ಸ್ಥಗಿತವಾಯ್ತು ಜನಪ್ರಿಯ ಹ್ಯುಂಡೈ ಗ್ರ್ಯಾಂಡ್ ಐ10 ಕಾರು

ದಕ್ಷಿಣ ಕೊರಿಯಾ ಮೂಲದ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ಕಂಪನಿಯ ಅಧಿಕೃತ ವೆಬ್‌ಸೈಟ್‌ನಿಂದ ಗ್ರ್ಯಾಂಡ್ ಐ10 ಮಾದರಿಯ ಹೆಸರನ್ನು ತೆಗೆದುಹಾಕಲಾಗಿದೆ. ಈ ಹ್ಯುಂಡೈ ಗ್ರ್ಯಾಂಡ್ ಐ10 ಕಾರಿನ ಉತ್ಪಾದನೆಯನ್ನು ಕೂಡ ನಿಲ್ಲಿಸಲಾಗಿದೆ.

ಸ್ಥಗಿತವಾಯ್ತು ಜನಪ್ರಿಯ ಹ್ಯುಂಡೈ ಗ್ರ್ಯಾಂಡ್ ಐ10 ಕಾರು

ಭಾರತೀಯ ಮಾರುಕಟ್ಟೆಯಲ್ಲಿ ಇನ್ನು ಮುಂದೆ ಹ್ಯುಂಡೈ ಗ್ರ್ಯಾಂಡ್ ಐ10 ಕಾರು ಲಭ್ಯವಿರುವುದಿಲ್ಲ. ಈ ಹಿಂದೆ ಹ್ಯುಂಡೈ ಗ್ರ್ಯಾಂಡ್ ಐ10 ಕಾರಿನ ಡೀಸೆಲ್ ಮಾದರಿಯನ್ನು ಮಾತ್ರ ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ಈ ಗ್ರ್ಯಾಂಡ್ ಐ10 ಕಾರಿನ ಎಲ್ಲಾ ಮಾದರಿಗಳನ್ನು ಕೂಡ ಸ್ಥಗಿತಗೊಳಿಸಲಾಗಿದೆ. ಗ್ರ್ಯಾಂಡ್ ಐ10 ಕಾರನ್ನು ಮ್ಯಾಗ್ನಾ ಹಾಗೂ ಸ್ಪೋರ್ಟ್ಜ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು.

ಸ್ಥಗಿತವಾಯ್ತು ಜನಪ್ರಿಯ ಹ್ಯುಂಡೈ ಗ್ರ್ಯಾಂಡ್ ಐ10 ಕಾರು

ಮ್ಯಾಗ್ನಾ ಮಾದರಿಯ ಕಾರಿನಲ್ಲಿ ಬ್ಲೂಟೂತ್, ಯುಎಸ್‌ಬಿ, ಎಯುಎಕ್ಸ್-ಇನ್ ಹೊಂದಿರುವ ಆಡಿಯೊ ಸಿಸ್ಟಂ, ಸ್ಟೀಯರಿಂಗ್ ಮೌಂಟೆಡ್ ಆಡಿಯೊ ಕಂಟ್ರೋಲ್‍‍, ಎಲೆಕ್ಟ್ರಿಕಲಿ ಅಡ್ಜಸ್ಟಬಲ್ ಒ‍ಆರ್‍‍ವಿ‍ಎಂಗಳು ಮತ್ತು ಮ್ಯಾನುವಲ್ ಏರ್ ಕಾನ್ ಹೊಂದಿರುವ ಹಿಂಭಾಗದ ಎಸಿ ವೆಂಟ್ ಗಳಿವೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಸ್ಥಗಿತವಾಯ್ತು ಜನಪ್ರಿಯ ಹ್ಯುಂಡೈ ಗ್ರ್ಯಾಂಡ್ ಐ10 ಕಾರು

ಇದರೊಂದಿಗೆ ಮುಂಭಾಗದ ಹಾಗೂ ಹಿಂಭಾಗದ ಪವರ್ ವಿಂಡೋಗಳು, ಮಲ್ಟಿ ಇನ್ಫೋ ಡಿಸ್‍‍ಪ್ಲೇ, ಡ್ಯೂಯಲ್ ಏರ್‍‍ಬ್ಯಾಗ್‌, ಇಬಿಡಿಯೊಂದಿಗೆ ಎಬಿಎಸ್, ರೇರ್ ಪಾರ್ಕಿಂಗ್ ಸೆನ್ಸಾರ್‍‍ಗಳಂತಹ ಫೀಚರ್‍‍ಗಳಿವೆ.

