ಬೆಲೆ ಹೆಚ್ಚಳ: ಹ್ಯುಂಡೈ ಕಾರುಗಳ ಖರೀದಿ ಇದೀಗ ಮತ್ತಷ್ಟು ದುಬಾರಿ!

ಹೊಸ ವಾಹನಗಳ ಉತ್ಪಾದನಾ ವೆಚ್ಚವು ನಿರಂತರವಾಗಿ ಹೆಚ್ಚಳವಾಗುತ್ತಿದ್ದು, ವೆಚ್ಚ ನಿರ್ವಹಣೆಗಾಗಿ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳು ತಮ್ಮ ವಿವಿಧ ವಾಹನ ಮಾದರಿಗಳ ಬೆಲೆಯನ್ನು ಕಳೆದ ಒಂದು ವರ್ಷದಲ್ಲಿ ಹಲವಾರು ಬಾರಿ ಹೆಚ್ಚಿಸಿವೆ.

ಬೆಲೆ ಹೆಚ್ಚಳ: ಹ್ಯುಂಡೈ ವಿವಿಧ ಕಾರುಗಳ ಖರೀದಿಯು ಇದೀಗ ಮತ್ತಷ್ಟು ದುಬಾರಿ!

ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ವಾಹನಗಳ ಬಿಡಿಭಾಗಗಳ ಬೆಲೆಯಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳು ಅತಿ ಕಡಿಮೆ ಅವಧಿಯ ಅಂತರದಲ್ಲಿಯೇ ಬೆಲೆ ಏರಿಕೆ ಮಾಡುತ್ತಿದ್ದು,ಹ್ಯುಂಡೈ ಇಂಡಿಯಾ ಕೂಡಾ ತನ್ನ ವಿವಿಧ ಕಾರು ಮಾದರಿಯ ಬೆಲೆಯಲ್ಲಿ ಶೇ. 0.50 ರಿಂದ ಶೇ. 1.50 ರಷ್ಟು ಬೆಲೆ ಹೆಚ್ಚಿಸಿದೆ.

ಬೆಲೆ ಹೆಚ್ಚಳ: ಹ್ಯುಂಡೈ ವಿವಿಧ ಕಾರುಗಳ ಖರೀದಿಯು ಇದೀಗ ಮತ್ತಷ್ಟು ದುಬಾರಿ!

ಹೊಸ ದರ ಪಟ್ಟಿ ಪ್ರಕಟದ ನಂತರ ಹ್ಯುಂಡೈ ನಿರ್ಮಾಣದ ವಿವಿಧ ಕಾರುಗಳ ಬೆಲೆಯಲ್ಲೂ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಕನಿಷ್ಠ ರೂ. 1,100 ಸಾವಿರದಿಂದ ಗರಿಷ್ಠ ರೂ. 19 ಸಾವಿರ ತನಕ ಬೆಲೆ ಹೆಚ್ಚಳಗೊಂಡಿದೆ.

ಬೆಲೆ ಹೆಚ್ಚಳ: ಹ್ಯುಂಡೈ ವಿವಿಧ ಕಾರುಗಳ ಖರೀದಿಯು ಇದೀಗ ಮತ್ತಷ್ಟು ದುಬಾರಿ!

ಪರಿಸ್ಕೃತ ದರ ಪಟ್ಟಿಯಲ್ಲಿ ಕ್ರೆಟಾ ಕಂಪ್ಯಾಕ್ಟ್ ಎಸ್‌ಯವಿ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಬೆಲೆಯು ಇದೀಗ ರೂ. 10.16 ಲಕ್ಷದಿಂದ ಟಾಪ್ ಎಂಡ್ ಕಾರಿನ ಬೆಲೆಯು ರೂ.17.87 ಲಕ್ಷಕ್ಕೆ ಏರಿಕೆಯಾಗಿದೆ.

ಬೆಲೆ ಹೆಚ್ಚಳ: ಹ್ಯುಂಡೈ ವಿವಿಧ ಕಾರುಗಳ ಖರೀದಿಯು ಇದೀಗ ಮತ್ತಷ್ಟು ದುಬಾರಿ!

