ಅಕ್ಟೋಬರ್ ತಿಂಗಳ ಮಾರಾಟ ಅಂಕಿ ಅಂಶ ಬಿಡುಗಡೆಗೊಳಿಸಿದ Hyundai

ದಕ್ಷಿಣ ಕೊರಿಯಾ ಮೂಲದ ಕಾರು ತಯಾರಕ ಕಂಪನಿಯಾದ ಹುಂಡೈ (Hyundai) ಮೋಟಾರ್ ಇಂಡಿಯಾ ಅಕ್ಟೋಬರ್ ತಿಂಗಳ ತನ್ನ ಮಾರಾಟದ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದೆ. ಕಂಪನಿಯು ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಕಂಪನಿಯು ಕಳೆದ ತಿಂಗಳು ಒಟ್ಟು 43,556 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಕಂಪನಿಯು 68,835 ಯುನಿಟ್ ಕಾರುಗಳನ್ನು ಮಾರಾಟ ಮಾಡಿತ್ತು.

ಅಕ್ಟೋಬರ್ ತಿಂಗಳ ಮಾರಾಟ ಅಂಕಿ ಅಂಶ ಬಿಡುಗಡೆಗೊಳಿಸಿದ Hyundai

ಈ ವರ್ಷ ಕಂಪನಿಯ ಮಾರಾಟವು ಪ್ರಮಾಣವು 36.7% ನಷ್ಟು ಕುಸಿತವನ್ನು ದಾಖಲಿಸಿದೆ. ಹ್ಯುಂಡೈ ಮೋಟಾರ್ ಇಂಡಿಯಾದ ದೇಶಿಯ ಮಾರಾಟದ ಬಗ್ಗೆ ಹೇಳುವುದಾದರೆ ಕಂಪನಿಯು ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ 37,021 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ್ದರೆ, 2020ರ ಅಕ್ಟೋಬರ್ ತಿಂಗಳಿನಲ್ಲಿ ಕಂಪನಿಯು 56,605 ಯುನಿಟ್ ಕಾರುಗಳನ್ನು ಮಾರಾಟ ಮಾಡಿತ್ತು.

ಅಕ್ಟೋಬರ್ ತಿಂಗಳ ಮಾರಾಟ ಅಂಕಿ ಅಂಶ ಬಿಡುಗಡೆಗೊಳಿಸಿದ Hyundai

ಕಂಪನಿಯ ದೇಶಿಯ ಮಾರಾಟವು ಈ ವರ್ಷ 34.6% ನಷ್ಟು ಕುಸಿತವನ್ನು ದಾಖಲಿಸಿದೆ. ಹ್ಯುಂಡೈ ಇಂಡಿಯಾದ ರಫ್ತು ಬಗ್ಗೆ ಹೇಳುವುದಾದರೆ, ಈ ವರ್ಷದ ಅಕ್ಟೋಬರ್‌ನಲ್ಲಿ ಕಂಪನಿಯು ಒಟ್ಟು 6,535 ಯುನಿಟ್ ಕಾರುಗಳನ್ನು ಭಾರತದಿಂದ ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕಂಪನಿಯು ಒಟ್ಟು 12,230 ಯುನಿಟ್ ಕಾರುಗಳನ್ನು ರಫ್ತು ಮಾಡಿತ್ತು.

ಅಕ್ಟೋಬರ್ ತಿಂಗಳ ಮಾರಾಟ ಅಂಕಿ ಅಂಶ ಬಿಡುಗಡೆಗೊಳಿಸಿದ Hyundai

ಈ ವರ್ಷ ಕಂಪನಿಯ ರಫ್ತು ಪ್ರಮಾಣವು 46.6% ನಷ್ಟು ಕುಸಿದಿದೆ. ಸೆಮಿ ಕಂಡಕ್ಟರ್'ಗಳ ಕೊರರೆಯಿಂದಾಗಿ ಹ್ಯುಂಡೈ ಕಂಪನಿಯ ಮಾರಾಟದಲ್ಲಿ ಕುಸಿತ ಕಂಡು ಬಂದಿದೆ. ಸೆಮಿಕಂಡಕ್ಟರ್ ಕೊರತೆಯು ಭಾರತೀಯ ಆಟೋ ಮೊಬೈಲ್ ಉದ್ಯಮವನ್ನು ಮಾತ್ರವಲ್ಲದೆ ಜಾಗತಿಕ ಆಟೋ ಮೊಬೈಲ್ ಉದ್ಯಮವನ್ನು ಅಸ್ತವ್ಯಸ್ತಗೊಳಿಸಿದೆ. ಕಂಪನಿಯು ತನ್ನ ಅಧಿಕೃತ ಹೇಳಿಕೆಯಲ್ಲಿ ಸೆಮಿ ಕಂಡಕ್ಟರ್ ಕೊರತೆಯ ಬಗ್ಗೆ ಮಾಹಿತಿ ನೀಡಿದೆ.

