ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಹ್ಯುಂಡೈ ಐ30 ಎನ್ ಕಾರು

ಹ್ಯುಂಡೈ ಮೋಟಾರ್ ಕಂಪನಿಯು ಬ್ರಿಟನ್‌ನಲ್ಲಿ ತನ್ನ 2021ರ ಐ30 ಎನ್ ಪಾರ್ಫಾಮೆನ್ಸ್ ಕಾರನ್ನು ಬಿಡುಗಡೆಗೊಳಿಸಿದೆ. ಈ 2021ರ ಹ್ಯುಂಡೈ ಐ30 ಎನ್ ಕಾರು ವಿನ್ಯಾಸ ನವೀಕರಣದೊಂದಿಗೆ ಕೆಲವು ಹೊಸ ಫೀಚರ್ಸ್ ಗಳನ್ನು ಪಡೆದುಕೊಂಡಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಹ್ಯುಂಡೈ ಐ30 ಎನ್ ಕಾರು

ಹ್ಯುಂಡೈ ಐ30 ಎನ್ ಕಾರು ಮೊದಲ ಬಾರಿಗೆ 2018ರಲ್ಲಿ ಬಿಡುಗಡೆಗೊಂಡಿತ್ತು. ಇದನ್ನು ಹ್ಯುಂಡೈನ ಆಗಿನ ಹೊಸ ಹೈ-ಪರ್ಫಾರ್ಮೆನ್ಸ್ ವೆಹಿಕಲ್ ವಿಭಾಗವು ಆಲ್ಬರ್ಟ್ ಬಯರ್ಮನ್ ನಾಯಕತ್ವದಲ್ಲಿ ಅಭಿವೃದ್ಧಿಪಡಿಸಿತು. ಈ ಕಾರನ್ನು ಅತ್ಯಾಧುನಿಕ ನಮಿಯಾಂಗ್ ಆರ್&ಡಿ ಘಟಕದಲ್ಲಿ ಅಭಿವೃದ್ಧಿಪಡಿಸಲಾಯಿತು. ವಿಶೇಷಾವಾಗಿ ಈ ಹ್ಯುಂಡೈ ಐ30 ಎನ್ ಕಾರನ್ನು ನಾರ್ಬರ್ಗ್ರಿಂಗ್ ರೇಸ್‌ಟ್ರಾಕ್‌ನಲ್ಲಿ ಕೂಡ ಪರೀಕ್ಷಿಸಲಾಗಿತ್ತು.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಹ್ಯುಂಡೈ ಐ30 ಎನ್ ಕಾರು

ಹ್ಯುಂಡೈ ಎನ್ ಸರಣಿಯ ಪರ್ಫಾಮೆನ್ಸ್ ಕಾರುಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆಗಳನ್ನು ಗಳಿಸಿದೆ. ಬಿಎಂಡಬ್ಲ್ಯು ಎಂ, ಸ್ಕೋಡಾದ ಆರ್‌ಎಸ್ ಮಾದರಿಗಳ ಹಾಗೇ ಹ್ಯುಂಡೈ ಕಂಪನಿಯ ಎನ್ ಸರಣಿಯ ಕಾರುಗಳು ಪರ್ಫಾಮೆನ್ಸ್ ಮಾದರಿಗಳಾಗಿವೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಹ್ಯುಂಡೈ ಐ30 ಎನ್ ಕಾರು

2021ರ ಹೊಸ ಹ್ಯುಂಡೈ ಐ30 ಎನ್ ಕಾರು ಹೊರಭಾಗದಲ್ಲಿ ಸಾಕಷ್ಟು ನವೀಕರಣಗಳನ್ನು ಪಡೆದುಕೊಂಡಿದೆ. ಮುಂಭಾಗದಲ್ಲಿ ಎಂಜಿನ್ ಕೂಲಿಂಗ್ ಅನ್ನು ಅತ್ಯುತ್ತಮವಾಗಿಸಲು ವಿನ್ಯಾಸಗೊಳಿಸಲಾದ ರಿಫ್ರೆಶ್ ವೈಡ್ ಸೆಂಟರ್ ಗ್ರಿಲ್ ಅನ್ನು ಹೊಂದಿದೆ. ಇದು ಗಾಳಿಯ ಹರಿವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಹ್ಯುಂಡೈ ಐ30 ಎನ್ ಕಾರು

