Just In
- 2 hrs ago
ಕೊನೆಯ ಆಸೆಯೆಂತೆ ರಾಜಕುಮಾರ ಪ್ರಿನ್ಸ್ ಫಿಲಿಪ್ ಅಂತಿಮ ಯಾತ್ರೆಗೆ ಸಿದ್ದವಾಗಿದೆ ಮಾಡಿಫೈ ಲ್ಯಾಂಡ್ ರೋವರ್
- 3 hrs ago
ಜಪಾನ್ನಲ್ಲಿ ಬಿಡುಗಡೆಯಾಯ್ತು ಮೇಡ್ ಇನ್ ಇಂಡಿಯಾ 2021ರ ಸುಜುಕಿ ಜಿಕ್ಸರ್ 250 ಬೈಕ್
- 4 hrs ago
ಆಕರ್ಷಕ ಬೆಲೆಯಲ್ಲಿ ದೇಶದ ಮೊದಲ ಹೈಬ್ರಿಡ್ ಟ್ರ್ಯಾಕ್ಟರ್ ಬಿಡುಗಡೆ
- 4 hrs ago
ಬೆಲೆ ಏರಿಕೆ ಪಡೆದುಕೊಂಡ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್
Don't Miss!
- News
ಬೆಂಗಳೂರಿನಲ್ಲಿ ಭೀತಿ: ಕೊರೊನಾ ಹೆಚ್ಚು ರೆಮ್ಡೆಸಿವಿರ್ ಔಷಧಿ ಕಡಿಮೆ!
- Sports
ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಆರ್ಸಿಬಿ!
- Finance
ಚಿನ್ನ, ಬೆಳ್ಳಿ ಸ್ವಲ್ಪ ಕುಸಿತ: ಏಪ್ರಿಲ್ 14ರಂದು ಎಲ್ಲೆಡೆ ಬೆಲೆ ಎಷ್ಟಿದೆ?
- Movies
40, 50, 60ರ ಸೀಕ್ರೆಟ್ ಬಿಚ್ಚಿಟ್ಟ ಕ್ರೇಜಿಸ್ಟಾರ್ ರವಿಚಂದ್ರನ್
- Education
SSLC Exams 2021: ಸಿಬಿಎಸ್ಇ ಪರೀಕ್ಷೆ ರದ್ದು ಬೆನ್ನಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ಊಹಾಪೋಹ: ಸುರೇಶ್ ಕುಮಾರ್ ಸ್ಪಷ್ಟನ
- Lifestyle
ನಿಮ್ಮ ಮಗು 10ವರ್ಷ ತಲುಪುವಾಗ ಕಲಿಸಬೇಕಾದ ಜೀವನ ಕೌಶಲ್ಯಗಳಿವು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆಕರ್ಷಕ ಬೆಲೆಗಳಲ್ಲಿ ಗರಿಷ್ಠ ಸೇವೆ ಪಡೆಯುವ ಹೊಸ ವಾರಂಟಿ ಪ್ಯಾಕೇಜ್ ಘೋಷಿಸಿದ ಹ್ಯುಂಡೈ
ದೇಶಿಯ ಮಾರುಕಟ್ಟೆಯಲ್ಲಿನ ಹೊಸ ಕಾರುಗಳ ಮಾರಾಟದಲ್ಲಿ ಸದ್ಯ ಎರಡನೇ ಸ್ಥಾನದಲ್ಲಿರುವ ಹ್ಯುಂಡೈ ಮೋಟಾರ್ಸ್ ಕಂಪನಿಯು ಹೊಸ ಕಾರುಗಳ ಮಾರಾಟದಲ್ಲಿ ಮುಂಚೂಣಿಯೊಂದಿಗೆ ಗ್ರಾಹಕರ ಸೇವೆಗಳ ಮೇಲೆ ಹೆಚ್ಚಿನ ಗಮನಹರಿಸಿದೆ.

