ಹ್ಯುಂಡೈ ವಿವಿಧ ಕಾರುಗಳ ಬೆಲೆಯಲ್ಲಿ ಗರಿಷ್ಠ ರೂ.45 ಸಾವಿರ ತನಕ ಹೆಚ್ಚಳ

ಉತ್ಪಾದನಾ ವೆಚ್ಚಗಳ ನಿರ್ವಹಣೆಗಾಗಿ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳು ತಮ್ಮ ವಿವಿಧ ವಾಹನ ಮಾದರಿಗಳ ಬೆಲೆಯನ್ನು ಹೆಚ್ಚಿಸುತ್ತಿದ್ದು, ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಪ್ರಮುಖ ಕಾರುಗಳ ಬೆಲೆ ಹೆಚ್ಚಳ ಮಾಡಿದೆ.

ಹ್ಯುಂಡೈ ವಿವಿಧ ಕಾರುಗಳ ಬೆಲೆಯಲ್ಲಿ ಗರಿಷ್ಠ ರೂ.45 ಸಾವಿರ ತನಕ ಹೆಚ್ಚಳ

ಹೊಸ ವಾಹನಗಳ ಬಿಡಿಭಾಗಗಳ ಬೆಲೆಯಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳು ಬೆಲೆ ಹೆಚ್ಚಳಕ್ಕಾಗಿ ನಿರ್ಧರಿಸಿದ್ದು, ಹ್ಯುಂಡೈ ಮೋಟಾರ್ಸ್ ಕೂಡಾ ತನ್ನ ಪ್ರಮುಖ ಕಾರುಗಳ ಬೆಲೆಯನ್ನು ಶೇ. 1 ರಿಂದ ಶೇ. 3 ರಷ್ಟು ಬೆಲೆ ಹೆಚ್ಚಿಸಿದೆ. ಹೊಸ ದರ ಪಟ್ಟಿ ಪ್ರಕಟದ ನಂತರ ವಿವಿಧ ಕಾರುಗಳ ಬೆಲೆಯು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಕನಿಷ್ಠ ರೂ. 600ರಿಂದ ಗರಿಷ್ಠ ರೂ. 45 ಸಾವಿರ ತನಕ ಬೆಲೆ ಹೆಚ್ಚಳ ಮಾಡಲಾಗಿದೆ.

ಹ್ಯುಂಡೈ ವಿವಿಧ ಕಾರುಗಳ ಬೆಲೆಯಲ್ಲಿ ಗರಿಷ್ಠ ರೂ.45 ಸಾವಿರ ತನಕ ಹೆಚ್ಚಳ

ಪರಿಸ್ಕೃತ ದರ ಪಟ್ಟಿಯಲ್ಲಿ ಕಂಪನಿಯ ಎಂಟ್ರಿ ಲೆವಲ್ ಕಾರು ಮಾದರಿಯಾದ ಸ್ಯಾಂಟ್ರೋ ಕಾರು ರೂ.600ರಿಂದ ರೂ. 4,900 ಬೆಲೆ ಹೆಚ್ಚಳ ಪಡೆದುಕೊಂಡರೆ, ಟಾಪ್ ಎಂಡ್ ಕಾರು ಮಾದರಿಯಾದ ಎಲಾಂಟ್ರಾ ಸೆಡಾನ್ ಕಾರು ಮಾದರಿಯು ರೂ. 15 ಸಾವಿರದಿಂದ ರೂ. 45 ಸಾವಿರ ಬೆಲೆ ಹೆಚ್ಚಳ ಪಡೆದುಕೊಂಡಿದೆ.

ಹ್ಯುಂಡೈ ವಿವಿಧ ಕಾರುಗಳ ಬೆಲೆಯಲ್ಲಿ ಗರಿಷ್ಠ ರೂ.45 ಸಾವಿರ ತನಕ ಹೆಚ್ಚಳ

ಹ್ಯುಂಡೈ ನಿರ್ಮಾಣದ ಕ್ರೆಟಾ ಕಂಪ್ಯಾಕ್ಟ್ ಎಸ್‌ಯವಿ ಮಾದರಿಯು ಕೂಡಾ ಬೆಲೆ ಹೆಚ್ಚಳದೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಬೆಲೆಯು ರೂ. 9.81 ಲಕ್ಷದಿಂದ ರೂ. 9.99 ಲಕ್ಷಕ್ಕೆ ಏರಿಕೆಯಾಗಿದ್ದು, ಟಾಪ್ ಎಂಡ್ ಕಾರಿನ ಬೆಲೆಯು ರೂ.17.33 ಲಕ್ಷದಿಂದ ರೂ.17.53 ಲಕ್ಷಕ್ಕೆ ಏರಿಕೆಯಾಗಿದೆ.

