ಬಹುನಿರೀಕ್ಷಿತ ಹೊಸ Honda N7X ಎಸ್‍ಯುವಿಯ ಟೀಸರ್ ಬಿಡುಗಡೆ

ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಹೋಂಡಾ ತನ್ನ ಮುಂಬರುವ ಎನ್7ಎಕ್ಸ್ ಎಸ್‍ಯುವಿಯ ಹೊಸ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಹೋಂಡಾ ಎನ್7ಎಕ್ಸ್(Honda N7X) ಎಸ್‍ಯುವಿಯು ನಾಳೆ ಜಾಗತಿಕವಾಗಿ ಅನಾವರಣವಾಗಲಿದೆ.

ಬಿಡುಗಡೆಯಾಗಲಿರುವ ಹೊಸ Honda N7X ಎಸ್‍ಯುವಿಯ ಟೀಸರ್ ಬಿಡುಗಡೆ

ಈ ಹೊಸ ಹೋಂಡಾ ಎನ್7ಎಕ್ಸ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳಿಲ್ಲದಿದ್ದರೂ, ದೇಶದಲ್ಲಿ ಎಸ್‍ಯುವಿಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಗಣಿಸಿ, ಹೋಂಡಾ ಈ ಮೂರು-ಸಾಲಿನ ಎಸ್‍ಯುವಿಯನ್ನು ನಂತರದ ದಿನಗಳಲ್ಲಿ ಪರಿಚಯಿಸಬಹುದು. ಈ ವರ್ಷದ ಆರಂಭದಲ್ಲಿ ಹೋಂಡಾ ಕಂಪನಿಯು ಎನ್7ಎಕ್ಸ್ ಕಾನ್ಸೆಪ್ಟ್ ಮಾದರಿಯನ್ನು ಇಂಡೋನೇಷ್ಯಾದಲ್ಲಿ ಪ್ರದರ್ಶಿಸಲಾಗಿತ್ತು. ಇದನ್ನು 2021ರ ಆರಂಭದಲ್ಲಿ ಗೈಕಿಂಡೋ ಇಂಡೋನೇಷ್ಯಾ ಅಂತರಾಷ್ಟ್ರೀಯ ಆಟೋ ಪ್ರದರ್ಶನದಲ್ಲಿ ಬಹಿರಂಗಪಡಿಸಲು ನಿರ್ಧರಿಸಲಾಗಿತ್ತು.

ಬಿಡುಗಡೆಯಾಗಲಿರುವ ಹೊಸ Honda N7X ಎಸ್‍ಯುವಿಯ ಟೀಸರ್ ಬಿಡುಗಡೆ

ಆದರೆ ಕರೋನಾ ಆತಂಕದಿಂದ ಇದನ್ನು ಮುಂದೂಡಿತು. ಈ ಎನ್7ಎಕ್ಸ್ ಮೊದಲು ಇಂಡೋನೇಷ್ಯಾದಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಇದರ ವ್ಯಾಪ್ತಿಯನ್ನು ಅಲ್ಲಿಂದ ಇತರ ಆಗ್ನೇಯ ಏಷ್ಯಾದ ದೇಶಗಳಿಗೆ ವಿಸ್ತರಿಸಲಾಗುವುದು. ಈ ಹೊಸ ಮೀಡ್ ಸೈಜ್ ಎಸ್‍ಯುವಿ ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳನ್ನು ಒಳಗೊಂಡಿರುತ್ತದೆ.

