ಕಳೆದ ತಿಂಗಳು ಹೆಚ್ಚು ಮಾರಾಟವಾದ Hyundai ಕಂಪನಿಯ ಕಾರುಗಳಿವು

ಹ್ಯುಂಡೈ (Hyundai) ಕಂಪನಿಯು ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ದೇಶಿಯು ಮಾರುಕಟ್ಟೆಯಲ್ಲಿ 56,605 ಯುನಿಟ್ ಕಾರುಗಳನ್ನು ಮಾರಾಟ ಮಾಡಿತ್ತು. ಆದರೆ ಕಂಪನಿಯು ಈ ವರ್ಷದ ಅಕ್ಟೋಬರ್‌ನಲ್ಲಿ ಕೇವಲ 37,021 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. ಕಂಪನಿಯ ಮಾರಾಟ ಪ್ರಮಾಣವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 34.6% ನಷ್ಟು ಕುಸಿತವಾಗಿದೆ.

ಕಳೆದ ತಿಂಗಳು ಹೆಚ್ಚು ಮಾರಾಟವಾದ Hyundai ಕಂಪನಿಯ ಕಾರುಗಳಿವು

ಸೆಮಿ ಕಂಡಕ್ಟರ್ ಕೊರತೆಯ ಸಮಸ್ಯೆ ಈ ಕುಸಿತಕ್ಕೆ ಪ್ರಮುಖ ಕಾರಣವೆಂದು ಹೇಳಲಾಗಿದೆ. ಈ ವರ್ಷದ ಅಕ್ಟೋಬರ್‌ನಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಹ್ಯುಂಡೈ ಕಾರು ಎಂಬ ಹೆಗ್ಗಳಿಕೆಗೆ ವೆನ್ಯೂ (Venue) ಕಾರು ಪಾತ್ರವಾಗಿದೆ. 2020ರ ಅಕ್ಟೋಬರ್ ತಿಂಗಳಿನಲ್ಲಿ ವೆನ್ಯೂ ಕಾರಿನ ಮಾರಾಟವು 8,828 ಯುನಿಟ್'ಗಳನ್ನು ಮಾರಾಟ ಮಾಡಲಾಗಿದ್ದರೆ, ಈ ಅಕ್ಟೋಬರ್‌ನಲ್ಲಿ 10,554 ಯುನಿಟ್ ಗಳನ್ನು ಮಾರಾಟ ಮಾಡಲಾಗಿದೆ.

ಕಳೆದ ತಿಂಗಳು ಹೆಚ್ಚು ಮಾರಾಟವಾದ Hyundai ಕಂಪನಿಯ ಕಾರುಗಳಿವು

ವೆನ್ಯೂ ಕಾರಿನ ಮಾರಾಟ ಪ್ರಮಾಣವು ಈ ಬಾರಿ 20% ನಷ್ಟು ಏರಿಕೆಯಾಗಿದೆ. ಈ ಪಟ್ಟಿಯಲ್ಲಿ ಕ್ರೆಟಾ ಕಾರು ಎರಡನೇ ಸ್ಥಾನದಲ್ಲಿದೆ. ಕಳೆದ ವರ್ಷದ ಅಕ್ಟೋಬರ್ ನಲ್ಲಿ ಕ್ರೆಟಾ (Creta) ಕಾರಿನ 14,023 ಯುನಿಟ್ ಗಳನ್ನು ಮಾರಾಟ ಮಾಡಲಾಗಿದ್ದರೆ, ಈ ಅಕ್ಟೋಬರ್‌ನಲ್ಲಿ ಕೇವಲ 6,455 ಯುನಿಟ್ ಗಳನ್ನು ಮಾರಾಟ ಮಾಡಲಾಗಿದೆ. ಈ ಮೂಲಕ ಕ್ರೆಟಾ ಕಾರಿನ ಮಾರಾಟದಲ್ಲಿ 54% ನಷ್ಟು ಕುಸಿತವಾಗಿದೆ.

