ಐಷಾರಾಮಿ ಮಿನಿ ಸ್ಕೂಲ್ ಬಸ್ ಪರಿಚಯಿಸಿದ Hyundai

ದಕ್ಷಿಣ ಕೊರಿಯಾದ ಕಾರು ತಯಾರಕ ಕಂಪನಿಯಾದ ಹ್ಯುಂಡೈ 'ಸ್ಟಾರಿಯಾ ಕಿಂಡರ್' ಹೆಸರಿನ ಮಿನಿ ಸ್ಕೂಲ್ ಬಸ್ ಮಾದರಿಯನ್ನು ಪರಿಚಯಿಸಿದೆ. ಕಿಂಡರ್ ಎಂಬುದು ಮಕ್ಕಳು ಎಂಬ ಜರ್ಮನ್ ಪದವಾಗಿದ್ದು, ಇದು ಸ್ಕೂಲ್ ವ್ಯಾನ್‌ಗೆ ಸೂಕ್ತವಾದ ಹೆಸರು ಎಂದು ಇದನ್ನು ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಐಷಾರಾಮಿ ಮಿನಿ ಸ್ಕೂಲ್ ಬಸ್ ಪರಿಚಯಿಸಿದ Hyundai

ಹ್ಯುಂಡೈ ಸ್ಟಾರಿಯಾ ಅತ್ಯಂತ ಆಕರ್ಷಕ ಮತ್ತು ಅತ್ಯಾಧುನಿಕ ಎಂಪಿವಿ ಆಗಿದೆ, ಇದರಿಂದ ಸ್ಟಾರಿಯಾ ಕಿಂಡರ್ ಬಹುಶಃ ವಿಶ್ವದ ಅತ್ಯುತ್ತಮ ಸ್ಕೂಲ್ ಬಸ್ ಗಳಲ್ಲಿ ಒಂದಾಗಿದೆ. ಸ್ಕೂಲ್ ಬಸ್ ಅನ್ನು ಸಾಮಾನ್ಯ ಆವೃತ್ತಿಯಿಂದ ಪ್ರತ್ಯೇಕಿಸಲು ಹೊರಭಾಗದಲ್ಲಿ ಸಾಕಷ್ಟು ಬದಲಾವಣೆಗಳಿವೆ. ಸ್ಟಾರಿಯಾ ಕಿಂಡರ್ ರೂಫ್ ಮೇಲೆ, ಮುಂದೆ ಮತ್ತು ಹಿಂಭಾಗದಲ್ಲಿ, ಡ್ರೈವರ್-ಸೈಡ್ ಡೋರಿನ ಮೇಲೆ ಸ್ಟಾಪ್ ಚಿಹ್ನೆಯೊಂದಿಗೆ ಲೈಟ್ ಬಾರ್‌ಗಳನ್ನು ಪಡೆಯುತ್ತದೆ. ಇನ್ನು ಈ ಸ್ಕೂಲ್ ಬಸ್ ಪ್ರಕಾಶಮಾನವಾದ ಹಳದಿ ಬಣ್ಣದಿಂದ ಕೂಡಿದೆ.

ಐಷಾರಾಮಿ ಮಿನಿ ಸ್ಕೂಲ್ ಬಸ್ ಪರಿಚಯಿಸಿದ Hyundai

ಹ್ಯುಂಡೈ ಸ್ಟಾರಿಯಾ ಕಿಂಡರ್ ಮಿನಿ ಸ್ಕೂಲ್ ಬಸ್ ಎರಡು ರೂಪಾಂತರಗಳಲ್ಲಿ ಲಭ್ಯವಿದೆ-11 ಆಸನಗಳು ಮತ್ತು 15 ಆಸನಗಳು-ಎಲ್ಲಾ ಆಸನಗಳಿಗೆ ಎತ್ತರ-ಹೊಂದಾಣಿಕೆ ಮಾಡಬಹುದಾದ ಸೀಟ್‌ಬೆಲ್ಟ್‌ಗಳೊಂದಿಗೆ. ಇದು ಎಲ್ಲಾ ವಯಸ್ಸಿನ ಮತ್ತು ಗಾತ್ರದ ಮಕ್ಕಳು ಕ್ಯಾಬಿನ್‌ನಲ್ಲಿ ಸುರಕ್ಷಿತವಾಗಿ ಕುಳಿತುಕೊಳ್ಳಲು ಸಾಧ್ಯವಾಗುವಂತೆ ಮಾಡುತ್ತದೆ.

