ಇವಿ ವಾಹನಗಳ ಬ್ಯಾಟರಿ ವಿನಿಯಮ ಸೇವೆಯನ್ನು ಆರಂಭಿಸಿದ ಹೋಂಡಾ ಮೋಟಾರ್

ದೇಶಾದ್ಯಂತ ತೈಲ ಬೆಲೆಯು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಸಾಂಪ್ರಾದಾಯಿಕ ವಾಹನ ನಿರ್ವಹಣಾ ವೆಚ್ಚದಲ್ಲಿ ಭಾರೀ ಏರಿಕೆಯಾಗಿದೆ. ಹೀಗಿರುವಾಗ ಹೊಸ ವಾಹನ ಖರೀದಿದಾರರಿಗೆ ಎಲೆಕ್ಟ್ರಿಕ್ ವಾಹನಗಳು ಪ್ರಮುಖ ಆಕರ್ಷಣೆಯಾಗುತ್ತಿದ್ದು, ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ.

ತ್ರಿ ಚಕ್ರ ಇವಿ ವಾಹನಗಳ ಬ್ಯಾಟರಿ ವಿನಿಯಮ ಸೇವೆಯನ್ನು ಆರಂಭಿಸಿದ ಹೋಂಡಾ ಮೋಟಾರ್

ತೈಲ ಬೆಲೆಯು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಸಾಂಪ್ರಾದಾಯಿಕ ವಾಹನ ನಿರ್ವಹಣಾ ವೆಚ್ಚವು ಕಳೆದ ತಿಂಗಳಿನಿಂದ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಿರುವಾಗ ಹೊಸ ವಾಹನ ಖರೀದಿದಾರರಿಗೆ ಎಲೆಕ್ಟ್ರಿಕ್ ವಾಹನಗಳ ಬಳಕೆಯು ಆಕರ್ಷಣೆಯಾಗುತ್ತಿದ್ದು, ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಸರ್ಕಾರದ ಜೊತೆಗೆ ವಿವಿಧ ಖಾಸಗಿ ಕಂಪನಿಗಳು ಸಹ ಇವಿ ವಾಹನಗಳಿಗೆ ಪೂರಕವಾದ ಯೋಜನೆಗಳಿಗೆ ಚಾಲನೆ ನೀಡುತ್ತಿವೆ.

ತ್ರಿ ಚಕ್ರ ಇವಿ ವಾಹನಗಳ ಬ್ಯಾಟರಿ ವಿನಿಯಮ ಸೇವೆಯನ್ನು ಆರಂಭಿಸಿದ ಹೋಂಡಾ ಮೋಟಾರ್

ಇವಿ ವಾಹನಗಳ ಹೆಚ್ಚಳಕ್ಕೆ ಸಾಕಷ್ಟು ಉತ್ತೇಜನ ನೀಡಬಲ್ಲ ಬ್ಯಾಟರಿ ವಿನಿಯಮ ಕೇಂದ್ರಗಳು ಎಲೆಕ್ಟ್ರಿಕ್ ವಾಹನಗಳಿಗೆ ಮಾರಾಟವನ್ನು ತೀವ್ರಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಲಿದ್ದು, ತ್ವರಿತವಾಗಿ ಬ್ಯಾಟರಿ ಸೌಲಭ್ಯಗಳನ್ನು ಸರ್ಕಾರಿ ಸಂಸ್ಥೆಗಳು ಮಾತ್ರ ಖಾಸಗಿ ಕಂಪನಿಗಳು ಸಹ ಹೊಸ ಉದ್ಯಮದಲ್ಲಿ ಹೂಡಿಕೆ ಮಾಡುತ್ತಿವೆ.

ತ್ರಿ ಚಕ್ರ ಇವಿ ವಾಹನಗಳ ಬ್ಯಾಟರಿ ವಿನಿಯಮ ಸೇವೆಯನ್ನು ಆರಂಭಿಸಿದ ಹೋಂಡಾ ಮೋಟಾರ್

ಬ್ಯಾಟರಿ ವಿನಿಯಮ ಕೇಂದ್ರಗಳಲ್ಲಿ ಬ್ಯಾಟರಿ ರೇಂಜ್ ಆಧಾರದ ಮೇಲೆ ಇಂತಿಷ್ಟು ಪ್ರಮಾಣದ ದರ ಪಾವತಿಸಿಬೇಕಿದ್ದು, ಸಾಮಾನ್ಯ ಚಾರ್ಜರ್‌ ಮೂಲಕ ಚಾರ್ಜ್ ಮಾಡಲು ಆಗಬಹುದಾದ ಸಮಯ ವ್ಯರ್ಥವನ್ನು ತಡೆಯಲು ಬ್ಯಾಟರಿ ವಿನಿಯಮ ಕೇಂದ್ರ ಸಹಕಾರಿಯಾಗಿದೆ.

