ಮೇ ತಿಂಗಳಿನಲ್ಲಿ ಏರಿಕೆ ಕಂಡ ಹ್ಯುಂಡೈ ಕಾರು ಮಾರಾಟ

ಭಾರತದ ಖ್ಯಾತ ಕಾರು ತಯಾರಕ ಕಂಪನಿಗಳಲ್ಲಿ ಒಂದಾದ ಹ್ಯುಂಡೈ ಮೋಟರ್ ಇಂಡಿಯಾ ತನ್ನ ಮೇ ತಿಂಗಳ ಮಾರಾಟ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿದೆ. ಕಂಪನಿಯು ಬಿಡುಗಡೆ ಮಾಡಿರುವ ಮಾಹಿತಿಗಳ ಪ್ರಕಾರ 2021ರ ಮೇ ತಿಂಗಳಿನಲ್ಲಿ ಹ್ಯುಂಡೈ ಮೋಟಾರ್ ದೇಶೀಯ ಮಾರುಕಟ್ಟೆಯಲ್ಲಿ ಒಟ್ಟು 25,001 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಮೇ ತಿಂಗಳಿನಲ್ಲಿ ಏರಿಕೆ ಕಂಡ ಹ್ಯುಂಡೈ ಕಾರು ಮಾರಾಟ

2020ರ ಮೇ ತಿಂಗಳಿಗೆ ಹೋಲಿಸಿದರೆ ಕಂಪನಿಯು ಈ ವರ್ಷದ ಮೇ ತಿಂಗಳಲ್ಲಿ 263%ನಷ್ಟು ಹೆಚ್ಚು ಬೆಳವಣಿಗೆಯನ್ನು ದಾಖಲಿಸಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಹ್ಯುಂಡೈ ಮೋಟಾರ್ ಇಂಡಿಯಾ ದೇಶಿಯ ಮಾರುಕಟ್ಟೆಯಲ್ಲಿ 6,883 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. 2021ರ ಮೇ ತಿಂಗಳ ಮಾರಾಟವು 2021ರ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ 49%ನಷ್ಟು ಕುಸಿದಿದೆ.

ಮೇ ತಿಂಗಳಿನಲ್ಲಿ ಏರಿಕೆ ಕಂಡ ಹ್ಯುಂಡೈ ಕಾರು ಮಾರಾಟ

ಹ್ಯುಂಡೈ ಮೋಟರ್ ಇಂಡಿಯಾ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, 2021ರ ಏಪ್ರಿಲ್ ತಿಂಗಳಿನಲ್ಲಿ ಕಂಪನಿಯು ಒಟ್ಟು 49,002 ಯುನಿಟ್ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದೆ.

MOST READ: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಮೇ ತಿಂಗಳಿನಲ್ಲಿ ಏರಿಕೆ ಕಂಡ ಹ್ಯುಂಡೈ ಕಾರು ಮಾರಾಟ

ದಕ್ಷಿಣ ಕೊರಿಯಾ ಮೂಲದ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಭಾರತದಿಂದ ಮಾಡಿರುವ ರಫ್ತು ಪ್ರಮಾಣದಲ್ಲಿ ಯಾವುದೇ ಮಹತ್ವದ ವ್ಯತ್ಯಾಸಗಳಾಗಿಲ್ಲ. 2020ರ ಮೇ ತಿಂಗಳಲ್ಲಿ ಹ್ಯುಂಡೈ ಕಂಪನಿಯು 5,700 ಯುನಿಟ್ ಕಾರುಗಳನ್ನು ಭಾರತದಿಂದ ರಫ್ತು ಮಾಡಿತ್ತು.

ಮೇ ತಿಂಗಳಿನಲ್ಲಿ ಏರಿಕೆ ಕಂಡ ಹ್ಯುಂಡೈ ಕಾರು ಮಾರಾಟ

ಕಂಪನಿಯು ಈ ವರ್ಷದ ಮೇ ತಿಂಗಳಲ್ಲಿ ಒಟ್ಟು 5,702 ಯುನಿಟ್ ಕಾರುಗಳನ್ನು ರಫ್ತು ಮಾಡಿದೆ. ಈ ವರ್ಷದ ರಫ್ತು ಪ್ರಮಾಣದಲ್ಲಿ ಕೇವಲ ಎರಡು ಯುನಿಟ್‌ಗಳ ಹೆಚ್ಚಳ ಕಂಡುಬಂದಿದೆ.