ಐಷಾರಾಮಿ ಮಿನಿ ಸ್ಕೂಲ್ ಬಸ್ ಪರಿಚಯಿಸಿದ Hyundai

ಇದರ ಸೀಟ್ ಬೆಲ್ಟ್ ಮಾನಿಟರಿಂಗ್ ಸಿಸ್ಟಂ ಕೂಡ ಇದೆ, ಇದು ಚಾಲಕನನ್ನು ಅಲರ್ಟ್ ವಾರ್ನಿಂಗ್ ನೀಡುತದೆ. ಮುಂಭಾಗದ ಕಲಿಷನ್ ಅವೈಡನ್ಸ್ ಅಸಿಸ್ಟ್, ಲೇನ್-ಕೀಪ್ ಅಸಿಸ್ಟ್, ಬ್ಲೈಂಡ್-ಸ್ಪಾಟ್ ಲಿಷನ್ ಅವೈಡನ್ಸ್ ಮತ್ತು ಹಿಂಭಾಗದ ಟ್ರಾಫಿಕ್ ಮಾನಿಟರಿಂಗ್ ವ್ಯವಸ್ಥೆಯಂತಹ ಸುರಕ್ಷತಾ ವೈಶಿಷ್ಟ್ಯಗಳು ಇದರಲ್ಲಿ ಲಭ್ಯವಿದೆ.

ಐಷಾರಾಮಿ ಮಿನಿ ಸ್ಕೂಲ್ ಬಸ್ ಪರಿಚಯಿಸಿದ Hyundai

ಈ ಹ್ಯುಂಡೈ ಸ್ಟಾರಿಯಾ ಕಿಂಡರ್‌ನ ಪವರ್‌ಟ್ರೇನ್ ಆಯ್ಕೆಗಳನ್ನು ಹ್ಯುಂಡೈ ಬಹಿರಂಗಪಡಿಸಿಲ್ಲ. ಆದರೆ 3.5 ಲೀಟರ್ ವಿ6 ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 272 ಬಿಹೆಚ್‍ಪಿ ಪವರ್ ಮತ್ತು 331 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ 3.5 ಲೀಟರ್ ವಿ6 ಪೆಟ್ರೋಲ್-LPG ಯುನಿಟ್ ಅನ್ನು ಹೊಂದಿದ್ದು, ಇದು 240 ಬಿಹೆಚ್‍ಪಿ ಪವರ್ ಮತ್ತು 310 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಐಷಾರಾಮಿ ಮಿನಿ ಸ್ಕೂಲ್ ಬಸ್ ಪರಿಚಯಿಸಿದ Hyundai

ಇನ್ನು 2.2 ಲೀಟರ್ 4-ಸಿಲಿಂಡರ್ ಟರ್ಬೊ- ಮೂರು ಎಂಜಿನ್ ಆಯ್ಕೆಗಳೊಂದಿಗೆ ಸಾಮಾನ್ಯ ಸ್ಟಾರಿಯಾದಲ್ಲಿ ಲಭ್ಯವಿದೆ.ಇದರ ಡೀಸೆಲ್ ಯುನಿಟ್ 177 ಬಿಹೆಚ್‍ಪಿ ಪವರ್ ಮತ್ತು 431 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಲಭ್ಯವಿದ್ದು, ಡೀಸೆಲ್ ಮೋಟಾರ್ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆಯುತ್ತದೆ.