ತ್ರಿ ಚಕ್ರ ಇವಿ ವಾಹನಗಳ ಬ್ಯಾಟರಿ ವಿನಿಯಮ ಸೇವೆಯನ್ನು ಆರಂಭಿಸಿದ ಹೋಂಡಾ ಮೋಟಾರ್

ಬ್ಯಾಟರಿ ವಿನಿಮಯದ ವೇಳೆ ಗ್ರಾಹಕರು ತಮ್ಮ ಬಳಿಯಿರುವ ಚಾರ್ಜ್ ಖಾಲಿಯಾದ ಬ್ಯಾಟರಿಯನ್ನು ವಿನಿಮಯ ಕೇಂದ್ರಗಳಿಗೆ ಹಿಂದಿರುಗಿಸುವ ಮೂಲಕ ಚಾರ್ಜ್ ಮಾಡಲಾದ ಬ್ಯಾಟರಿ ಪಡೆದುಕೊಳ್ಳುವ ವ್ಯವಸ್ಥೆ ಇದಾಗಿದ್ದು, ಹೊಸ ಸೌಲಭ್ಯವು ಚಾರ್ಜಿಂಗ್ ಸಮಯವನ್ನು ಉಳಿಸುವ ಮೂಲಕ ಬ್ಯಾಟರಿ ಖಾಲಿಯಾದ ತಕ್ಷಣವೇ ಮತ್ತೊಂದು ಬ್ಯಾಟರಿ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ.

ತ್ರಿ ಚಕ್ರ ಇವಿ ವಾಹನಗಳ ಬ್ಯಾಟರಿ ವಿನಿಯಮ ಸೇವೆಯನ್ನು ಆರಂಭಿಸಿದ ಹೋಂಡಾ ಮೋಟಾರ್

ಹೊಸ ಸೌಲಭ್ಯವನ್ನು ಇತ್ತೀಚೆಗೆ ಹೋಂಡಾ ಮೋಟಾರ್ ಕಂಪನಿಯು ಕೂಡಾ ಅಧಿಕೃತವಾಗಿ ಬ್ಯಾಟರಿ ವಿನಿಯಮ ಕೇಂದ್ರಗಳಿಗೆ ಚಾಲನೆ ನೀಡಿದ್ದು, ಪ್ರಾಯೋಗಿಕವಾಗಿ ತೆರೆಯಲಾದ ಬ್ಯಾಟರಿ ವಿನಿಯಮ ಕೇಂದ್ರವನ್ನು ಶೀಘ್ರದಲ್ಲೇ ವಿವಿಧ ನಗರಗಳಿಗೂ ವಿಸ್ತರಿಸಲಿದೆ.

ತ್ರಿ ಚಕ್ರ ಇವಿ ವಾಹನಗಳ ಬ್ಯಾಟರಿ ವಿನಿಯಮ ಸೇವೆಯನ್ನು ಆರಂಭಿಸಿದ ಹೋಂಡಾ ಮೋಟಾರ್

ಮೊದಲ ಹಂತವಾಗಿ ತ್ರಿ ಚಕ್ರ ವಾಹನಗಳಿಗೆ ಮಾತ್ರವೇ ಬ್ಯಾಟರಿ ವಿನಿಮಯ ಸೌಲಭ್ಯವನ್ನು ತೆರೆಯಲಾಗಿದ್ದು, ವ್ಯಯಕ್ತಿಕ ಬಳಕೆಯ ಎಲೆಕ್ಟ್ರಿಕ್ ವಾಹನಗಳಿಗಾಗಿ ಶೀಘ್ರದಲ್ಲೇ ಪ್ರತ್ಯೇಕ ಸೌಲಭ್ಯವನ್ನು ತೆರೆಯುವ ಯೋಜನೆ ರೂಪಿಸಲಾಗಿದೆ.

ತ್ರಿ ಚಕ್ರ ಇವಿ ವಾಹನಗಳ ಬ್ಯಾಟರಿ ವಿನಿಯಮ ಸೇವೆಯನ್ನು ಆರಂಭಿಸಿದ ಹೋಂಡಾ ಮೋಟಾರ್

ಇನ್ನು ಹೆಚ್ಚುತ್ತಿರುವ ಮಾಲಿನ್ಯಕ್ಕೆ ಪರಿಣಾಮಕಾರಿ ತಗ್ಗಿಸುವ ಸಂಬಂಧ ವಿವಿಧ ರಾಜ್ಯ ಸರ್ಕಾರವು ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಅತಿ ಹೆಚ್ಚು ವಾಹನ ದಟ್ಟಣೆ ಹೊಂದಿರುವ ನಮ್ಮ ಬೆಂಗಳೂರಿನಲ್ಲೂ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುವ ಸಂಬಂಧ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ತೆರೆಯಲಾಗಿದೆ.