MOST READ: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಮೇ ತಿಂಗಳಿನಲ್ಲಿ ಏರಿಕೆ ಕಂಡ ಹ್ಯುಂಡೈ ಕಾರು ಮಾರಾಟ

ಹ್ಯುಂಡೈ ಕಂಪನಿಯ ದೇಶಿಯ ಮಾರುಕಟ್ಟೆ ಹಾಗೂ ರಫ್ತು ಬಗ್ಗೆ ಹೇಳುವುದಾದರೆ, ಕಂಪನಿಯು ಕಳೆದ ತಿಂಗಳು ಒಟ್ಟಾರೆಯಾಗಿ 30,703 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಕಂಪನಿಯು ದೇಶಿಯ ಮಾರುಕಟ್ಟೆ ಹಾಗೂ ವಿದೇಶಿ ಮಾರುಕಟ್ಟೆಗಳಲ್ಲಿ ಒಟ್ಟು 12,583 ಯುನಿಟ್ ಕಾರುಗಳನ್ನು ಮಾರಾಟ ಮಾಡಿತ್ತು.

ಮೇ ತಿಂಗಳಿನಲ್ಲಿ ಏರಿಕೆ ಕಂಡ ಹ್ಯುಂಡೈ ಕಾರು ಮಾರಾಟ

ಈ ವರ್ಷದ ಮೇ ತಿಂಗಳಿನಲ್ಲಿ ಕಂಪನಿಯ ಒಟ್ಟಾರೆ ಮಾರಾಟದಲ್ಲಿ 144%ನಷ್ಟು ಹೆಚ್ಚಳವಾಗಿದೆ. ಹ್ಯುಂಡೈ ಮೋಟಾರ್ ಇಂಡಿಯಾ ತನ್ನ ಹೊಸ 7/6 ಸೀಟುಗಳ ಎಸ್‌ಯುವಿಯಾದ ಅಲ್ಕಾಜಾರ್ ಅನ್ನು ಜೂನ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

MOST READ: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಮೇ ತಿಂಗಳಿನಲ್ಲಿ ಏರಿಕೆ ಕಂಡ ಹ್ಯುಂಡೈ ಕಾರು ಮಾರಾಟ

ಈ ಎಸ್‌ಯುವಿಯು ಆರಾಮದಾಯಕವಾದ ಪ್ರೀಮಿಯಂ ಅನುಭವವನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಹ್ಯುಂಡೈ ಕಂಪನಿಯು ಈ ಯೋಜನೆಗಾಗಿ 3 ಲಕ್ಷ ಗಂಟೆಗಳನ್ನು ವ್ಯಯಿಸಿದೆ.

ಮೇ ತಿಂಗಳಿನಲ್ಲಿ ಏರಿಕೆ ಕಂಡ ಹ್ಯುಂಡೈ ಕಾರು ಮಾರಾಟ

ಹ್ಯುಂಡೈ ಅಲ್ಕಾಜರ್ ಎಸ್‌ಯುವಿಯನ್ನು ಕಂಪನಿಯು 6 ಸೀಟು ಹಾಗೂ 7 ಸೀಟುಗಳ ಸಂರಚನೆಯೊಂದಿಗೆ ಬಿಡುಗಡೆಗೊಳಿಸಲಿದೆ. ಕಂಪನಿಯು ಈ ಎಸ್‌ಯುವಿಯನ್ನು ಎರಡು ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಿದೆ.

MOST READ: ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಮೇ ತಿಂಗಳಿನಲ್ಲಿ ಏರಿಕೆ ಕಂಡ ಹ್ಯುಂಡೈ ಕಾರು ಮಾರಾಟ

ಇವುಗಳಲ್ಲಿ 2.0 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್'ಗಳು ಸೇರಿವೆ. 2.0 ಲೀಟರ್ ಪೆಟ್ರೋಲ್ ಎಂಜಿನ್ 159 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

ಮೇ ತಿಂಗಳಿನಲ್ಲಿ ಏರಿಕೆ ಕಂಡ ಹ್ಯುಂಡೈ ಕಾರು ಮಾರಾಟ

ಇನ್ನು 1.5 ಲೀಟರ್ ಡೀಸೆಲ್ ಎಂಜಿನ್ 115 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಈ 2.0 ಲೀಟರ್, ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹ್ಯುಂಡೈ ಕಂಪನಿಯು ತನ್ನ ಎಲಾಂಟ್ರಾ ಹಾಗೂ ಟಕ್ಸನ್‌ ಕಾರುಗಳಲ್ಲಿ ಬಳಸುತ್ತಿದೆ.

MOST READ: ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಮೇ ತಿಂಗಳಿನಲ್ಲಿ ಏರಿಕೆ ಕಂಡ ಹ್ಯುಂಡೈ ಕಾರು ಮಾರಾಟ

ಈ ಎರಡೂ ಎಂಜಿನ್‌ಗಳನ್ನು ಸ್ಟ್ಯಾಂಡರ್ಡ್ 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗುವುದು. ಜೊತೆಗೆ 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಅನ್ನು ಆಟೋಮ್ಯಾಟಿಕ್ ಆಗಿ ನೀಡಲಾಗುವುದು.

Most Read Articles

Kannada
English summary
Hyundai car sales increased in May 2021. Read in Kannada.
Story first published: Tuesday, June 1, 2021, 19:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X