ಬಿಡುಗಡೆಯಾಗಲಿರುವ ಹೊಸ Honda N7X ಎಸ್‍ಯುವಿಯ ಟೀಸರ್ ಬಿಡುಗಡೆ

ಈ ಹೊಸ ಹೋಂಡಾ ಮಿಡ್ ಸೈಜ್ ಎಸ್‍ಯುವಿಯನ್ನು ಆಂತರಿಕವಾಗಿ 31XA ಎಂಬ ಕೋಡ್ ನೇಮ್ ನೀಡಲಾಗಿತ್ತು. ಈ ಎಸ್‍ಯುವಿಯಲ್ಲಿ ಮಲ್ಟಿ-ಸ್ಲ್ಯಾಟ್ ಕ್ರೋಮ್ ಲಾಡೆನ್ ಗ್ರಿಲ್ ಮತ್ತು ಸ್ಲಿಮ್ ಆಗಿರುವ ಹೆಡ್‌ಲ್ಯಾಂಪ್‌ಗಳನ್ನು ಒಳಗೊಂಡಿದೆ. ಹೆಡ್‌ಲ್ಯಾಂಪ್ ವಿನ್ಯಾಸವು ಹೊಸ ಸಿಟಿ ಸೆಡಾನ್‌ನಿಂದ ಸ್ಫೂರ್ತಿ ಪಡೆದಿದೆ. ಗ್ರಿಲ್ ಮಧ್ಯದಲ್ಲಿ ದೊಡ್ಡ ಪ್ರಮುಖ ಹೋಂಡಾ ಬ್ಯಾಡ್ಜ್ ಅನ್ನು ಇರಿಸಲಾಗಿದೆ.

ಬಿಡುಗಡೆಯಾಗಲಿರುವ ಹೊಸ Honda N7X ಎಸ್‍ಯುವಿಯ ಟೀಸರ್ ಬಿಡುಗಡೆ

ಇದರೊಂದಿಗೆ ಡ್ಯುಯಲ್-ಎಲ್ಇಡಿ ಡಿಆರ್ಎಲ್ ಸೆಟಪ್ ಇದೆ, ಒಂದು ಎಲ್ಇಡಿ ಡಿಆರ್ಎಲ್ ಅನ್ನು ಹೆಡ್ ಲ್ಯಾಂಪ್ ಮೇಲೆ ಮತ್ತು ಇನ್ನೊಂದನ್ನು ಬಂಪರ್ ಮೇಲೆ ಇರಿಸಲಾಗಿದೆ. ಕೆಳಗಿನ ಬಂಪರ್ ವಿಶಾಲವಾದ ವೈಡ್ ಏರ್ ಡ್ಯಾಮ್ ಅನ್ನು ಹೊಂದಿದೆ. ಹೊಸ ಹೋಂಡಾ ಎನ್7ಎಕ್ಸ್ ಎಸ್‍ಯುವಿಯ ಸೈಡ್ ಪ್ರೊಫೈಲ್ ನಲ್ಲಿ ಬೆಟ್ ಲೈನ್ ಬೆಲ್ಟ್‌ಲೈನ್ ಹೊಂದಿದೆ.

ಬಿಡುಗಡೆಯಾಗಲಿರುವ ಹೊಸ Honda N7X ಎಸ್‍ಯುವಿಯ ಟೀಸರ್ ಬಿಡುಗಡೆ

ಇದರಲ್ಲಿ ಬ್ಲ್ಯಾಕ್ ಪ್ಲಾಸ್ಟಿಕ್ ಕ್ಲಾಡಿಂಗ್‌ನೊಂದಿಗೆ ರೌಂಡ್ ವ್ಹೀಲ್ ಅರ್ಚಾರ್ ಅನ್ನು ಹೊಂದಿರುತ್ತದೆ. ಈ ಎಸ್‍ಯುವಿ ಸಿಟಿ ಸೆಡಾನ್‌ನಲ್ಲಿ ನೀಡಲಾಗುವಂತೆಯೇ ಸಿಗ್ನೇಚರ್ ಎಲ್‌ಇಡಿ ಅಂಶಗಳೊಂದಿಗಿನ ಟೈಲ್ ಲ್ಯಾಂಪ್ ಅನ್ನು ಒಳಗೊಂಡಿರುತ್ತದೆ.

ಬಿಡುಗಡೆಯಾಗಲಿರುವ ಹೊಸ Honda N7X ಎಸ್‍ಯುವಿಯ ಟೀಸರ್ ಬಿಡುಗಡೆ

ಈ ಹೊಸ ಹೋಂಡಾ ಮಿಡ್ ಎಸ್‍ಯುವಿಯಲ್ಲಿ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 121 ಬಿಹೆಚ್‌ಪಿ ಮತ್ತು 145 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಎಂಜಿನ್ ನೊಂದಿಗೆ ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಬಹುದು.