ಐಷಾರಾಮಿ ಮಿನಿ ಸ್ಕೂಲ್ ಬಸ್ ಪರಿಚಯಿಸಿದ Hyundai

ಈ ಹ್ಯುಂಡೈ ಸ್ಟಾರಿಯಾ ಎಂಪಿವಿ 11 ಆಸನಗಳ ಮಾದರಿಗೆ 34.78 ಮಿಲಿಯನ್ ವೊನ್ (ಸುಮಾರು ರೂ. 21.95 ಲಕ್ಷ ) ಮತ್ತು 15 ಆಸನಗಳ ಮಾದರಿಗೆ 37.41 ಮಿಲಿಯನ್ ವೊನ್ (ಸುಮಾರು ರೂ. 23.61 ಲಕ್ಷ ) ಆಗಿದೆ. ಇನ್ನು ಈ ಐಷಾರಾಮಿ ಮಿನಿ ಸ್ಕೂಲ್ ಬಸ್ ಅನ್ನು ಸಬ್ಸಿಡಿಗಳೊಂದಿಗೆ ನೀಡಲಾಗುತ್ತದೆ ಎಂದು ತಯಾರಕರು ಹೇಳುತ್ತಾರೆ.

ಐಷಾರಾಮಿ ಮಿನಿ ಸ್ಕೂಲ್ ಬಸ್ ಪರಿಚಯಿಸಿದ Hyundai

ಸಾಮಾನ್ಯ ಹ್ಯುಂಡೈ ಸ್ಟಾರಿಯಾ ಎಂಪಿವಿ ಕಾರು 7 ಸೀಟರ್, 9 ಸೀಟರ್ ಮತ್ತು 11 ಸೀಟರ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಾಗುತ್ತಿದೆ. ಸ್ಟಾರಿಯಾ ಎಂಪಿವಿಯು ಬರೋಬ್ಬರಿ 5,253 ಎಂಎಂ ಉದ್ದ, 1,997 ಎಂಎಂ ಅಗಲ, 1,990 ಎಂಎಂ ಎತ್ತರ ಮತ್ತು 3,273 ಎಂಎಂ ವೀಲ್ಹ್‌ಬೆಸ್ ಹೊಂದಿದ್ದು, 7 ಸೀಟರ್ ಮಾದರಿಯಲ್ಲಿ 2+2+3 ಮಾದರಿಯ ಆಸನ, 9 ಸೀಟರ್ ಮಾದರಿಯಲ್ಲಿ 2+2+2+3 ಮಾದರಿ ಆಸನ ಮತ್ತು 11 ಸೀಟರ್ ಮಾದರಿಯಲ್ಲಿ 2+3+3+3 ಮಾದರಿಯ ಆಸನಗಳನ್ನು ಜೋಡಿಸಲಾಗಿದೆ.

ಐಷಾರಾಮಿ ಮಿನಿ ಸ್ಕೂಲ್ ಬಸ್ ಪರಿಚಯಿಸಿದ Hyundai

ಈ ಸ್ಟಾರಿಯಾ ಕಾರಿನಲ್ಲಿ ಹ್ಯುಂಡೈ ಕಂಪನಿಯು ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಅಳವಡಿಸಿದ್ದು, ದೊಡ್ಡದಾದ ಗ್ರಿಲ್ ಸಿಸ್ಟಂ, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್, ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಟೈಲ್ ಲೈಟ್ ಕ್ಲಸ್ಟರ್ ಮತ್ತು ಸ್ಲೈಡಿಂಗ್ ಡೋರ್ ಜೊತೆಗೆ ಪನೊರಮಿಕ್ ವ್ಯೂ ಹೊಂದಿರುವ ಸೈಡ್ ವಿಂಡೋಗಳನ್ನು ನೀಡಲಾಗಿದೆ ಕಾರಿನ ಒಳಭಾಗವು ಕೂಡಾ ಗ್ರಾಹಕರನ್ನು ಆಕರ್ಷಿಸಲಿದೆ.

