ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Hyundai ಕಾರು ಮಾರಾಟ

ದಕ್ಷಿಣ ಕೊರಿಯಾ ಮೂಲದ ಕಾರು ತಯಾರಕ ಕಂಪನಿಯಾದ ಹುಂಡೈ (Hyundai) ಮೋಟಾರ್ ಇಂಡಿಯಾ ತನ್ನ ನವೆಂಬರ್ ತಿಂಗಳ ಮಾರಾಟದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ಕಂಪನಿಯು ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಕಂಪನಿಯು ಕಳೆದ ತಿಂಗಳು 46,910 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ್ದರೆ, 2020ರ ನವೆಂಬರ್‌ನಲ್ಲಿ 59,200 ಯುನಿಟ್ ಕಾರುಗಳನ್ನು ಮಾರಾಟ ಮಾಡಿತ್ತು.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Hyundai ಕಾರು ಮಾರಾಟ

ಈ ವರ್ಷದ ನವೆಂಬರ್ ತಿಂಗಳಿನಲ್ಲಿ ಕಂಪನಿಯ ಮಾರಾಟವು 21% ನಷ್ಟು ಕುಸಿತ ಕಂಡಿದೆ. ಹ್ಯುಂಡೈ ಮೋಟಾರ್‌ನ ದೇಶಿಯ ಮಾರುಕಟ್ಟೆಯ ಮಾರಾಟದಲ್ಲಿಯೂ ಕುಸಿತ ಕಂಡುಬಂದಿದೆ ಎಂದು ಕಂಪನಿಯು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ಕಂಪನಿಯು ನವೆಂಬರ್ ತಿಂಗಳಿನಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಒಟ್ಟು 37,001 ಯುನಿಟ್‌ ಕಾರುಗಳನ್ನು ಮಾರಾಟ ಮಾಡಿದೆ.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Hyundai ಕಾರು ಮಾರಾಟ

ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ 48,800 ಯುನಿಟ್ ಕಾರುಗಳನ್ನು ಮಾರಾಟ ಮಾಡಿತ್ತು. ಹುಂಡೈ ಮೋಟಾರ್ ಇಂಡಿಯಾ ಈ ವರ್ಷದ ನವೆಂಬರ್‌ನಲ್ಲಿ ದೇಶಿಯ ಮಾರುಕಟ್ಟೆಯ ಮಾರಾಟದಲ್ಲಿ 24% ನಷ್ಟು ಕುಸಿತವನ್ನು ದಾಖಲಿಸಿದೆ.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Hyundai ಕಾರು ಮಾರಾಟ

ಇನ್ನು ಕಂಪನಿಯ ಕಳೆದ ತಿಂಗಳ ರಫ್ತಿನ ಬಗ್ಗೆ ಹೇಳುವುದಾದರೆ, ಕಂಪನಿಯು ಕಳೆದ ತಿಂಗಳು ಒಟ್ಟು 9,999 ಯುನಿಟ್ ಕಾರುಗಳನ್ನು ರಫ್ತು ಮಾಡಿದ್ದರೆ, 2020ರ ನವೆಂಬರ್ ತಿಂಗಳಲ್ಲಿ ಭಾರತದಿಂದ ಒಟ್ಟು 10,400 ಯುನಿಟ್ ಕಾರುಗಳನ್ನು ರಫ್ತು ಮಾಡಿದೆ. ಕಂಪನಿಯ ರಫ್ತು ಸಹ ಈ ವರ್ಷ 5% ನಷ್ಟು ಕುಸಿತ ಕಂಡಿದೆ.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Hyundai ಕಾರು ಮಾರಾಟ

