ಸಾರಿಗೆ ವಿಧಾನಗಳಲ್ಲಿ ಭಾರೀ ಬದಲಾವಣೆ ತರಲಿವೆ Hyundai ಕಂಪನಿಯ ಹಾರುವ ಟ್ಯಾಕ್ಸಿಗಳು

ಹುಂಡೈ (Hyundai) ಮೋಟಾರ್ ಗ್ರೂಪ್ ತನ್ನ ಭವಿಷ್ಯದ ಚಲನಶೀಲತೆಯನ್ನು ಹೆಚ್ಚಿಸಲು ಹೊಸ ಬ್ರಾಂಡ್ ಅನ್ನು ಆರಂಭಿಸಿದೆ. ಹುಂಡೈ ಇತ್ತೀಚೆಗೆ ಸೂಪರ್ನಾಲ್ (Supernal) ಎಲ್‌ಎಲ್‌ಸಿ ಎಂಬ ಹೊಸ ಕಂಪನಿಯನ್ನು ಆರಂಭಿಸಿದೆ. ಈ ಕಂಪನಿಯು ನಗರಗಳ ವಾಯು ಚಲನಶೀಲತೆಯನ್ನು ಅಭಿವೃದ್ಧಿಪಡಿಸುವ ಕಾರ್ಯ ನಿರ್ವಹಿಸುತ್ತದೆ. ಹ್ಯುಂಡೈ ತನ್ನ ಭವಿಷ್ಯದ ಯೋಜನೆಗಳ ಭಾಗವಾಗಿ ಹಾರುವ ವಾಹನಗಳನ್ನು ಅಭಿವೃದ್ಧಿ ಪಡಿಸುವಲ್ಲಿ ನಿರತವಾಗಿದೆ.

ಸಾರಿಗೆ ವಿಧಾನಗಳಲ್ಲಿ ಭಾರೀ ಬದಲಾವಣೆ ತರಲಿವೆ Hyundai ಕಂಪನಿಯ ಹಾರುವ ಟ್ಯಾಕ್ಸಿಗಳು

ಇದಕ್ಕಾಗಿ ಕಂಪನಿಯು ಸಾರ್ವಜನಿಕ ಹಾಗೂ ಖಾಸಗಿ ವಲಯದ ಹೂಡಿಕೆದಾರರ ಸಹಕಾರವನ್ನು ಪಡೆಯುತ್ತಿದೆ. ತನ್ನ ಹೊಸ ಕಂಪನಿಯ ಅಡಿಯಲ್ಲಿ ಹ್ಯುಂಡೈ 2028 ರಲ್ಲಿ ಮೊದಲ ವಾಣಿಜ್ಯ ಹಾರುವ ವಾಹನದ ಸಂಚಾರವನ್ನು ಆರಂಭಿಸಲಿದೆ. ಈ ವಾಹನವು 2030 ರಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ. eVTOL ಹಾರುವ ವಾಹನದಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹ್ಯುಂಡೈ ಕಂಪನಿ ಹೇಳಿದೆ.

ಸಾರಿಗೆ ವಿಧಾನಗಳಲ್ಲಿ ಭಾರೀ ಬದಲಾವಣೆ ತರಲಿವೆ Hyundai ಕಂಪನಿಯ ಹಾರುವ ಟ್ಯಾಕ್ಸಿಗಳು

ಈ ಹಾರುವ ಕಾರು, ಸಾರಿಗೆ ವಿಧಾನಗಳಲ್ಲಿ ಭಾರೀ ಬದಲಾವಣೆಯನ್ನು ತರಲಿದೆ ಎಂದು ಹೇಳಲಾಗಿದೆ. ಹಾರುವ ಕಾರು ಇವಿಟಿಒಎಲ್ ಪ್ರಯಾಣವನ್ನು ಸುಲಭಗೊಳಿಸುವುದಲ್ಲದೆ, ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲಿದೆ ಎಂದು ಕಂಪನಿ ಹೇಳಿದೆ. ಈ ಹಾರುವ ವಾಹನವನ್ನು ಕೈಗೆಟಕುವ ದರದಲ್ಲಿ ಸಾಮಾನ್ಯ ಗ್ರಾಹಕರಿಗೆ ತಲುಪುವಂತೆ ಮಾಡಲು ವಿಶೇಷ ಗಮನ ನೀಡಲಾಗುತ್ತಿದೆ ಎಂದು ಹ್ಯುಂಡೈ ಹೇಳಿದೆ.

