ಹೊಸ ಹ್ಯುಂಡೈ ಐ20 ಎನ್ ಲೈನ್ ಪರ್ಫಾಮೆನ್ಸ್ ಕಾರು ಖರೀದಿಗೆ ಡೀಲರ್ ಮಟ್ಟದ ಬುಕ್ಕಿಂಗ್ ಆರಂಭ

ಜನಪ್ರಿಯ ಕಾರು ತಯಾರಕ ಕಂಪನಿಯಾಗಿರುವ ಹ್ಯುಂಡೈ ತನ್ನ ಎನ್-ಲೈನ್ ಸರಣಿಯ ಪರ್ಫಾರ್ಮೆನ್ಸ್ ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಭರ್ಜರಿಯಾಗಿ ಸಜ್ಜಾಗುತ್ತಿದೆ. ಈ ಹ್ಯುಂಡೈ ಎನ್ ಲೈನ್ ಪರ್ಫಾರ್ಮೆನ್ಸ್ ಕಾರುಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆಗಳನ್ನು ಗಳಿಸಿದೆ.

ಹೊಸ ಹ್ಯುಂಡೈ ಐ20 ಎನ್ ಲೈನ್ ಪರ್ಫಾಮೆನ್ಸ್ ಕಾರು ಖರೀದಿಗೆ ಡೀಲರ್ ಮಟ್ಟದ ಬುಕ್ಕಿಂಗ್ ಆರಂಭ

ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಪರ್ಫಾಮೆನ್ಸ್ ಕಾರುಗಳ ಸಂಖ್ಯೆಯು ವಿರಳವಾಗಿದೆ. ಆದರೆ ಈ ಮೊದಲು ಭಾರತದಲ್ಲಿ ಹಲವು ಜನಪ್ರಿಯ ಕಾರು ತಯಾರಕ ಕಂಪನಿಗಳು ಪರ್ಫಾಮೆನ್ಸ್ ಕಾರುಗಳನ್ನು ಬಿಡುಗಡೆಗೊಳಿಸಲಾಗಿತ್ತು. ಆದರೆ ಆ ಪರ್ಫಾಮೆನ್ಸ್ ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ದೊಡ್ಡ ಯಶಸ್ವಿಯನ್ನು ಗಳಿಸಿಲ್ಲ. ಆದರೆ ಇದೀಗ ಜನಪ್ರಿಯ ಹ್ಯುಂಡೈ ಕಂಪನಿಯು ಹೊಸ ಐ20 ಎನ್ ಲೈನ್ ಪರ್ಫಾಮೆನ್ಸ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಎನ್ ಲೈನ್ ಪರ್ಫಾಮೆನ್ಸ್ ಕಾರುಗಳ ಬಿಡುಗಡೆಗೊಳಿಸಲಿದೆ ಎಂದು ಹ್ಯುಂಡೈ ಕಂಪನಿಯು ಅಧಿಕೃತವಾಗಿ ಇತ್ತೀಚೆಗೆ ಘೋಷಣೆ ಮಾಡಿದರು.

ಹೊಸ ಹ್ಯುಂಡೈ ಐ20 ಎನ್ ಲೈನ್ ಪರ್ಫಾಮೆನ್ಸ್ ಕಾರು ಖರೀದಿಗೆ ಡೀಲರ್ ಮಟ್ಟದ ಬುಕ್ಕಿಂಗ್ ಆರಂಭ

ಮೊದಲಿಗೆ ಹ್ಯುಂಡೈ ಕಂಪನಿಯ ಎನ್ ಸರಣಿಯ ಜನಪ್ರಿಯ ಐ20 ಎನ್ ಲೈನ್‌ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಇನ್ನು ಈ ಹೊಸ ಹ್ಯುಂಡೈ ಐ20 ಎನ್ ಲೈನ್ ಪರ್ಫಾರ್ಮೆನ್ಸ್ ಕಾರು ಇದೇ ತಿಂಗಳ 24 ರಂದು ಭಾರತದಲ್ಲಿ ಅನಾವಾಣವಾಗಲಿದೆ. ಇದೀಗ ಹ್ಯುಂಡೈ ಐ20 ಎನ್ ಲೈನ್‌ ಕಾರು ಖರೀದಿಗಾಗಿ ಆಯ್ದ ಡೀಲರುಗಳು ಬುಕ್ಕಿಂಗ್ ಪ್ರಾರಂಭಿಸಿದ್ದಾರೆ ಎಂದು ವರದಿಗಳಾಗಿದೆ.