ಮಾರಾಟ ಕುಸಿತದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹುಂಡೈ ಮೋಟಾರ್ ಇಂಡಿಯಾ, ಸೆಮಿಕಂಡಕ್ಟರ್ ಕೊರತೆಯು ನವೆಂಬರ್‌ನಲ್ಲಿನ ಮಾರಾಟದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದೆ. ಈ ಪರಿಸ್ಥಿತಿಯನ್ನು ಕಡಿಮೆ ಮಾಡಲು ನಾವು ಎಲ್ಲಾ ಪ್ರಯತ್ನಗಳನ್ನು ಮುಂದುವರಿಸುತ್ತೇವೆ ಎಂದು ಕಂಪನಿ ಹೇಳಿದೆ.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Hyundai ಕಾರು ಮಾರಾಟ

ಇತ್ತೀಚೆಗೆ ಹ್ಯುಂಡೈ ಮೋಟಾರ್ ತನ್ನ ಭಾರತೀಯ ಪೋರ್ಟ್‌ಫೋಲಿಯೊದಲ್ಲಿ ಅಲ್ಕಾಜರ್‌ ಎಸ್‌ಯುವಿಯ ಹೊಸ ಮಾದರಿಯನ್ನು ಬಿಡುಗಡೆಗೊಳಿಸಿದೆ. ಈ ಮಾದರಿಯು ಟಾಪ್ ಎಂಡ್ 7 ಸೀಟರ್ ಪೆಟ್ರೋಲ್ ಆಟೋಮ್ಯಾಟಿಕ್ ಮಾದರಿಯಾಗಿದೆ. ಹ್ಯುಂಡೈ ಅಲ್ಕಾಜರ್ ಬಿಡುಗಡೆಯ ಸಂದರ್ಭದಲ್ಲಿ ಕಂಪನಿಯು ಈ ಮಾದರಿಯನ್ನು ಹೊರ ತಂದಿರಲಿಲ್ಲ.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Hyundai ಕಾರು ಮಾರಾಟ

ಅಲ್ಕಾಜರ್ ಎಸ್‌ಯುವಿಯ ಸಿಗ್ನೇಚರ್ (ಒ) 7 ಸೀಟರ್ ಪೆಟ್ರೋಲ್ ಆಟೋಮ್ಯಾಟಿಕ್ ಮಾದರಿಯ ಬೆಲೆ ಬೆಂಗಳೂರಿನ ಎಕ್ಸ್ ಶೋರೂಂ ದರದಂತೆ ರೂ. 17.93 ಲಕ್ಷಗಳಾದರೆ, ಆನ್ ರೋಡ್ ದರ ರೂ. 24,96,839 ಗಳಾಗಿದೆ. ಕಂಪನಿಯು ಹ್ಯುಂಡೈ ಅಲ್ಕಾಜರ್‌ನ ಸಿಗ್ನೇಚರ್ (O) 7 ಸೀಟರ್ ಮಾದರಿಯನ್ನು ಸಂಪೂರ್ಣ ಲೋಡ್ ಟ್ರಿಮ್ ಆಗಿ ಬಿಡುಗಡೆ ಮಾಡಿದೆ.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Hyundai ಕಾರು ಮಾರಾಟ

ಈ ಮಾದರಿಯಲ್ಲಿ 18 ಇಂಚಿನ ಡೈಮಂಡ್ ಕಟ್ ಅಲಾಯ್ ವ್ಹೀಲ್, ಆಪಲ್ ಕಾರ್ ಪ್ಲೇ, ಆಂಡ್ರಾಯಿಡ್ ಆಟೋ ಜೊತೆಗೆ 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೆಂಟಿಲೇಟೆಡ್ ಸೀಟ್‌, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜಿಂಗ್, ಪನೋರಾಮಿಕ್ ಸನ್‌ರೂಫ್ ಸೇರಿದಂತೆ ಹಲವು ಫೀಚರ್ ಗಳನ್ನು ನೀಡಲಾಗಿದೆ.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Hyundai ಕಾರು ಮಾರಾಟ

