ಕ್ರೆಟಾ ಕಾರಿನಲ್ಲಿ ಮತ್ತೊಂದು ಹೊಸ ಆವೃತ್ತಿ ಬಿಡುಗಡೆ ಮಾಡಲಿದೆ ಹ್ಯುಂಡೈ
ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಕ್ರೆಟಾ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲಿ ಹೊಸ ಆವೃತ್ತಿಯೊಂದಿಗೆ ಬಿಡುಗಡೆ ಮಾಡಲು ನಿರ್ಧರಿಸಿದ್ದು, ಹೊಸದಾಗಿ ಬಿಡುಗಡೆಯಾಗಲಿರುವ ಎಸ್ಎಕ್ಸ್ ಎಕ್ಸಿಕ್ಯೂಟಿವ್ ಕುರಿತಾದ ಕೆಲವು ಮಾಹಿತಿಗಳು ಲಭ್ಯವಾಗಿವೆ.

ಕ್ರೆಟಾ ಕಾರಿನ ಮಧ್ಯಮ ಕ್ರಮಾಂಕದಲ್ಲಿರುವ ಎಸ್ಎಕ್ಸ್ ಮಾದರಿಗಿಂತ ಕೆಳಸ್ಥಾನದಲ್ಲಿ ಮಾರಾಟಗೊಳ್ಳಲಿರುವ ಎಸ್ಎಕ್ಸ್ ಎಕ್ಸಿಕ್ಯೂಟಿವ್ ಆವೃತ್ತಿಯು ಸ್ಟ್ಯಾಂಡರ್ಡ್ ಎಸ್ಎಕ್ಸ್ ಮಾದರಿಗಿಂತ ರೂ.78,800 ಕಡಿಮೆ ಬೆಲೆ ಹೊಂದಿದ್ದು, ಬೆಲೆ ಕಡಿತಗೊಳಿಸಲು ಹೊಸ ಆವೃತ್ತಿಯಲ್ಲಿ ಕೆಲವು ಪ್ರೀಮಿಯಂ ಫೀಚರ್ಸ್ ಕೈಬಿಡಲಾಗಿದೆ.

ಬೆಲೆ ಕಡಿತಕ್ಕಾಗಿ ಕಂಪನಿಯು ಹೊಸ ಆವೃತ್ತಿಯಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, ಕಾರ್ ಟೆಕ್ ಕನೆಕ್ಟಿವಿಟಿ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, ಡೋರ್ ಹ್ಯಾಂಡಲ್ ಕ್ರೋಮ್, ಥೆಫ್ಟ್ ಅಲಾರಾಂ, ಅರ್ಕಾಮಿಸ್ ಸೌಂಡ್ ಸಿಸ್ಟಂ ಮತ್ತು ಧ್ವನಿ ಗ್ರಹಿಸುವಿಕೆಯಂತಹ ವೈಶಿಷ್ಟ್ಯಗಳನ್ನು ತೆಗೆದುಹಾಕಲಾಗಿದೆ.

ಪ್ರೀಮಿಯಂ ಫೀಚರ್ಸ್ ಕೈಬಿಡಲಾಗಿದ್ದರೂ ಹೊಸ ಆವೃತ್ತಿಯಲ್ಲಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ಮುಂದುವರಿಸಲಾಗಿದ್ದು, ಬ್ಲೂಟೂಥ್ ಕನೆಕ್ಟಿವಿಟಿ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ಶಾರ್ಕ್ ಫಿನ್ ಆಂಟೆನಾ, ಯುಎಸ್‌ಬಿ ಫೋರ್ಟ್, ಎಲ್ಇಡಿ ಹೆಡ್‌ಲೈಟ್ಸ್, 17-ಇಂಚಿನ ಅಲಾಯ್ ವೀಲ್ಹ್, ಕ್ರೂಸ್ ಕಂಟ್ರೋಲ್, ಆಟೋ ಎಸಿ ಸೇರಿದಂತೆ ಹಲವಾರು ಫೀಚರ್ಸ್‌ಗಳನ್ನು ಹೊಸ ಮಾದರಿಯಲ್ಲಿ ಉಳಿಸಿಕೊಳ್ಳಲಾಗಿದೆ.