ತ್ರಿ ಚಕ್ರ ಇವಿ ವಾಹನಗಳ ಬ್ಯಾಟರಿ ವಿನಿಯಮ ಸೇವೆಯನ್ನು ಆರಂಭಿಸಿದ ಹೋಂಡಾ ಮೋಟಾರ್

ಪ್ರಸ್ತುತ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಸ್ವಂತ ಬಳಕೆಗೆ ಮಾತ್ರ ಮಾರಾಟವಾಗುತ್ತಿದ್ದು, ಹೊಸ ಬ್ಯಾಟರಿ ವಿನಿಮಯ ಕೇಂದ್ರಗಳೊಂದಿಗೆ ವಾಣಿಜ್ಯ ಬಳಕೆಗೂ ಇವಿ ವಾಹನಗಳು ಮಾರಾಟ ಹೆಚ್ಚಳವಾಗಬೇಕೆಂಬ ಯೋಜನೆ ರೂಪಿಸಲಾಗುತ್ತಿದೆ.

ತ್ರಿ ಚಕ್ರ ಇವಿ ವಾಹನಗಳ ಬ್ಯಾಟರಿ ವಿನಿಯಮ ಸೇವೆಯನ್ನು ಆರಂಭಿಸಿದ ಹೋಂಡಾ ಮೋಟಾರ್

ಇದಕ್ಕೆ ಪೂರಕವಾಗಿ ಯಾವುದೇ ಪ್ರದೇಶಗಳಿಗೂ ಹೋದರೂ ಚಾರ್ಜಿಂಗ್ ಸೌಲಭ್ಯ ಲಭ್ಯವಾಗುವಂತೆ ಯೋಜನೆ ಸಿದ್ದಪಡಿಸಲಾಗುತ್ತಿದ್ದು, ಹೊಸ ಬ್ಯಾಟರಿ ವಿನಿಮಯ ಕೇಂದ್ರಗಳಿಂದ ಇವಿ ವಾಹನ ಬಳಕೆಯನ್ನು ಹೆಚ್ಚಿಸಬಹುದಾಗಿದೆ.

ತ್ರಿ ಚಕ್ರ ಇವಿ ವಾಹನಗಳ ಬ್ಯಾಟರಿ ವಿನಿಯಮ ಸೇವೆಯನ್ನು ಆರಂಭಿಸಿದ ಹೋಂಡಾ ಮೋಟಾರ್

ಇದಕ್ಕಾಗಿ ಮಹತ್ವದ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರವು ಸರ್ಕಾರಿ ಸ್ವಾಮ್ಯದ ಪೆಟ್ರೋಲ್ ಬಂಕ್‌ ಮತ್ತು ಖಾಸಗಿ ಕಂಪನಿಗಳ ಪೆಟ್ರೋಲ್ ಬಂಕ್‌ಗಳಲ್ಲಿ ಸ್ಥಳಾವಕಾಶಕ್ಕೆ ಅನುಗುಣವಾಗಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ತೆರೆಯುವ ಯೋಜನೆಗೆ ಅನುಮೋದನೆ ನೀಡಲಾಗಿದೆ.

ತ್ರಿ ಚಕ್ರ ಇವಿ ವಾಹನಗಳ ಬ್ಯಾಟರಿ ವಿನಿಯಮ ಸೇವೆಯನ್ನು ಆರಂಭಿಸಿದ ಹೋಂಡಾ ಮೋಟಾರ್

ಈಗಾಗಲೇ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಮುಂದಿನ ಎರಡು ವರ್ಷಗಳಲ್ಲಿ ದೇಶದ್ಯಾಂತ 69 ಸಾವಿರ ಪೆಟ್ರೋಲ್ ಬಂಕ್‌‌ಗಳಲ್ಲಿ ಕನಿಷ್ಠ ಒಂದು ಚಾರ್ಜಿಂಗ್ ಪಾಯಿಂಟ್ ಹೊಂದಿರಲಿವೆ ಎಂದಿದ್ದಾರೆ.

ತ್ರಿ ಚಕ್ರ ಇವಿ ವಾಹನಗಳ ಬ್ಯಾಟರಿ ವಿನಿಯಮ ಸೇವೆಯನ್ನು ಆರಂಭಿಸಿದ ಹೋಂಡಾ ಮೋಟಾರ್

ಹೆಚ್ಚಿನ ಮಟ್ಟದ ಚಾರ್ಜಿಂಗ್ ನಿಲ್ದಾಣಗಳು ಲಭ್ಯವಾದರಲ್ಲಿ ಇವಿ ವಾಹನಗಳ ಮೂಲಕ ದೀರ್ಘಾವಧಿಯ ಪ್ರಯಾಣಕ್ಕೆ ಅನುಕೂರಲಕವಾಗಲಿದ್ದು, ಮಾರ್ಗಮಧ್ಯದಲ್ಲೇ ಚಾರ್ಜಿಂಗ್ ಸಮಸ್ಯೆಯನ್ನು ನಿವಾರಿಸಲು ಹೊಸ ಯೋಜನೆ ಸಾಕಷ್ಟು ಸಹಕಾರಿಯಾಗಿದೆ.

Article Published On: Friday, October 29, 2021, 20:14 [IST]
English summary
Honda to begin battery sharing service for electric tricycle taxis in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+