ಇನ್ನು ಹುಂಡೈ ಮೋಟಾರ್ ಗ್ರೂಪ್ ತನ್ನ ಭವಿಷ್ಯದ ಚಲನಶೀಲತೆಯನ್ನು ಹೆಚ್ಚಿಸಲು ಹೊಸ ಬ್ರಾಂಡ್ ಅನ್ನು ಆರಂಭಿಸಿದೆ. ಹುಂಡೈ ಇತ್ತೀಚೆಗೆ ಸೂಪರ್ನಾಲ್ (Supernal) ಎಲ್‌ಎಲ್‌ಸಿ ಎಂಬ ಹೊಸ ಕಂಪನಿಯನ್ನು ಆರಂಭಿಸಿದೆ. ಈ ಕಂಪನಿಯು ನಗರಗಳ ವಾಯು ಚಲನಶೀಲತೆಯನ್ನು ಅಭಿವೃದ್ಧಿಪಡಿಸುವ ಕಾರ್ಯ ನಿರ್ವಹಿಸುತ್ತದೆ. ಹ್ಯುಂಡೈ ತನ್ನ ಭವಿಷ್ಯದ ಯೋಜನೆಗಳ ಭಾಗವಾಗಿ ಹಾರುವ ವಾಹನಗಳನ್ನು ಅಭಿವೃದ್ಧಿ ಪಡಿಸುವಲ್ಲಿ ನಿರತವಾಗಿದೆ.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Hyundai ಕಾರು ಮಾರಾಟ

ಇದಕ್ಕಾಗಿ ಕಂಪನಿಯು ಸಾರ್ವಜನಿಕ ಹಾಗೂ ಖಾಸಗಿ ವಲಯದ ಹೂಡಿಕೆದಾರರ ಸಹಕಾರವನ್ನು ಪಡೆಯುತ್ತಿದೆ. ತನ್ನ ಹೊಸ ಕಂಪನಿಯ ಅಡಿಯಲ್ಲಿ ಹ್ಯುಂಡೈ 2028 ರಲ್ಲಿ ಮೊದಲ ವಾಣಿಜ್ಯ ಹಾರುವ ವಾಹನದ ಸಂಚಾರವನ್ನು ಆರಂಭಿಸಲಿದೆ. ಈ ವಾಹನವು 2030 ರಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ. eVTOL ಹಾರುವ ವಾಹನದಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹ್ಯುಂಡೈ ಕಂಪನಿ ಹೇಳಿದೆ.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Hyundai ಕಾರು ಮಾರಾಟ

ಈ ಹಾರುವ ಕಾರು, ಸಾರಿಗೆ ವಿಧಾನಗಳಲ್ಲಿ ಭಾರೀ ಬದಲಾವಣೆಯನ್ನು ತರಲಿದೆ ಎಂದು ಹೇಳಲಾಗಿದೆ. ಹಾರುವ ಕಾರು ಇವಿಟಿಒಎಲ್ ಪ್ರಯಾಣವನ್ನು ಸುಲಭಗೊಳಿಸುವುದಲ್ಲದೆ, ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲಿದೆ ಎಂದು ಕಂಪನಿ ಹೇಳಿದೆ. ಈ ಹಾರುವ ವಾಹನವನ್ನು ಕೈಗೆಟಕುವ ದರದಲ್ಲಿ ಸಾಮಾನ್ಯ ಗ್ರಾಹಕರಿಗೆ ತಲುಪುವಂತೆ ಮಾಡಲು ವಿಶೇಷ ಗಮನ ನೀಡಲಾಗುತ್ತಿದೆ ಎಂದು ಹ್ಯುಂಡೈ ಹೇಳಿದೆ.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Hyundai ಕಾರು ಮಾರಾಟ

