Just In
Don't Miss!
- News
ಹುಣಸೋಡು ಜಿಲೆಟಿನ್ ಸ್ಪೋಟ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
- Sports
ಯುವರಾಜ್ ಸಿಂಗ್ ಕೋಚಿಂಗ್ ಬಹಳ ಉಪಯೋಗಕ್ಕೆ ಬಂತು: ಗಿಲ್
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಥಗಿತಗೊಳ್ಳಲಿದೆ ಹ್ಯುಂಡೈ ಕಂಪನಿಯ ಹಲವು ಕಾರುಗಳ ಮಾರಾಟ
ದಕ್ಷಿಣ ಕೊರಿಯಾ ಮೂಲದ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಹೊಸ ವರ್ಷದಲ್ಲಿ ಭಾರತದಲ್ಲಿರುವ ತನ್ನ ಕಾರು ಸರಣಿಯನ್ನು ಪುನರ್ ರಚಿಸಿದೆ. ಕಂಪನಿಯು ತನ್ನ ಕೆಲವು ಜನಪ್ರಿಯ ಕಾರುಗಳ ಆಯ್ದ ಮಾದರಿಗಳ ಮಾರಾಟವನ್ನು ಸ್ಥಗಿತಗೊಳಿಸಿದೆ.

ಇವುಗಳಲ್ಲಿ ಕಂಪನಿಯ ವೆನ್ಯೂ, ಸ್ಯಾಂಟ್ರೊ , ಗ್ರ್ಯಾಂಡ್ ಐ 10 ನಿಯೋಸ್ ಮಾದರಿಗಳು ಸೇರಿವೆ. ಯಾವ ಕಾರಣಕ್ಕೆ ಈ ಮಾದರಿಗಳನ್ನು ಸ್ಥಗಿತಗೊಳಿಸಲಾಗಿದೆ ಎಂಬ ಕಾರಣವನ್ನು ಕಂಪನಿಯು ನೀಡಿಲ್ಲ. ಆದರೆ ಕಂಪನಿಯು ಈ ಬಗ್ಗೆ ದೇಶಾದ್ಯಂತವಿರುವ ಡೀಲರ್'ಗಳಿಗೆ ಮಾಹಿತಿ ನೀಡಿದೆ. ಸ್ಟಾಕ್ ಇರುವವರೆಗೊ ಈ ಕಾರುಗಳ ಬುಕ್ಕಿಂಗ್ ಸ್ವೀಕರಿಸುವಂತೆ ಸೂಚನೆ ನೀಡಿದೆ.

ಹ್ಯುಂಡೈ ಕಂಪನಿಯು ವೆನ್ಯೂ ಕಾರಿನ 1.0-ಲೀಟರ್ ಟರ್ಬೊ ಎಸ್ ಎಂಟಿ ಮಾದರಿಯ ಮಾರಾಟವನ್ನು ಸ್ಥಗಿತಗೊಳಿಸಿದೆ. ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿರುವ ಈ ಮಾದರಿಯು ಕಂಪನಿಯ ಎಕಾನಾಮಿಕ್ ಮಾದರಿಗಳಲ್ಲಿ ಒಂದು.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಈ ಟರ್ಬೊ-ಪೆಟ್ರೋಲ್ ಎಂಜಿನ್ ಹಾಗೂ ಗೇರ್‌ಬಾಕ್ಸ್ ಸಂಯೋಜನೆಯ ಮೂಲಕ ಈ ಕಾರನ್ನು ಎಸ್‌ಎಕ್ಸ್ ಹಾಗೂ ಎಸ್‌ಎಕ್ಸ್ (ಒ) ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. 1.0-ಲೀಟರ್ ಟರ್ಬೊ ಎಸ್ ಎಂಟಿ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.8.52 ಲಕ್ಷಗಳಾಗಿದೆ.

