2020ರ ಡಿಸೆಂಬರ್ ತಿಂಗಳ ಕಾರು ಮಾರಾಟದಲ್ಲಿ ಭರ್ಜರಿ ಬೆಳವಣಿಗೆ ಸಾಧಿಸಿದ ಹ್ಯುಂಡೈ
ದೇಶದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಹ್ಯುಂಡೈ 2020ರ ಡಿಸೆಂಬರ್ ತಿಂಗಳ ತನ್ನ ಕಾರು ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ಹ್ಯುಂಡೈ ಇಂಡಿಯಾ ಕಂಪನಿಯು ಕಳೆದ ತಿಂಗಳ ವಾರ್ಷಿಕ ಕಾರು ಮಾರಾಟದಲ್ಲಿ ಶೇ.24.89 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

2020ರ ಡಿಸೆಂಬರ್ ತಿಂಗಳಿನಲ್ಲಿ ಹ್ಯುಂಡೈ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ 47,400 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಇನ್ನು 2019ರ ಡಿಸೆಂಬರ್ ತಿಂಗಳಿನಲ್ಲಿ ಹ್ಯುಂಡೈ ಕಂಪನಿಯು ಭಾರತದಲ್ಲಿ 37,953 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇನ್ನು ಹ್ಯುಂಡೈ ಕಂಪನಿಯು ರಫ್ತಿನಲ್ಲಿಯು ಉತ್ತಮ ಬೆಳವಣಿಗೆಯನ್ನು ಗಳಿಸಿದೆ.

ಕಳೆದ ತಿಂಗಳು ಹ್ಯುಂಡೈ ಕಂಪನಿಯು 19,350 ಯುನಿಟ್‌ಗಳನ್ನು ರಫ್ತು ಮಾಡಿದೆ. ಇನ್ನು 2019ರ ಡಿಸೆಂಬರ್‌ನಲ್ಲಿ ಹ್ಯುಂಡೈ ಕಂಪನಿಯು 12,182 ಯುನಿಟ್‌ಗಳನ್ನು ರಫ್ತು ಮಾಡಲಾಗಿತ್ತು. ಇದನ್ನು ಕಳೆದ ತಿಂಗಳ ರಫ್ತಿಗೆ ಹೋಲಿಸಿದರೆ ಶೇ.58.84 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.
MOST READ: ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳಿವು

ಹ್ಯುಂಡೈ ಮೋಟರ್ ಇಂಡಿಯಾ ಲಿಮಿಟೆಡ್‌ನ ಎಂಡಿ ಮತ್ತು ಸಿಇಒ ಎಸ್ ಎಸ್ ಕಿಮ್ ಅವರು ಮಾತನಾಡಿ, ವಿಶ್ವವು 2020ರಲ್ಲಿ ಅನೇಕ ಸವಾಲುಗಳನ್ನು ಕಂಡಿದೆ. ಆದರೆ ಜನಪ್ರಿಯ ಬ್ರ್ಯಾಂಡ್ ಆದ ಹ್ಯುಂಡೈ ಈ ಬಿಕ್ಕಟ್ಟಿನಿಂದ ಪ್ರಬಲವಾಗಿ ಹೊರಹೊಮ್ಮಿದೆ ಮತ್ತು ಆರ್ಥಿಕ ಪುನರುಜ್ಜೀವನಕ್ಕೆ ದಾರಿ ಮಾಡಿಕೊಟ್ಟಿದೆ.

ಹ್ಯುಂಡೈ ಇಂಡಿಯಾ ಕ್ಲಿಕ್-ಟು-ಬೈ ಮತ್ತು ಹ್ಯುಂಡೈ ಮೊಬಿಲಿಟಿ ಮೆಂಬರ್‌ಶಿಪ್‌ನಂತಹ ನವೀನ ಕಾರ್ಯಕ್ರಮಗಳನ್ನು ಪರಿಚಯಿಸಿದ್ದೇವೆ. ಸತತವಾಗಿ ಎರಡನೇ ವರ್ಷ ಮಾರುಕಟ್ಟೆ ಪಾಲನ್ನು ಹೆಚ್ಚಿಸಿದೇವೆ ಎಂದು ಅವರು ಹೇಳಿದರು.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಕಳೆದ ವರ್ಷ ಹ್ಯುಂಡೈ ಕಂಪನಿಯು ಭಾರತದಲ್ಲಿ ಒಟ್ಟು 5,22,542 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಇನ್ನು 2020ರ ಡಿಸೆಂಬರ್ ತಿಂಗಳಲ್ಲಿ 71,178 ಯುನಿಟ್‌ಗಳೊಂದಿಗೆ ಕಂಪನಿಯು ಅತ್ಯಧಿಕ ಉತ್ಪಾದನೆಯ ಹೊಸ ಮೈಲಿಗಲ್ಲನ್ನು ಸಾಧಿಸಿದೆ.

ಇನ್ನು ನ್ಯೂ ಜನರೇಷನ್ ಹ್ಯುಂಡೈ ಐ20 ಕಾರು ಬುಕ್ಕಿಂಗ್ ನಲ್ಲಿ 35,000 ಗಡಿ ತಲುಪಿದೆ. ಹೊಸ ಹ್ಯುಂಡೈ ಐ20 ಕಾರು ದಾಖಲೆಯ ಮಟ್ಟದ ಬುಕ್ಕಿಂಗ್ ಅನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಹೊಸ ಹ್ಯುಂಡೈ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟದಲ್ಲಿ ಹೊಸ ಸಂಚಲವನ್ನು ಮೂಡಿಸಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ಹ್ಯುಂಡೈ ಐ20 ಕಾರು ಮೂರು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ 1.2ಎಲ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 83 ಬಿಹೆಚ್‌ಪಿ ಪವರ್ ಮತ್ತು 114 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ 1.0ಎಲ್ ಟರ್ಬೊ ಪೆಟ್ರೋಲ್ ಎಂಜಿನ್ ಮತ್ತು 1.5ಎಲ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿಯು ಕೂಡ ಲಭ್ಯವಿದೆ.

ಕಾರು ಮಾರಾಟದಲ್ಲಿ ಹ್ಯುಂಡೈ ಕಾರುಗಳು ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದೆ. ಹ್ಯುಂಡೈ ಕಂಪನಿಯ ಸರಣಿಯಲ್ಲಿ ನ್ಯೂ ಜನರೇಷನ್ ಕ್ರೆಟಾ ಮತ್ತು ಐ20 ಕಾರುಗಳು ದಾಖಲೆಯ ಮಟ್ಟದಲ್ಲಿ ಮಾರಾಟವಾಗುತ್ತಿದೆ. ಈ ಎರಡು ಮಾದರಿಗಳು ಮಾರಾಟದಲ್ಲಿ ಹ್ಯುಂಡೈ ಇಂಡಿಯಾ ಕಂಪನಿಗೆ ದೊಡ್ಡ ಕೊಡುಗೆಯನ್ನು ನೀಡುತ್ತಿದೆ.


Click it and Unblock the Notifications