ಹೊಸ i20 N Line ಕಾರು ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Hyundai

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯಾದ ಐ20 ಎನ್ ಲೈನ್(i20 N Line) ಪರ್ಫಾಮೆನ್ಸ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ N Line ಮಾದರಿಗಾಗಿ ಹ್ಯುಂಡೈ(Hyundai) ಕಂಪನಿಯು ಆಕ್ಸೆಸರಿಸ್ ಪ್ಯಾಕೇಜ್ ಅನ್ನು ಸಹ ಮಾರಾಟ ಆರಂಭಿಸಿದೆ.

ಹೊಸ i20 N Line ಕಾರು ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Hyundai

ಐ20 ಹ್ಯಾಚ್‌ಬ್ಯಾಕ್ ಮಾದರಿಯಲ್ಲಿ ಮೊದಲ ಹಂತವಾಗಿ N Line ಮಾದರಿಯನ್ನು ಬಿಡುಗಡೆ ಮಾಡಿರುವ ಹ್ಯುಂಡೈ ಕಂಪನಿಯು ಹಂತ-ಹಂತವಾಗಿ ತನ್ನ ಪ್ರಮುಖ ಕಾರು ಮಾದರಿಗಳಲ್ಲಿ ಪರಿಚಯಿಸಲಿದ್ದು, ಸ್ಪೋರ್ಟಿ ಲುಕ್ ಮತ್ತು ಗರಿಷ್ಠ ಮಟ್ಟದ ಪರ್ಫಾಮೆನ್ಸ್ ಹೊಂದಿರುವ ಎನ್ ಲೈನ್ ಆವೃತ್ತಿಗಳು ಜಾಗತಿಕ ಆಟೋ ಉದ್ಯಮದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿವೆ.

ಹೊಸ i20 N Line ಕಾರು ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Hyundai

ಹೊಸ ಐ20 ಎನ್ ಲೈನ್ ಕಾರು ಮಾದರಿಯು ಗ್ರಾಹಕರು ತಮ್ಮ ಬೇಡಿಕೆಗೆ ಪ್ರಮುಖ ಮೂರು ವೆರಿಯೆಂಟ್‌‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಗೇರ್‌ಬಾಕ್ಸ್ ಆಯ್ಕೆಯನ್ನು ಆಧರಿಸಿ N6 iMT, N8 iMT ಮತ್ತು N8 DCT ಆವೃತ್ತಿಗಳನ್ನು ಹೊಂದಿದೆ.

ಹೊಸ i20 N Line ಕಾರು ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Hyundai

ಐ20 ಎನ್ ಲೈನ್ ಆವೃತ್ತಿಯು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚು ಸ್ಪೋರ್ಟಿ ವಿನ್ಯಾಸಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.84 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 11.75 ಲಕ್ಷ ಬೆಲೆ ಹೊಂದಿದೆ.

ಹೊಸ i20 N Line ಕಾರು ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Hyundai

ಹೊಸ ಕಾರು ಮಾದರಿಯು ಸ್ಟ್ಯಾಂಡರ್ಡ್ ಮಾದರಿಗಿಂತ ರೂ. 95 ಸಾವಿರದಷ್ಟು ದುಬಾರಿಯಾಗಿದ್ದು, ಪರ್ಫಾಮೆನ್ಸ್ ಮಾದರಿಗೆ ಪೂರಕವಾಗಿ ಹೊಸ ಕಾರಿನಲ್ಲಿ ಹಲವಾರು ಸ್ಪೋರ್ಟಿ ವಿನ್ಯಾಸಗಳನ್ನು ಮತ್ತು ಪ್ರೀಮಿಯಂ ಇಂಟಿರಿಯರ್ ಸೌಲಭ್ಯಗಳನ್ನು ನೀಡಲಾಗಿದೆ.