ಹೊಸ ಹ್ಯುಂಡೈ ಐ20 ಎನ್ ಲೈನ್ ಪರ್ಫಾಮೆನ್ಸ್ ಕಾರು ಖರೀದಿಗೆ ಡೀಲರ್ ಮಟ್ಟದ ಬುಕ್ಕಿಂಗ್ ಆರಂಭ

ಈ ಹಾಟ್ ಹ್ಯಾಚ್‌ಗಾಗಿ ಖರೀದಿಗಾಗಿ ಬುಕ್ಕಿಂಗ್ ಟೋಕನ್ ಮೊತ್ತ ರೂ.25,000 ಆಗಿದೆ. ಈ ಹೊಸ ಹ್ಯುಂಡೈ ಐ20 ಎನ್ ಲೈನ್ ಕಾರು ಪರ್ಫಾಮೆನ್ಸ್ ಕಾರಿನ ಬಗ್ಗೆ ಹೇಳುವುದಾದರೆ, ಇದು ಪರ್ಫಾಮೆನ್ಸ್ ಕಾರು ಆಗಿರುವುದರಿಂದ ಹೆಚ್ಚು ಸ್ಪೋರ್ಟಿ ಲುಕ್ ಅನ್ನು ಹೊಂದಿದೆ.

ಹೊಸ ಹ್ಯುಂಡೈ ಐ20 ಎನ್ ಲೈನ್ ಪರ್ಫಾಮೆನ್ಸ್ ಕಾರು ಖರೀದಿಗೆ ಡೀಲರ್ ಮಟ್ಟದ ಬುಕ್ಕಿಂಗ್ ಆರಂಭ

ಈ ಪರ್ಫಾಮೆನ್ಸ್ ಕಾರು ಹೊಸ ಫ್ರಂಟ್ ಮತ್ತು ರೇರ್ ಬಂಪರ್, ಸೈಡ್ ಸ್ಕರ್ಟ್ ಗಳು ಮತ್ತು ವಿಭಿನ್ನ ವಿನ್ಯಾಸದ ಅಲಾಯ್ ವ್ಹಿಲ್ ಗಳನ್ನು ಹೊಂದಿದೆ. ಇನ್ನು ಕ್ರೋಪ್ ಟ್ರಿಪ್ಡ್ ಡ್ಯುಯಲ್ ಎಕ್ಸಾಸ್ಟ್ ಅನ್ನು ಹೊಂದಿದೆ. ಸ್ಟ್ಯಾಂಡರ್ಡ್ ಐ20 ಮಾದರಿಗೆ ಹೋಲಿಸಿದರೆ ಐ20 ಎನ್ ಲೈನ್ ಕಾರು ಹೆಚ್ಚು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಒಟ್ಟಾರೆಯಾಗಿ ಈ ಐ20 ಎನ್ ಲೈನ್ ಮಾದರಿಯು ಕಾರು ಪ್ರಿಯರನ್ನು ಸೆಳೆಯುಂತಹ ಆಕರ್ಷಕ ಲುಕ್ ಒಳಗೊಂಡಿದೆ.

ಹೊಸ ಹ್ಯುಂಡೈ ಐ20 ಎನ್ ಲೈನ್ ಪರ್ಫಾಮೆನ್ಸ್ ಕಾರು ಖರೀದಿಗೆ ಡೀಲರ್ ಮಟ್ಟದ ಬುಕ್ಕಿಂಗ್ ಆರಂಭ

ಇನ್ನು ಹೊಸ ಹ್ಯುಂಡೈ ಎನ್ ಲೈನ್ ಕಾರಿನ ಇಂಟಿರಿಯರ್ ಹೆಚ್ಚಾಗಿ ಸ್ಟ್ಯಾಂಡರ್ಡ್ ಮಾದರಿಗೆ ಹೋಲುತ್ತದೆ. ಈ ಕಾರಿನ ಒಳಭಾಗದಲ್ಲಿ ಹೊಸ ಸ್ಟೀರಿಂಗ್ ವ್ಹೀಲ್, ಮೆಟಲ್ ಪೆಡಲ್ ಗಳು, ಲೆದರ್ ಗೇರ್ ನಾಬ್ ಸೇರಿದಂತೆ ಕೆಲವು ಬದಲಾವಣೆಗಳನ್ನು ಹೊಂದಿವೆ.ಕಾರಿನ ಒಳಭಾಗದ ಸ್ಟೀರಿಂಗ್ ಸೇರಿದಂತೆ ಹಲವು ಕಡೆಗಳಲ್ಲಿ ಎನ್ ಬ್ಯಾಡ್ಜ್ ಹೊಂದಿರುತ್ತದೆ.