ಕ್ರೆಟಾ ಹೊಸ ದರ ಪಟ್ಟಿ ಪ್ರಕಟದ ನಂತರ ಕಾರಿನ ಬೆಲೆಯಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಕನಿಷ್ಠ ರೂ. 12 ಸಾವಿರದಿಂದ ಗರಿಷ್ಠ ರೂ. 19 ಸಾವಿರ ತನಕ ಬೆಲೆ ಹೆಚ್ಚಳವಾಗಿದ್ದು, ಇದು ಈ ವರ್ಷದ ಮೂರನೇ ಹಂತದ ಬೆಲೆ ಹೆಚ್ಚಳವಾಗಿದೆ.

ಬೆಲೆ ಹೆಚ್ಚಳ: ಹ್ಯುಂಡೈ ವಿವಿಧ ಕಾರುಗಳ ಖರೀದಿಯು ಇದೀಗ ಮತ್ತಷ್ಟು ದುಬಾರಿ!

ಹ್ಯುಂಡೈ ಹೊಸ ದರಪಟ್ಟಿಯಲ್ಲಿ ಕ್ರೆಟಾ ನಂತರ ಗ್ರ್ಯಾಂಡ್ ಐ10 ನಿಯೋಸ್ ಮತ್ತು ಸ್ಯಾಂಟ್ರೋ ಹ್ಯಾಚ್‌ಬ್ಯಾಕ್ ಕಾರುಗಳ ಬೆಲೆಯಲ್ಲೂ ರೂ. 15 ಸಾವಿರ ತನಕ ಹೆಚ್ಚಳವಾಗಿದ್ದು, ಹೊಸ ಕಾರುಗಳ ಬೆಲೆ ಏರಿಕೆಯು ಅಗಸ್ಟ್ 1ರಿಂದ ಬುಕ್ಕಿಂಗ್ ಮಾಡಲಾದ ಮಾದರಿಗಳಿಗೆ ಅನ್ವಯವಾಗುತ್ತದೆ.

ಬೆಲೆ ಹೆಚ್ಚಳ: ಹ್ಯುಂಡೈ ವಿವಿಧ ಕಾರುಗಳ ಖರೀದಿಯು ಇದೀಗ ಮತ್ತಷ್ಟು ದುಬಾರಿ!

ಇನ್ನುಳಿದಂತೆ ಹ್ಯುಂಡೈ ಕಂಪನಿಯು ಸೆಡಾನ್ ವಿಭಾಗದಲ್ಲಿರುವ ಔರಾ ಕಾರಿನ ಬೆಲೆಯಲ್ಲಿ ರೂ. 10,760 ಹೆಚ್ಚಿಸಿದ್ದು, ಮಧ್ಯಮ ಗಾತ್ರ ಲಗ್ಷುರಿ ಸೆಡಾನ್ ಮಾದರಿಯಾಗಿರುವ ಎಲಾಂಟ್ರಾ ಕಾರಿನ ಬೆಲೆಯಲ್ಲಿ ರೂ. 1,100 ಬೆಲೆ ಹೆಚ್ಚಳವಾಗಿದೆ.

ಬೆಲೆ ಹೆಚ್ಚಳ: ಹ್ಯುಂಡೈ ವಿವಿಧ ಕಾರುಗಳ ಖರೀದಿಯು ಇದೀಗ ಮತ್ತಷ್ಟು ದುಬಾರಿ!

ಆದರೆ ಗಮಿಸಬೇಕಾದ ಅಂಶವೆನೆಂದರೆ ಹ್ಯುಂಡೈ ಕಂಪನಿಯು ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರಿನ ಬೆಲೆಯಲ್ಲಿ ಬೆಲೆ ಕಡಿತಗೊಳಿಸಲಾಗಿದ್ದು, ಐ20 ಮಾದರಿಯ ಕೆಲವು ವೆರಿಯೆಂಟ್‌ಗಳಲ್ಲಿ ರೂ.8 ಸಾವಿರ ತನಕ ಬೆಲೆ ಕಡಿತ ಮಾಡಲಾಗಿದೆ.

