ಬಹುನೀರಿಕ್ಷಿತ ಹ್ಯುಂಡೈ ಐಕಾನಿಕ್ ಎಲೆಕ್ಟ್ರಿಕ್ ಎಸ್‌ಯುವಿ ಮೈಲೇಜ್ ಮಾಹಿತಿ ಬಹಿರಂಗ

ಹ್ಯುಂಡೈ ಕಂಪನಿಯು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣಾಗಿ ಮುಂಬರುವ ಕೆಲವೇ ದಿನಗಳಲ್ಲಿ ವಿವಿಧ ಮಾದರಿಯ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುತ್ತಿದ್ದು, ಕಂಪನಿಯು ಭಾರತದಲ್ಲೂ ಸಹ ಹೊಸ ಇವಿ ಕಾರುಗಳ ಬಿಡುಗಡೆಯಾಗಿ ಬೃಹತ್ ಯೋಜನೆಗೆ ಚಾಲನೆ ನೀಡಿದೆ.

ಬಹುನೀರಿಕ್ಷಿತ ಹ್ಯುಂಡೈ ಐಕಾನಿಕ್ ಎಲೆಕ್ಟ್ರಿಕ್ ಎಸ್‌ಯುವಿ ಮೈಲೇಜ್ ಮಾಹಿತಿ ಬಹಿರಂಗ

2028ರ ವೇಳೆಗೆ ಜಾಗತಿಕ ಮಾರುಕಟ್ಟೆಯಲ್ಲಿ 30ಕ್ಕೂ ಹೆಚ್ಚು ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಹೊಂದುವುದಾಗಿ ಹೇಳಿಕೊಂಡಿರುವ ಹ್ಯುಂಡೈ ಮೋಟಾರ್ಸ್ ಕಂಪನಿಯು ಭಾರತದಲ್ಲಿ ಗ್ರಾಹಕರ ಬೇಡಿಕೆಯೆಂತೆ ಮುಂದಿನ ಐದು ವರ್ಷಗಳಲ್ಲಿ ಆರು ಹೊಸ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಯೋಜನೆಗಾಗಿ ಕಂಪನಿಯು ಸುಮಾರು ರೂ. 4 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡುತ್ತಿದೆ.

ಬಹುನೀರಿಕ್ಷಿತ ಹ್ಯುಂಡೈ ಐಕಾನಿಕ್ ಎಲೆಕ್ಟ್ರಿಕ್ ಎಸ್‌ಯುವಿ ಮೈಲೇಜ್ ಮಾಹಿತಿ ಬಹಿರಂಗ

ಹ್ಯುಂಡೈ ಕಂಪನಿಯು ಸದ್ಯ ಭಾರತದಲ್ಲಿ ಕೊನಾ ಇವಿ ಕಾರು ಮಾದರಿಯನ್ನು ಮಾರಾಟ ಮಾಡುತ್ತಿದ್ದು, ಕಂಪನಿಯು ಮುಂಬರುವ ದಿನಗಳಲ್ಲಿ ಕೊನಾ ಮಾದರಿಗಿಂತಲೂ ಹೆಚ್ಚು ಮೈಲೇಜ್ ಪ್ರೇರಿತ ಕಾರುಗಳ ಜೊತೆ ಬಜೆಟ್ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಬಹುನೀರಿಕ್ಷಿತ ಹ್ಯುಂಡೈ ಐಕಾನಿಕ್ ಎಲೆಕ್ಟ್ರಿಕ್ ಎಸ್‌ಯುವಿ ಮೈಲೇಜ್ ಮಾಹಿತಿ ಬಹಿರಂಗ

ಪ್ರೀಮಿಯಂ ಎಲೆಕ್ಟ್ರಿಕ್ ಕಾರುಗಳ ಜೊತೆಗೆ ಬಜೆಟ್ ಬೆಲೆಯ ಎಲೆಕ್ಟ್ರಿಕ್ ವಾಹನಗಳನ್ನು ಸಹ ಮಾರಾಟ ಮಾಡಲು ಉದ್ದೇಶಿಸಿರುವ ಹ್ಯುಂಡೈ ಕಂಪನಿಯು ಎಲ್ಲಾ ವರ್ಗದ ಗ್ರಾಹಕರನ್ನು ಸೆಳೆಯುವ ನೀರಿಕ್ಷೆಯಲ್ಲಿದ್ದು, ಕಂಪನಿಯು 2028ರ ವೇಳೆಗೆ ವಿವಿಧ ಸೆಗ್ಮೆಂಟ್‌ಗಳಲ್ಲಿ ಆರು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿದೆ.

