ಆಕರ್ಷಕ ವಿನ್ಯಾಸದಲ್ಲಿ ಹೊಸ Hyundai Creta Grand ಎಸ್‍ಯುವಿ ಬಿಡುಗಡೆ

ಹ್ಯುಂಡೈ ಕಂಪನಿಯು ತನ್ನ ಎಸ್‍ಯುವಿ ಪೋರ್ಟ್ಫೋಲಿಯೊವನ್ನು ಮತ್ತಷ್ಟು ಬಲಪಡಿಸಲು 7-ಸೀಟರ್ ಅಲ್ಕಾಜರ್ ಈ ವರ್ಷದ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು, ಇದೀಗ ಹ್ಯುಂಡೈ ಕಂಪನಿಯು ಮೆಕ್ಸಿಕೋದಲ್ಲಿ ಕ್ರೆಟಾ ಗ್ರ್ಯಾಂಡ್ ಎಂಬ ಹೆಸರಿನಲ್ಲಿ ಅಲ್ಕಾಜರ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿದೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ Hyundai Creta Grand ಎಸ್‍ಯುವಿ ಬಿಡುಗಡೆ

ಮೂಲಭೂತವಾಗಿ ಈ ಎಸ್‍ಯುವಿಯು ಕ್ರೆಟಾದ ಮೂರು-ಸಾಲು ಆವೃತ್ತಿಯಾಗಿದೆ. ಮಿಡ್ ಸೈಜ್ ಎಸ್‍ಯುವಿಯನ್ನು ಮೆಕ್ಸಿಕನ್ ಮಾರುಕಟ್ಟೆಯಲ್ಲಿ ಕ್ರೆಟಾ ಗ್ರ್ಯಾಂಡ್ ಆಗಿ ಮಾರಾಟ ಮಾಡಲಾಗುತ್ತದೆ.ಈ ಹೊಸ ಹ್ಯುಂಡೈ ಕ್ರೆಟಾ ಗ್ರ್ಯಾಂಡ್( Hyundai Creta Grand) ಎಸ್‍ಯುವಿಯ ಆರಂಭಿಕ ಬೆಲೆಯು 455,000 (ಅಂದಾಜು ರೂ.16.80 ಲಕ್ಷ) ಆಗಿದೆ. ಈ ಎಸ್‍ಯುವಿಯು ಮೆಕ್ಸಿಕೋದಲ್ಲಿ GLS ಪ್ರೀಮಿಯಂ ಮತ್ತು ಲಿಮಿಟೆಡ್ AT ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಎಸ್‍ಯುವಿ ಸ್ಟೈಲಿಂಗ್ ಮತ್ತು ವಿಶೇಷಣಗಳ ವಿಷಯದಲ್ಲಿ ಇಂಡಿಯಾ-ಸ್ಪೆಕ್ ಅಲ್ಕಾಜರ್‌ಗೆ ಹೋಲುತ್ತದೆ. ಇದು ಅಲ್ಕಾಜರ್‌ನಂತೆಯೇ ಅದೇ ರೀತಿಯ ವೈಶಿಷ್ಟ್ಯಗಳನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ Hyundai Creta Grand ಎಸ್‍ಯುವಿ ಬಿಡುಗಡೆ

ಹೊಸ ಹ್ಯುಂಡೈ ಕ್ರೆಟಾ ಗ್ರ್ಯಾಂಡ್ 7-ಸೀಟರ್ ಮಾದರಿಯು ಪ್ರಸ್ತುತ ತಲೆಮಾರಿನ ಹ್ಯುಂಡೈ ಕ್ರೆಟಾವನ್ನು ಆಧರಿಸಿದೆ, ಇದು ಆಯಾ ವಿಭಾಗದಲ್ಲಿ ಜನಪ್ರಿಯ ಮಾದರಿಯಾಗಿದೆ. ಈ ಎಸ್‍ಯುವಿಯ ಒಳಭಾಗದಲ್ಲಿ ಉತ್ತಮ ಸ್ಪೇಸ್ ಅನ್ನು ಹೊಂದಿದ್ದು, 7 ಜನರು ಉತ್ತಮವಾಗಿ ಕುಳಿತು ಪ್ರಯಾಣಿಸಬಹುದು. ಈ ಹ್ಯುಂಡೈ ಕ್ರೆಟಾ ಗ್ರ್ಯಾಂಡ್ 7-ಸೀಟರ್ ಆಕರ್ಷಕ ವಿನ್ಯಾಸ, ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿವೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ Hyundai Creta Grand ಎಸ್‍ಯುವಿ ಬಿಡುಗಡೆ