ಹೊಸ ಆವೃತ್ತಿಯು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ಪೆಟ್ರೋಲ್ ಮತ್ತು ಡೀಸೆಲ್ ಎರಡು ಆವೃತ್ತಿಯಲ್ಲೂ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಎಸ್ಎಕ್ಸ್ ಎಕ್ಸಿಕ್ಯೂಟಿವ್ ಆವೃತ್ತಿಯ ಆರಂಭಿಕ ಬೆಲೆಯು ರೂ. 13.14 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಹೊಸ ಆವೃತ್ತಿಯು ಶೀಘ್ರದಲ್ಲೇ ಅಧಿಕೃತವಾಗಿ ಖರೀದಿಗೆ ಲಭ್ಯವಾಗಲಿದೆ.

ಇನ್ನು ಕ್ರೆಟಾ ನ್ಯೂ ಜನರೇಷನ್ ಆವೃತ್ತಿಯು ಭಾರತದಲ್ಲಿ ಬಿಡುಗಡೆಯಾಗಿ ಒಂದು ವರ್ಷ ಪೂರ್ಣಗೊಳಿಸಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ದಾಖಲೆಗೆ ಕಾರಣವಾಗಿರುವ ಕ್ರೆಟಾ ಆವೃತ್ತಿಯು ಬಿಡಗಡೆ ಹಲವು ವರ್ಷಗಳ ನಂತರವೂ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದೆ.

2020ರ ಮಾರ್ಚ್ 16ರಂದು ನ್ಯೂ ಜನರೇಷನ್ ಕ್ರೆಟಾ ಕಾರು ಮಾದರಿಯನ್ನು ಭಾರೀ ಬದಲಾವಣೆಯೊಂದಿಗೆ ಬಿಡುಗಡೆಗೊಳಿಸಿದ್ದ ಹ್ಯುಂಡೈ ಕಂಪನಿಯು ಒಂದು ವರ್ಷದ ಅವಧಿಯಲ್ಲಿ ಬರೋಬ್ಬರಿ 1.30 ಲಕ್ಷ ಯುನಿಟ್ ಮಾರಾಟಗೊಳಿಸಿತ್ತು.

ನ್ಯೂ ಜನರೇಷನ್ ಮಾದರಿಯೊಂದಿಗೆ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಮಾರಾಟವಾದ ಕಾರು ಮಾದರಿಯಾಗಿ ಹೊರಹೊಮ್ಮಿದ್ದು, ಉತ್ಪಾದನಾ ಸಾಮರ್ಥ್ಯಕ್ಕಿಂತಲೂ ಮೂರು ಪಟ್ಟು ಹೆಚ್ಚು ಬೇಡಿಕೆ ಪಡೆದುಕೊಂಡಿದೆ.

ಬೇಡಿಕೆಗೆ ಅನುಗುಣವಾಗಿ ಹೊಸ ಕಾರಿನ ಉತ್ಪಾದನಾ ಸಾಮರ್ಥ್ಯವನ್ನು ದ್ವಿಗುಣಗೊಳಿಸಿರುವ ಹ್ಯುಂಡೈ ಕಂಪನಿಯು ಗ್ರಾಹಕರಿಗೆ ನಿಗದಿತ ಅವಧಿ ಹೆಚ್ಚಿನ ಮಟ್ಟದ ಯುನಿಟ್‌ಗಳನ್ನು ವಿತರಿಸುತ್ತಿದ್ದು, ಕಳೆದ ಎರಡು ವರ್ಷಗಳಲ್ಲಿ ಎಸ್‌ಯುವಿ ಬೇಡಿಕೆ ಪ್ರಮಾಣವು ಶೇ.25ರಿಂದ ಶೇ.33ಕ್ಕೆ ಏರಿಕೆಯಾಗಿರುವುದು ಕ್ರೆಟಾ ಬೇಡಿಕೆಯಲ್ಲಿ ಮತ್ತಷ್ಟು ಹೊಸ ಬೇಡಿಕೆ ಹರಿದುಬರುತ್ತಿದೆ.

ಹೊಸ ಕ್ರೆಟಾ ಕಾರು ಗ್ರಾಹಕರ ಬೇಡಿಕೆಯೆಂತೆ ಒಟ್ಟು 5 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಬಿಎಸ್-6 ವೈಶಿಷ್ಟ್ಯತೆಯ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ.

ಕ್ರೆಟಾ ಕಂಪ್ಯಾಕ್ಟ್ ಎಸ್‌ಯವಿ ಮಾದರಿಯು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 10 ಲಕ್ಷದಿಂದ ಟಾಪ್ ಎಂಡ್ ಆವೃತ್ತಿಯು ರೂ.17.54 ಲಕ್ಷ ಬೆಲೆ ಹೊಂದಿದ್ದು, ಹೊಸ ಕಾರು ಮುಂಬರುವ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.


Click it and Unblock the Notifications