ಬಹುನೀರಿಕ್ಷಿತ ಹ್ಯುಂಡೈ ಐಕಾನಿಕ್ ಎಲೆಕ್ಟ್ರಿಕ್ ಎಸ್‌ಯುವಿ ಮೈಲೇಜ್ ಮಾಹಿತಿ ಬಹಿರಂಗ

ಹ್ಯುಂಡೈ ಕಂಪನಿಯು ಹೊಸ ಇವಿ ಕಾರುಗಳ ಉತ್ಪಾದನೆಗೆ ಪೂರಕವಾದ ಮತ್ತು ಗುಣಮಟ್ಟದ ಮಾದರಿಗಳನ್ನು ಸಿದ್ದಪಡಿಸಲು ಆಧುನಿಕ ತಂತ್ರಜ್ಞಾನ ಪ್ರೇರಿತ ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್ (ಇ-ಜಿಎಂಪಿ) ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡಲು ಉದ್ದೇಶಿಸಿದ್ದು, ಹೊಸ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಕಂಪನಿಯು ವಿವಿಧ ಸೆಗ್ಮೆಂಟ್‌ ಇವಿ ಪರಿಚಯಿಸಲಿದೆ.

ಬಹುನೀರಿಕ್ಷಿತ ಹ್ಯುಂಡೈ ಐಕಾನಿಕ್ ಎಲೆಕ್ಟ್ರಿಕ್ ಎಸ್‌ಯುವಿ ಮೈಲೇಜ್ ಮಾಹಿತಿ ಬಹಿರಂಗ

ಎಲೆಕ್ಟ್ರಿಕ್ ಜೊತೆಗೆ ಭವಿಷ್ಯದಲ್ಲಿ ಹೈಡ್ರೊಜನ್ ಫ್ಯೂಲ್ ಸೆಲ್ಸ್ ವಾಹನಗಳು ಕೂಡಾ ಸದ್ದು ಮಾಡುವ ನೀರಿಕ್ಷೆಯಿದ್ದು, ಹೊಸ ಮಾದರಿಯ ವಾಹನಗಳ ಸಂಶೋಧನೆ ಮತ್ತು ಅಭಿವೃದ್ದಿ ಮೇಲೆ ಹೆಚ್ಚಿನ ಗಮನಹರಿಸಿರುವ ಹ್ಯುಂಡೈ ಕಂಪನಿಯು ಶೀಘ್ರದಲ್ಲೇ ತನ್ನ ಹೊಸ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದೆ.

ಬಹುನೀರಿಕ್ಷಿತ ಹ್ಯುಂಡೈ ಐಕಾನಿಕ್ ಎಲೆಕ್ಟ್ರಿಕ್ ಎಸ್‌ಯುವಿ ಮೈಲೇಜ್ ಮಾಹಿತಿ ಬಹಿರಂಗ

ಹ್ಯುಂಡೈ ಕಂಪನಿಯು ಬಿಡುಗಡೆ ಮಾಡಲಿರುವ ಆರು ಹೊಸ ಎಲೆಕ್ಟ್ರಿಕ್ ಕಾರುಗಳ ಪೈಕಿ ಐಯಾನಿಕ್ 5 ಮಾದರಿಯು ಕೂಡಾ ಒಂದಾಗಿದ್ದು, ಹೊಸ ಕಾರು ಮಾದರಿಯನ್ನು ಹ್ಯುಂಡೈ ಕಂಪನಿಯು ಭಾರತದಲ್ಲಿ ಮಾತ್ರವಲ್ಲ ವಿಶ್ವದ ಪ್ರಮುಖ ಮಾರುಕಟ್ಟೆಗಳಿಗೆ ಪರಿಚಯಿಸಲಿದೆ.