ಐಷಾರಾಮಿ ಮಿನಿ ಸ್ಕೂಲ್ ಬಸ್ ಪರಿಚಯಿಸಿದ Hyundai

ಈ ಎಂಪಿವಿ ಕಾರಿನಲ್ಲಿ 10.25-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಕನೆಕ್ಟಿವಿ ಸೌಲಭ್ಯಗಳು, ಪನೊರಮಿಕ್ ವ್ಯೂ, ಅರಾಮದಾಯಕವಾದ ಆಸನಗಳೊಂದಿಗೆ ಎಂಪಿವಿ ಕಾರು ಖರೀದಿದಾರರನ್ನು ಸೆಳೆಯಲಿದ್ದು, ಹೊಸ ಕಾರಿನಲ್ಲಿ ವಿವಿಧ ಮಾದರಿಗಳಿಗಾಗಿ 2.2-ಲೀಟರ್ ಟರ್ಬೊ ಡೀಸೆಲ್ ಮತ್ತು 7 ಸೀಟರ್‌ನೊಂದಿಗೆ ಐಷಾರಾಮಿ ಫೀಚರ್ಸ್ ಹೊಂದಿರುವ ಹೈ ಎಂಡ್ ಮಾದರಿಯಲ್ಲಿ 3.5-ಲೀಟರ್ ವಿ6 ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗುತ್ತಿದೆ.

ಐಷಾರಾಮಿ ಮಿನಿ ಸ್ಕೂಲ್ ಬಸ್ ಪರಿಚಯಿಸಿದ Hyundai

ಇನ್ನು ಭಾರತೀಯ ಮಾರುಕಟ್ತೆಯಲ್ಲಿ ಹ್ಯುಂಡೈ ಕಂಪನಿಯು ಸೆಪ್ಟೆಂಬರ್ ಅವಧಿಯಲ್ಲಿ ಮಾರಾಟದಲ್ಲಿ ಹೆಚ್ಚಿನ ಮಟ್ಟದ ಕುಸಿತ ಅನುಭವಿಸಿದೆ. ಕಳೆದ ತಿಂಗಳು ಹ್ಯುಂಡೈ ಕಂಪನಿಯು 45,791 ಯುನಿಟ್ ಮಾರಾಟಗೊಳಿಸಿದೆ. ಇನ್ನು ಕಳೆದ ವರ್ಷದ ಸೆಪ್ಟೆಂಬರ್ ಅವಧಿಗಿಂತಲೂ ಶೇ.35 ರಷ್ಟು ಇಳಿಕೆ ಕಂಡಿದೆ. 2020ರ ಸೆಪ್ಟೆಂಬರ್ ಅವಧಿಯಲ್ಲಿ ಸುಮಾರು 59,913 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ್ದ ಹ್ಯುಂಡೈ ಕಂಪನಿಯು ಈ ವರ್ಷದ ಸೆಪ್ಟೆಂಬರ್ ಅವಧಿಯಲ್ಲಿ ಶೇ. 35 ರಷ್ಟು ಕುಸಿತವಾಗಿದೆ,

ಐಷಾರಾಮಿ ಮಿನಿ ಸ್ಕೂಲ್ ಬಸ್ ಪರಿಚಯಿಸಿದ Hyundai

ಇನ್ನು ಹ್ಯುಂಡೈ ಸ್ಟಾರಿಯಾ ಇತರ ಆವೃತ್ತಿಗಳಲ್ಲಿ ಲಭ್ಯವಿದೆ, ಅಂದರೆ ಲೋಡ್ ವ್ಯಾನ್ ಮತ್ತು ಕ್ಯಾಂಪರ್. ತಯಾರಕರು ಪ್ರಸ್ತುತ ಯಾವುದೇ ರೂಪದಲ್ಲಿ ಸ್ಟಾರಿಯಾವನ್ನು ಭಾರತಕ್ಕೆ ತರುವ ಯಾವುದೇ ಯೋಜನೆಯನ್ನು ಹೊಂದಿಲ್ಲ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಎಂಪಿವಿ ಕಾರನ್ನು ಸಿದ್ದಪಡಿಸುತ್ತಿದೆ. ಈ ಕಾರಿಗೆ ಸ್ಟಾರ್‌ಗೇಜರ್ ಎಂದು ಹೆಸರಿಸನ್ನು ನೀಡಬಹುದು, ಈ ಹೊಸ ಹ್ಯುಂಡೈ ಎಂಪಿವಿಯು ಬಿಡುಗಡೆಯಾದ ಬಳಿಕ ಮಾರುತಿ ಎರ್ಟಿಗಾ ಮತ್ತು ಮಹೀಂದ್ರಾ ಮರಾಜೊ ಎಂಪಿವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Hyundai introduced staria kinder luxury mini school bus variants detais
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X