ಕಳೆದ ತಿಂಗಳು ಹೆಚ್ಚು ಮಾರಾಟವಾದ Hyundai ಕಂಪನಿಯ ಕಾರುಗಳಿವು

Grand i10 Nios ಕಾರು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಕಾರಿನ ಮಾರಾಟ ಪ್ರಮಾಣವು 2020ರ ಅಕ್ಟೋಬರ್ ನಲ್ಲಿ 14,003 ಯುನಿಟ್ ಗಳಾಗಿದ್ದರೆ, ಈ ವರ್ಷದ ಅಕ್ಟೋಬರ್‌ನಲ್ಲಿ 6,042 ಯುನಿಟ್ ಗಳಾಗಿದ್ದು, ಮಾರಾಟ ಪ್ರಮಾಣವು 57% ನಷ್ಟು ಕುಸಿದಿದೆ. ಈ ಪಟ್ಟಿಯಲ್ಲಿ I 20 ಕಾರು ನಾಲ್ಕನೇ ಸ್ಥಾನದಲ್ಲಿದೆ. ಹ್ಯುಂಡೈ ಈ ವರ್ಷದ ಅಕ್ಟೋಬರ್‌ನಲ್ಲಿ ಐ 20 ಕಾರಿನ 4,414 ಯುನಿಟ್ ಗಳನ್ನು ಮಾರಾಟ ಮಾಡಿದೆ.

ಕಳೆದ ತಿಂಗಳು ಹೆಚ್ಚು ಮಾರಾಟವಾದ Hyundai ಕಂಪನಿಯ ಕಾರುಗಳಿವು

2020ರ ಅಕ್ಟೋಬರ್ ನಲ್ಲಿ ಈ ಕಾರಿನ 8,399 ಯುನಿಟ್ ಗಳು ಮಾರಾಟವಾಗಿದ್ದವು. ಮಾರಾಟ ಪ್ರಮಾಣವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 47% ನಷ್ಟು ಕುಸಿತವನ್ನು ದಾಖಲಿಸಿದೆ. ಈ ಪಟ್ಟಿಯಲ್ಲಿ ಸ್ಯಾಂಟ್ರೊ (Santro) ಕಾರು ಐದನೇ ಸ್ಥಾನದಲ್ಲಿದೆ. 2020ರ ಅಕ್ಟೋಬರ್ ತಿಂಗಳಿನಲ್ಲಿ 3,463 ಯುನಿಟ್ ಗಳಷ್ಟಿದ್ದ ಸ್ಯಾಂಟ್ರೋ ಮಾರಾಟ ಪ್ರಮಾಣವು ಕಳೆದ ತಿಂಗಳು 2,877 ಯುನಿಟ್ ಗಳಿಗೆ ಕುಸಿದಿದೆ.

ಕಳೆದ ತಿಂಗಳು ಹೆಚ್ಚು ಮಾರಾಟವಾದ Hyundai ಕಂಪನಿಯ ಕಾರುಗಳಿವು

ಈ ಮೂಲಕ ಮಾರಾಟ ಪ್ರಮಾಣದಲ್ಲಿ 17% ನಷ್ಟು ಕುಸಿತವಾಗಿದೆ. ಈ ಪಟ್ಟಿಯಲ್ಲಿ ಓರಾ (Aura) ಕಾರು ಆರನೇ ಸ್ಥಾನದಲ್ಲಿದೆ. 2020ರ ಅಕ್ಟೋಬರ್ ತಿಂಗಳಿನಲ್ಲಿ ಈ ಕಾರಿನ ಮಾರಾಟ ಪ್ರಮಾಣವು 5,577 ಯುನಿಟ್ ಗಳಾಗಿದ್ದರೆ, ಈ ವರ್ಷದ ಅಕ್ಟೋಬರ್‌ನಲ್ಲಿ 2,701 ಯುನಿಟ್ ಗಳಿಗೆ ಕುಸಿದಿದ್ದು, ಮಾರಾಟ ಪ್ರಮಾಣವು 72% ನಷ್ಟು ಕುಸಿದಿದೆ. ಈ ಪಟ್ಟಿಯಲ್ಲಿ ವೆರ್ನಾ (Verna) ಏಳನೇ ಸ್ಥಾನದಲ್ಲಿದೆ.