ಗ್ರಿಲ್ ಅನ್ನು ಹೊಸ ಎಲ್ಇಡಿ ಹೆಡ್‌ಲ್ಯಾಂಪ್‌ಗಳ ಜೊತೆ ವಿ-ಆಕಾರದ ಡಿಆರ್‌ಎಲ್ ಅನ್ನು ಹೊಂದಿದೆ. ನವೀಕರಿಸಿದ ಹಿಂಭಾಗದಲ್ಲಿ ನವೀಕರಿಸಿದ ಸಿಗ್ನೇಚರ್ ಎಲ್ಇಡಿ ಟೈಲ್ ಲ್ಯಾಂಪ್ ಅನ್ನು ಅಳವಡಿಸಲಾಗಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಹ್ಯುಂಡೈ ಐ30 ಎನ್ ಕಾರು

ಇನ್ನು ಹೊಸದಾಗಿ ಅಭಿವೃದ್ಧಿಪಡಿಸಿದ 19 ಇಂಚಿನ ಖೋಟಾ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಇನ್ನು ಇದರ ವ್ಜೀಲ್ ಗಳಲ್ಲಿ ಎನ್ ಲೋಗೊ ಹೊಂದಿರುವ ಎನ್-ನಿರ್ದಿಷ್ಟ ಕೆಂಪು ಬ್ರೇಕ್ ಕ್ಯಾಲಿಪರ್‌ಗಳನ್ನು ಹೊಂದಿದೆ. ಇದು ಕಾರನ್ನು ಸ್ಪೋರ್ಟಿಯರ್ ಆಗಿ ಕಾಣುವಂತೆ ಮಾಡುತ್ತದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಹ್ಯುಂಡೈ ಐ30 ಎನ್ ಕಾರು

ಟೈರ್‌ಗಳನ್ನು ವಿಶೇಷವಾಗಿ ಹ್ಯುಂಡೈ ಐ 30 ಎನ್ ಗಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಹೊಸ ಪರ್ಫಾಮೆನ್ಸ್ ಕಾರಿನ ಇಂಟಿರಿಯರ್ ಅನ್ನು ಕೂಡ ನವೀಕರಿಸಿದೆ. ಇದರ ಇಂಟಿರಿಯರ್ ನಲ್ಲಿ ಹಲವಾರು ಫೀಚರ್ಸ್ ಗಳನ್ನು ನೀಡಿದ್ದಾರೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಹ್ಯುಂಡೈ ಐ30 ಎನ್ ಕಾರು

ಇಂಟಿರಿಯರ್ ನಲ್ಲಿ ಮಲ್ಟಿ ಸ್ಪೀಕರ್ ಸೌಂಡ್, ವಾಯ್ಸ್ ಕಂಟ್ರೋಲ್ ಮತ್ತು ಹ್ಯುಂಡೈನ ಅತ್ಯಾಧುನಿಕ ಕನೆಕ್ಟೆಡ್ ಕಾರ್ ಸರ್ವಿಸ್ ಬ್ಲೂಲಿಂಕ್‌ನ ಇತ್ತೀಚಿನ ಆವೃತ್ತಿಯೊಂದಿಗೆ 10.25 "ನ್ಯಾವಿಗೇಷನ್ ಸಿಸ್ಟಂನ ಕಿಟ್ ಅನ್ನು ಒಳಗೊಂಡಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಹ್ಯುಂಡೈ ಐ30 ಎನ್ ಕಾರು

2021ರ ಹ್ಯುಂಡೈ ಐ30 ಎನ್ ಕಾರಿನಲ್ಲಿ 2.0-ಲೀಟರ್ ಟರ್ಬೋಚಾರ್ಜ್ಡ್ ಜಿಡಿ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 280 ಬಿಹೆಚ್‍ಪಿ ಪವರ್ ಮತ್ತು 392 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 8-ಸ್ಪೀಡ್ ಡಿಸಿಟಿ ಮತ್ತು ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್‌ ಆಯ್ಕೆಯನ್ನು ನೀಡಲಾಗಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಹ್ಯುಂಡೈ ಐ30 ಎನ್ ಕಾರು

ಹ್ಯುಂಡೈ ತನ್ನ ಎನ್ ಪರ್ಫಾರ್ಮೆನ್ಸ್ ಸರಣಿಯ ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿವೆ. ಮೊದಲಿಗೆ ಹ್ಯುಂಡೈ ಕಂಪನಿಯ ಎನ್ ಸರಣಿಯ ಜನಪ್ರಿಯ ಐ20 ಎನ್ ಲೈನ್‌ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಆದರೆ ಹ್ಯುಂಡೈ ಐ30 ಎನ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳು ಕಡಿಮೆಯಾಗಿದೆ.

Most Read Articles

Kannada
English summary
2021 Hyundai i30 N Launched In UK. Read In Kannada.
Story first published: Friday, April 30, 2021, 14:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X