ಹೊಸ i20 N Line ಕಾರು ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Hyundai

ಜೊತೆಗೆ ಕಂಪನಿಯು ಆಸಕ್ತ ಗ್ರಾಹಕರಿಗೆ ಹೆಚ್ಚುವರಿ ಮೊತ್ತದೊಂದಿಗೆ ಪ್ರೀಮಿಯಂ ಲುಕ್ ಹೊಂದಿರುವ ಹಲವು ಸೌಲಭ್ಯವುಳ್ಳ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ್ದು, ಅಥ್ಲೆಟಿಕ್ ಮತ್ತು ಪ್ಲ್ಯಾಂಬಾಯೆಂಟ್ ಪ್ಯಾಕೇಜ್ ಬಿಡುಗಡೆ ಮಾಡಿದೆ.

ಹೊಸ i20 N Line ಕಾರು ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Hyundai

ಅಥ್ಲೆಟಿಕ್ ಪ್ಯಾಕೇಜ್‌ಗೆ ರೂ. 24,523 ಮತ್ತು ಪ್ಲ್ಯಾಂಬಾಯೆಂಟ್ ಪ್ಯಾಕೇಜ್‌ಗೆ ರೂ. 13,923 ದರ ನಿಗದಿಪಡಿಸಿದ್ದು, ಕ್ರೊಮ್ ಸೌಲಭ್ಯವು ಕಾರಿನ ಫ್ರಂಟ್, ಸೈಡ್ ಮತ್ತು ಸರೌಂಡ್ ವ್ಯೂಗೆ ಮತ್ತಷ್ಟು ಅಂದ ನೀಡಲಿವೆ.

ಹೊಸ i20 N Line ಕಾರು ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Hyundai

ಹಾಗೆಯೇ ಹೊಸ ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಕಾರಿನ ಇಂಟಿರಿಯರ್ ಸೌಲಭ್ಯಗಳು ಸಹ ಆಕರ್ಷಕವಾಗಿದ್ದು, ಇಂಟಿರಿಯರ್ ಪ್ಯಾಕೇಜ್‌ನಲ್ಲಿ ಬೆಲ್ಟ್ ಕವರ್, ಫ್ಲೋರ್ ಮ್ಯಾಟ್, ಸನ್ ಶೇಡ್ಸ್, ಕಪ್ ಹೋಲ್ಡರ್, ಡೋರ್ ಸ್ಕಫ್ಲ್ ಪ್ಲೇಟ್, ಡೋರ್ ಸ್ಟೀಕ್ಟರ್ಸ್ ಕವರ್ ನೀಡಲಾಗುತ್ತಿದೆ.

ಹೊಸ i20 N Line ಕಾರು ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Hyundai

ಕಾರು ಖರೀದಿಗೂ ಆಕ್ಸೆಸರಿಸ್ ಮಾದರಿಯನ್ನು ಒಳಗೊಂಡಂತೆ ನಿಮ್ಮ ಇಷ್ಟಂದೆ ಆನ್‌ಲೈನ್ ಕಾನ್ಫಿಗೇಷನ್ ಕೂಡಾ ಮಾಡಬಹುದಾಗಿದ್ದು, ಸ್ಪೋರ್ಟಿಯಾಗಿರುವ ರೆಡ್ ಆಕ್ಸೆಂಟ್, ಫ್ರಂಟ್ ಫಾಸಿಯಾದಲ್ಲಿರುವ N Line ಬ್ಯಾಡ್ಜ್ ಕಾರಿನ ಪ್ರಮುಖ ಆಕರ್ಷಣೆಯಾಗಿದೆ.

ಹೊಸ i20 N Line ಕಾರು ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Hyundai

ಇನ್ನು ಹೊಸ ಕಾರಿನಲ್ಲಿ ಸ್ಪೋರ್ಟಿ ವಿನ್ಯಾಸದ 16-ಇಂಚಿನ ಮಲ್ಟಿ ಸ್ಪೋಕ್ ಅಲಾಯ್ ವ್ಹೀಲ್, ಆಲ್ ವ್ಹೀಲ್ ಡಿಸ್ಕ್ ಬ್ರೇಕ್, ಸೈಡ್ ಗಾರ್ನಿಶ್ ಜೊತೆ ರೆಡ್ ಇನ್ಸರ್ಟ್, ಮುಂಭಾಗದ ಚಕ್ರಗಳಲ್ಲಿ ರೆಡ್ ಬ್ರೇಕ್ ಕ್ಯಾಲಿಪರ್‌ನೊಂದಿಗೆ ಕಾರಿನ ಹಿಂಬದಿಯಲ್ಲಿ ಸ್ಪೋರ್ಟಿ ಬಂಪರ್, ಡಿಫ್ಯೂಸರ್, ಟ್ವಿನ್ ಎಕ್ಸಾಸ್ಟ್, ಟೈಲ್ ಗೇಡ್ ಸ್ಪಾಯ್ಲರ್, ಟೈಲ್ ಲ್ಯಾಂಪ್ ಜೋಡಣೆಗಾಗಿ ಡಾರ್ಕ್ ಕ್ರೋಮ್ ನೀಡಲಾಗಿದೆ.

ಹೊಸ i20 N Line ಕಾರು ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Hyundai

ಹೊರಭಾಗದಲ್ಲಿ ಮಾತ್ರವಲ್ಲ ಹೊಸ ಕಾರಿನ ಒಳಭಾಗದಲ್ಲೂ ಹಲವಾರು ಸ್ಪೋರ್ಟಿ ಫೀಚರ್ಸ್ ನೀಡಲಾಗಿದ್ದು, ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೊಸ ಕಾರಿನ ಡ್ಯಾಶ್‌ಬೋರ್ಡ್ ಆಕರ್ಷಕವಾಗಿದೆ. ಹೊಸ ಕಾರಿನಲ್ಲಿ ಆಲ್ ಬ್ಲ್ಯಾಕ್ ಥೀಮ್ ನೀಡಲಾಗಿದ್ದು, ರೆಡ್ ಆಕ್ಸೆಂಟ್ ಜೊತೆ ಆ್ಯಂಬಿಯೆಂಟ್ ಲೈಟಿಂಗ್ಸ್ ನೀಡಲಾಗಿದೆ.

ಹೊಸ i20 N Line ಕಾರು ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Hyundai

ಕೆಲವು ಫೀಚರ್ಸ್‌ಗಳು ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆ ಜೋಡಣೆ ಮಾಡಲಾಗಿದ್ದು, 10.25-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಫೋನ್ ಚಾರ್ಜರ್, ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಸಿಂಗಲ್ ಪ್ಯಾನ್ ಸನ್‌ರೂಫ್, ಬಾಷ್ ಕಂಪನಿಯ 7-ಸ್ಪೀಕರ್ಸ್ ಸೌಂಡ್ ಸಿಸ್ಟಂ ಸೇರಿದಂತೆ ಹಲವಾರು ಹೊಸ ಸೌಲಭ್ಯಗಳಿವೆ.

ಹೊಸ i20 N Line ಕಾರು ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Hyundai

ಐ20 ಎನ್ ಲೈನ್ ಮಾದರಿಯನ್ನು ಹ್ಯುಂಡೈ ಕಂಪನಿಯು 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಮಾದರಿಯಲ್ಲಿ ಮಾತ್ರ ಬಿಡುಗಡೆ ಮಾಡಲಿದ್ದು, ಹೊಸ ಕಾರಿನಲ್ಲಿ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಮತ್ತು 6-ಸ್ಪೀಡ್ ಇಂಟಲಿಜೆಂಟ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಆಯ್ಕೆ ಹೊಂದಿರಲಿದೆ.

ಹೊಸ i20 N Line ಕಾರು ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ Hyundai

ಸ್ಟ್ಯಾಂಡರ್ಡ್ ಮಾದರಿಗಿಂತಲೂ ಅತ್ಯುತ್ತಮ ಪರ್ಫಮೆನ್ಸ್ ಹಿಂದಿರುಗಿಸಲಿದ್ದು, i20 N Line ಮಾದರಿಯು 120-ಬಿಎಚ್‌ಪಿ ಮತ್ತು 172-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಅತಿ ಕಡಿಮೆ ಅವಧಿಯಲ್ಲಿ ಸೊನ್ನೆಯಿಂದ 100 ಕಿ.ಮೀ ಕ್ವಿಕ್ ಸ್ಪೀಡ್ ಪಡೆದುಕೊಳ್ಳುತ್ತದೆ.

Most Read Articles

Kannada
English summary
Hyundai i20 n line accessories revealed price details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X