ವಿವಿಧ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ ಮಾಡಿದ Hyundai

ಹ್ಯುಂಡೈ ಮೋಟಾರ್ಸ್(Hyundai) ಕಂಪನಿಯು ಹೊಸ ಕಾರು ಮಾರಾಟದಲ್ಲಿ ಹಲವು ತಿಂಗಳಿನಿಂದ ಉತ್ತಮ ಬೇಡಿಕೆ ಕಾಯ್ದುಕೊಳ್ಳುತ್ತಿದ್ದು, ಕೋವಿಡ್ ಪರಿಣಾಮ ತಗ್ಗಿರುವ ಹೊಸ ವಾಹನಗಳ ಮಾರಾಟವನ್ನು ಸುಧಾರಿಸಲು ಹಲವು ಹೊಸ ಕೊಡುಗೆಗಳನ್ನು ಪ್ರಕಟಿಸುತ್ತಿದೆ.

ವಿವಿಧ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ ಮಾಡಿದ Hyundai

ಕೋವಿಡ್‌ ಪರಿಣಾಮ ಏರಿಳಿತ ಕಾಣುತ್ತಿರುವ ಹೊಸ ವಾಹನಗಳ ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಮುಂದಾಗಿರುವ ಪ್ರಮುಖ ಕಾರು ಕಂಪನಿಗಳು ಹಬ್ಬದ ಋುತುಗಳಲ್ಲಿ ವಾಹನ ಖರೀದಿದಾರರನ್ನು ಸೆಳೆಯಲು ವಿವಿಧ ಆಫರ್‌ಗಳನ್ನು ಘೋಷಣೆ ಮಾಡುತ್ತಿದ್ದು, ಹ್ಯುಂಡೈ ಇಂಡಿಯಾ ಕಂಪನಿಯು ಸಹ ಅಕ್ಟೋಬರ್ ಅವಧಿಯಲ್ಲಿ ವಿವಿಧ ಕಾರುಗಳ ಖರೀದಿ ಮೇಲೆ ಆಕರ್ಷಕ ಆಫರ್ ನೀಡುತ್ತಿದೆ.

ವಿವಿಧ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ ಮಾಡಿದ Hyundai

ಹ್ಯುಂಡೈ ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳ ಮೇಲೆ ಗರಿಷ್ಠ ಮಟ್ಟದ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್‌ಗಳಲ್ಲಿ ಎಕ್ಸ್‌ಚೆಂಜ್, ಕ್ಯಾಶ್ ಬ್ಯಾಕ್, ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.

ವಿವಿಧ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ ಮಾಡಿದ Hyundai

ಹೊಸ ವಾಹನಗಳ ಮಾರಾಟಕ್ಕೆ ಪೂರಕವಾಗಿ ಬಹುತೇಕ ಆಟೋ ಕಂಪನಿಗಳು ಹಲವಾರು ಆಫರ್ ನೀಡುತ್ತಿರುವುದಲ್ಲದೆ ಸರಳ ಸಾಲ ಸೌಲಭ್ಯಗಳನ್ನು ಒದಗಿಸುತ್ತಿರುವುದು ಕಾರು ಖರೀದಿಗೆ ಪ್ರಮುಖ ಆಕರ್ಷಣೆಯಾಗಿದ್ದು, ಹ್ಯುಂಡೈ ಕಂಪನಿಯು ಸ್ಯಾಂಟ್ರೋ, ಗ್ರಾಂಡ್ ಐ10 ನಿಯೋಸ್, ಐ20 ಮತ್ತು ಔರಾ ಕಾರುಗಳ ಮೇಲೆ ಉತ್ತಮ ಆಫರ್‌ಗಳನ್ನು ನೀಡಿದೆ.

ವಿವಿಧ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ ಮಾಡಿದ Hyundai

ಎಂಟ್ರಿ ಲೆವಲ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯಾದ ಗ್ರಾಂಡ್ ಐ10 ನಿಯೋಸ್ ಆವೃತ್ತಿಯ ಮೇಲೆ ಹ್ಯುಂಡೈ ಕಂಪನಿಯು ಗರಿಷ್ಠ ರೂ. 50 ಸಾವಿರ ತನಕ ಉಳಿತಾಯ ಮಾಡಬಹುದಾಗಿದ್ದು, ಎಕ್ಸ್‌ಚೆಂಜ್ ಮತ್ತು ಕ್ಯಾಶ್ ಬ್ಯಾಕ್ ಆಫರ್ ಒಳಗೊಂಡಿರಲಿದೆ.