ಸಾರಿಗೆ ವಿಧಾನಗಳಲ್ಲಿ ಭಾರೀ ಬದಲಾವಣೆ ತರಲಿವೆ Hyundai ಕಂಪನಿಯ ಹಾರುವ ಟ್ಯಾಕ್ಸಿಗಳು

ಇದಕ್ಕಾಗಿ ಹ್ಯುಂಡೈ ಕಂಪನಿಯು ತನ್ನ ತಂಡದೊಂದಿಗೆ ಎಲ್ಲಾ ಮಾನದಂಡಗಳನ್ನು ಅನುಸರಿಸುವ ಮೂಲಕ ಕೈಗೆಟುಕುವಂತೆ ಮಾಡಲು ಕಾರ್ಯ ನಿರ್ವಹಿಸುತ್ತಿದೆ. ಸೂಪರ್ನಾಲ್ ಭವಿಷ್ಯದ ವಾಹನಗಳನ್ನು ವಿನ್ಯಾಸಗೊಳಿಸುತ್ತಿರುವ 50 ಕ್ಕೂ ಹೆಚ್ಚು ಸಣ್ಣ ಹಾಗೂ ದೊಡ್ಡ ಕಂಪನಿಗಳನ್ನು ಒಳಗೊಂಡಿದೆ. ಸೂಪರ್ನಾಲ್, ವಾಹನಗಳನ್ನು ಅಭಿವೃದ್ಧಿ ಪಡಿಸುವುದು ಮಾತ್ರವಲ್ಲದೆ ಕಂಪನಿಯು ತಯಾರಿಸಿದ ಎಲ್ಲಾ ವಾಹನಗಳನ್ನು ಒಂದೇ ನೆಟ್‌ವರ್ಕ್‌ಗೆ ಸಂಪರ್ಕಿಸುವ ವಾಹನಗಳಿಗೆ ವ್ಯವಸ್ಥೆಯನ್ನು ಸಹ ಅಭಿವೃದ್ಧಿಪಡಿಸುತ್ತಿದೆ.

ಸಾರಿಗೆ ವಿಧಾನಗಳಲ್ಲಿ ಭಾರೀ ಬದಲಾವಣೆ ತರಲಿವೆ Hyundai ಕಂಪನಿಯ ಹಾರುವ ಟ್ಯಾಕ್ಸಿಗಳು

ಕಂಪನಿಯು ಮೊದಲು ವಾಣಿಜ್ಯ ಉದ್ದೇಶಕ್ಕಾಗಿ ಹಾರುವ ವಾಹನಗಳನ್ನು ಆರಂಭಿಸಲಿದೆ. ಈಗ ಆನ್‌ಲೈನ್‌ನಲ್ಲಿ ಕ್ಯಾಬ್ ಗಳನ್ನು ಬುಕ್ ಮಾಡುವಂತೆ ಈ ಹಾರುವ ಕಾರುಗಳನ್ನು ಬುಕ್ ಮಾಡಬಹುದು. ಪ್ರಯಾಣದ ಸಮಯವನ್ನು ಆಯ್ಕೆ ಮಾಡುವ, ಬದಲಾಯಿಸುವ ಹಾಗೂ ರದ್ದುಗೊಳಿಸುವ ಆಯ್ಕೆಯನ್ನು ಪ್ರಯಾಣಿಕರಿಗೆ ಅಪ್ಲಿಕೇಶನ್ ಮೂಲಕ ನೀಡಲಾಗುವುದು.

