2030ರ ವೇಳೆಗೆ ಹಾರಾಟ ನಡೆಸಲಿವೆ Hyundai ಕಂಪನಿಯ ಫ್ಲೈಯಿಂಗ್ ಕಾರುಗಳು

ನಿರೀಕ್ಷೆಗಿಂತ ಹೆಚ್ಚು ವೇಗವಾಗಿ ಹಾರುವ ಕಾರುಗಳು ಬಳಕೆಗೆ ಬರುತ್ತಿವೆ. ಪ್ರಮುಖ ವಾಹನ ತಯಾರಕ ಕಂಪನಿಗಳಿಂದ ಸ್ಟಾರ್ಟ್ ಅಪ್ ವಾಹನ ತಯಾರಕ ಕಂಪನಿಗಳವರೆಗೆ ಹಲವು ಕಂಪನಿಗಳು ಹಾರುವ ಕಾರುಗಳನ್ನು ಅಭಿವೃದ್ಧಿಪಡಿಸುತ್ತಿವೆ. ಯುರೋಪ್‌ನ ಕೆಲವು ದೇಶಗಳು ಸೇರಿದಂತೆ, ಪ್ರಪಂಚದಾದ್ಯಂತವಿರುವ ಹಲವು ದೇಶಗಳಲ್ಲಿ ಹಾರುವ ಕಾರುಗಳಿಗೆ ಅನುಮತಿ ನೀಡಲಾಗಿದೆ.

2030ರ ವೇಳೆಗೆ ಹಾರಾಟ ನಡೆಸಲಿವೆ Hyundai ಕಂಪನಿಯ ಫ್ಲೈಯಿಂಗ್ ಕಾರುಗಳು

ಈ ಕಾರಣಕ್ಕೆ ಹಾರುವ ಕಾರುಗಳು ನಿರೀಕ್ಷೆಗಿಂತ ಮೊದಲೇ ಹಾರಾಟ ಆರಂಭಿಸುವ ನಿರೀಕ್ಷೆಗಳಿವೆ. ಖ್ಯಾತ ವಾಹನ ತಯಾರಕ ಕಂಪನಿಯಾದ ಹ್ಯುಂಡೈ (Hyundai) ತನ್ನ ಹಾರುವ ಕಾರು ಅತಿ ಶೀಘ್ರದಲ್ಲಿ ಹಾರಾಟ ನಡೆಸಲಿದೆ ಎಂದು ಹೇಳುವ ಮೂಲಕ ಇಡೀ ವಾಹನ ಜಗತ್ತನ್ನು ಅಚ್ಚರಿಗೆ ದೂಡಿದೆ. ಹ್ಯುಂಡೈ ತನ್ನ ಮೊದಲ ಹಾರುವ ಕಾರು ಮಾದರಿ, S-A1 ಕಾನ್ಸೆಪ್ಟ್ ಮಾದರಿಯನ್ನು 2020 ರಲ್ಲಿ ಅನಾವರಣಗೊಳಿಸಿದೆ.

2030ರ ವೇಳೆಗೆ ಹಾರಾಟ ನಡೆಸಲಿವೆ Hyundai ಕಂಪನಿಯ ಫ್ಲೈಯಿಂಗ್ ಕಾರುಗಳು

ಈ ಮಾದರಿಯು ಮೊದಲ ಬಾರಿಗೆ ಪ್ರದರ್ಶನವಾಗಿದೆ. 2028ರ ವೇಳೆಗೆ ಈ ಹಾರುವ ಕಾರು ಕಾರ್ಯಾರಂಭ ಮಾಡಲಿದೆ ಎಂದು ಕಂಪನಿ ತಿಳಿಸಿದೆ. ಈ ದಶಕದ ಅಂತ್ಯದ ವೇಳೆಗೆ ಹಾರುವ ಕಾರುಗಳು ನಿಜವಾಗುತ್ತವೆ ಎಂದು ನಾವು ಭಾವಿಸುತ್ತೇವೆ ಎಂದು ದಿ ಗಾರ್ಡಿಯನ್‌ ಪತ್ರಿಕೆಗೆ ನೀಡಿರುವ ಹೇಳಿಕೆಯಲ್ಲಿ ಹುಂಡೈ ಯುರೋಪ್‌ನ ಮುಖ್ಯ ಕಾರ್ಯನಿರ್ವಾಹಕರಾದ ಮೈಕೆಲ್ ಗೇಲ್ ಹೇಳಿದ್ದಾರೆ.