ಕಂಪನಿಯ ಆಟೋಮೋಟಿವ್ ಆಪರೇಟಿಂಗ್ ಪ್ಲಾಟ್‌ಫಾರಂ ಅನ್ನು ಮುಂದಿನ ವರ್ಷ ಆರಂಭಿಸಲಾಗುವುದು ಎಂದು ಹ್ಯುಂಡೈ ಮೋಟಾರ್ ಗ್ರೂಪ್ ನವೆಂಬರ್ 11 ರಂದು ಪ್ರಕಟಿಸಿದೆ. ಕಂಪನಿಯು ಬಿಡುಗಡೆಗೊಳಿಸಿರುವ ಮಾಹಿತಿಯ ಪ್ರಕಾರ, ಈ ಪ್ಲಾಟ್ ಫಾರಂ ಸ್ವಾಯತ್ತ ಚಾಲನೆ, ಹಸಿರು ತಂತ್ರಜ್ಞಾನ, ಆಟೋಮೋಟಿವ್ ಎಐ, ಭವಿಷ್ಯದ ಚಲನಶೀಲತೆ ಹಾಗೂ ಲಾಜಿಸ್ಟಿಕ್ಸ್ ಬೆಳವಣಿಗೆಗೆ ಕೊಡುಗೆ ನೀಡಲು ದೊಡ್ಡ ಡೇಟಾವನ್ನು ಹೊಂದಿರುತ್ತದೆ.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Hyundai ಕಾರು ಮಾರಾಟ

ಈ ಪ್ಲಾಟ್‌ಫಾರಂ ಸಂಪರ್ಕಿತ ಕಾರ್ ಸೇವಾ ಅಪ್ಲಿಕೇಶನ್, ಸ್ವಾಯತ್ತ ಚಾಲನೆ, ಚಲನ ಶೀಲತೆ ಸೇವೆ, ಪವರ್ ಪ್ಲಾಟ್‌ಫಾರಂ ಹಾಗೂ ಸಾಫ್ಟ್‌ವೇರ್‌ನ ಸಂಯೋಜನೆಯಾಗಿದೆ ಎಂದು ಹ್ಯುಂಡೈ ಕಂಪನಿ ಮಾಹಿತಿ ನೀಡಿದೆ. ಕಂಪನಿಯು ಈ ಪ್ಲಾಟ್ ಫಾರಂ ಅಂತರ ವಾಹನ ಸಂಪರ್ಕ ಹಾಗೂ ಚಲನಶೀಲತೆಯನ್ನು ಉತ್ತಮಗೊಳಿಸುತ್ತದೆ ಎಂದು ಹೇಳಿದೆ.

ನವೆಂಬರ್ ತಿಂಗಳಿನಲ್ಲಿ ಕುಸಿತ ಕಂಡ Hyundai ಕಾರು ಮಾರಾಟ

ಈ ಪ್ಲಾಟ್ ಫಾರಂ ಅನ್ನು ಅಭಿವೃದ್ಧಿಪಡಿಸಲು, ಹ್ಯುಂಡೈ ಗ್ರೂಪ್ ಈ ವರ್ಷ ಏಪ್ರಿಲ್‌ನಲ್ಲಿ ಸಾರಿಗೆ ಸೇವೆ (TaaS) ವಿಭಾಗವನ್ನು ಆಯೋಜಿಸಿತ್ತು. ವರದಿಗಳ ಪ್ರಕಾರ, ಆಪಲ್ ಹಾಗೂ ಮೈಕ್ರೋಸಾಫ್ಟ್‌ನಲ್ಲಿ ಸಾಫ್ಟ್‌ವೇರ್ ಪರಿಣತರಾಗಿರುವ ಕಂಪನಿಯ ಅಧ್ಯಕ್ಷರಾದ ಸಾಂಗ್ ಚಾಂಗ್ ಹ್ಯುನ್ ಈ ವಿಭಾಗವನ್ನು ಮುನ್ನಡೆಸಲಿದ್ದಾರೆ.

Most Read Articles

Kannada
English summary
Hyundai motor india sales declines in november 2021 details
Story first published: Thursday, December 2, 2021, 12:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X