ಬೆಲೆ ಹೆಚ್ಚಳ: ಹ್ಯುಂಡೈ ವಿವಿಧ ಕಾರುಗಳ ಖರೀದಿಯು ಇದೀಗ ಮತ್ತಷ್ಟು ದುಬಾರಿ!

ಇದರ ಹೊರತಾಗಿ ಹ್ಯುಂಡೈ ಕಂಪನಿಯು ವೆರ್ನಾ, ವೆನ್ಯೂ, ಕೊನಾ ಮತ್ತು ಇತ್ತೀಚೆಗೆ ಬಿಡುಗಡೆಗೊಳಿಸಲಾದ ಅಲ್ಕಾಜರ್ ಕಾರುಗಳ ಬೆಲೆಯನ್ನು ಪ್ರಸ್ತುತ ಮಾರುಕಟ್ಟೆ ಬೆಲೆಯನ್ನೇ ಮುಂದುವರಿಸಿದ್ದು, ಹೊಸ ಕಾರುಗಳ ನಿರಂತರ ಬೆಲೆ ಹೆಚ್ಚಳವು ಕಾರು ಮಾಲೀಕತ್ವವನ್ನು ಮತ್ತಷ್ಟು ಹೊರೆಯಾಗಿಸುತ್ತಿದೆ.

ಬೆಲೆ ಹೆಚ್ಚಳ: ಹ್ಯುಂಡೈ ವಿವಿಧ ಕಾರುಗಳ ಖರೀದಿಯು ಇದೀಗ ಮತ್ತಷ್ಟು ದುಬಾರಿ!

ಕೋವಿಡ್‌ಗೂ ಮುನ್ನ ಪ್ರತಿ ಆರು ತಿಂಗಳಿಗೆ ಒಂದು ಬಾರಿ ವಾಹನಗಳ ದರ ಪರಿಷ್ಕರಣೆ ಮಾಡುತ್ತಿದ್ದ ಆಟೋ ಕಂಪನಿಗಳು ಇದೀಗ ಬಿಡಿಭಾಗಗಳ ಕೊರತೆ ಮತ್ತು ಹೆಚ್ಚುತ್ತಿರುವ ವೆಚ್ಚಗಳನ್ನು ನಿರ್ವಹಿಸಲು ನಿರಂತರವಾಗಿ ಬೆಲೆ ಪರಿಷ್ಕರಣೆ ಮಾಡುತ್ತಿದ್ದು, ನಿರಂತರ ಬೆಲೆ ಏರಿಕೆ ಪರಿಣಾಮ ಹೊಸ ವಾಹನ ಮಾಲೀಕತ್ವವು ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ.

ಬೆಲೆ ಹೆಚ್ಚಳ: ಹ್ಯುಂಡೈ ವಿವಿಧ ಕಾರುಗಳ ಖರೀದಿಯು ಇದೀಗ ಮತ್ತಷ್ಟು ದುಬಾರಿ!

ಕಳೆದ ವರ್ಷದಿಂದ ಪ್ರಮುಖ ಕಾರು ಕಂಪನಿಗಳು ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ತಮ್ಮ ವಾಹನಗಳ ಮೂಲ ಬೆಲೆಯಲ್ಲಿ ಶೇ. 0.50ರಿಂದ ಶೇ.2 ರಷ್ಟು ಬೆಲೆ ಹೆಚ್ಚಿಸುತ್ತಿದ್ದು, ಕಳೆದ ಕೆಲ ತಿಂಗಳಿನಲ್ಲಿ ಬಜೆಟ್ ಕಾರುಗಳ ಬೆಲೆಯಲ್ಲಿ ಸರಾಸರಿಯಾಗಿಯಾಗಿ ರೂ. 80 ಸಾವಿರದಿಂದ ರೂ.1.20 ಲಕ್ಷದಷ್ಟು ಬೆಲೆ ಹೆಚ್ಚಳವಾಗಿವೆ.

