನು ಹೊಂದಿದೆ. ಇನ್ನು ಒಂಬತ್ತು ಇಂಚಿನ ಟಚ್‌ಸ್ಕ್ರೀನ್ ಅನ್ನು ಅಳವಡಿಸಲಾಗಿದೆ.

ಹೊಸ ಹೋಂಡಾ ಸಿವಿಕ್ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

ಇನ್ನು ಇಂಟರಿಯರ್ ನಲ್ಲಿ ಕ್ಲೈಮೇಂಟ್ ಕಂಟ್ರೋಲ್ ಗಾಗಿ ರೋಟರಿ ಡಯಲ್‌ಗಳನ್ನು ಹೊಂದಿವೆ. ಇನ್ನು ಈ ಕಾರಿನಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಸಂಪೂರ್ಣವಾಗಿ ಡಿಜಿಟಲ್ ಆಗಿರುತ್ತದೆ. ಇನ್ನು ಹಲವಾರು ಅತ್ಯಾಧುನಿಕ ಫೀಚರ್ ಗಳನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸುತ್ತೇವೆ.

ಹೊಸ ಹೋಂಡಾ ಸಿವಿಕ್ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

2022ರ ಸಿವಿಕ್ ಸೆಡಾನ್ ಎಲ್‌ಎಕ್ಸ್, ಸ್ಪೋರ್ಟ್, ಇಎಕ್ಸ್ ಮತ್ತು ಟೂರಿಂಗ್ ಎಂಬ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿರಲಿದೆ. ಈ ಹೋಂಡಾ ಸಿವಿಕ್ ಸೆಡಾನ್ ಮಾರ್ನಿಂಗ್ ಮಿಸ್ಟ್ ಮತ್ತು ಮೆಟಿಯೊರಿಟ್ ಗ್ರೇ ಜೊತೆಗೆ ಸಾಮಾನ್ಯ ಏಜಿಯನ್ ಬ್ಲೂ, ಸೋನಿಕ್ ಗ್ರೇ, ಪ್ಲಾಟಿನಂ ವೈಟ್ ಪರ್ಲ್, ಬ್ಲ್ಯಾಕ್ ಪರ್ಲ್ ಮತ್ತು ಲೂನಾರ್ ಸಿಲ್ವರ್ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ.

ಹೊಸ ಹೋಂಡಾ ಸಿವಿಕ್ ಕಾರಿನ ಇಂಟಿರಿಯರ್ ಮಾಹಿತಿ ಬಹಿರಂಗ

11ನೇ ತಲೆಮಾರಿನ ಹೋಂಡಾ ಸಿವಿಕ್ ಹೊರಭಾಗದಲ್ಲಿ ಮತ್ತು ಒಳಭಾಗದಲ್ಲಿ ಸಂಪೂರ್ಣವಾಗಿ ಹೊಸ ವಿನ್ಯಾಸವನ್ನು ಹೊಂದಿದೆ. ಹೋಂಡಾ ಕಂಪನಿಯು 2022ರ ಸಿವಿಕ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದರ ಬಗ್ಗೆ ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ.

Most Read Articles

Kannada
Read more on ಹೋಂಡಾ honda
English summary
2022 Honda Civic Interior Revealed. Read In Kannada.
Story first published: Tuesday, April 27, 2021, 14:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X