ಮೇಲೆ ಹೇಳಿದಂತೆ ಹ್ಯುಂಡೈ ಕ್ರೆಟಾ ಗ್ರ್ಯಾಂಡ್ ಕ್ರೆಟಾವನ್ನು ಆಧರಿಸಿದೆ ಆದರೆ, ಅದರ ಕೆಲವು ಸ್ಪರ್ಧಿಗಳಿಗಿಂತ ಭಿನ್ನವಾಗಿ, ಹ್ಯುಂಡೈ ಎರಡೂ ಎಸ್‌ಯುವಿಗಳನ್ನು ಪ್ರತ್ಯೇಕಿಸಲು ಕಾರಿನಲ್ಲಿ ಕೆಲವು ಕಾಸ್ಮೆಟಿಕ್ ಮತ್ತು ಯಾಂತ್ರಿಕ ಬದಲಾವಣೆಗಳನ್ನು ಮಾಡಿದೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ Hyundai Creta Grand ಎಸ್‍ಯುವಿ ಬಿಡುಗಡೆ

ಈ ಹ್ಯುಂಡೈ ಕ್ರೆಟಾ ಗ್ರ್ಯಾಂಡ್ 7-ಸೀಟರ್ ಮಾದರಿಯನ್ನು 6 ಮತ್ತು 7 ಆಸನಗಳ ಸಂರಚನೆಗಳಲ್ಲಿ ಅನ್ನು ನೀಡುತ್ತದೆ. ಈ ಕ್ರೆಟಾ ಗ್ರ್ಯಾಂಡ್ ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟುಗಳನ್ನು ಸೆಂಟರ್ ಕನ್ಸೋಲ್‌ನೊಂದಿಗೆ ಪಡೆಯುತ್ತದೆ, ಇದರಲ್ಲಿ ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಕಪ್‌ಹೋಲ್ಡರ್‌ಗಳಿವೆ. ಎಲ್ಲಾ ಮೂರು ಸಾಲುಗಳ ಸೀಟುಗಳೊಂದಿಗೆ 180 ಲೀಟರ್ ಬೂಟ್ ಸ್ಪೇಸ್ ನೀಡುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ Hyundai Creta Grand ಎಸ್‍ಯುವಿ ಬಿಡುಗಡೆ

ಹೊಸ ಕ್ರೆಟಾ ಗ್ರ್ಯಾಂಡ್ 7-ಸೀಟರ್ ಮಾದರಿಯಲ್ಲಿ 579 ಲೀಟರ್ ನಷ್ಟು ಬೂಟ್ ಸ್ಪೇಸ್ ಅನ್ನು ಹೊಂದಿದೆ. ಇದನ್ನು 1051 ಲೀಟರ್'ಗೆ ಹೆಚ್ಚಿಸಬಹುದು. ಇನ್ನು ಈ ಎಸ್‍ಯುವಿಯ ಡೈವಿಂಗ್ ಸೀಟ್ ಎಲೆಕ್ಟ್ರಿಕ್ ಆಗಿ ಅಡೆಜಸ್ಟ್ ಮಾಡಿಕೊಳ್ಳಬಹುದು. ಇದರ ಎರಡನೇ ಸಾಲಿನ ಸೀಟನ್ನು ಮಡಿಚುವ ಮೂಲಕ ಮೂರನೇ ಸಾಲಿನ ಸೀಟನ್ನು ಸುಲಭವಾಗಿ ಪ್ರವೇಶಿಸಬಹುದಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ Hyundai Creta Grand ಎಸ್‍ಯುವಿ ಬಿಡುಗಡೆ