ಬಿಡುಗಡೆಯಾಗಲಿರುವ ಹೊಸ Honda N7X ಎಸ್‍ಯುವಿಯ ಟೀಸರ್ ಬಿಡುಗಡೆ

ಇನ್ನು ಎನ್7ಎಕ್ಸ್ ಹೈಬ್ರಿಡ್ ಪವರ್‌ಟ್ರೇನ್ ಪಡೆಯುವ ಸಾಧ್ಯತೆಗಳು ಕಡಿಮೆಯಾಗಿದೆ. ಇನ್ನು ಜಪಾನ್‌ನ ತಯಾರಕರು ಅಮೇಜ್‌ನ ಆರ್ಕಿಟಿಕ್ಚೆರ್ ಆಧರಿಸಿದ ಕಾಂಪ್ಯಾಕ್ಟ್ ಎಸ್‌ಯುವಿಗಾಗಿ ಯೋಜನೆಗಳನ್ನು ಕೈಬಿಟ್ಟಿದ್ದಾರೆ. ಏಕೆಂದರೆ ಭಾರತ-ನಿರ್ದಿಷ್ಟ ಮಿಡ್ ಸೈಕ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಿದೆ ಎಂದು ಹೇಳಲಾಗಿದೆ.

ಬಿಡುಗಡೆಯಾಗಲಿರುವ ಹೊಸ Honda N7X ಎಸ್‍ಯುವಿಯ ಟೀಸರ್ ಬಿಡುಗಡೆ

ಇದು ಎನ್7ಎಕ್ಸ್ ಮಿಡ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹೋಂಡಾ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ ಮಾದರಿಗೆ ಪೈಪೋಟಿಯಾಗಿ ಬರಲಿದೆ. ಹೋಂಡಾ ಕಾರ್ಸ್ ಇಂಡಿಯಾ ಇತ್ತೀಚೆಗೆ ಅನೇಜ್ ಫೇಸ್ ಲಿಫ್ಟ್ ಅನ್ನು ಮೈನರ್ ಕಾಸ್ಮೆಟಿಕ್ ಮತ್ತು ಫೀಚರ್ ಅಪ್‌ಗ್ರೇಡ್‌ಗಳೊಂದಿಗೆ ಬಿಡುಗಡೆಗೊಳಿಸಿದ್ದರು. ಈ ಸಂದರ್ಭದಲ್ಲಿ ಹೋಂಡಾ ಕಾರ್ಸ್ ಇಂಡಿಯಾ, ಕಂಪನಿಯ ಹಿರಿಯ ಉಪಾಧ್ಯಕ್ಷ ಮತ್ತು ನಿರ್ದೇಶಕರಾದ ರಾಜೇಸ್ ಗೊಯೆಲ್ ಮಾತನಾಡಿ, ಭಾರತೀಯ ಮಾರುಕಟ್ಟೆಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ಹೊಸ ಎಸ್‍ಯುವಿಯನ್ನು ಅಭಿವೃದ್ದಿ ಪಡಿಸುತ್ತಿರುವುದಾಗಿ ಹೇಳಿದ್ದಾರೆ.

ಬಿಡುಗಡೆಯಾಗಲಿರುವ ಹೊಸ Honda N7X ಎಸ್‍ಯುವಿಯ ಟೀಸರ್ ಬಿಡುಗಡೆ

ಹೋಂಡಾ ಕಂಪನಿಯು ಆರಂಭದಲ್ಲಿ ಎಚ್‌ಆರ್-ವಿ ತರಲು ಯೋಜಿಸಿದ್ದರು ಆದರೆ ಅದನ್ನು ಶೇಕಡಾ 30 ಕ್ಕಿಂತ ಹೆಚ್ಚು ಸ್ಥಳೀಕರಿಸಲಾಗದ ಕಾರಣ 2019 ರಲ್ಲಿ ಯೋಜನೆಗಳನ್ನು ಕೈಬಿಡಲಾಯಿತು. ಅಮೇಜ್ ಮೂಲದ ಕಾಂಪ್ಯಾಕ್ಟ್ ಎಸ್‌ಯುವಿ ಮುಂದಿನ ವರ್ಷ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ವರದಿಗಳಾಗಿತ್ತು. ಆಧುನಿಕ ಖರೀದಿದಾರರ ಅವಶ್ಯಕತೆಗಳನ್ನು ಪೂರೈಸಲು ಹೋಂಡಾ ಸಬ್-4 ಮೀಟರ್ ಮತ್ತು ಮಿಡ್ ಸೈಜ್ ಎಸ್‍ಯುವಿಯನ್ನು ತರುತ್ತದೆ ಎಂದು 2018 ರಲ್ಲಿ ವರದಿಗಳಾಗಿತ್ತು.