ಕಳೆದ ತಿಂಗಳು ಹೆಚ್ಚು ಮಾರಾಟವಾದ Hyundai ಕಂಪನಿಯ ಕಾರುಗಳಿವು

ಈ ವರ್ಷದ ಅಕ್ಟೋಬರ್‌ನಲ್ಲಿ 2,438 ಯುನಿಟ್ ವೆರ್ನಾ ಕಾರುಗಳು ಮಾರಾಟವಾಗಿವೆ. ಆದರೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಈ ಸಂಖ್ಯೆ ಕೇವಲ 2,166 ಆಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವೆರ್ನಾ ಕಾರಿನ ಮಾರಾಟದಲ್ಲಿ 13% ನಷ್ಟು ಏರಿಕೆ ಕಂಡು ಬಂದಿದೆ. ಅಲ್ಕಾಜರ್ (Alcazar) ಈ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಹ್ಯುಂಡೈ ಕಂಪನಿಯು ಈ ವರ್ಷದ ಅಕ್ಟೋಬರ್‌ನಲ್ಲಿ 1,392 ಯುನಿಟ್ ಅಲ್ಕಾಜರ್ ಕಾರುಗಳನ್ನು ಮಾರಾಟ ಮಾಡಿದೆ.

ಕಳೆದ ತಿಂಗಳು ಹೆಚ್ಚು ಮಾರಾಟವಾದ Hyundai ಕಂಪನಿಯ ಕಾರುಗಳಿವು

ಈ ಕಾರ್ ಅನ್ನು ಪ್ರಸ್ತುತ ವರ್ಷದಲ್ಲಿ ಬಿಡುಗಡೆಗೊಳಿಸಿರುವುದರಿಂದ ಮಾರಾಟದ ಅಂಕಿ ಅಂಶಗಳನ್ನು 2020ರ ಅಕ್ಟೋಬರ್ ತಿಂಗಳಿಗೆ ಹೋಲಿಸಲಾಗುವುದಿಲ್ಲ. ಈ ಪಟ್ಟಿಯಲ್ಲಿ ಟಕ್ಸನ್ (Tucson) ಕಾರು ಒಂಬತ್ತನೇ ಸ್ಥಾನದಲ್ಲಿದೆ. ಈ ಕಾರಿನ ಮಾರಾಟ ಪ್ರಮಾಣವು ಕಳೆದ ವರ್ಷ ಅಕ್ಟೋಬರ್ ನಲ್ಲಿ ಕೇವಲ 87 ಯುನಿಟ್ ಗಳಾಗಿತ್ತು. ಈ ವರ್ಷದ ಅಕ್ಟೋಬರ್‌ನಲ್ಲಿ ಈ ಕಾರಿನ 119 ಯುನಿಟ್ ಗಳನ್ನು ಮಾರಾಟ ಮಾಡಲಾಗಿದೆ.

ಕಳೆದ ತಿಂಗಳು ಹೆಚ್ಚು ಮಾರಾಟವಾದ Hyundai ಕಂಪನಿಯ ಕಾರುಗಳಿವು

ಟಕ್ಸನ್ ಕಾರಿನ ಮಾರಾಟದಲ್ಲಿ ಈ ಬಾರಿ 37% ನಷ್ಟು ಹೆಚ್ಚಳ ಕಂಡು ಬಂದಿದೆ. ಅದೇ ರೀತಿ 10ನೇ ಸ್ಥಾನದಲ್ಲಿರುವ ಕೋನಾ (Cona) ಮಾರಾಟದಲ್ಲಿ 38% ನಷ್ಟು ಪ್ರಗತಿ ಕಂಡು ಬಂದಿದೆ. ಕಳೆದ ವರ್ಷದ ಅಕ್ಟೋಬರ್ ನಲ್ಲಿ ಕೋನಾ ಕಾರಿನ 13 ಯುನಿಟ್ ಗಳನ್ನು ಮಾರಾಟ ಮಾಡಲಾಗಿತ್ತು. ಈ ಅಕ್ಟೋಬರ್ ತಿಂಗಳಿನಲ್ಲಿ ಕೋನಾ ಕಾರಿನ 18 ಯುನಿಟ್ ಗಳನ್ನು ಮಾರಾಟ ಮಾಡಲಾಗಿದೆ.