ಹೊಸ ವಾಹನ ಖರೀದಿ ನಂತರ ನೀಡಲಾಗುವ ನಿಗದಿತ ವಾರಂಟಿ ನಂತರ ವಾಹನ ನಿರ್ವಹಣೆಯನ್ನು ಸುಲಭಗೊಳಿಸಲು ಹ್ಯುಂಡೈ ಕಂಪನಿಯು ಹೊಸದಾಗಿ ಅತಿ ಕಡಿಮೆ ವೆಚ್ಚದ ನಿರ್ವಹಣಾ ಯೋಜನೆಯ ಪ್ಯಾಕೇಜ್‌ಗಳನ್ನು ಪರಿಚಯಿಸುತ್ತಿದ್ದು, ಹೊಸ ಪ್ಯಾಕೇಜ್ ಮೂಲಕ ಹ್ಯುಂಡೈ ಕಾರು ಮಾಲೀಕರು ತಮ್ಮ ವಾಹನಗಳಿಗೆ ಗರಿಷ್ಠ ಪ್ರಮಾಣದ ಸುರಕ್ಷತೆ ಒದಗಿಸಬಹುದಾಗಿದೆ.

ಹೊಸ ನಿರ್ವಹಣಾ ಪ್ಯಾಕೇಜ್‌ನಲ್ಲಿ ಗ್ರಾಹಕರಿಗೆ ಪ್ರಮುಖ ಬಿಡಿಭಾಗಗಗಳ ಮೇಲೆ ಗರಿಷ್ಠ ಭದ್ರತೆ ನೀಡಲಿದ್ದು, ಕೆಲವು ಪ್ರಮುಖ ಬಿಡಿಭಾಗಗಳನ್ನು ನಿಯಮಿತವಾಗಿ ಬದಲಿ ಮಾಡಿಕೊಡುವ ಮೂಲಕ ಕಾರಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಲಿದೆ.

ಹ್ಯುಂಡೈ ಘೋಷಣೆ ಮಾಡಿರುವ ಶೀಲ್ದ್ ಆಫ್ ಟ್ರಸ್ಟ್ ಪ್ಯಾಕೇಜ್ ಮೂಲಕ 5 ವರ್ಷಗಳ ಕಾಲ ನಿಮ್ಮ ವಾಹನಗಳಿಗೆ ಗರಿಷ್ಠ ಭದ್ರತೆ ನೀಡಬಹುದಾಗಿದ್ದು, ಕಡಿಮೆ ವೆಚ್ಚದ ನಿರ್ವಹಣಾ ಯೋಜನೆಯಲ್ಲಿ ದೋಷಯುಕ್ತ ಭಾಗಗಳನ್ನು ಕಾಲಕಾಲಕ್ಕೆ ಬದಲಾಯಿಸಲಿದೆ.

ಹೊಸ ನಿರ್ವಹಣಾ ವೆಚ್ಚದಲ್ಲಿ ಬ್ರೇಕ್, ಕ್ಲಚ್, ವೈಪರ್, ಬಲ್ಪ್‌ಗಳು ಮತ್ತು ಸೀಟ್ ಬೆಲ್ಟ್ ಸೇರಿದಂತೆ ಒಟ್ಟು 14 ತಾಂತ್ರಿಕ ಅಂಶಗಳನ್ನು ಕಾಲಕಾಲಕ್ಕೆ ಬದಲಿಸಲಿರುವ ಹ್ಯುಂಡೈ ಕಂಪನಿಯು ಇನ್ನುಳಿದ ತಾಂತ್ರಿಕ ಅಂಶಗಳನ್ನು ಅತಿ ದರದಲ್ಲಿ ಸೇವೆಗಳನ್ನು ಒದಗಿಸಲಿದೆ. ಇದರಿಂದ ವಾಹನ ತಾಂತ್ರಿಕ ಅಂಶಗಳ ಕಾರ್ಯಕ್ಷಮತೆಗೆ ಹೆಚ್ಚು ಪ್ರಯೋಜನವಾಗಲಿದ್ದು, ಸ್ಟ್ಯಾಂಡರ್ಡ್ ವಾರಂಟಿ ಹೊರತುಪಡಿಸಿ ಶೀಲ್ದ್ ಆಫ್ ಟ್ರಸ್ಟ್ ಪ್ಯಾಕೇಜ್ ಖರೀದಿ ಮಾಡಬೇಕಾಗುತ್ತದೆ.