ಸಾರಿಗೆ ವಿಧಾನಗಳಲ್ಲಿ ಭಾರೀ ಬದಲಾವಣೆ ತರಲಿವೆ Hyundai ಕಂಪನಿಯ ಹಾರುವ ಟ್ಯಾಕ್ಸಿಗಳು

ಹ್ಯುಂಡೈ ಮೋಟಾರ್ ಗ್ರೂಪ್‌ನ ಏರ್ ಮೊಬಿಲಿಟಿ ವಿಭಾಗವು ಕಳೆದ ವರ್ಷ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತನ್ನ ಕಾನ್ಸೆಪ್ಟ್ ಫ್ಲೈಯಿಂಗ್ ಕಾರ್ S A1 ಕಾರ್ ಅನ್ನು ಪರಿಚಯಿಸಿತು. ಈಗ ಕಂಪನಿಯು ಈ ಕಾರ್ ಅನ್ನು eVTOL ಆಗಿ ಅಭಿವೃದ್ಧಿಪಡಿಸುತ್ತಿದೆ. ಈ ಕಾರಿಗೆ 2024 ರಲ್ಲಿ ಅಮೆರಿಕಾದ ಸಂಸ್ಥೆಗಳಿಂದ ಪ್ರಮಾಣಪತ್ರ ಪಡೆಯಲಾಗುವುದು ಎಂದು ಕಂಪನಿ ಹೇಳಿದೆ. ನಂತರ ಈ ಕಾರು ಅಮೆರಿಕಾ ಮಾರುಕಟ್ಟೆಗಳಲ್ಲಿ ಮಾರಾಟಕ್ಕೆ ಸಿದ್ಧವಾಗಲಿದೆ.

ಸಾರಿಗೆ ವಿಧಾನಗಳಲ್ಲಿ ಭಾರೀ ಬದಲಾವಣೆ ತರಲಿವೆ Hyundai ಕಂಪನಿಯ ಹಾರುವ ಟ್ಯಾಕ್ಸಿಗಳು

ಸುಪರ್ನಾಲ್ ತಯಾರಿಸಿದ ಮೊದಲ ಏರ್ ವೆಹಿಕಲ್ ಸಂಪೂರ್ಣವಾಗಿ ಬ್ಯಾಟರಿ ಚಾಲಿತವಾಗಿದ್ದು, 4 - 5 ಜನರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿರಲಿದೆ. ಇದನ್ನು ಮೊದಲು ನಗರ ಹಾಗೂ ಪ್ರಮುಖ ಮಾರ್ಗಗಳಲ್ಲಿ ಆರಂಭಿಸಲಾಗುವುದು. ಈ ಹಾರುವ ಎಲೆಕ್ಟ್ರಿಕ್ ಕಾರನ್ನು ವಿನ್ಯಾಸಗೊಳಿಸಲು, ಕಂಪನಿಯು ವಿಮಾನ ಸೇವೆಗಳಿಗೆ ಸಂಬಂಧಿಸಿದ ಎಂಜಿನಿಯರ್‌ಗಳು, ತಂತ್ರಜ್ಞರು ಹಾಗೂ ಕುಶಲಕರ್ಮಿಗಳ ನೆರವನ್ನು ಪಡೆಯುತ್ತಿದೆ.

ಸಾರಿಗೆ ವಿಧಾನಗಳಲ್ಲಿ ಭಾರೀ ಬದಲಾವಣೆ ತರಲಿವೆ Hyundai ಕಂಪನಿಯ ಹಾರುವ ಟ್ಯಾಕ್ಸಿಗಳು

ಇನ್ನು ಹ್ಯುಂಡೈ ಕಂಪನಿಯು ನಿನ್ನೆಯಷ್ಟೇ ತನ್ನ ಆಟೋಮೋಟಿವ್ ಆಪರೇಟಿಂಗ್ ಪ್ಲಾಟ್‌ಫಾರಂ ಅನ್ನು ಮುಂದಿನ ವರ್ಷ ಆರಂಭಿಸಲಾಗುವುದು ಎಂದು ಘೋಷಿಸಿತ್ತು. ಕಂಪನಿಯು ಬಿಡುಗಡೆಗೊಳಿಸಿರುವ ಮಾಹಿತಿಯ ಪ್ರಕಾರ, ಈ ಪ್ಲಾಟ್ ಫಾರಂ ಸ್ವಾಯತ್ತ ಚಾಲನೆ, ಹಸಿರು ತಂತ್ರಜ್ಞಾನ, ಆಟೋಮೋಟಿವ್ ಎಐ, ಭವಿಷ್ಯದ ಚಲನಶೀಲತೆ ಹಾಗೂ ಲಾಜಿಸ್ಟಿಕ್ಸ್ ಬೆಳವಣಿಗೆಗೆ ಕೊಡುಗೆ ನೀಡಲು ದೊಡ್ಡ ಡೇಟಾವನ್ನು ಹೊಂದಿರುತ್ತದೆ.