ಬೆಲೆ ಹೆಚ್ಚಳ: ಹ್ಯುಂಡೈ ವಿವಿಧ ಕಾರುಗಳ ಖರೀದಿಯು ಇದೀಗ ಮತ್ತಷ್ಟು ದುಬಾರಿ!

ಮಧ್ಯಮ ಗಾತ್ರದ ಕಾರುಗಳ ಬೆಲೆಯಲ್ಲಿ ರೂ. 80 ಸಾವಿರದಿಂದ ರೂ. 1.50 ಲಕ್ಷದವರೆಗೆ ಬೆಲೆ ಹೆಚ್ಚಳವಾಗಿದ್ದು, ವಿದೇಶಿ ಮಾರುಕಟ್ಟೆಗಳಿಂದ ಆಮದುಗೊಳ್ಳುವ ಎಲೆಕ್ಟ್ರಾನಿಕ್ ಸೆಮಿ ಕಂಡಕ್ಟರ್‌ಗಳ ಬೆಲೆ ಹೆಚ್ಚಳವಾಗುತ್ತಿರುವ ಪರಿಣಾಮ ಹೊಸ ವಾಹನ ಖರೀದಿಯು ಮತ್ತಷ್ಟು ಹೊರೆಯಾಗುತ್ತಿದೆ.

ಬೆಲೆ ಹೆಚ್ಚಳ: ಹ್ಯುಂಡೈ ವಿವಿಧ ಕಾರುಗಳ ಖರೀದಿಯು ಇದೀಗ ಮತ್ತಷ್ಟು ದುಬಾರಿ!

ಬಿಡಿಭಾಗಗಳ ಬೆಲೆ ಹೆಚ್ಚಳ ಪರಿಣಾಮ ಕಳೆದ ಜನವರಿ, ಏಪ್ರಿಲ್‌ ಮತ್ತು ಬೆಲೆ ಏರಿಕೆ ಮಾಡಿದ್ದ ಹ್ಯುಂಡೈ ಇದೀಗ ಮತ್ತೊಮ್ಮೆ ದರ ಹೆಚ್ಚಿಸಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಮುಂಚೂಣಿಯಲ್ಲಿರುವ ಕ್ರೆಟಾ ಬೆಲೆಯಲ್ಲಿ ಹೆಚ್ಚಿನ ಮಟ್ಟದ ಏರಿಕೆಯಾಗಿರುವುದಿಂದ ಹೊಸ ಕಾರು ಖರೀದಿಗೆ ಪ್ರಕ್ರಿಯೆಯ ಮೇಲೆ ಪರಿಣಾಮ ಉಂಟುಮಾಡಬಹುದಾಗಿದೆ.

ಬೆಲೆ ಹೆಚ್ಚಳ: ಹ್ಯುಂಡೈ ವಿವಿಧ ಕಾರುಗಳ ಖರೀದಿಯು ಇದೀಗ ಮತ್ತಷ್ಟು ದುಬಾರಿ!

2020ರ ಮಾರ್ಚ್‌ನಲ್ಲಿ ಬಿಡುಗಡೆಯಾಗಿದ್ದ ನ್ಯೂ ಜನರೇಷನ್ ಕ್ರೆಟಾ ಕಂಪ್ಯಾಕ್ಟ್ ಎಸ್‌ಯುವಿ ಕಾರು ಗ್ರಾಹಕರ ಬೇಡಿಕೆಯೆಂತೆ ಒಟ್ಟು 5 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಎಮಿಷನ್ ವೈಶಿಷ್ಟ್ಯತೆಯ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯೊಂದಿಗೆ ಮಾರಾಟದಲ್ಲಿ ಭಾರೀ ಜನಪ್ರಿಯತೆ ಪಡೆದುಕೊಂಡಿದೆ.

Most Read Articles

Kannada
English summary
Hyundai Cars Prices Hiked. Read in Kannada.
Story first published: Wednesday, August 11, 2021, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X