ಬಹುನೀರಿಕ್ಷಿತ ಹ್ಯುಂಡೈ ಐಕಾನಿಕ್ ಎಲೆಕ್ಟ್ರಿಕ್ ಎಸ್‌ಯುವಿ ಮೈಲೇಜ್ ಮಾಹಿತಿ ಬಹಿರಂಗ

ಹೊಸ ಐಕಾನಿಕ್ 5 ಎಲೆಕ್ಟ್ರಿಕ್ ಕಾರನ್ನು ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್ (ಇ-ಜಿಎಂಪಿ) ತಂತ್ರಜ್ಞಾನದಡಿ ನಿರ್ಮಾಣ ಮಾಡಲಾಗಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಹೊಸ ಕಾರು 58 ಕಿ.ವ್ಯಾ ಮತ್ತು 72.6 ಕಿ.ವ್ಯಾ ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿದೆ.

ಬಹುನೀರಿಕ್ಷಿತ ಹ್ಯುಂಡೈ ಐಕಾನಿಕ್ ಎಲೆಕ್ಟ್ರಿಕ್ ಎಸ್‌ಯುವಿ ಮೈಲೇಜ್ ಮಾಹಿತಿ ಬಹಿರಂಗ

ಐಯಾನಿಕ್ 5 ಕಾರು ಬ್ಯಾಟರಿ ಪ್ಯಾಕ್ ಆಧಾರದ ಪ್ರತಿ ಚಾರ್ಜ್‌ಗೆ ಗರಿಷ್ಠ ಮೈಲೇಜ್ ಹಿಂದಿಗಿರುಗಿಸಲಿದ್ದು, ಯಎಸ್ ಎನ್ವಿರೋನ್ಮೆಂಟ್ ಪ್ರೊಟೆಕ್ಷನ್ ಎಜೆನ್ಸಿ(EPA) ಸಂಸ್ಥೆಯು ನೀಡಿರುವ ಪ್ರಮಾಣ ಪತ್ರದಲ್ಲಿ ಹೊಸ ಕಾರಿ ಅಧಿಕೃತ ಮೈಲೇಜ್ ಪ್ರಮಾಣವು ಪ್ರತಿ ಚಾರ್ಜ್‌ಗೆ 488 ಕಿ.ಮೀ ಆಗಿದೆ.

ಬಹುನೀರಿಕ್ಷಿತ ಹ್ಯುಂಡೈ ಐಕಾನಿಕ್ ಎಲೆಕ್ಟ್ರಿಕ್ ಎಸ್‌ಯುವಿ ಮೈಲೇಜ್ ಮಾಹಿತಿ ಬಹಿರಂಗ

ಜೊತೆಗೆ ಆಧುನಿಕ ತಂತ್ರಜ್ಞಾನ ಪ್ರೇರಿತ ಸೂಪರ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಹೊಸ ಕಾರನ್ನು ಕೇವಲ 5 ನಿಮಿಷಗಳ ಕಾಲ ಚಾರ್ಜ್ ಮಾಡಿದರೂ ಕನಿಷ್ಠ 100 ಕಿ.ಮೀ ಮೈಲೇಜ್ ಪಡೆದುಕೊಳ್ಳಬಹುದಾಗಿದೆ.

ಬಹುನೀರಿಕ್ಷಿತ ಹ್ಯುಂಡೈ ಐಕಾನಿಕ್ ಎಲೆಕ್ಟ್ರಿಕ್ ಎಸ್‌ಯುವಿ ಮೈಲೇಜ್ ಮಾಹಿತಿ ಬಹಿರಂಗ

ಹೊಸ ಕಾರು ಗ್ರಾಹಕರ ಬೇಡಕೆಯೆಂತೆ ಎರಡು ಪ್ರಮುಖ ಪವರ್‌ಟ್ರೇನ್ ಸೆಟಪ್ ಮತ್ತು ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿದ್ದು, ಹೊಸ ಕಾರಿನಲ್ಲಿ ಚಾರ್ಜಿಂಗ್ ತಂತ್ರಜ್ಞಾನವು ಎಲೆಕ್ಟ್ರಿಕ್ ವಾಹನ ಮಾರಾಟದಲ್ಲೇ ಹೊಸ ಆವಿಷ್ಕಾರಗಳಿಗೆ ಮುನ್ನಡೆ ಬರೆದಿದೆ.