ಸ್ಥಗಿತವಾಯ್ತು ಜನಪ್ರಿಯ ಹ್ಯುಂಡೈ ಗ್ರ್ಯಾಂಡ್ ಐ10 ಕಾರು

ಟಾಪ್ ಮಾದರಿಯ ಸ್ಪೋರ್ಟ್ಜ್ ಕಾರಿನಲ್ಲಿ 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ, ರೇರ್ ಪಾರ್ಕಿಂಗ್ ಕ್ಯಾಮೆರಾ, ವಾಯ್ಸ್ ರೆಕಗ್ನಿಷನ್, ಎಲೆಕ್ಟ್ರಿಕ್ ಫೋಲ್ಡಿಂಗ್ ಮಿರರ್, ಕೂಲ್ ಗ್ಲವ್‌ಬಾಕ್ಸ್, ಟಿಲ್ಟ್ ಅಡ್ಜಸ್ಟಬಲ್ ಸ್ಟೀಯರಿಂಗ್ ವ್ಹೀಲ್, ಎಲ್ಇಡಿ ಡಿಆರ್‍ಎಲ್‍ ಹಾಗೂ ರೇರ್ ಸ್ಪಾಯ್ಲರ್‍‍ಗಳಂತಹ ಹೆಚ್ಚುವರಿ ಫೀಚರ್ ಗಳಿವೆ.

MOST READ: 2020ರ ಡಿಸೆಂಬರ್‌ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಸ್ಥಗಿತವಾಯ್ತು ಜನಪ್ರಿಯ ಹ್ಯುಂಡೈ ಗ್ರ್ಯಾಂಡ್ ಐ10 ಕಾರು

ಹ್ಯುಂಡೈ ಗ್ರ್ಯಾಂಡ್ ಐ10 ಕಾರಿನಲ್ಲಿ 1.2 ಲೀಟರಿನ ಕಪ್ಪಾ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 82 ಬಿ‍‍ಹೆಚ್‍‍ಪಿ ಪವರ್ ಹಾಗೂ 114 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸ್ಥಗಿತವಾಯ್ತು ಜನಪ್ರಿಯ ಹ್ಯುಂಡೈ ಗ್ರ್ಯಾಂಡ್ ಐ10 ಕಾರು

ಸಿಎನ್‍‍ಜಿ ಎಂಜಿನ್ 66 ಬಿ‍‍ಹೆಚ್‍‍ಪಿ ಪವರ್ ಹಾಗೂ 98 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು ಈ ಎರಡೂ ಮಾದರಿಗಳಲ್ಲಿ 5 ಸ್ಪೀಡಿನ ಮ್ಯಾನುವಲ್ ಗೇರ್‌ಬಾಕ್ಸ್‌ ಅನ್ನು ಅಳವಡಿಸಲಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಸ್ಥಗಿತವಾಯ್ತು ಜನಪ್ರಿಯ ಹ್ಯುಂಡೈ ಗ್ರ್ಯಾಂಡ್ ಐ10 ಕಾರು

ಹ್ಯುಂಡೈ ಹೊಸ ವರ್ಷದಲ್ಲಿ ಭಾರತದಲ್ಲಿರುವ ತನ್ನ ಕಾರು ಸರಣಿಯನ್ನು ಪುನರ್ ರಚಿಸಿದೆ. ಕಂಪನಿಯು ತನ್ನ ಕೆಲವು ಜನಪ್ರಿಯ ಕಾರುಗಳ ಆಯ್ದ ಮಾದರಿಗಳ ಮಾರಾಟವನ್ನು ಸ್ಥಗಿತಗೊಳಿಸಲಾಗುತ್ತಿದೆ.

ಸ್ಥಗಿತವಾಯ್ತು ಜನಪ್ರಿಯ ಹ್ಯುಂಡೈ ಗ್ರ್ಯಾಂಡ್ ಐ10 ಕಾರು

ಗ್ರ್ಯಾಂಡ್ ಐ10 ಕಾರು ಫಿಯರಿ ರೆಡ್, ಟೈಫೂನ್ ಸಿಲ್ವರ್, ಟೈಟಾನ್ ಗ್ರೇ ಹಾಗೂ ಪೋಲಾರ್ ವೈಟ್ ಎಂಬ ನಾಲ್ಕು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಗ್ರಾಂಡ್ ಐ10 ಭಾರತೀಯ ಮಾರುಕಟ್ಟೆಯಲ್ಲಿ ಫೋರ್ಡ್ ಫಿಗೊ , ಮಾರುತಿ ಸ್ವಿಫ್ಟ್ ಹಾಗೂ ಗ್ರ್ಯಾಂಡ್ ಐ10 ನಿಯೋಸ್ ಕಾರುಗಳಿಗೆ ಪೈಪೋಟಿ ನೀಡುತ್ತಿತ್ತು.

Most Read Articles

Kannada
English summary
Hyundai Grand i10 Removed From The Brand's Website. Read In Kananda.
Story first published: Tuesday, January 12, 2021, 19:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X