ವಿವಿಧ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ ಮಾಡಿದ Hyundai

ಔರಾ ಕಂಪ್ಯಾಕ್ಟ್ ಸೆಡಾನ್ ಕಾರು ಮಾದರಿಯ ಮೇಲೆ ಹ್ಯುಂಡೈ ಕಂಪನಿಯು ರೂ.50 ಸಾವಿರ ತನಕ ಉಳಿತಾಯಕ್ಕೆ ಅವಕಾಶ ನೀಡಿದ್ದು, ವಾಣಿಜ್ಯ ಬಳಕೆಗಾಗಿ ಖರೀದಿಗೆ ಲಭ್ಯವಿರುವ ಎಕ್ಸೆಂಟ್ ಪ್ರೈಮ್ ಕಾರು ಮಾದರಿಯ ಮೇಲೂ ಗರಿಷ್ಠ ನಗದು ರಿಯಾಯ್ತಿ ಪಡೆದುಕೊಳ್ಳಬಹುದಾಗಿದೆ.

ವಿವಿಧ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ ಮಾಡಿದ Hyundai

ಜೊತೆಗೆ ಕಂಪನಿಯು ಔರಾ ಕಾರಿನ ಸಿಎನ್‌ಜಿ ಮಾದರಿಯ ಮೇಲೂ ಅತ್ಯುತ್ತಮ ಆಫರ್‌ಗಳನ್ನು ನೀಡುತ್ತಿದ್ದು, ನಿಗದಿತ ಅವಧಿಯ ಕಾರು ಖರೀದಿಸುವ ಗ್ರಾಹಕರಿಗೆ ಆಕರ್ಷಕ ಡಿಸ್ಕೌಂಟ್ ಜೊತೆ ಹೆಚ್ಚುವರಿ ವಾರಂಟಿ ಆಫರ್ ನೀಡಲಿದೆ.

ವಿವಿಧ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ ಮಾಡಿದ Hyundai

ಹಾಗೆಯೇ ಹ್ಯುಂಡೈ ಕಂಪನಿಯು ತನ್ನ ಮತ್ತೊಂದು ಜನಪ್ರಿಯ ಕಾರು ಮಾದರಿಯಾದ ಸ್ಯಾಂಟ್ರೋ ಹ್ಯಾಚ್‌ಬ್ಯಾಕ್ ಕಾರು ಖರೀದಿಯ ಮೇಲೆ ರೂ.40 ಸಾವಿರದಷ್ಟು ಎಕ್ಸ್‌ಚೆಂಜ್ ಆಫರ್ ಮತ್ತು ಕ್ಯಾಶ್‌ಬ್ಯಾಕ್ ಆಫರ್ ನೀಡುತ್ತಿದ್ದು, ಸ್ಯಾಂಟ್ರೊ ಕಾರಿನ ಸಿಎನ್‌ಜಿ ಮಾದರಿಯು ಸಹ ಹೊಸ ಆಫರ್ ಒಳಗೊಂಡಿದೆ.

ವಿವಿಧ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ ಮಾಡಿದ Hyundai

ಹೊಸ ಆಫರ್‌ಗಳಲ್ಲಿ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯ ಮೇಲೆ ಕಂಪನಿಯು ರೂ. 40 ಸಾವಿರದಷ್ಟು ವಿವಿಧ ಆಫರ್‌ಗಳನ್ನು ನೀಡುತ್ತಿದ್ದು, ಹೊಸ ಆಫರ್‌ಗಳು ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಗಳ ಮೇಲೂ ಅನ್ವಯವಾಗಲಿದೆ.

ವಿವಿಧ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ ಮಾಡಿದ Hyundai

ಹೊಸ ಆಫರ್‌ಗಳಲ್ಲಿ ಸ್ಯಾಂಟ್ರೋ, ಔರಾ, ಗ್ರಾಂಡ್ ಐ10 ನಿಯೋಸ್ ಮತ್ತು ಐ20 ಹೊರತುಪಡಿಸಿ ವೆನ್ಯೂ, ಕ್ರೆಟಾ, ವೆರ್ನಾ, ಅಲ್ಕಾಜರ್ ಮತ್ತು ಕೊನಾ ಇವಿ ಕಾರುಗಳ ಮೇಲೆ ಯಾವುದೇ ಆಫರ್ ನೀಡಲಾಗಿಲ್ಲ.