ಸಾರಿಗೆ ವಿಧಾನಗಳಲ್ಲಿ ಭಾರೀ ಬದಲಾವಣೆ ತರಲಿವೆ Hyundai ಕಂಪನಿಯ ಹಾರುವ ಟ್ಯಾಕ್ಸಿಗಳು

ಈ ಪ್ಲಾಟ್‌ಫಾರಂ ಸಂಪರ್ಕಿತ ಕಾರ್ ಸೇವಾ ಅಪ್ಲಿಕೇಶನ್, ಸ್ವಾಯತ್ತ ಚಾಲನೆ, ಚಲನ ಶೀಲತೆ ಸೇವೆ, ಪವರ್ ಪ್ಲಾಟ್‌ಫಾರಂ ಹಾಗೂ ಸಾಫ್ಟ್‌ವೇರ್‌ನ ಸಂಯೋಜನೆಯಾಗಿದೆ ಎಂದು ಹ್ಯುಂಡೈ ಕಂಪನಿ ಮಾಹಿತಿ ನೀಡಿದೆ. ಕಂಪನಿಯು ಈ ಪ್ಲಾಟ್ ಫಾರಂ ಅಂತರ ವಾಹನ ಸಂಪರ್ಕ ಹಾಗೂ ಚಲನಶೀಲತೆಯನ್ನು ಉತ್ತಮಗೊಳಿಸುತ್ತದೆ ಎಂದು ಹೇಳಿದೆ.

ಸಾರಿಗೆ ವಿಧಾನಗಳಲ್ಲಿ ಭಾರೀ ಬದಲಾವಣೆ ತರಲಿವೆ Hyundai ಕಂಪನಿಯ ಹಾರುವ ಟ್ಯಾಕ್ಸಿಗಳು

ಈ ಪ್ಲಾಟ್ ಫಾರಂ ಅನ್ನು ಅಭಿವೃದ್ಧಿಪಡಿಸಲು, ಹ್ಯುಂಡೈ ಗ್ರೂಪ್ ಈ ವರ್ಷ ಏಪ್ರಿಲ್‌ನಲ್ಲಿ ಸಾರಿಗೆ ಸೇವೆ (TaaS) ವಿಭಾಗವನ್ನು ಆಯೋಜಿಸಿತ್ತು. ವರದಿಗಳ ಪ್ರಕಾರ, ಆಪಲ್ ಹಾಗೂ ಮೈಕ್ರೋಸಾಫ್ಟ್‌ನಲ್ಲಿ ಸಾಫ್ಟ್‌ವೇರ್ ಪರಿಣತರಾಗಿರುವ ಕಂಪನಿಯ ಅಧ್ಯಕ್ಷರಾದ ಸಾಂಗ್ ಚಾಂಗ್ ಹ್ಯುನ್ ಈ ವಿಭಾಗವನ್ನು ಮುನ್ನಡೆಸಲಿದ್ದಾರೆ.

ಸಾರಿಗೆ ವಿಧಾನಗಳಲ್ಲಿ ಭಾರೀ ಬದಲಾವಣೆ ತರಲಿವೆ Hyundai ಕಂಪನಿಯ ಹಾರುವ ಟ್ಯಾಕ್ಸಿಗಳು

ಇದರ ಜೊತೆಗೆ, ಪ್ಲಾಟ್‌ಫಾರಂ ಆಧಾರಿತ ಚಲನಶೀಲತೆಯ ಸೇವೆಗಳ ಮಾರುಕಟ್ಟೆಯನ್ನು ರಚಿಸಲು ಹ್ಯುಂಡೈ ಮೋಟಾರ್ ಗ್ರೂಪ್ 23 ಕಂಪನಿಗಳೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಳ್ಳಲು ಚಿಂತನೆ ನಡೆಸುತ್ತಿದೆ. ಹುಂಡೈ ಕಂಪನಿಯ ಇನ್ನಿತರ ಸುದ್ದಿಗಳ ಬಗ್ಗೆ ಹೇಳುವುದಾದರೆ ಕಂಪನಿಯು ಇತ್ತೀಚೆಗೆ ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾವನ್ನು ಬಿಡುಗಡೆಗೊಳಿಸಿದೆ.

