ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಿದ ಹ್ಯುಂಡೈ ಮೋಟಾರ್ಸ್

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಇಂಡಿಯಾ ಹೊಸ ಗ್ರಾಹಕರನ್ನು ಆಕರ್ಷಿಸಲು ಎಪ್ರಿಲ್ ತಿಂಗಳಿನಲ್ಲಿ ಹಲವಾರು ಆಫರ್‌ಗಳನ್ನು ಘೋಷಿಸಿದ್ದು, ಹೊಸ ಆಫರ್‌ಗಳಲ್ಲಿ ಪ್ರಮುಖ ಕಾರುಗಳ ಖರೀದಿಯೊಂದಿಗೆ ಗರಿಷ್ಠ ಉಳಿತಾಯ ಮಾಡಬಹುದಾಗಿದೆ.

ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಿದ ಹ್ಯುಂಡೈ ಮೋಟಾರ್ಸ್

ಹೊಸ ವಾಹನಗಳ ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಳ್ಳುತ್ತಿರುವ ವಿವಿಧ ವಾಹನ ಉತ್ಪಾದನಾ ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು ಹೆಚ್ಚಿನ ಮಟ್ಟದ ಆಫರ್‌ಗಳನ್ನು ಮುಂದುವರಿಸಿದ್ದು, ಹ್ಯುಂಡೈ ಇಂಡಿಯಾ ಕಂಪನಿಯು ಕೂಡಾ ಕೊನಾ ಇವಿ ಸೇರಿದಂತೆ ವಿವಿಧ ಕಾರು ಮಾದರಿಗಳ ಮೇಲೆ ಎಪ್ರಿಲ್ ಅವಧಿಗಾಗಿ ಆಕರ್ಷಕ ಡಿಸ್ಕೌಂಟ್ ಆಫರ್ ನೀಡುತ್ತಿದೆ. ಹೊಸ ಆಫರ್‌ಗಳು ಈ ತಿಂಗಳಾಂತ್ಯದ ತನಕ ಲಭ್ಯವಿರಲಿದ್ದು, ಕೊನಾ ಇವಿ ಮೇಲೆ ಗರಿಷ್ಠಉಳಿತಾಯ ಮಾಡಬಹುದು.

ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಿದ ಹ್ಯುಂಡೈ ಮೋಟಾರ್ಸ್

ಹೊಸ ಆಫರ್‌ಗಳಲ್ಲಿ ಸ್ಯಾಂಟ್ರೋ ಆವೃತ್ತಿಯ ಮೇಲೆ ರೂ.15 ಸಾವಿರ ಆಫರ್ ನೀಡುತ್ತಿದ್ದು, ಗ್ರಾಂಡ್ ಐ10 ನಿಯೋಸ್ ಹ್ಯಾಚ್‌ಬ್ಯಾಕ್ ಆವೃತ್ತಿಯ ಮೇಲೆ ಗರಿಷ್ಠ ರೂ. 45 ಸಾವಿರ ತನಕ ಉಳಿತಾಯಕ್ಕೆ ಅವಕಾಶ ನೀಡಿದೆ.

ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಿದ ಹ್ಯುಂಡೈ ಮೋಟಾರ್ಸ್

ಐ20 ಹ್ಯಾಚ್‌ಬ್ಯಾಕ್ ಆವೃತ್ತಿ ಮತ್ತು ಔರಾ ಕಂಪ್ಯಾಕ್ಟ್ ಸೆಡಾನ್ ಮಾದರಿ ಮೇಲೆ ತಲಾ ರೂ.15 ಸಾವಿರ ತನಕ ಉಳಿತಾಯಕ್ಕೆ ಅವಕಾಶ ನೀಡಿದ್ದು, ಎಲೆಕ್ಟ್ರಿಕ್ ಕಾರು ಮಾದರಿಯಾದ ಕೊನಾ ಇವಿ ಖರೀದಿ ಮೇಲೆ ಹ್ಯುಂಡೈ ಕಂಪನಿಯು ಗರಿಷ್ಠ ರೂ. 1.50 ಲಕ್ಷದವರೆಗೆ ಉಳಿತಾಯ ಮಾಡುವ ಅವಕಾಶ ನೀಡಿದೆ.

ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಿದ ಹ್ಯುಂಡೈ ಮೋಟಾರ್ಸ್

ಹ್ಯುಂಡೈ ಕಂಪನಿಯು ಸಾಮಾನ್ಯ ಆಫರ್‌ಗಳನ್ನು ಹೊರತುಪಡಿಸಿ ಆಯ್ದ ಗ್ರಾಹಕರಿಗೆ ಇನ್ನು ಹೆಚ್ಚಿನ ಮಟ್ಟದ ಉಳಿತಾಯಕ್ಕೆ ಅವಕಾಶ ನೀಡಲಾಗಿದ್ದು, ಹ್ಯುಂಡೈ ಕಂಪನಿಯು ಸರ್ಕಾರಿ ನೌಕರಿಗಾಗಿ ರೂ. 8 ಸಾವಿರ ಹೆಚ್ಚುವರಿ ಕೊಡುಗೆಗೆಳನ್ನು ನೀಡುತ್ತಿದೆ. ಹೊಸ ಆಫರ್‌ನಲ್ಲಿ ವೈದ್ಯರು, ಕಾರ್ಪೊರೇಟ್ ಉದ್ಯೋಗಿಗಳಿಗೆ ಮತ್ತು ಶಿಕ್ಷಕರಿಗೆ ಹೆಚ್ಚಿನ ಆಫರ್‌ಗಳಿಗೆ ಲಭ್ಯವಿದ್ದು, ಹೊಸ ಆಫರ್‌ಗಳು ಈ ತಿಂಗಳಾಂತ್ಯವರೆಗೆ ಲಭ್ಯವಿರಲಿವೆ.

ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಿದ ಹ್ಯುಂಡೈ ಮೋಟಾರ್ಸ್

ಇನ್ನು ದೇಶದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಮೋಟಾರ್ಸ್ ಮಾರ್ಚ್ ತಿಂಗಳಿನಲ್ಲಿನ ತನ್ನ ಕಾರು ಮಾರಾಟದ ವರದಿಯನ್ನು ಪ್ರಕಟಿಸಿದ್ದು, ಕಳೆದ ತಿಂಗಳ ಕಾರು ಮಾರಾಟದಲ್ಲಿ ಶೇ.100 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಿದ ಹ್ಯುಂಡೈ ಮೋಟಾರ್ಸ್

2021ರ ಮಾರ್ಚ್ ಅವಧಿಯಲ್ಲಿ ಹ್ಯುಂಡೈ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಒಟ್ಟು 52,600 ಯುನಿಟ್‌ಗಳನ್ನು ಮಾರಾಟಗೊಳಿಸಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 26,300 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಕಳೆದ ವರ್ಷದ ಮಾರ್ಚ್ ಅವಧಿಯಲ್ಲಿನ ಕಾರು ಮಾರಾಟಕ್ಕಿಂತಲೂ ಈ ವರ್ಷದ ಮಾರ್ಚ್ ಅವಧಿಯಲ್ಲಿ ಬರೋಬ್ಬರಿ ಶೇ.100 ರಷ್ಟು ರಷ್ಟು ಬೆಳವಣಿಗೆ ಸಾಧಿಸಿರುವ ಹ್ಯುಂಡೈ ಕಂಪನಿಯು ಸಾಕಷ್ಟು ಮುನ್ನಡೆ ಕಾಯ್ದುಕೊಂಡಿದೆ.

ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಿದ ಹ್ಯುಂಡೈ ಮೋಟಾರ್ಸ್

ಕಳೆದ ವರ್ಷದ ಮಾರ್ಚ್ ಕೊನೆಯಲ್ಲಿ ಲಾಕ್‌ಡೌನ್ ವಿಧಿಸಿದ ಪರಿಣಾಮ ಕಾರು ಮಾರಾಟ ಸ್ಥಗಿತಗೊಳಿಸಿದ್ದ ಕಾರು ಕಂಪನಿಗಳು ಲಾಕ್‌ಡೌನ್ ನಂತರ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹ್ಯುಂಡೈ ಕಂಪನಿಯು ಕಳೆದ ಕೆಲ ತಿಂಗಳಿನಿಂದ ಹೊಸ ಕಾರು ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಂಡಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಿದ ಹ್ಯುಂಡೈ ಮೋಟಾರ್ಸ್

ಹೊಸ ತಲೆಮಾರಿನ ಕ್ರೆಟಾ, ವೆನ್ಯೂ ಮತ್ತು ಐ20 ಕಾರು ಮಾದರಿಗಳು ಹ್ಯುಂಡೈ ಕಾರು ಮಾರಾಟ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಹೊಸ ಕಾರುಗಳು ಹ್ಯುಂಡೈ ಕಾರು ಮಾರಾಟದಲ್ಲಿ ಮತ್ತಷ್ಟು ಮುಂಚೂಣಿ ಸಾಧಿಸುವ ತವಕದಲ್ಲಿವೆ.

Article Published On: Friday, April 16, 2021, 23:07 [IST]
English summary
Hyundai India Offers For April On Santro, Grand i10, Kona EV, i20. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+