ವಿವಿಧ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ ಮಾಡಿದ Hyundai

ಇನ್ನು ಕೋವಿಡ್ 2ನೇ ಅಲೆಯ ಪರಿಣಾಮ ಆರ್ಥಿಕ ಚಟುವಟಿಕೆಗಳಲ್ಲಿ ಏರಿಳಿತ ಕಂಡುಬರುತ್ತಿರುವ ಹಿನ್ನಲೆಯಲ್ಲಿ ಹೊಸ ವಾಹನ ಮಾರಾಟದಲ್ಲಿ ಕುಸಿತ ಕಂಡುಬಂದಿದೆ. ಬಹುತೇಕ ಕಾರು ಕಂಪನಿಗಳ ಹೊಸ ವಾಹನಗಳ ಮಾರಾಟದಲ್ಲಿ ಭಾರೀ ಪ್ರಮಾಣದ ಇಳಿಕೆಯಾಗಿದ್ದು, ಹ್ಯುಂಡೈ ಕಂಪನಿಯು ಸೆಪ್ಟೆಂಬರ್ ಅವಧಿಯಲ್ಲಿ ಹೆಚ್ಚಿನ ಮಟ್ಟದ ಕುಸಿತ ಅನುಭವಿಸಿದೆ.

ವಿವಿಧ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ ಮಾಡಿದ Hyundai

ಹ್ಯುಂಡೈ ಕಂಪನಿಯ ಕೋವಿಡ್ ಪರಿಣಾಮ ಡಿಜಿಟಲ್ ಪ್ಲ್ಯಾಟ್‌ಫಾರ್ಮ್‌ಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಸುರಕ್ಷಿತ ಕಾರು ಮಾರಾಟ ಪ್ರಕ್ರಿಯೆಯ ನಡುವೆಯೂ ಹ್ಯುಂಡೈ ಕಂಪನಿಯ ಸೆಪ್ಟೆಂಬರ್ ಅವಧಿಯ ಕಾರು ಮಾರಾಟದಲ್ಲಿ ಹಿನ್ನಡೆ ಕಂಡಿದೆ. ಕಳೆದ ತಿಂಗಳು ಹ್ಯುಂಡೈ ಕಂಪನಿಯು 45,791 ಯುನಿಟ್ ಮಾರಾಟಗೊಳಿಸಿದ್ದು, ಕಳೆದ ವರ್ಷದ ಸೆಪ್ಟೆಂಬರ್ ಅವಧಿಗಿಂತಲೂ ಶೇ.35 ರಷ್ಟು ಇಳಿಕೆ ಕಂಡಿದೆ.

ವಿವಿಧ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ ಮಾಡಿದ Hyundai

2020ರ ಸೆಪ್ಟೆಂಬರ್ ಅವಧಿಯಲ್ಲಿ ಸುಮಾರು 59,913 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ್ದ ಹ್ಯುಂಡೈ ಕಂಪನಿಯು ಈ ವರ್ಷದ ಸೆಪ್ಟೆಂಬರ್ ಅವಧಿಯಲ್ಲಿ ಶೇ. 35 ರಷ್ಟು ಹಿನ್ನಡೆ ಕಂಡಿದ್ದು, ಮುಂಬರುವ ದಸರಾ ಮತ್ತು ದೀಪಾವಳಿ ವೇಳೆಗೆ ಕಾರು ಮಾರಾಟವು ಸುಧಾರಿಸುವ ನೀರಿಕ್ಷೆಗಳಿವೆ.

ವಿವಿಧ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ ಮಾಡಿದ Hyundai

ಹ್ಯುಂಡೈ ಕಂಪನಿಯು 45,791 ಯನಿಟ್ ಕಾರು ಮಾರಾಟದಲ್ಲಿ 33,087 ಯುನಿಟ್ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದು, 12,704 ಯುನಿಟ್‌ಗಳನ್ನು ವಿದೇಶಿ ಮಾರುಕಟ್ಟೆಗೆ ರಫ್ತು ಮಾಡಿದ್ದು, ಕಳೆದ ವರ್ಷದ ಸೆಪ್ಟೆಂಬರ್ ಅವಧಿಗಿಂತಲೂ ಈ ವರ್ಷದ ಸೆಪ್ಟೆಂಬರ್ ಅವಧಿಯಲ್ಲಿನ ಕಾರು ರಫ್ತು ಪ್ರಮಾಣವು ಶೇ.32ರಷ್ಟು ಹೆಚ್ಚಳವಾಗಿದೆ.

ವಿವಿಧ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ ಮಾಡಿದ Hyundai

ಹ್ಯುಂಡೈ ಕಂಪನಿಯು ಕಾರು ಮಾರಾಟ ಹೆಚ್ಚಳಕ್ಕಾಗಿ ಹಲವಾರು ಹೊಸ ಉಪಕ್ರಮಗಳನ್ನು ಪ್ರಕಟಿಸಿದ್ದು, ನ್ಯೂ ಜನರೇಷನ್ ಕ್ರೆಟಾ ಮತ್ತು ಅಲ್ಕಾಜರ್ ಎಸ್‌ಯುವಿ ಕಾರು ಮಾದರಿಗಳೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

Most Read Articles

Kannada
English summary
Hyundai india offering attractive discounts on its selected models
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X