ಬಿಡುಗಡೆಯಾಗಲಿರುವ ಹೊಸ Honda N7X ಎಸ್‍ಯುವಿಯ ಟೀಸರ್ ಬಿಡುಗಡೆ

ಕಳೆದ ಮೂರು ವರ್ಷಗಳಲ್ಲಿ 10 ಕ್ಕೂ ಹೆಚ್ಚು ಮಾದರಿಗಳು ಲಭ್ಯವಿರುವುದರಿಂದ ಕಾಂಪ್ಯಾಕ್ಟ್ ಎಸ್‌ಯುವಿ ಜಾಗವನ್ನು ಸ್ಥಿರವಾಗಿ ಹೆಚ್ಚಿಸಲಾಗಿದೆ. ಇದರಿಂದ ಹೋಂಡಾ ಕಂಪನಿಯು ಮಿಡ್ ಸೈಜ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಈ ಹೊಸ ಮೀಡ್ ಸೈಜ್ ಎಸ್‍ಯುವಿಯು ಎನ್7ಎಕ್ಸ್ ಆಗಿರಬಹುದು ಅಥವಾ ಹೊಸ ಮಿಡ್ ಸೈಜ್ ಎಸ್‍ಯುವಿಯನ್ನು ಅಭಿವೃದ್ದಿಪಡಿಸಬಹುದು,

ಬಿಡುಗಡೆಯಾಗಲಿರುವ ಹೊಸ Honda N7X ಎಸ್‍ಯುವಿಯ ಟೀಸರ್ ಬಿಡುಗಡೆ

ಇನ್ನು ಹೋಂಡಾ ಕಂಪನಿಯು ತನ್ನ 2021ರ Amaze ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಹೋಂಡಾ ಅಮೇಜ್ ಕಾರಿನ ಆರಂಭಿಕ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.6.32 ಲಕ್ಷಗಳಾಗಿದೆ. ಈ ಹೊಸ ಹೋಂಡಾ ಅಮೇಜ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಈ ಕಾರನ್ನು ಖರೀದಿಸಲು ಬಯಸುವ ಗ್ರಾಹಕರು ರೂ,21,000 ಟೋಕನ್ ಮೊತ್ತವನ್ನು ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು.

ಬಿಡುಗಡೆಯಾಗಲಿರುವ ಹೊಸ Honda N7X ಎಸ್‍ಯುವಿಯ ಟೀಸರ್ ಬಿಡುಗಡೆ

ಹೋಂಡಾ ಕಂಪನಿಯು ಇತ್ತೀಚೆಗೆ ಭಾರತದಲ್ಲಿ ಎಲಿವೇಟ್ ಎಂಬ ಹೆಸರಿಗಾಗಿ ಟ್ರೇಡ್‌ಮಾರ್ಕ್ ನೋಂದಾಯಿಸಿದೆ. ಭಾರತೀಯ ಮಾರುಕಟ್ಟೆಯ ಬಿಡುಗಡೆಯಾಗಲಿರುವ ಹೊಸ ಹೋಂಡಾ ಎಸ್‍ಯುವಿಗೆ ಎಲಿವೇಟ್ ಎಂಬ ಹೆಸರನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ. ಇನ್ನು ಹೊಸ ಹೋಂಡಾ ಮಿಡ್ ಸೈಜ್ ಎಸ್‍ಯುವಿ ಭಾರತದಲ್ಲಿ ಬಿಡುಗಡೆಯಾದ ಬಳಿಕ ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Article Published On: Monday, September 20, 2021, 15:52 [IST]
English summary
Honda teased the upcoming n7x suv ahead of global unveil details
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+