i20 ಮಾದರಿಗಳಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಸ್ಥಗಿತಗೊಳಿಸಿದ Hyundai

ಹ್ಯುಂಡೈ (Hyundai) ಕಂಪನಿಯು i20 ಕಾರಿನ ಕೆಲವು ಮಾದರಿಗಳಿಂದ ಡ್ಯುಯಲ್ ಟೋನ್ ಬಣ್ಣವನ್ನು ಕೈಬಿಡುತ್ತಿದೆ. ಡ್ಯುಯಲ್ ಟೋನ್ ಬಣ್ಣ 11 ಮಾದರಿಗಳಲ್ಲಿ ಲಭ್ಯವಿದ್ದು, ಅದರಲ್ಲಿ 6 ಮಾದರಿಗಳಿಂದ ಡ್ಯುಯಲ್ ಟೋನ್ ಬಣ್ಣದ ಆಯ್ಕೆಯನ್ನು ತೆಗೆದುಹಾಕಲಾಗಿದೆ. ಇದನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಪರಿಚಯಿಸಲಾಯಿತು. ಈಗ ಸರಿಯಾಗಿ ಒಂದು ವರ್ಷದ ನಂತರ ಡ್ಯುಯಲ್ ಟೋನ್ ಬಣ್ಣ ಆಯ್ಕೆಯನ್ನು ಬೇಡಿಕೆಯ ದೃಷ್ಟಿಯಿಂದ ಸ್ಥಗಿತಗೊಳಿಸಲಾಗಿದೆ.

i20 ಮಾದರಿಗಳಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಸ್ಥಗಿತಗೊಳಿಸಿದ Hyundai

ಈ ಕಾರು ಪೆಟ್ರೋಲ್, ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಕಳೆದ ಒಂದು ವರ್ಷದಲ್ಲಿ ಹ್ಯುಂಡೈ i20 ಕಾರು ಗ್ರಾಹಕರಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದಿದ್ದು, ಕಾರಿನ ಮಾರಾಟವು 81,000 ಯುನಿಟ್'ಗಳ ಗಡಿ ದಾಟಿದೆ. ಈ ಕಾರು ಈ ಸೆಗ್ ಮೆಂಟಿನಲ್ಲಿರುವ ಅತ್ಯಂತ ದುಬಾರಿ ಕಾರು ಆಗಿದ್ದರೂ ಅದರ ಮಾರಾಟವು ಉತ್ತಮವಾಗಿದೆ. ಆದರೆ ಇದರ ಹೊರತಾಗಿಯೂ, ಕಂಪನಿಯು ಕಡಿಮೆ ಬೇಡಿಕೆಯ ಮಾದರಿಗಳನ್ನು ಸ್ಥಗಿತಗೊಳಿಸುತ್ತಿದೆ.

i20 ಮಾದರಿಗಳಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಸ್ಥಗಿತಗೊಳಿಸಿದ Hyundai

ಇದರ ಅಡಿಯಲ್ಲಿ ಬ್ಲ್ಯಾಕ್ ರೂಫ್‌ನೊಂದಿಗೆ ಫಿಯರಿ ರೆಡ್ ಹಾಗೂ ಬ್ಲ್ಯಾಕ್ ರೂಫ್‌ನೊಂದಿಗೆ ಪೋಲಾರ್ ವೈಟ್‌ ಹೊಂದಿರುವ ಎರಡು ಡ್ಯುಯಲ್ ಟೋನ್ ಬಣ್ಣದ ಆಯ್ಕೆಗಳನ್ನು ತೆಗೆದುಹಾಕಲಾಗಿದೆ. ಇದರ ಜೊತೆಗೆ ಈ ಹ್ಯಾಚ್‌ಬ್ಯಾಕ್ ಆರು ಮೊನೊಟೋನ್ ಬಣ್ಣಗಳಲ್ಲಿ ಲಭ್ಯವಿದೆ. ದೇಶಿಯ ಮಾರುಕಟ್ಟೆಯಲ್ಲಿ ಹ್ಯಾಚ್‌ಬ್ಯಾಕ್‌ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದೆ.

i20 ಮಾದರಿಗಳಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಸ್ಥಗಿತಗೊಳಿಸಿದ Hyundai