ಹೊಸ ಹ್ಯುಂಡೈ ಐ20 ಎನ್ ಲೈನ್ ಪರ್ಫಾಮೆನ್ಸ್ ಕಾರು ಖರೀದಿಗೆ ಡೀಲರ್ ಮಟ್ಟದ ಬುಕ್ಕಿಂಗ್ ಆರಂಭ

ಈ ಹ್ಯುಂಡೈ ಎನ್ ಲೈನ್ ಕಾರಿನಲ್ಲಿ ಹಲವಾರು ಅತ್ಯಾಧುನಿಕ ಫೀಚರ್ಸ್ ಗಳನ್ನು ಒಳಗೊಂಡಿರಲಿದೆ. ಈ ಪರ್ಫಾರ್ಮೆನ್ಸ್ ಕಾರಿನಲ್ಲಿ ಆಫಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಹೊಂದಿರುವ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ ಅನ್ನು ಹೊಂದಿರುತ್ತದೆ. ಇದರೊಂದಿಗೆ ಫುಲ್ ಡಿಜಿಟಲ್ ಇನ್ಸ್ ಟ್ರೂಮಂಟ್ ಕ್ಲಸ್ಟರ್ ಹೊಂದಿರಲಿದೆ.

ಹೊಸ ಹ್ಯುಂಡೈ ಐ20 ಎನ್ ಲೈನ್ ಪರ್ಫಾಮೆನ್ಸ್ ಕಾರು ಖರೀದಿಗೆ ಡೀಲರ್ ಮಟ್ಟದ ಬುಕ್ಕಿಂಗ್ ಆರಂಭ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಹ್ಯುಂಡೈ ಐ20 ಎನ್ ಲೈನ್ ಪರ್ಫಾರ್ಮೆನ್ಸ್ ಕಾರಿನಲ್ಲಿ 1.6 ಎಲ್ 4 ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 204 ಬಿಹೆಚ್‍ಪಿ ಪವರ್ ಮತ್ತು 275 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥವನ್ನು ಹೊಂದಿರುತ್ತದೆ.

ಹೊಸ ಹ್ಯುಂಡೈ ಐ20 ಎನ್ ಲೈನ್ ಪರ್ಫಾಮೆನ್ಸ್ ಕಾರು ಖರೀದಿಗೆ ಡೀಲರ್ ಮಟ್ಟದ ಬುಕ್ಕಿಂಗ್ ಆರಂಭ

ಇನ್ನು ಭಾರತದಲ್ಲಿ ಬಿಡುಗಡೆಯಾಗಲಿರುವ ಹ್ಯುಂಡೈ ಐ20 ಎನ್ ಲೈನ್ ಕಾರು 1.2 ಎನ್ ಪೆಟ್ರೋಲ್ ಎಂಜಿನ್ ಮತ್ತು 1.0 ಎಲ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ. ಈ ಎಂಜಿನ್ 118 ಬಿಹೆಚ್‍ಪಿ ಪವರ್ ಮತು 200 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥವನ್ನು ಹೊಂದಿದೆ.

ಹೊಸ ಹ್ಯುಂಡೈ ಐ20 ಎನ್ ಲೈನ್ ಪರ್ಫಾಮೆನ್ಸ್ ಕಾರು ಖರೀದಿಗೆ ಡೀಲರ್ ಮಟ್ಟದ ಬುಕ್ಕಿಂಗ್ ಆರಂಭ

ಇನ್ನು ಈ ಪರ್ಫಾಮೆನ್ಸ್ ಕಾರಿನಲ್ಲಿ ಇಂಟರ್ಕೂಲರ್, ಹ್ಯುಂಡೈನ ಹೊಸ ಸಿವಿವಿಡಿ (ನಿರಂತರವಾಗಿ ವೇರಿಯಬಲ್ ವಾಲ್ವ್ ಅವಧಿ) ತಂತ್ರಜ್ಞಾನ ಮತ್ತು 350 ಬಾರ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂನೊಂದಿಗೆ ಮೋಟರ್ ಅನ್ನು ಹೆಚ್ಚಿಸಲಾಗಿದೆ. ಸಿವಿವಿಡಿ ತಂತ್ರಜ್ಞಾನವು ಎಂಜಿನ್‌ನ ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆಯನ್ನು ಸುಧಾರಿಸುತ್ತದೆ. ಈಗಗಾಲೇ ಯುರೋಪ್ ಮಾರುಕಟ್ಟೆಯಲ್ಲಿ ಐ20 ಎನ್ ಲೈನ್‌ ಅನ್ನು ಪರಿಚಯಿಸಲಾಗಿದೆ. ಅದೇ ಮಾದರಿಯಲ್ಲಿ ಸಣ್ಣ ನವೀಕರಣದೊಂದಿಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ಹೇಳಲಾಗುತ್ತಿದೆ.