ಅಕ್ಟೋಬರ್ ತಿಂಗಳ ಮಾರಾಟ ಅಂಕಿ ಅಂಶ ಬಿಡುಗಡೆಗೊಳಿಸಿದ Hyundai

ಕಂಪನಿಯು ತನ್ನ ಹೇಳಿಕೆಯಲ್ಲಿ, ಜಾಗತಿಕ ಸೆಮಿಕಂಡಕ್ಟರ್ ಪೂರೈಕೆ ನಿರ್ಬಂಧಗಳು ಒಂದು ಸವಾಲಾಗಿ ಉಳಿದಿವೆ. ಇದರ ಪರಿಣಾಮವಾಗಿ ಉದ್ಯಮದಾದ್ಯಂತ ಉತ್ಪಾದನೆ ಕಡಿಮೆಯಾಗಿದೆ ಎಂದು ಹೇಳಿದೆ. ಸೆಮಿ ಕಂಡಕ್ಟರ್ ಕೊರತೆಯಿಂದಾಗಿ ಉತ್ಪಾದನೆ ಕಡಿತಗೊಂಡಿರುವುದರಿಂದ ಮಾರಾಟದಲ್ಲಿ ಕುಸಿತ ಕಂಡು ಬಂದಿದೆ. ಹ್ಯುಂಡೈ ಮೋಟಾರ್ ಇಂಡಿಯಾ ಈ ವರ್ಷದ ಸೆಪ್ಟೆಂಬರ್'ನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ 33,087 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ.

ಅಕ್ಟೋಬರ್ ತಿಂಗಳ ಮಾರಾಟ ಅಂಕಿ ಅಂಶ ಬಿಡುಗಡೆಗೊಳಿಸಿದ Hyundai

ಕಂಪನಿಯು 2020ರ ಸೆಪ್ಟೆಂಬರ್‌ನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ 50,313 ಯುನಿಟ್ ಕಾರುಗಳನ್ನು ಮಾರಾಟ ಮಾಡಿತ್ತು. ಈ ವರ್ಷದ ಸೆಪ್ಟೆಂಬರ್‌ನಲ್ಲಿಯೂ ಕಂಪನಿಯು ಶೇಕಡಾ 34.2 ರಷ್ಟು ಕುಸಿತವನ್ನು ದಾಖಲಿಸಿತ್ತು. ಸೆಪ್ಟೆಂಬರ್ ತಿಂಗಳ ರಫ್ತಿನ ಬಗ್ಗೆ ಹೇಳುವುದಾದರೆ, ಹುಂಡೈ ಮೋಟಾರ್ ಇಂಡಿಯಾ ಸೆಪ್ಟೆಂಬರ್ ತಿಂಗಳಲ್ಲಿ 12,704 ಯುನಿಟ್ ಕಾರುಗಳನ್ನು ರಫ್ತು ಮಾಡಿದೆ.

ಅಕ್ಟೋಬರ್ ತಿಂಗಳ ಮಾರಾಟ ಅಂಕಿ ಅಂಶ ಬಿಡುಗಡೆಗೊಳಿಸಿದ Hyundai

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಕಂಪನಿಯು ಒಟ್ಟು 9,600 ಯುನಿಟ್ ಕಾರುಗಳನ್ನು ರಫ್ತು ಮಾಡಿತ್ತು. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಕಂಪನಿಯ ರಫ್ತು ಶೇಕಡಾ 32.3 ರಷ್ಟು ಬೆಳವಣಿಗೆ ಕಂಡಿದೆ. ಹ್ಯುಂಡೈ ಕಂಪನಿಯು ಶೀಘ್ರದಲ್ಲೇ ತನ್ನ ಜನಪ್ರಿಯ ಕಾಂಪ್ಯಾಕ್ಟ್ ಎಸ್‌ಯುವಿಯಾದ ಕ್ರೆಟಾದ ಫೇಸ್‌ಲಿಫ್ಟ್ ಆವೃತ್ತಿಯನ್ನು ಅಂತರ್ ರಾಷ್ಟ್ರೀಯ ಮಾರುಕಟ್ಟೆಗಳಿಗೆ ಬಿಡುಗಡೆಗೊಳಿಸಲಿದೆ.

ಅಕ್ಟೋಬರ್ ತಿಂಗಳ ಮಾರಾಟ ಅಂಕಿ ಅಂಶ ಬಿಡುಗಡೆಗೊಳಿಸಿದ Hyundai

ಹ್ಯುಂಡೈ ಕಂಪನಿಯು ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಹ್ಯುಂಡೈ ಕ್ರೆಟಾದ ಫೇಸ್‌ಲಿಫ್ಟ್‌ ಆವೃತ್ತಿಯ ಹೊಸ ವೀಡಿಯೊ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಈ ವೀಡಿಯೊದಲ್ಲಿ ಕಾರಿನ ಹೊರಭಾಗ ಹಾಗೂ ಒಳಭಾಗದ ನೋಟವನ್ನು ಕಾಣಬಹುದು. ಹ್ಯುಂಡೈ ಕಂಪನಿಯು ಕೆಲವು ದಿನಗಳ ಹಿಂದಷ್ಟೇ ಸ್ಟಾರಿಯಾ ಕಿಂಡರ್ ಹೆಸರಿನ ಮಿನಿ ಸ್ಕೂಲ್ ಬಸ್ ಮಾದರಿಯನ್ನು ಪರಿಚಯಿಸಿತ್ತು.

ಅಕ್ಟೋಬರ್ ತಿಂಗಳ ಮಾರಾಟ ಅಂಕಿ ಅಂಶ ಬಿಡುಗಡೆಗೊಳಿಸಿದ Hyundai

ಕಿಂಡರ್ ಎಂದರೆ ಜರ್ಮನ್ ಭಾಷೆಯಲ್ಲಿ ಮಕ್ಕಳು ಎಂಬ ಅರ್ಥವಿದೆ. ಇದು ಸ್ಕೂಲ್ ವ್ಯಾನ್‌ಗೆ ಸೂಕ್ತವಾದ ಹೆಸರು ಎಂಬ ಕಾರಣಕ್ಕೆ ಈ ವಾಹನಕ್ಕೆ ