ಖಚಿತವಾದ ಹ್ಯುಂಡೈ ಎನ್ ಲೈನ್ ಪರ್ಫಾಮೆನ್ಸ್ ಕಾರು ಬಿಡುಗಡೆ
ಹ್ಯುಂಡೈ ಕಂಪನಿಯು ತನ್ನ ಎನ್ ಲೈನ್ ಪರ್ಫಾಮೆನ್ಸ್ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದರ ಬಗ್ಗೆ ಹಲವು ದಿನಗಳ ಹಿಂದೆ ವರದಿಯಾಗಿತ್ತು. ಈ ಎನ್ ಲೈನ್ ಸರಣಿಯ ಕಾರುಗಳು ಈಗಾಗಲೇ ಮಾರಾಟದಲ್ಲಿರುವ ಸ್ಟಾಂಡರ್ಡ್ ಮಾದರಿ ಕಾರುಗಳಿಗಿಂತ ಹೆಚ್ಚು ಶಕ್ತಿಶಾಲಿಯಾಗಿವೆ.

ಈ ಕಾರುಗಳನ್ನು ಹಲವಾರು ಬಾರಿ ಭಾರತದ ರಸ್ತೆಗಳಲ್ಲಿ ಪರೀಕ್ಷಿಸಲಾಗಿದೆ. ಕಾರ್ ವಾಲೆ ಸುದ್ದಿ ಸಂಸ್ಥೆಯ ವರದಿಗಳ ಪ್ರಕಾರ ಹ್ಯುಂಡೈ ಕಂಪನಿಯು, ದೇಶಿಯ ಮಾರುಕಟ್ಟೆಯಲ್ಲಿ ಐ 20 ಕಾರಿನ ಸ್ಪೋರ್ಟಿ ಆವೃತ್ತಿಯನ್ನು ಬಿಡುಗಡೆಗೊಳಿಸುವುದನ್ನು ಖಚಿತಪಡಿಸಿದೆ.

ಐ 20 ಎನ್ ಲೈನ್ ಕಾರು ಸ್ಟಾಂಡರ್ಡ್ ಮಾದರಿ ಕಾರಿಗಿಂತ ವಿಭಿನ್ನವಾದ ಶೇಪ್, ಅಲಾಯ್ ವ್ಹೀಲ್ ಹಾಗೂ ಹಿಂಭಾಗದಲ್ಲಿ ಡ್ಯುಯಲ್ ಎಕ್ಸಾಸ್ಟ್ ಟಿಪ್'ಗಳನ್ನು ಹೊಂದಿದೆ. ಹ್ಯುಂಡೈ ಐ 20 ಎನ್ ಲೈನ್ ಕಾರು ಸ್ಟ್ಯಾಂಡರ್ಡ್ ಮಾದರಿಗೆ ಹೋಲಿಸಿದರೆ ವಿಭಿನ್ನವಾದ ಬಾಡಿ ಕಿಟ್ ಅನ್ನು ಹೊಂದಿದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಈ ಕಾರು ದೊಡ್ಡ ಫ್ರಂಟ್ ಗ್ರಿಲ್, ದೊಡ್ಡ ಏರ್ ಇನ್ ಟೇಕ್, ರಿವೈಸ್ ಮಾಡಲಾದ ಬಂಪರ್, ಮುಂಭಾಗದ ಗ್ರಿಲ್‌ನಲ್ಲಿ ಎನ್ ಲೈನ್ ಬ್ಯಾಡ್ಜಿಂಗ್, ಸುತ್ತಲೂ ಹೈಲೈಟ್, ಹೊಸ ಸೈಡ್ ಸ್ಕರ್ಟ್, ಸೈಡ್ ಸಿಲ್ ಹಾಗೂ ಇನ್ನಿತರ ಬದಲಾವಣೆಗಳನ್ನು ಹೊಂದಿದೆ.

ಈ ಕಾರಿನ ಇಂಟಿರಿಯರ್'ನಲ್ಲಿಯೂ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಈ ಕಾರು ಹೆಚ್ಚು ಸ್ಪೋರ್ಟಿ ಅಂಶಗಳನ್ನು ಹೊಂದಿದೆ. ಕಾಸ್ಮೆಟಿಕ್ ಬದಲಾವಣೆಗಳ ಹೊರತಾಗಿ ಹೊಸ ಐ 20 ಎನ್ ಲೈನ್ ಕಾರಿನಲ್ಲಿ ಮೆಕಾನಿಕಲ್ ಅಪ್ ಡೇಟ್'ಗಳನ್ನು ಸಹ ಮಾಡಲಾಗಿದೆ ಎಂದು ಹೇಳಲಾಗಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಈ ಕಾರಿನಲ್ಲಿ ಹೊಸ ಸಸ್ಪೆಂಷನ್ ಸೆಟಪ್ ಹಾಗೂ ಬ್ರೇಕ್‌ಗಳನ್ನು ನೀಡಲಾಗಿದೆ. ಹೊಸ ಐ 20 ಎನ್ ಲೈನ್ ಕಾರಿನಲ್ಲಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತಹ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ.

ಈ ಎಂಜಿನ್ 120 ಬಿಹೆಚ್‌ಪಿ ಪವರ್ ಹಾಗೂ 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆದರೆ ಎಂಜಿನ್ ಬಗೆಗಿನ ನಿಖರ ವಿವರಗಳನ್ನು ಹ್ಯುಂಡೈ ಕಂಪನಿಯು ಇನ್ನೂ ಪ್ರಕಟಿಸಿಲ್ಲ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಶೀಘ್ರದಲ್ಲಿಯೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಹ್ಯುಂಡೈ ಐ 20 ಎನ್ ಲೈನ್ ಕಾರಿನ ಬೆಲೆ ಸ್ಟಾಂಡರ್ಡ್ ಮಾದರಿಗಿಂತ ಹೆಚ್ಚು ಬೆಲೆಯನ್ನುಹೊಂದಿರುವ ಸಾಧ್ಯತೆಗಳಿವೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಹ್ಯುಂಡೈ ಐ 20 ಎನ್ ಲೈನ್ ಸರಣಿಯ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದು ಖಚಿತವಾಗಿದೆ. ಎನ್ ಲೈನ್ ಜನಪ್ರಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಸ್ಪೋರ್ಟಿ ಆವೃತ್ತಿಯಾಗಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈ ಕಾರ್ ಅನ್ನು ದೇಶದ ಕಾರು ಉತ್ಸಾಹಿಗಳನ್ನು ಗುರಿಯಾಗಿರಿಸಿಕೊಂಡು ಬಿಡುಗಡೆಗೊಳಿಸಲಾಗುತ್ತಿದೆ. ಐ 20 ಎನ್ ಲೈನ್ ಸರಣಿಯ ಕಾರುಗಳು ಎಕ್ಸ್'ಟಿರಿಯರ್, ಇಂಟಿರಿಯರ್ ಫೀಚರ್ ಹಾಗೂ ಶಕ್ತಿಯುತ ಎಂಜಿನ್‌ನೊಂದಿಗೆ ಅದ್ಭುತ ಕಾರು ಆಗುವುದು ಖಚಿತ.


Click it and Unblock the Notifications