ಹ್ಯುಂಡೈ ವಿವಿಧ ಕಾರುಗಳ ಬೆಲೆಯಲ್ಲಿ ಗರಿಷ್ಠ ರೂ.45 ಸಾವಿರ ತನಕ ಹೆಚ್ಚಳ

ಹ್ಯುಂಡೈ ಮೋಟಾರ್ಸ್ ಕಂಪನಿಯು ಹೊಸ ದರಗಳನ್ನು ಇಂದಿನಿಂದಲೇ ಅನ್ವಯವಾಗುವಂತೆ ಅಧಿಕೃತವಾಗಿ ಜಾರಿಗೊಳಿಸಿದ್ದು, ಇತ್ತೀಚೆಗೆ ಬಿಡುಗಡೆಗೊಳಿಸಲಾದ ನ್ಯೂ ಜನರೇಷನ್ ಐ20 ಮಾದರಿಯ ಬೆಲೆಯಲ್ಲಿ ಯಾವುದೇ ಹೆಚ್ಚಳ ಮಾಡಲಾಗಿಲ್ಲ. ಇನ್ನು ದರಪಟ್ಟಿಯಲ್ಲಿ ಗ್ರಾಂಡ್ ಐ10 ನಿಯೊಸ್, ಔರಾ, ವೆನ್ಯೂ, ವೆರ್ನಾ, ಟ್ಯುಸಾನ್ ಕಾರುಗಳು ಸಹ ಬೆಲೆ ಏರಿಕೆ ಪಡೆದುಕೊಂಡಿದ್ದು, ವೆರಿಯೆಂಟ್‌ಗಳಿಗೆ ಅನುಗುಣವಾಗಿ ಬೆಲೆ ಹೆಚ್ಚಳವಾಗಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಹ್ಯುಂಡೈ ವಿವಿಧ ಕಾರುಗಳ ಬೆಲೆಯಲ್ಲಿ ಗರಿಷ್ಠ ರೂ.45 ಸಾವಿರ ತನಕ ಹೆಚ್ಚಳ

ಹ್ಯುಂಡೈ ಕಂಪನಿಯ ಬೆಲೆ ಹೆಚ್ಚಳ ಮುನ್ನ ಈಗಾಗಗಲೇ ಪ್ರಮುಖ ಕಾರು ಕಂಪನಿಗಳು ಹೊಸ ದರ ಬಿಡುಗಡೆ ಮಾಡಿದ್ದು, ಶೇ. 1ರಿಂದ ಶೇ.2 ರಷ್ಟು ಬೆಲೆ ಹೆಚ್ಚಿಸಲಾಗಿದೆ. ಇದೀಗ ಹ್ಯುಂಡೈ ಹೊಸ ದರ ಪಟ್ಟಿ ಬಿಡುಗಡೆಗೊಳಿಸಿದ್ದು, ಹೊಸ ದರಪಟ್ಟಿ ಹೀಗಿದೆ.

