Just In
Don't Miss!
- News
ಪೊಲೀಸ್ ಠಾಣೆಯಲ್ಲಿ ಬಗೆಹರಿದ ಒಂದು ಕೋಣದ ವಿವಾದ!
- Movies
'ದೀಪ್ ಸಿಧು ಜೊತೆ ನನಗೆ ಯಾವುದೇ ಸಂಬಂಧವಿಲ್ಲ': ಸಂಸದ, ನಟ ಸನ್ನಿ ಡಿಯೋಲ್ ಸ್ಪಷ್ಟನೆ
- Finance
ಬಜೆಟ್ 2021: ಸ್ಟ್ಯಾಂಡರ್ಡ್ ಡಿಡಕ್ಷನ್ ರು. 1 ಲಕ್ಷಕ್ಕೆ ಹೆಚ್ಚಳ ನಿರೀಕ್ಷೆ
- Sports
ಬೈರ್ಸ್ಟೋವ್ಗೆ 2 ಪಂದ್ಯಗಳ ವಿಶ್ರಾಂತಿ ನೀಡಿರುವುದನ್ನು ಸಮರ್ಥಿಸಿದ ಇಂಗ್ಲೆಂಡ್ ಕೋಚ್
- Education
WCD Chitradurga Recruitment 2021: ಅಂಗನವಾಡಿಯಲ್ಲಿ 129 ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
4 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ರಿಕಾಲ್ ಮಾಡಿದ ಹ್ಯುಂಡೈ
ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಕಂಪನಿಯು ತನ್ನ ಕಾರುಗಳನ್ನು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಹಲವು ದೇಶಗಳಲ್ಲಿಯೂ ಮಾರಾಟ ಮಾಡುತ್ತದೆ. ಕಂಪನಿಯು ಕಾರುಗಳನ್ನು ಮಾರಾಟ ಮಾಡುವ ದೇಶಗಳಲ್ಲಿ ಅಮೆರಿಕಾ ಸಹ ಸೇರಿದೆ.

ಅಮೆರಿಕಾದಲ್ಲಿ ಹ್ಯುಂಡೈ ಕಂಪನಿಯು ಮಾರಾಟ ಮಾಡುವ ಕಾರುಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಈ ಕಾರಣಕ್ಕೆ ಅಮೆರಿಕಾದಲ್ಲಿರುವ 4.71 ಲಕ್ಷ ಯುನಿಟ್ ಹ್ಯುಂಡೈ ಕಾರುಗಳನ್ನು ರಿಕಾಲ್ ಮಾಡಲಾಗಿದೆ.

ಹೀಗೆ ರಿಕಾಲ್ ಮಾಡಲಾದ ಎಲ್ಲಾ ಕಾರುಗಳು ಎಸ್‌ಯುವಿ ಮಾದರಿಯಾಗಿವೆ. ಈ ಕಾರುಗಳಲ್ಲಿ ಉತ್ಪಾದನೆಯ ಸಮಯದಲ್ಲಿ ಅಳವಡಿಸಲಾದ ಒಂದು ಭಾಗದಲ್ಲಿ ದೋಷ ಕಾಣಿಸಿಕೊಂಡಿದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಈ ದೋಷಯುಕ್ತ ಭಾಗವನ್ನು ಬದಲಿಸಲು ಹ್ಯುಂಡೈ ಕಂಪನಿಯು ಕಾರುಗಳನ್ನು ರಿಕಾಲ್ ಮಾಡಿದೆ. ಈ ದೋಷಯುಕ್ತ ಭಾಗದ ನಿರಂತರ ಬಳಕೆಯಿಂದಾಗಿ ಹಲವಾರು ತೊಂದರೆಗಳು ಎದುರಾಗುವ ಸಾಧ್ಯತೆಗಳಿರುವುದರಿಂದ ಹ್ಯುಂಡೈ ಕಂಪನಿಯು ಈ ಕಾರುಗಳನ್ನು ರಿಕಾಲ್ ಮಾಡಿದೆ.

ಸಮಸ್ಯೆ ಉಲ್ಬಣಗೊಳ್ಳುವ ಮೊದಲು ಎಲ್ಲಾ ಕಾರುಗಳಲ್ಲಿರುವ ದೋಷಯುಕ್ತ ಭಾಗಗಳನ್ನು ಬದಲಿಸಲು ಹ್ಯುಂಡೈ ಕಂಪನಿಯು ಮುಂದಾಗಿದೆ. 2016 - 2018 ಹಾಗೂ 2020ರಲ್ಲಿ ತಯಾರಾದ ಟಕ್ಸನ್ ಕಾರುಗಳು ದೋಷಯುಕ್ತ ಭಾಗವನ್ನು ಹೊಂದಿವೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಈ ದೋಷಯುಕ್ತ ಭಾಗವನ್ನು ಕಾರಿಗೆ ವಿದ್ಯುತ್ ಪೂರೈಸುವ ಮುಖ್ಯ ಸಾಧನವೆಂದು ಗುರುತಿಸಲಾಗಿದೆ. ಈ ದೋಷಯುಕ್ತ ಸಾಧನವನ್ನು ನಿರಂತರವಾಗಿ ಬಳಸುವುದರಿಂದ ಬೆಂಕಿ ಅವಘಡದಂತಹ ದೊಡ್ಡ ಸಮಸ್ಯೆಗಳು ಎದುರಾಗಬಹುದು.

ಈ ಕಾರಣಕ್ಕೆ ಈ ಅವಧಿಯಲ್ಲಿ ಉತ್ಪಾದನೆಯಾದ ಎಲ್ಲಾ ಟಕ್ಸನ್ ಕಾರುಗಳನ್ನು ರಿಕಾಲ್ ಮಾಡಲಾಗಿದೆ. ಈ ದೋಷಯುಕ್ತ ಘಟಕದಿಂದಾಗಿ ಇದುವರೆಗೂ ಯಾವುದೇ ಅಪಘಾತ ಸಂಭವಿಸಿಲ್ಲವೆಂದು ಹ್ಯುಂಡೈ ಕಂಪನಿ ಹೇಳಿದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ದೋಷಯುಕ್ತ ಸಾಧನ ಹೊಂದಿರುವ ಹ್ಯುಂಡೈ ಟಕ್ಸನ್ ಕಾರುಗಳನ್ನು ರಿಕಾಲ್ ಮಾಡುತ್ತಿರುವುದು ಇದೇ ಮೊದಲ ಬಾರಿಯಲ್ಲ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಅಸಮರ್ಪಕ ಎಬಿಎಸ್ ಬ್ರೇಕ್ ಹೊಂದಿದ್ದ 1.80 ಲಕ್ಷ ಕಾರುಗಳನ್ನು ರಿಕಾಲ್ ಮಾಡಲಾಗಿತ್ತು.

ಈಗ 4.71 ಲಕ್ಷ ಯೂನಿಟ್ ಟಕ್ಸನ್ ಕಾರುಗಳನ್ನು ರಿಕಾಲ್ ಮಾಡಲಾಗಿದೆ. ಈ ಹಿಂದೆ ಕಂಪನಿಯು 2015 - 2016ರ ನಡುವೆ ಉತ್ಪಾದನೆಯಾಗಿದ್ದ ವೆಲೋಸ್ಟರ್ ಹಾಗೂ 2011ರಿಂದ 2013ರ ನಡುವೆ ತಯಾರಾದ ಸೊನಾಟಾ ಹೈಬ್ರಿಡ್ ಕಾರುಗಳನ್ನು ರಿಕಾಲ್ ಮಾಡಿತ್ತು.