2030ರ ವೇಳೆಗೆ ಹಾರಾಟ ನಡೆಸಲಿವೆ Hyundai ಕಂಪನಿಯ ಫ್ಲೈಯಿಂಗ್ ಕಾರುಗಳು

ಕಂಪನಿಯು ತನ್ನ ಹಿಂದಿನ ಚಟುವಟಿಕೆಗಳನ್ನು ಚುರುಕುಗೊಳಿಸಿದೆ ಎಂದು ತಿಳಿದುಬಂದಿದೆ. ಇದರ ಜೊತೆಗೆ, ಕಂಪನಿಯ ಮೊದಲ ವಾಣಿಜ್ಯ ಹಾರುವ ಕಾರು, S - A1 ಹಾರುವ ಕಾರ್ 2028 ರ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ವರದಿಗಳ ಪ್ರಕಾರ ಕಂಪನಿಯು ಸದ್ಯಕ್ಕೆ ಈ ಕಾರಿನ ಬಗ್ಗೆ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಹ್ಯುಂಡೈನ ಯುರೋಪಿಯನ್ ಕಾರ್ಯಾಚರಣೆ ಅಧಿಕಾರಿ ಮಾಹಿತಿ ನೀಡಿದ್ದಾರೆ.

2030ರ ವೇಳೆಗೆ ಹಾರಾಟ ನಡೆಸಲಿವೆ Hyundai ಕಂಪನಿಯ ಫ್ಲೈಯಿಂಗ್ ಕಾರುಗಳು

ನಗರ ಪ್ರದೇಶಗಳಲ್ಲಿ ರಸ್ತೆ ದಟ್ಟಣೆ ಹಾಗೂ ಮಾಲಿನ್ಯವನ್ನು ಕಡಿಮೆ ಮಾಡಲು ಹಾರುವ ಕಾರು ನೆರವಾಗುತ್ತದೆ ಎಂದು ಕಂಪನಿ ಹೇಳಿದೆ. ಹ್ಯುಂಡೈ ಕಂಪನಿಯು S-A1 ಹಾರುವ ಕಾರ್ ಅನ್ನು ಅಭಿವೃದ್ಧಿಪಡಿಸುವುದಕ್ಕಾಗಿಯೇ ವಿಶೇಷ ತಂಡವನ್ನು ಸ್ಥಾಪಿಸಿದೆ. ಈ ತಂಡವು ಹಾರುವ ಕಾರಿನ ಅಭಿವೃದ್ಧಿ ಸೇರಿದಂತೆ ಎಲ್ಲಾ ಕಾರ್ಯಗಳನ್ನು ನಿರ್ವಹಿಸುತ್ತದೆ. ಈ ತಂಡವು ವಿಮಾನದಂತಹ ರಚನೆಯೊಂದಿಗೆ ಹಾರುವ ಕಾರನ್ನು ಅಭಿವೃದ್ಧಿಪಡಿಸುತ್ತಿದೆ.

2030ರ ವೇಳೆಗೆ ಹಾರಾಟ ನಡೆಸಲಿವೆ Hyundai ಕಂಪನಿಯ ಫ್ಲೈಯಿಂಗ್ ಕಾರುಗಳು

ಈ ಹಾರುವ ಕಾರು ಗಂಟೆಗೆ 300 ಕಿ.ಮೀ ವೇಗದಲ್ಲಿ ಹಾರಾಟ ನಡೆಸಬಲ್ಲದು. ಈ ಕಾರು ಹಾರಾಟ ನಡೆಸುವಾಗ ವಿಮಾನದಂತೆ ಹಾಗೂ ರಸ್ತೆಯಲ್ಲಿ ರೆಕ್ಕೆಗಳನ್ನು ಚಾಚಿದ ಕಾರಿನಂತೆ ಕಾರ್ಯನಿರ್ವಹಿಸುತ್ತದೆ ಎಂದು ಹ್ಯುಂಡೈ ಕಂಪನಿ ಹೇಳಿದೆ. ಈ ಎಲ್ಲಾ ಕಾರಣಗಳಿಂದಾಗಿ ಈ ಹಾರುವ ಕಾರು ವಾಹನ ಮಾರುಕಟ್ಟೆಯಲ್ಲಿ ದೊಡ್ಡ ಕ್ರಾಂತಿಯನ್ನು ಉಂಟು ಮಾಡುವ ನಿರೀಕ್ಷೆಗಳಿವೆ.