ಕಾರು ಮಾದರಿ ಹಳೆಯ ದರ ಹೊಸ ದರ ಹೆಚ್ಚಳವಾದ ದರ
ಸ್ಯಾಂಟ್ರೊ ರೂ. 4.63 ಲಕ್ಷದಿಂದ ರೂ. 6.31 ಲಕ್ಷ ರೂ. 4.67 ಲಕ್ಷದಿಂದ ರೂ. 6.53 ಲಕ್ಷ ರೂ. 600 ರಿಂದ ರೂ. 4,900
ಗ್ರಾಂಡ್ ಐ10 ನಿಯೊಸ್ ರೂ. 5.12 ಲಕ್ಷದಿಂದ ರೂ. 8.35 ಲಕ್ಷ ರೂ. 5.19 ಲಕ್ಷದಿಂದ ರೂ. 8.41 ಲಕ್ಷ ರೂ. 2,900 ರಿಂದ ರೂ. 7,390
ಔರಾ ರೂ. 5.85 ಲಕ್ಷದಿಂದ ರೂ. 9.28 ಲಕ್ಷ ರೂ. 5.92 ಲಕ್ಷದಿಂದ ರೂ. 9.32 ಲಕ್ಷ ರೂ. 2,200 ರಿಂದ ರೂ. 9,800
ವೆನ್ಯೂ ರೂ. 6.75 ಲಕ್ಷದಿಂದ ರೂ. 11.65 ಲಕ್ಷ ರೂ. 6.86 ಲಕ್ಷದಿಂದ ರೂ. 11.67 ಲಕ್ಷ ರೂ. 1,760 ರಿಂದ ರೂ. 12,400
ವೆರ್ನಾ ರೂ. 9.02 ಲಕ್ಷದಿಂದ ರೂ. 15.17 ಲಕ್ಷ ರೂ. 9.11 ಲಕ್ಷದಿಂದ ರೂ. 15.20 ಲಕ್ಷ ರೂ. 2,700 ರಿಂದ ರೂ. 12,100
ಕ್ರೆಟಾ ರೂ. 9.81 ಲಕ್ಷದಿಂದ ರೂ. 17.31 ಲಕ್ಷ ರೂ. 9.11 ಲಕ್ಷದಿಂದ ರೂ. 15.20 ಲಕ್ಷ ರೂ. 17 ಸಾವಿರದಿಂದ ರೂ. 31 ಸಾವಿರ
ಎಲಾಂಟ್ರಾ ರೂ. 17.60 ಲಕ್ಷದಿಂದ ರೂ. 20.65 ಲಕ್ಷ ರೂ. 9.11 ಲಕ್ಷದಿಂದ ರೂ. 15.20 ಲಕ್ಷ ರೂ. 15 ಸಾವಿರದಿಂದ ರೂ. 45 ಸಾವಿರ
ಟ್ಯುಸಾನ್ ರೂ. 22.30 ಲಕ್ಷದಿಂದ ರೂ. 27.03 ಲಕ್ಷ ರೂ. 22.55 ಲಕ್ಷದಿಂದ ರೂ. 27.33 ಲಕ್ಷ ರೂ. 31 ಸಾವಿರದಿಂದ ರೂ. 39 ಸಾವಿರ
ಹ್ಯುಂಡೈ ವಿವಿಧ ಕಾರುಗಳ ಬೆಲೆಯಲ್ಲಿ ಗರಿಷ್ಠ ರೂ.45 ಸಾವಿರ ತನಕ ಹೆಚ್ಚಳ

ಇನ್ನು ಹ್ಯುಂಡೈ ಕಂಪನಿಯು ವಿವಿಧ ಹೊಸ ಕಾರು ಮಾದರಿಗಳೊಂದಿಗೆ ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಹ್ಯುಂಡೈ ಇಂಡಿಯಾ ಕಂಪನಿಯು ಕಳೆದ ತಿಂಗಳು ವಾರ್ಷಿಕ ಕಾರು ಮಾರಾಟದಲ್ಲಿ ಶೇ. 24.89ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಹ್ಯುಂಡೈ ವಿವಿಧ ಕಾರುಗಳ ಬೆಲೆಯಲ್ಲಿ ಗರಿಷ್ಠ ರೂ.45 ಸಾವಿರ ತನಕ ಹೆಚ್ಚಳ

2020ರ ಡಿಸೆಂಬರ್ ತಿಂಗಳಿನಲ್ಲಿ ಹ್ಯುಂಡೈ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಒಟ್ಟು 47,400 ಯುನಿಟ್‌ಗಳನ್ನು ಮಾರಾಟಗೊಳಿಸಿದ್ದು, 2019ರ ಡಿಸೆಂಬರ್ ತಿಂಗಳಿನಲ್ಲಿ ಹ್ಯುಂಡೈ ಕಂಪನಿಯು ಭಾರತದಲ್ಲಿ ಕೇವಲ 37,953 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು.

MOST READ: ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ಸ್ ಪಡೆದುಕೊಂಡ ನಿಸ್ಸಾನ್ ಮ್ಯಾಗ್ನೈಟ್

ಹ್ಯುಂಡೈ ವಿವಿಧ ಕಾರುಗಳ ಬೆಲೆಯಲ್ಲಿ ಗರಿಷ್ಠ ರೂ.45 ಸಾವಿರ ತನಕ ಹೆಚ್ಚಳ

ಆದರೆ ಹೊಸ ತಲೆಮಾರಿನ ಕ್ರೆಟಾ ಮತ್ತು ಐ20 ಕಾರು ಮಾದರಿಗಳು ಹ್ಯುಂಡೈ ಕಾರು ಮಾರಾಟ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಹೊಸ ಕಾರು ಹ್ಯುಂಡೈ ಕಾರು ಮಾರಾಟದಲ್ಲಿ ಮತ್ತಷ್ಟು ಮುಂಚೂಣಿ ಸಾಧಿಸುವ ತವಕದಲ್ಲಿವೆ.

Most Read Articles

Kannada
English summary
Hyundai Hikes Prices Of Its Models By Up To Rs 45,000. Read in Kannada.
Story first published: Wednesday, January 27, 2021, 14:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X