ಹೊಸ ಹ್ಯುಂಡೈ ಐ20 ಎನ್ ಲೈನ್ ಪರ್ಫಾಮೆನ್ಸ್ ಕಾರು ಖರೀದಿಗೆ ಡೀಲರ್ ಮಟ್ಟದ ಬುಕ್ಕಿಂಗ್ ಆರಂಭ

ಇನ್ನು ಹ್ಯುಂಡೈ ಕಂಪನಿಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೆಟಾ ಮಾರಾಟದ ವೇಗವನ್ನು ಮತ್ತಷ್ಟು ಹೆಚ್ಚಿಸಲು ಕಂಪನಿಯು 2022ರ ಅಂತ್ಯದ ವೇಳೆಗೆ ಕ್ರೆಟಾಕ್ಕೆ ಮಿಡ್-ಲೈಫ್ ಅಪ್‌ಡೇಟ್ ನೀಡಲು ಯೋಜಿಸುತ್ತಿದೆ. ಹ್ಯುಂಡೈ ಕಂಪನಿಯು ಈ ತಿಂಗಳ ಕೊನೆಯಲ್ಲಿ ಬ್ರೆಜಿಲ್‌ನಲ್ಲಿ 2022ರ ಕ್ರೆಟಾ ಫೇಸ್‌ಲಿಫ್ಟ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಲು ಮಾಡಲು ಸಜ್ಜಾಗಿದೆ. ಈ ಹೊಸ ಕ್ರೆಟಾ ಎಸ್‌ಯುವಿಯನ್ನು ಈ ವರ್ಷದ ಆರಂಭದಲ್ಲಿ ರಷ್ಯಾದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು.

ಹೊಸ ಹ್ಯುಂಡೈ ಐ20 ಎನ್ ಲೈನ್ ಪರ್ಫಾಮೆನ್ಸ್ ಕಾರು ಖರೀದಿಗೆ ಡೀಲರ್ ಮಟ್ಟದ ಬುಕ್ಕಿಂಗ್ ಆರಂಭ

ಕೊರಿಯಾದ ಕಾರು ತಯಾರಕರು ಆಗಸ್ಟ್ 25 ರಂದು ದಕ್ಷಿಣ ಅಮೆರಿಕಾದ ದೇಶದಲ್ಲಿ ಜನಪ್ರಿಯ ಕಾಂಪ್ಯಾಕ್ಟ್ ಎಸ್‌ಯುವಿಯ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆ ಮಾಡಲಿದ್ದಾರೆ. ಈ ಕ್ರೆಟಾ ಎಸ್‌ಯುವಿ ಅಥವಾ ಕ್ರೀಟ್ ಬ್ರೆಜಿಲ್ ಮಾರುಕಟ್ಟೆಯಲ್ಲಿ ತಿಳಿದಿರುವಂತೆ, ಕೆಲವು ವಿನ್ಯಾಸದ ಟ್ವೀಕ್‌ಗಳನ್ನು ಹೊಂದಿದ್ದು, ಇದು ಪ್ರಸ್ತುತ ಭಾರತದಲ್ಲಿ ಮಾರಾಟದಲ್ಲಿರುವ ಆವೃತ್ತಿಗಳಿಗಿಂತ ಹೆಚ್ಚಿನ ಪ್ರೀಮಿಯಂ ಆಗಿ ಕಾಣುವಂತೆ ಮಾಡುತ್ತದೆ.

ಹೊಸ ಹ್ಯುಂಡೈ ಐ20 ಎನ್ ಲೈನ್ ಪರ್ಫಾಮೆನ್ಸ್ ಕಾರು ಖರೀದಿಗೆ ಡೀಲರ್ ಮಟ್ಟದ ಬುಕ್ಕಿಂಗ್ ಆರಂಭ

ಹೊಸ ಹ್ಯುಂಡೈ ಐ20 ಎನ್ ಲೈನ್ ಕಾರು ಈಗಾಗಲೇ ಭಾರತದಲ್ಲಿ ಹಲವು ಬಾರಿ ರೋಡ್ ಟೆಸ್ಟ್ ಅನ್ನು ನಡೆಸಿದೆ. ಈ ಹೊಸ ಹ್ಯುಂಡೈ ಐ20 ಎನ್ ಲೈನ್ ಪರ್ಫಾರ್ಮೆನ್ಸ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಹ್ಯುಂಡೈ ಕಂಪನಿಯು ಹೊಸ ಹ್ಯುಂಡೈ ಐ20 ಎನ್ ಲೈನ್ ಕಾರನ್ನು ಪರ್ಫಾಮೆನ್ಸ್ ಕಾರು ಪ್ರಿಯರು ಮತ್ತು ಯುವ ಗ್ರಾಹಕರನ್ನು ಗುರಿಯಾಗಿಸಿಕೊಂಡು ಬಿಡುಗಡೆಗೊಳಿಸುತ್ತಿದ್ದಾರೆ.

Most Read Articles

Kannada
English summary
Hyundai dealerships started unofficial bookings for i20 n line hot hatch details
Story first published: Tuesday, August 17, 2021, 20:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X