2030ರ ವೇಳೆಗೆ ಹಾರಾಟ ನಡೆಸಲಿವೆ Hyundai ಕಂಪನಿಯ ಫ್ಲೈಯಿಂಗ್ ಕಾರುಗಳು

ಹಾರುವ ಕಾರುಗಳನ್ನು ತಯಾರಿಸುವ ಕಾರ್ಯವು ಹಲವು ವರ್ಷಗಳಿಂದ ಪ್ರಗತಿಯಲ್ಲಿದೆ. 1940 ರಿಂದಲೇ ಈ ಕೆಲಸ ನಡೆಯುತ್ತಿದೆ. ಆದರೆ ಈಗ ಈ ಕಾರ್ಯಗಳು ವೇಗವನ್ನು ಪಡೆದುಕೊಳ್ಳುತ್ತಿವೆ. ರಸ್ತೆ ದಟ್ಟಣೆಯನ್ನು ಕಡಿಮೆ ಮಾಡಲು ಇವುಗಳನ್ನು ಬಳಸಲಾಗುವುದು ಎಂದು ಹೇಳಲಾಗುತ್ತಿದ್ದರೂ, ವಾಹನ ತಜ್ಞರ ಪ್ರಕಾರ ಕಾಲಾನಂತರದಲ್ಲಿ ಆಕಾಶದಲ್ಲಿ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆಗಳಿವೆ.

2030ರ ವೇಳೆಗೆ ಹಾರಾಟ ನಡೆಸಲಿವೆ Hyundai ಕಂಪನಿಯ ಫ್ಲೈಯಿಂಗ್ ಕಾರುಗಳು

ಹಾರುವ ಕಾರುಗಳಲ್ಲಿ ಹಾರಾಟ ನಡೆಸುವುದು ಹಲವರ ಕನಸು. ಈ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಹಾರುವ ಕಾರುಗಳ ಮೇಲೆ ಭಾರೀ ನಿರೀಕ್ಷೆ ಮೂಡಿದೆ. ಇದರಿಂದ ಮುಂಬರುವ ದಿನಗಳಲ್ಲಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿರುವಂತೆಯೇ ಆಗಸದಲ್ಲಿಯೂ ದಟ್ಟಣೆ ಉಂಟಾಗುವ ಸಾಧ್ಯತೆಗಳಿವೆ.

2030ರ ವೇಳೆಗೆ ಹಾರಾಟ ನಡೆಸಲಿವೆ Hyundai ಕಂಪನಿಯ ಫ್ಲೈಯಿಂಗ್ ಕಾರುಗಳು

ಇನ್ನು ಹುಂಡೈ ಮೋಟಾರ್ ಗ್ರೂಪ್ ತನ್ನ ಭವಿಷ್ಯದ ಚಲನಶೀಲತೆಯನ್ನು ಹೆಚ್ಚಿಸಲು ಹೊಸ ಬ್ರಾಂಡ್ ಅನ್ನು ಆರಂಭಿಸಿದೆ. ಹುಂಡೈ ಇತ್ತೀಚೆಗೆ ಸೂಪರ್ನಾಲ್ (Supernal) ಎಲ್‌ಎಲ್‌ಸಿ ಎಂಬ ಹೊಸ ಕಂಪನಿಯನ್ನು ಆರಂಭಿಸಿದೆ. ಈ ಕಂಪನಿಯು ನಗರಗಳ ವಾಯು ಚಲನಶೀಲತೆಯನ್ನು ಅಭಿವೃದ್ಧಿಪಡಿಸುವ ಕಾರ್ಯ ನಿರ್ವಹಿಸುತ್ತದೆ. ಹ್ಯುಂಡೈ ತನ್ನ ಭವಿಷ್ಯದ ಯೋಜನೆಗಳ ಭಾಗವಾಗಿ ಹಾರುವ ವಾಹನಗಳನ್ನು ಅಭಿವೃದ್ಧಿ ಪಡಿಸುವಲ್ಲಿ ನಿರತವಾಗಿದೆ.