ಬಹುನೀರಿಕ್ಷಿತ ಹ್ಯುಂಡೈ ಐಕಾನಿಕ್ ಎಲೆಕ್ಟ್ರಿಕ್ ಎಸ್‌ಯುವಿ ಮೈಲೇಜ್ ಮಾಹಿತಿ ಬಹಿರಂಗ

ಐಯಾನಿಕ್ 5 ಕಾರಿನಲ್ಲಿ ಹ್ಯುಂಡೈ ಕಂಪನಿಯು 58 ಕಿ.ವ್ಯಾ ಮತ್ತು 72.6 ಕಿ.ವ್ಯಾ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲು ನಿರ್ಧರಿಸಿದ್ದು, ಆರಂಭಿಕ ಮಾದರಿಯು 167 ಬಿಹೆಚ್‌ಪಿ ಉತ್ಪಾದಿಯೊಂದಿಗೆ ಕೇವಲ 8.5 ಸೆಕೆಂಡುಗಳಲ್ಲಿ ಗಂಟೆಗೆ ಸೊನ್ನೆಯಿಂದ ನೂರು ಕಿಮೀ ವೇಗವನ್ನು ತಲುಪುತ್ತದೆ.

ಬಹುನೀರಿಕ್ಷಿತ ಹ್ಯುಂಡೈ ಐಕಾನಿಕ್ ಎಲೆಕ್ಟ್ರಿಕ್ ಎಸ್‌ಯುವಿ ಮೈಲೇಜ್ ಮಾಹಿತಿ ಬಹಿರಂಗ

ದೊಡ್ಡ ಬ್ಯಾಟರಿ ಪ್ಯಾಕ್‌ ಜೋಡಣೆ ಹೊಂದಿರುವ ಐಯಾನಿಕ್ 5 ಮಾದರಿಯು 302 ಬಿಹೆಚ್‌ಪಿ ಮತ್ತು 605 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಈ ಕೇವಲ 5.2 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿ.ಮೀ ವೇಗದೊಂದಿಗೆ ಪ್ರತಿ ಗಂಟೆಗೆ 185 ಕಿ.ಮೀ ಟಾಪ್ ಸ್ಪೀಡ್ ತಲುಪುತ್ತದೆ.

ಬಹುನೀರಿಕ್ಷಿತ ಹ್ಯುಂಡೈ ಐಕಾನಿಕ್ ಎಲೆಕ್ಟ್ರಿಕ್ ಎಸ್‌ಯುವಿ ಮೈಲೇಜ್ ಮಾಹಿತಿ ಬಹಿರಂಗ

ಆಕರ್ಷಕ ವಿನ್ಯಾಸ ಹೊಂದಿರುವ ಹೊಸ ಐಯಾನಿಕ್ 5 ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಡ್ಯುಯಲ್ ಸ್ಕ್ರೀನ್ ಸೆಟಪ್‌ನೊಂದಿಗೆ ಬ್ಲ್ಯೂ ಲಿಂಕ್ ಕಾರ್ ಕನೆಕ್ಟ್ ಒಳಗೊಂಡ 12 ಇಂಚಿನ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಸಮಾನವಾದ ದೊಡ್ಡ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನೀಡಲಾಗಿದೆ.

ಬಹುನೀರಿಕ್ಷಿತ ಹ್ಯುಂಡೈ ಐಕಾನಿಕ್ ಎಲೆಕ್ಟ್ರಿಕ್ ಎಸ್‌ಯುವಿ ಮೈಲೇಜ್ ಮಾಹಿತಿ ಬಹಿರಂಗ

ಹ್ಯುಂಡೈ ಕಂಪನಿಯು ಹೊಸದಾಗಿ ನಿರ್ಮಾಣ ಮಾಡಿರುವ ಎಲೆಕ್ಟ್ರಿಕ್-ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್ ಕಂಪನಿಯ ಭವಿಷ್ಯದ ಕಾರು ಮಾದರಿಗಳ ನಿರ್ಮಾಣಕ್ಕೆ ಉತ್ತಮ ವೇದಿಕೆಯಾಗಿದ್ದು, ಐಯಾನಿಕ್ 5 ಕಾರು ಇದೇ ವರ್ಷಾಂತ್ಯ ಇಲ್ಲವೇ ಮುಂದಿನ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಬಿಡುಗಡೆಯಾಗಲಿದೆ.

Article Published On: Tuesday, December 14, 2021, 15:30 [IST]
English summary
Hyundai ioniq 5 suv gets epa certified range of 488km details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+