ಎರಡನೇ ಸಾಲಿನ ಅಥವಾ ಮೂರನೇ ಸಾಲಿನ ಪ್ರಯಾಣಿಕರಿಗೆ ಹೆಚ್ಚು ಲೆಗ್ ರೂಂ ರಚಿಸಲು ಎರಡನೇ ಸಾಲಿನ ಸೀಟುಗಳನ್ನು ಸರಿಹೊಂದಿಸಬಹುದು. ಕ್ರೆಟಾ ಗ್ರ್ಯಾಂಡ್ ಎಸ್‍ಯುವಿ ನೀಡುತ್ತಿರುವ ಮತ್ತೊಂದು ಆರಾಮದಾಯಕ ವೈಶಿಷ್ಟ್ಯವೆಂದರೆ ಎರಡನೇ ಸಾಲಿನ ಪ್ರಯಾಣಿಕರಿಗೆ ಟ್ರೇ ಟೇಬಲ್ ಲಭ್ಯವಿರುತ್ತದೆ, ಪ್ರಯಾಣಿಕರಿಗೆ ಹುಂಡೈ ಎಸಿ ವೆಂಟ್‌ಗಳನ್ನು ನೀಡುತ್ತಿದ್ದು, ಕಾರಿನಲ್ಲಿ ಇಂಟಿಗ್ರೇಟೆಡ್ ಏರ್ ಪ್ಯೂರಿಫೈಯರ್ ಅನ್ನು ಸಹ ಅಳವಡಿಸಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ Hyundai Creta Grand ಎಸ್‍ಯುವಿ ಬಿಡುಗಡೆ

ಹೊಸ ಹ್ಯುಂಡೈ ಕ್ರೆಟಾ ಗ್ರ್ಯಾಂಡ್ ಎಸ್‍ಯುವಿಯು ಸ್ಪ್ಲಿಟ್-ಶೈಲಿಯ ಎಲ್ಇಡಿ ಹೆಡ್‌ಲ್ಯಾಂಪ್‌, 3ಡಿ ಹನಿಕೊಂಬ್ ಗ್ರಿಲ್, ಹೊಸ ವಿನ್ಯಾಸದ ಬಂಪರ್ ವಿನ್ಯಾಸ, ಎಲ್ಇಡಿ ಟೈಲ್ ಲ್ಯಾಂಪ್, ಎಲ್ಇಡಿ ಟರ್ನ್ ಇಂಡಿಕೇಟರ್, ವಿವಿಧ ಮಾದರಿಗಳಿಗೆ ಅನುಗುಣವಾಗಿ 17 ಮತ್ತು 18-ಇಂಚಿನ ಅಲಾಯ್ ವೀಲ್ಹ್, ರೂಫ್ ರೈಲ್ಸ್, ಫ್ಲಕ್ಸ್ ಸ್ಕಫ್ ಪ್ಲೇಟ್, ಶಾರ್ಕ್ ಫಿನ್ ಅಂಟೆನಾ ಮತ್ತು ಬಾಡಿ ಕ್ಲ್ಯಾಡಿಂಗ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ Hyundai Creta Grand ಎಸ್‍ಯುವಿ ಬಿಡುಗಡೆ

ಇದರೊಂದಿಗೆ ಈ ಕ್ರೆಟಾ ಗ್ರ್ಯಾಂಡ್ ಎಸ್‍ಯುವಿಯ ಇಂಟಿರಿಯರ್ ನಲ್ಲಿ, 10.25 ಇಂಚಿನ ಟಿಎಫ್‌ಟಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 10.25 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಬ್ಲ್ಯೂ ಲಿಂಕ್ ಕನೆಕ್ಟ್ ಟೆಕ್ನಾಲಜಿ, ವಾಯ್ಸ್ ಕಮಾಂಡರ್, ಮೂರು ಸಾಲಿಗೂ ಎಸಿ ವೆಂಟ್ಸ್, ಬ್ಲೈಂಡ್ ವಿಂಡೋ ಮಾನಿಟರ್ ಮತ್ತು ಆ್ಯಂಬಿಯೆಂಟ್ ಲೈಟಿಂಗ್ ಅನ್ನು ಕೂಡ ಹೊಂದಿದೆ. ಇನ್ನು ಸೀಟ್ ಬ್ಲ್ಯಾಟ್ ಟೇಬಲ್, ಆಟೋ ಏರ್ ಪ್ಯೂರಿಫೈರ್, ರಿಮೋಟ್ ಎಂಜಿನ್ ಸ್ಟಾರ್ಟ್, ಕ್ಲೈಮೆಟ್ ಕಂಟ್ರೋಲ್, ಪನೊರಮಿಕ್ ಸನ್‌ರೂಫ್ ಸೇರಿದಂತೆ ಹಲವಾರು ಪ್ರೀಮಿಯಂ ಪೀಚರ್ಸ್ ಗಳನ್ನು ಕೂಡ ಹೊಂದಿವೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ Hyundai Creta Grand ಎಸ್‍ಯುವಿ ಬಿಡುಗಡೆ