ಕಳೆದ ತಿಂಗಳು ಹೆಚ್ಚು ಮಾರಾಟವಾದ Hyundai ಕಂಪನಿಯ ಕಾರುಗಳಿವು

ಎಲಾಂಟ್ರಾ ಕಾರು ಈ ಪಟ್ಟಿಯಲ್ಲಿ 11 ನೇ ಹಾಗೂ ಕೊನೆಯ ಸ್ಥಾನದಲ್ಲಿದೆ. 2020ರ ಅಕ್ಟೋಬರ್ ತಿಂಗಳಿನಲ್ಲಿ ಎಲಾಂಟ್ರಾ ಕಾರಿನ 46 ಯುನಿಟ್ ಗಳನ್ನು ಮಾರಾಟ ಮಾಡಲಾಗಿತ್ತು. ಕಳೆದ ತಿಂಗಳು ಈ ಕಾರಿನ ಕೇವಲ 11 ಯುನಿಟ್ ಗಳನ್ನು ಮಾರಾಟ ಮಾಡಲಾಗಿದೆ. ಎಲಾಂಟ್ರಾ ಕಾರಿನ ಮಾರಾಟ ಪ್ರಮಾಣವು ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 76% ನಷ್ಟು ಕುಸಿತವಾಗಿದೆ.

ಕಳೆದ ತಿಂಗಳು ಹೆಚ್ಚು ಮಾರಾಟವಾದ Hyundai ಕಂಪನಿಯ ಕಾರುಗಳಿವು

ಸೆಮಿ ಕಂಡಕ್ಟರ್ ಗಳ ಕೊರತೆಯು ಹ್ಯುಂಡೈ ಕಾರುಗಳ ಮಾರಾಟದಲ್ಲಿ ಕುಸಿತ ಕಂಡು ಬರಲು ಪ್ರಮುಖ ಕಾರಣವೆಂದು ಪರಿಗಣಿಸಲಾಗಿದೆ. ಹುಂಡೈ ಕಂಪನಿ ಮಾತ್ರವಲ್ಲದೆ ಭಾರತದ ಬಹುತೇಕ ಎಲ್ಲಾ ಕಾರು ಕಂಪನಿಗಳು ಪ್ರಸ್ತುತ ಸೆಮಿಕಂಡಕ್ಟರ್ ಕೊರತೆಯನ್ನು ಎದುರಿಸುತ್ತಿವೆ. ಪ್ರಪಂಚದ ಪ್ರಮುಖ ಕಂಪನಿಗಳು ಇದೇ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಸೆಮಿ ಕಂಡಕ್ಟರ್ ಕೊರತೆ ಸಮಸ್ಯೆ ಯಾವಾಗ ಕೊನೆಗೊಳ್ಳುತ್ತದೆ ಎಂಬುದು ಖಚಿತವಾಗಿಲ್ಲ.

ಕಳೆದ ತಿಂಗಳು ಹೆಚ್ಚು ಮಾರಾಟವಾದ Hyundai ಕಂಪನಿಯ ಕಾರುಗಳಿವು

ಮೊದಲೇ ಕರೋನಾ ವೈರಸ್ ಸಮಸ್ಯೆಯಿಂದ ತತ್ತರಿಸಿರುವ ಆಟೋ ಮೊಬೈಲ್ ಉದ್ಯಮಕ್ಕೆ ಸೆಮಿ ಕಂಡಕ್ಟರ್ ಕೊರತೆಯ ಸಮಸ್ಯೆಯು ಹೊಸ ಸಂಕಷ್ಟವನ್ನು ಉಂಟು ಮಾಡಿದೆ. ಇದರಿಂದ ಕಾರುಗಳ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಮಾರಾಟವೂ ಕಡಿಮೆಯಾಗಿದೆ.

Most Read Articles

Kannada
English summary
Hyundai model wise sales during october 2021 in domestic market details
Story first published: Friday, November 12, 2021, 12:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X