ಈ ಎಂಜಿನ್‌ನೊಂದಿಗೆ ಐಎಂಟಿ ಹಾಗೂ 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗಳನ್ನು ನೀಡಲಾಗುತ್ತದೆ. ಈ ಮಾದರಿಯು ಹೆಚ್ಚು ಜನಪ್ರಿಯವಾಗದೇ ಕಡಿಮೆ ಸಂಖ್ಯೆಯಲ್ಲಿ ಮಾರಾಟವಾದ ಕಾರಣ ಸ್ಥಗಿತಗೊಳಿಸಲಾಗುತ್ತಿದೆ ಎಂದು ಹೇಳಲಾಗಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಈ ಮಾದರಿಯ ಜೊತೆಗೆ ಹ್ಯುಂಡೈ ಕಂಪನಿಯು ಗ್ರ್ಯಾಂಡ್ ಐ 10 ನಿಯೋಸ್ ಹಾಗೂ ಸ್ಯಾಂಟ್ರೊ ಕಾರುಗಳ ಕಾರ್ಪೊರೇಟ್ ಆವೃತ್ತಿಗಳ ಮಾರಾಟವನ್ನು ಸ್ಥಗಿತಗೊಳಿಸಿದೆ. ಹಬ್ಬದ ವೇಳೆಯಲ್ಲಿ ಮಾರಾಟವನ್ನು ಹೆಚ್ಚಿಸಲು ಹ್ಯುಂಡೈ ಕಂಪನಿಯು ಕಾರ್ಪೊರೇಟ್ ಆವೃತ್ತಿಗಳನ್ನು ಬಿಡುಗಡೆಗೊಳಿಸಿತ್ತು.

ಈಗ ಹ್ಯುಂಡೈ ಕಂಪನಿಯು ಈ ಸೀಮಿತ ಆವೃತ್ತಿಯ ಮಾದರಿಗಳ ಮಾರಾಟವನ್ನು ಸ್ಥಗಿತಗೊಳಿಸಿದೆ. 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಹ್ಯುಂಡೈ ಕಂಪನಿಯು ತನ್ನ ಗ್ರ್ಯಾಂಡ್ ಐ 10 ನಿಯೋಸ್ ಕಾರಿನ ಕಾರ್ಪೊರೇಟ್ ಆವೃತ್ತಿಯನ್ನು ಬಿಡುಗಡೆಗೊಳಿಸಿತ್ತು.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಈ ಆವೃತ್ತಿಯು ಮ್ಯಾಗ್ನಾ ಮಾದರಿಯನ್ನು ಆಧರಿಸಿದೆ. ಈ ಆವೃತ್ತಿಯ ಬೆಲೆಯನ್ನು ಏರಿಕೆ ಮಾಡಿದ್ದ ಹ್ಯುಂಡೈ ಕಂಪನಿಯು ಈ ಮಾದರಿಯಲ್ಲಿ ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಹೊಂದಿರುವ 6.7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ಅನ್ನು ಅಳವಡಿಸಿದೆ.

ಈ ಮಾದರಿಯಲ್ಲಿ ಹೆಚ್‌ಪಿಎ ಏರ್ ಫಿಲ್ಟರ್, ಆ್ಯಂಟಿ ಬ್ಯಾಕ್ಟೀರಿಯಾ, ಆ್ಯಂಟಿ ಫಂಗಸ್ ಸೀಟ್ ಫ್ಯಾಬ್ರಿಕ್, ಕಾರ್ಪೊರೇಟ್ ಎಡಿಷನ್ ಬ್ಯಾಡ್ಜ್, ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್ ಹೊಂದಿರುವ ಎಲೆಕ್ಟ್ರಿಕಾನಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಒಆರ್‌ವಿಎಂ ಹಾಗೂ 15 ಇಂಚಿನ ಅಲಾಯ್ ವ್ಹೀಲ್'ಗಳನ್ನು ಅಳವಡಿಸಲಾಗಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಸ್ಯಾಂಟ್ರೊ ಕಾರಿನ ಕಾರ್ಪೊರೇಟ್ ಆವೃತ್ತಿಯನ್ನು 2020ರ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸಲಾಯಿತು. ಈ ಮಾದರಿಯು ಮ್ಯಾಗ್ನಾ ಮಾದರಿಯನ್ನು ಆಧರಿಸಿದೆ. ಈ ಮಾದರಿಯಲ್ಲಿ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಟರ್ನ್ ಇಂಡಿಕೇಟರ್, ಐಆರ್‌ವಿಎಂ, ಎಲೆಕ್ಟ್ರಿಕಾನಿಕ್ ಅಡ್ಜಸ್ಟಬಲ್ ಒಆರ್‌ವಿಎಂಗಳನ್ನು ಅಳವಡಿಸಲಾಗಿದೆ.