ಇಂತಹ ಪರಿಸ್ಥಿತಿಯಲ್ಲಿ ಹ್ಯುಂಡೈ ಐ20 ಕಾರು ಜನರಿಗೆ ಇಷ್ಟವಾಗುತ್ತಿದ್ದು, ಮಾರಾಟವೂ ಉತ್ತಮವಾಗಿದೆ. ಹೊಸ ಹುಂಡೈ i20 ಕಾರ್ ಅನ್ನು ಮ್ಯಾಗ್ನಾ, ಸ್ಪೋರ್ಟ್ಜ್, ಆಸ್ಟಾ ಹಾಗೂ ಆಸ್ಟಾ (O) ಎಂಬ ನಾಲ್ಕು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಸೆಗ್ ಮೆಂಟಿನಲ್ಲಿ ಹ್ಯುಂಡೈ i20 ಸೇರಿದಂತೆ ಕೆಲವು ಕಾರುಗಳನ್ನು ಮಾತ್ರ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ.

i20 ಮಾದರಿಗಳಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಸ್ಥಗಿತಗೊಳಿಸಿದ Hyundai

ಹ್ಯುಂಡೈ i20 ಕಾರಿನಲ್ಲಿರುವ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 120 ಬಿ‌ಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಡಿಸಿಟಿ ಹಾಗೂ ಆರು ಸ್ಪೀಡ್ ಐಎಂಟಿ ಗೇರ್ ಬಾಕ್ಸ್ ನೀಡಲಾಗಿದೆ. ಇನ್ನು 1.2 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 88 ಬಿ‌ಹೆಚ್‌ಪಿ ಪವರ್ ಹಾಗೂ ಐದು ಸ್ಪೀಡ್ ಮ್ಯಾನುಯಲ್ ಗೇರ್‌ಬಾಕ್ಸ್‌ನೊಂದಿಗೆ 83 ಬಿ‌ಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

i20 ಮಾದರಿಗಳಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಸ್ಥಗಿತಗೊಳಿಸಿದ Hyundai

ಈ ಕಾರಿನಲ್ಲಿರುವ 1.5 ಲೀಟರ್ ಡೀಸೆಲ್ ಎಂಜಿನ್ 100 ಬಿ‌ಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6 ಸ್ಪೀಡ್ ಮ್ಯಾನುಯಲ್ ಗೇರ್‌ಬಾಕ್ಸ್‌ ಜೋಡಿಸಲಾಗಿದೆ. ಹೊಸ ಹ್ಯುಂಡೈ i20 ಕಾರಿನ ಇಂಟಿರಿಯರ್'ನಲ್ಲಿ ಕಂಟ್ರೋಲ್ ಬಟನ್‌ ಹೊಂದಿರುವ ಹೊಸ ಸ್ಟೀಯರಿಂಗ್ ವ್ಹೀಲ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಆಪಲ್ ಕಾರ್ ಪ್ಲೇ, ಆಂಡ್ರಾಯಿಡ್ ಆಟೋ ಜೊತೆಗೆ 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಹಾಗೂ ಕಂಪನಿಯ ಬ್ಲೂಲಿಂಕ್ ಕನೆಕ್ಟೆಡ್ ಟೆಕ್ನಾಲಜಿ ನೀಡಲಾಗಿದೆ.

i20 ಮಾದರಿಗಳಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಸ್ಥಗಿತಗೊಳಿಸಿದ Hyundai

ಇದರ ಕ್ಯಾಬಿನ್ ನಲ್ಲಿ ಸಾಫ್ಟ್ ಟಚ್ ಮೆಟೀರಿಯಲ್ ನೀಡಲಾಗಿದ್ದು, ಸೀಟಿನಲ್ಲಿ ಪ್ರೀಮಿಯಂ ಅಪ್ ಹೊಲೆಸ್ಟರಿ, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಚಾರ್ಜಿಂಗ್ ನೀಡಲಾಗಿದೆ. ಆರು ಮೊನೊ ಟೋನ್ ಹಾಗೂ ಎರಡು ಡ್ಯುಯಲ್ ಟೋನ್ ಸೇರಿದಂತೆ ಒಟ್ಟು ಎಂಟು ಬಣ್ಣಗಳಲ್ಲಿ ಈ ಕಾರ್ ಅನ್ನು ಬಿಡುಗಡೆಗೊಳಿಸಲಾಗಿದೆ. ಸುರಕ್ಷತೆಗಾಗಿ ಈ ಕಾರಿನಲ್ಲಿ ಹಲವು ಏರ್‌ಬ್ಯಾಗ್‌, ಎಬಿಎಸ್, ಇಬಿಡಿ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಸೇರಿದಂತೆ ಹಲವಾರು ಫೀಚರ್ ಗಳನ್ನು ನೀಡಲಾಗಿದೆ.

i20 ಮಾದರಿಗಳಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಸ್ಥಗಿತಗೊಳಿಸಿದ Hyundai

ಈ ಕಾರು 16 ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್, ಡೋರ್ ಹಾಗೂ ಡೋರ್ ಹ್ಯಾಂಡಲ್‌ಗಳಲ್ಲಿ ಕ್ರೋಮ್ ಅಸೆಂಟ್ ಹೊಂದಿದೆ. ಈ ಕಾರಿನ ಒಆರ್‌ವಿ‌ಎಂಗಳು ಎಲೆಕ್ಟ್ರಾನಿಕ್ ಅಡ್ಜಸ್ಟಬಲ್ ಆಗಿದ್ದು, ಫೋಲ್ಡ್ ಮಾಡಬಹುದಾಗಿದೆ. ಇವುಗಳಿಗೆ ಟರ್ನ್ ಸಿಗ್ನಲ್‌ಗಳನ್ನು ಸಹ ಸೇರಿಸಲಾಗಿದೆ. ಹೊಸ ಹುಂಡೈ i20 ಪೆಟ್ರೋಲ್ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್ ಪೆಟ್ರೋಲಿಗೆ 21 ಕಿ.ಮೀ ಮೈಲೇಜ್ ನೀಡಿದರೆ, ಪೆಟ್ರೋಲ್ ಸಿವಿಟಿ ಮಾದರಿಯು ಪ್ರತಿ ಲೀಟರ್ ಪೆಟ್ರೋಲಿಗೆ 19.65 ಕಿ.ಮೀ ಹಾಗೂ ಟರ್ಬೋ ಪೆಟ್ರೋಲ್ ಐ‌ಎಂಟಿ ಮಾದರಿಯು 20 ಕಿ.ಮೀ ಮೈಲೇಜ್ ನೀಡುತ್ತದೆ.

i20 ಮಾದರಿಗಳಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಸ್ಥಗಿತಗೊಳಿಸಿದ Hyundai

ಮತ್ತೊಂದೆಡೆ, ಹೊಸ ಹುಂಡೈ i20 ಟರ್ಬೊ ಪೆಟ್ರೋಲ್ ಡಿಸಿಟಿ ಮಾದರಿಯು ಪ್ರತಿ ಲೀಟರ್ ಪೆಟ್ರೋಲಿಗೆ 20.28 ಕಿ.ಮೀ ಮೈಲೇಜ್ ನೀಡುತ್ತದೆ. ಡೀಸೆಲ್ ಮ್ಯಾನುಯಲ್ ಮಾದರಿಯು ಪ್ರತಿ ಲೀಟರ್ ಡೀಸೆಲ್'ಗೆ 25 ಕಿ.ಮೀಗಳ ಮೈಲೇಜ್ ನೀಡುತ್ತದೆ. ಡೀಸೆಲ್ ಮ್ಯಾನುಯಲ್ ಅತ್ಯಧಿಕ ಮೈಲೇಜ್ ನೀಡಿದರೆ, ಪೆಟ್ರೋಲ್ ಸಿವಿಟಿ ಕಡಿಮೆ ಮೈಲೇಜ್ ನೀಡುತ್ತದೆ. ಹೊಸ ಹ್ಯುಂಡೈ i20 ಕಾರ್ ಅನ್ನು ಹೊಸ ವಿನ್ಯಾಸ, ಉತ್ತಮ ಸ್ಟೈಲಿಂಗ್‌ನೊಂದಿಗೆ ಬಿಡುಗಡೆಗೊಳಿಸಲಾಗಿದೆ.

i20 ಮಾದರಿಗಳಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಸ್ಥಗಿತಗೊಳಿಸಿದ Hyundai

ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಹ್ಯಾಲೊಜೆನ್ ಪ್ರೊಜೆಕ್ಟರ್ ಲ್ಯಾಂಪ್‌, ದೊಡ್ಡ ಕ್ಯಾಸ್ಕೇಡಿಂಗ್ ಗ್ರಿಲ್, ಶಾರ್ಪ್ ಶೋಲ್ಡರ್, ಹಿಂಭಾಗದಲ್ಲಿ ಕನೆಕ್ಟೆಡ್ ಟೈಲ್ ಲ್ಯಾಂಪ್‌ಗಳನ್ನು ಹೊಂದಿದೆ. ಟೈಲ್ ಗೇಟ್ ಮೇಲೆ ಕಪ್ಪು ಪ್ಲಾಸ್ಟಿಕ್ ಟ್ರಿಮ್ ನೀಡಲಾಗಿದೆ. ಜೊತೆಗೆ ಮುಂಭಾಗದಲ್ಲಿ ಹೊಸ ಬಂಪರ್ ಹಾಗೂ ಪ್ರೊಜೆಕ್ಟರ್ ಫಾಗ್ ಲ್ಯಾಂಪ್ ಗಳನ್ನು ನೀಡಲಾಗಿದೆ. ಸೈಡ್ ಹಾಗೂ ಹಿಂಭಾಗಗಳಿಗೆ ಸ್ಪೋರ್ಟಿ ವಿನ್ಯಾಸವನ್ನು ನೀಡಲಾಗಿದೆ.

i20 ಮಾದರಿಗಳಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಸ್ಥಗಿತಗೊಳಿಸಿದ Hyundai

ಭವಿಷ್ಯದ ಕಾರುಗಳತ್ತ ಒಂದು ಹೆಜ್ಜೆ ಮುಂದಿಟ್ಟಿರುವ ದಕ್ಷಿಣ ಕೊರಿಯ ಮೂಲದ ಹ್ಯುಂಡೈ ಕಂಪನಿಯು ಶೀಘ್ರದಲ್ಲಿಯೇ ಹೊಸ ಕಾನ್ಸೆಪ್ಟ್ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಅನಾವರಣಗೊಳಿಸಲಿದೆ. ಈ ಕಾನ್ಸೆಪ್ಟ್ ಮಾದರಿಯನ್ನು ಕಾನ್ಸೆಪ್ಟ್ ಸೆವೆನ್ ಎಂದು ಕರೆಯಲಾಗುತ್ತಿದೆ. ಈ ಕಾರ್ ಅನ್ನು ಮಾರುಕಟ್ಟೆಯಲ್ಲಿ ಹ್ಯುಂಡೈ Ioniq 7 ಎಂಬ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ.

i20 ಮಾದರಿಗಳಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಸ್ಥಗಿತಗೊಳಿಸಿದ Hyundai

ಈ ಕಾರ್ ಅನ್ನು ಸಂಪೂರ್ಣವಾಗಿ ಅನಾವರಣಗೊಳಿಸುವ ಮೊದಲು ಹ್ಯುಂಡೈ ಕಂಪನಿಯು ಕೆಲವು ಟೀಸರ್ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಹ್ಯುಂಡೈ ಸೆವೆನ್ ಕಾನ್ಸೆಪ್ಟ್ ಸಂಪೂರ್ಣ ಎಲೆಕ್ಟ್ರಿಕ್ ಎಸ್‌ಯುವಿ ಆಗಿದ್ದು, ಏಳು ಜನರು ಕುಳಿತುಕೊಳ್ಳಬಹುದು.

i20 ಮಾದರಿಗಳಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಸ್ಥಗಿತಗೊಳಿಸಿದ Hyundai

ಈ ಕಾರು ಮೂರು ಸಾಲಿನ ಸೀಟುಗಳನ್ನು ಹೊಂದುವ ಸಾಧ್ಯತೆಗಳಿವೆ. ಹ್ಯುಂಡೈ Ioniq 5 ಹಾಗೂ Ioniq 6 ನಂತರ, ಈಗ Ioniq 7 ಎಲೆಕ್ಟ್ರಿಕ್ ಎಸ್‌ಯು‌ವಿಯನ್ನು ಈ ಸರಣಿಯಲ್ಲಿ ಸೇರಿಸಲಾಗುತ್ತಿದೆ. ಹ್ಯುಂಡೈ ಕಂಪನಿಯು ಬಿಡುಗಡೆಗೊಳಿಸಿರುವ ಟೀಸರ್ ನಲ್ಲಿ ಕಾರಿನ ಬಗ್ಗೆ ಹೆಚ್ಚು ಮಾಹಿತಿಯನ್ನು ಹಂಚಿ ಕೊಂಡಿಲ್ಲ. ಆದರೆ ಟೀಸರ್‌ ಚಿತ್ರಗಳು ಈ ಕಾರನ್ನು ಆಕರ್ಷಕ ವಿನ್ಯಾಸದೊಂದಿಗೆ ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಅಳವಡಿಸಲಾಗುವುದು ಎಂದು ಸಾಬೀತುಪಡಿಸುತ್ತವೆ.

i20 ಮಾದರಿಗಳಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಸ್ಥಗಿತಗೊಳಿಸಿದ Hyundai

ಕಂಪನಿಯು ಈ ಕಾರಿನ ಮುಂಭಾಗದ ಚಿತ್ರಗಳನ್ನು ಹಂಚಿಕೊಂಡಿದೆ. ಈ ಚಿತ್ರಗಳಲ್ಲಿ ಕಾರಿನಲ್ಲಿ ಪ್ಯಾರಾಮೆಟ್ರಿಕ್ ಪಿಕ್ಸೆಲ್ ಲೈಟಿಂಗ್ ಅನ್ನು ಬಳಸಲಾಗಿರುವುದನ್ನು ಕಾಣಬಹುದು. ಕಾರಿನ ಮುಂಭಾಗದಲ್ಲಿ ಎಲ್ಇಡಿ ಲೈಟ್ ಬಾರ್ ಅನ್ನು ಅಳವಡಿಸಲಾಗಿದೆ. ಅದು ಹುಡ್'ನ ಒಂದು ತುದಿಯಿಂದ ಮತ್ತೊಂದು ತುದಿಗೆ ಚಲಿಸುತ್ತದೆ. ಹುಡ್ ಅಡಿಯಲ್ಲಿ ಪ್ಯಾರಾಮೆಟ್ರಿಕ್ ಎಲ್ಇಡಿ ಪಿಕ್ಸೆಲ್'ಗಳನ್ನು ಬಳಸುವ ಎಲ್ಇಡಿ ಹೆಡ್ ಲೈಟ್ ಯುನಿಟ್ ನೀಡಲಾಗಿದೆ.

i20 ಮಾದರಿಗಳಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆ ಸ್ಥಗಿತಗೊಳಿಸಿದ Hyundai

ಇದರ ಜೊತೆಗೆ ಕಾರಿನ ಚಕ್ರವನ್ನು ಸಹ ಚಿತ್ರದಲ್ಲಿ ತೋರಿಸಲಾಗಿದೆ. ಅದರ ಮೇಲೆ ಕ್ರೋಮ್ ಅನ್ನು ಸಿಲ್ವರ್ ಅಸೆಂಟ್'ನಲ್ಲಿ ಕಾಣಬಹುದು. ಈ ಎಸ್‌ಯುವಿಯು ಕಡು ಹಸಿರು ಬಣ್ಣದಲ್ಲಿದ್ದು ಮುಂಭಾಗದ ಬಂಪರ್‌ನಲ್ಲಿ ಸೆವೆನ್ ಎಂದು ಬರೆಯಲಾಗಿದೆ. ಹ್ಯುಂಡೈನ ಸೆವೆನ್ ಕಾನ್ಸೆಪ್ಟ್ ಎಸ್‌ಯುವಿಯಲ್ಲಿ ಪ್ರೀಮಿಯಂ ಇಂಟೀರಿಯರ್‌ಗಳನ್ನು ನೀಡಲಾಗಿದೆ. ಅದರ ಇಂಟಿರಿಯರ್'ನಲ್ಲಿರುವ ಪರ್ಸನಲ್ ಲಾಂಜ್ ಹೆಚ್ಚು ಗಮನ ಸೆಳೆಯುತ್ತದೆ. ಈ ಲಾಂಜ್ ರೂಂನಂತಹ ವಾತಾವರಣವನ್ನು ನೀಡುತ್ತದೆ.

Most Read Articles

Kannada
English summary
Hyundai discontinues dual tone color options in some variants of i20 details
Story first published: Wednesday, November 17, 2021, 12:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X