2030ರ ವೇಳೆಗೆ ಹಾರಾಟ ನಡೆಸಲಿವೆ Hyundai ಕಂಪನಿಯ ಫ್ಲೈಯಿಂಗ್ ಕಾರುಗಳು

ಇದಕ್ಕಾಗಿ ಕಂಪನಿಯು ಸಾರ್ವಜನಿಕ ಹಾಗೂ ಖಾಸಗಿ ವಲಯದ ಹೂಡಿಕೆದಾರರ ಸಹಕಾರವನ್ನು ಪಡೆಯುತ್ತಿದೆ. ತನ್ನ ಹೊಸ ಕಂಪನಿಯ ಅಡಿಯಲ್ಲಿ ಹ್ಯುಂಡೈ 2028 ರಲ್ಲಿ ಮೊದಲ ವಾಣಿಜ್ಯ ಹಾರುವ ವಾಹನದ ಸಂಚಾರವನ್ನು ಆರಂಭಿಸಲಿದೆ. ಈ ವಾಹನವು 2030 ರಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ. eVTOL ಹಾರುವ ವಾಹನದಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹ್ಯುಂಡೈ ಕಂಪನಿ ಹೇಳಿದೆ.

2030ರ ವೇಳೆಗೆ ಹಾರಾಟ ನಡೆಸಲಿವೆ Hyundai ಕಂಪನಿಯ ಫ್ಲೈಯಿಂಗ್ ಕಾರುಗಳು

ಈ ಹಾರುವ ಕಾರು, ಸಾರಿಗೆ ವಿಧಾನಗಳಲ್ಲಿ ಭಾರೀ ಬದಲಾವಣೆಯನ್ನು ತರಲಿದೆ ಎಂದು ಹೇಳಲಾಗಿದೆ. ಹಾರುವ ಕಾರು ಇವಿಟಿಒಎಲ್ ಪ್ರಯಾಣವನ್ನು ಸುಲಭಗೊಳಿಸುವುದಲ್ಲದೆ, ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲಿದೆ ಎಂದು ಕಂಪನಿ ಹೇಳಿದೆ. ಈ ಹಾರುವ ವಾಹನವನ್ನು ಕೈಗೆಟಕುವ ದರದಲ್ಲಿ ಸಾಮಾನ್ಯ ಗ್ರಾಹಕರಿಗೆ ತಲುಪುವಂತೆ ಮಾಡಲು ವಿಶೇಷ ಗಮನ ನೀಡಲಾಗುತ್ತಿದೆ ಎಂದು ಹ್ಯುಂಡೈ ಹೇಳಿದೆ.

2030ರ ವೇಳೆಗೆ ಹಾರಾಟ ನಡೆಸಲಿವೆ Hyundai ಕಂಪನಿಯ ಫ್ಲೈಯಿಂಗ್ ಕಾರುಗಳು

ಇದಕ್ಕಾಗಿ ಹ್ಯುಂಡೈ ಕಂಪನಿಯು ತನ್ನ ತಂಡದೊಂದಿಗೆ ಎಲ್ಲಾ ಮಾನದಂಡಗಳನ್ನು ಅನುಸರಿಸುವ ಮೂಲಕ ಕೈಗೆಟುಕುವಂತೆ ಮಾಡಲು ಕಾರ್ಯ ನಿರ್ವಹಿಸುತ್ತಿದೆ. ಸೂಪರ್ನಾಲ್ ಭವಿಷ್ಯದ ವಾಹನಗಳನ್ನು ವಿನ್ಯಾಸಗೊಳಿಸುತ್ತಿರುವ 50 ಕ್ಕೂ ಹೆಚ್ಚು ಸಣ್ಣ ಹಾಗೂ ದೊಡ್ಡ ಕಂಪನಿಗಳನ್ನು ಒಳಗೊಂಡಿದೆ. ಸೂಪರ್ನಾಲ್, ವಾಹನಗಳನ್ನು ಅಭಿವೃದ್ಧಿ ಪಡಿಸುವುದು ಮಾತ್ರವಲ್ಲದೆ ಕಂಪನಿಯು ತಯಾರಿಸಿದ ಎಲ್ಲಾ ವಾಹನಗಳನ್ನು ಒಂದೇ ನೆಟ್‌ವರ್ಕ್‌ಗೆ ಸಂಪರ್ಕಿಸುವ ವಾಹನಗಳಿಗೆ ವ್ಯವಸ್ಥೆಯನ್ನು ಸಹ ಅಭಿವೃದ್ಧಿಪಡಿಸುತ್ತಿದೆ.

Most Read Articles

Kannada
English summary
Hyundai flying cars to fly by 2030 details
Story first published: Saturday, December 11, 2021, 12:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X