ಸಾರಿಗೆ ವಿಧಾನಗಳಲ್ಲಿ ಭಾರೀ ಬದಲಾವಣೆ ತರಲಿವೆ Hyundai ಕಂಪನಿಯ ಹಾರುವ ಟ್ಯಾಕ್ಸಿಗಳು

ಇನ್ನು ಭವಿಷ್ಯದ ಕಾರುಗಳತ್ತ ಒಂದು ಹೆಜ್ಜೆ ಮುಂದಿಟ್ಟಿರುವ ಹ್ಯುಂಡೈ ಕಂಪನಿಯು ಹೊಸ ಕಾನ್ಸೆಪ್ಟ್ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಶೀಘ್ರದಲ್ಲಿಯೇ ಅನಾವರಣಗೊಳಿಸಲಿದೆ. ಈ ಕಾನ್ಸೆಪ್ಟ್ ಮಾದರಿಯನ್ನು ಕಾನ್ಸೆಪ್ಟ್ ಸೆವೆನ್ ಎಂದು ಕರೆಯಲಾಗುತ್ತಿದೆ. ಈ ಕಾರ್ ಅನ್ನು ಮಾರುಕಟ್ಟೆಯಲ್ಲಿ ಹ್ಯುಂಡೈ Ioniq 7 ಎಂಬ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ.

ಸಾರಿಗೆ ವಿಧಾನಗಳಲ್ಲಿ ಭಾರೀ ಬದಲಾವಣೆ ತರಲಿವೆ Hyundai ಕಂಪನಿಯ ಹಾರುವ ಟ್ಯಾಕ್ಸಿಗಳು

ನವೆಂಬರ್ 17 ರಂದು ಲಾಸ್ ಏಂಜಲೀಸ್ ಆಟೋ ಶೋನಲ್ಲಿ ಕಂಪನಿಯು ಈ ಕಾನ್ಸೆಪ್ಟ್ ಕಾರ್ ಅನ್ನು ಅನಾವರಣಗೊಳಿಸಲಿದೆ. ಈ ಕಾರ್ ಅನ್ನು ಸಂಪೂರ್ಣವಾಗಿ ಅನಾವರಣಗೊಳಿಸುವ ಮೊದಲು ಹ್ಯುಂಡೈ ಕಂಪನಿಯು ಕೆಲವು ಟೀಸರ್ ಚಿತ್ರಗಳನ್ನು ಬಿಡುಗಡೆ ಮಾಡಿದೆ.

ಸಾರಿಗೆ ವಿಧಾನಗಳಲ್ಲಿ ಭಾರೀ ಬದಲಾವಣೆ ತರಲಿವೆ Hyundai ಕಂಪನಿಯ ಹಾರುವ ಟ್ಯಾಕ್ಸಿಗಳು

ಹ್ಯುಂಡೈ ಸೆವೆನ್ ಕಾನ್ಸೆಪ್ಟ್ ಸಂಪೂರ್ಣ ಎಲೆಕ್ಟ್ರಿಕ್ ಎಸ್‌ಯುವಿ ಆಗಿದ್ದು, ಏಳು ಜನರು ಕುಳಿತುಕೊಳ್ಳಬಹುದು. ಈ ಕಾರು ಮೂರು ಸಾಲಿನ ಸೀಟುಗಳನ್ನು ಹೊಂದುವ ಸಾಧ್ಯತೆಗಳಿವೆ. ಹ್ಯುಂಡೈ Ioniq 5 ಹಾಗೂ Ioniq 6 ನಂತರ, ಈಗ Ioniq 7 ಎಲೆಕ್ಟ್ರಿಕ್ ಎಸ್‌ಯು‌ವಿಯನ್ನು ಈ ಸರಣಿಯಲ್ಲಿ ಸೇರಿಸಲಾಗುತ್ತಿದೆ.

Most Read Articles

Kannada
English summary
Hyundai company to launch flying taxis by 2028 details
Story first published: Friday, November 12, 2021, 17:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X