ಇನ್ನು ಈ ಹೊಸ ಹ್ಯುಂಡೈ ಕ್ರೆಟಾ ಗ್ರ್ಯಾಂಡ್ ಎಸ್‍ಯುವಿಯು 2.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 157 ಬಿಹೆಚ್‍ಪಿ ಪವರ್ ಮತ್ತು 191 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುಸುವ ಸಾಮರ್ಥ್ಯವನ್ನು ಹೊಂದಿದೆ. ಎಂಜಿನ್ ನೊಂದಿಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ನೀಡಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ Hyundai Creta Grand ಎಸ್‍ಯುವಿ ಬಿಡುಗಡೆ

ಇನ್ನು ಭಾರತದಲ್ಲಿ ಮಾರಾಟವಾಗುವ ಹ್ಯುಂಡೈ ಅಲ್ಕಾಜರ್ ಎಸ್‍ಯುವಿಯಲ್ಲಿ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ಈ ಎಂಜಿನ್ 115 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ Hyundai Creta Grand ಎಸ್‍ಯುವಿ ಬಿಡುಗಡೆ

ಈ ಹೊಸ ಹ್ಯುಂಡೈ ಕ್ರೆಟಾ ಗ್ರ್ಯಾಂಡ್ ಎಸ್‍ಯುವಿಯು ಟೈಪೂನ್ ಸಿಲ್ವರ್, ಟೈಟಾನ್ ಗ್ರೇ, ಟೈಗಾ ಬ್ರೌನ್, ಸ್ಟೇರಿ ನೈಟ್, ಪೊಲಾರ್ ವೈಟ್ ಮತ್ತು ಪ್ಯಾಂಥಮ್ ಬ್ಲ್ಯಾಕ್ ಬಣ್ಣಗಳು ಸೇರಿ ಎರಡು ಡ್ಯುಯಲ್ ಟೋನ್ ಮಾದರಿಗಳು ಖರೀದಿಗೆ ಲಭ್ಯವಿರುತ್ತದೆ. ಇನ್ನು ಪ್ರಯಾಣಿಕರ ಸುರಕ್ಷತೆಗಾಗಿ ಈ ಎಸ್‍ಯುವಿಯಲ್ಲಿ ಕ್ರೂಸ್ ಕಂಟ್ರೋಲ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್ ಜೊತೆ ಇಬಿಡಿ, ಬ್ಲೈಂಡ್ ವ್ಯೂ ಮಾನಿಟರ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಹಿಲ್ ಅಸಿಸ್ಟ್ ಕಂಟ್ರೋಲ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಸೇರಿದಂತೆ ಹಲವಾರು ಫೀಚರ್ಸ್ ಗಳನ್ನು ಒಳಗೊಂಡಿವೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ Hyundai Creta Grand ಎಸ್‍ಯುವಿ ಬಿಡುಗಡೆ

ಭಾರತದಲ್ಲಿ ಮಾರಾಟವಾಗುವ ಹ್ಯುಂಡೈ ಅಲ್ಕಾಜರ್ ಎಸ್‍ಯುವಿ ಮಾದರಿಯು ಎಂಜಿ ಹೆಕ್ಟರ್, ಟಾಟಾ ಸಫಾರಿ ಮತ್ತು ಇತ್ತೀಚೆಗೆ ಬಿಡುಗಡೆಯಾದ ಮಹೀಂದ್ರಾ XUV700 ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತಿದೆ. ಒಟ್ಟಾರೆಯಾಗಿ ಹ್ಯುಂಡೈ ಕ್ರೆಟಾ ಗ್ರ್ಯಾಂಡ್ ಎಸ್‍ಯುವಿ ಮಾದರಿ ಮತ್ತು ಅಲ್ಕಾಜರ್ ಎಸ್‍ಯುವಿಯು ಒಂದೇ ಆಗಿದೆ. ಆದರೆ ಇದನ್ನು ಭಿನ್ನ ಹೆಸರುಗಳಲ್ಲಿ ಮಾರಾಟಗೊಳಿಸುತ್ತಿದೆ.

Most Read Articles

Kannada
English summary
Hyundai alcazar 7 seater suv launched in mexico as creta grand details
Story first published: Monday, November 8, 2021, 12:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X