ಇನ್ನು ಹ್ಯುಂಡೈ ಇಂಡಿಯಾ ಹೊಸ ಗ್ರಾಹಕರನ್ನು ಆಕರ್ಷಿಸಲು ಫೆಬ್ರವರಿ ತಿಂಗಳಿನಲ್ಲಿ ಹಲವಾರು ಕೊಡುಗೆಗಳನ್ನು ನೀಡುತ್ತಿದ್ದು, ಈ ಕೊಡುಗೆಗಳ ಅಡಿಯಲ್ಲಿ ಕಂಪನಿಯು ಆಕರ್ಷಕ ರಿಯಾಯಿತಿಗಳನ್ನು ನೀಡುತ್ತಿದೆ.

ಜನಪ್ರಿಯ ಹ್ಯಾಚ್‌ಬ್ಯಾಕ್ ಕಾರು ಮಾದರಿಯಾದ ಸ್ಯಾಂಟ್ರೊ ಕಾರಿನ ಎರಾ ಮಾದರಿಯ ಮೇಲೆ ರೂ.20,000 ರಿಯಾಯಿತಿ ನೀಡಲಾಗುತ್ತಿದ್ದು, ಇತರೆ ಎಲ್ಲಾ ಕಾರು ಮಾದರಿಗಳ ಮೇಲೆ ರೂ.30,000 ನಗದು ರಿಯಾಯಿತಿ ಜೊತೆಗೆ ರೂ.15 ಸಾವಿರಗಳ ವಿನಿಮಯ ಬೋನಸ್ ಹಾಗೂ ರೂ.5 ಸಾವಿರ ಕಾರ್ಪೊರೇಟ್ ರಿಯಾಯಿತಿ ನೀಡಲಾಗುತ್ತದೆ.

ಗ್ರ್ಯಾಂಡ್ ಐ 10 ನಿಯೋಸ್ ಕಾರಿನ ಮೇಲೆ ರೂ.45 ಸಾವಿರ ನಗದು ರಿಯಾಯಿತಿ ನೀಡಲಾಗುತ್ತಿದ್ದು, ಇದರ ಜೊತೆಗೆ ಹ್ಯುಂಡೈ ಕಂಪನಿಯು ಈ ಕಾರಿನ ಇತರೆ ಎಲ್ಲಾ ಕಾರು ಮಾದರಿಗಳ ಮೇಲೂ ರೂ.15 ಸಾವಿರ ನಗದು ರಿಯಾಯಿತಿಯನ್ನು ನೀಡುತ್ತಿದೆ.

ಕಂಪ್ಯಾಕ್ಟ್ ಸೆಡಾನ್ ಔರಾ ಬಗ್ಗೆ ಹೇಳುವುದಾದರೆ ಈ ಕಾರಿನ ಮೇಲೆ ಟರ್ಬೊ ಮಾದರಿಯ ಮೇಲೆ ರೂ.50 ಸಾವಿರ ರಿಯಾಯಿತಿ ನೀಡಲಾಗುತ್ತಿದ್ದು,ಈ ಕಾರಿನ 1.2-ಲೀಟರ್ ಪೆಟ್ರೋಲ್ ಹಾಗೂ 1.2-ಲೀಟರ್ ಡೀಸೆಲ್ ಮಾದರಿಗಳ ಮೇಲೆ ರೂ.20,000ಗಳ ನಗದು ರಿಯಾಯಿತಿಯನ್ನು ನೀಡಲಾಗುತ್ತದೆ.

ಹ್ಯುಂಡೈ ಎಲಾಂಟ್ರಾ ಪೆಟ್ರೋಲ್ ಆಟೋಮ್ಯಾಟಿಕ್ ಮಾದರಿಗಳ ಮೇಲೆ ರೂ.30 ಸಾವಿರ ಹಾಗೂ ಪೆಟ್ರೋಲ್ ಮ್ಯಾನುಯಲ್ ಮಾದರಿಗಳ ಮೇಲೆ ರೂ.70 ಸಾವಿರ ರಿಯಾಯಿತಿ ನೀಡಲಾಗುತ್ತಿದ್ದು, ಕೋನಾ ಇವಿ ಕಾರಿನ ಮೇಲೆ ರೂ.50 ಸಾವಿರ ನಗದು ರಿಯಾಯಿತಿ ನೀಡಲಾಗುತ್ತದೆ.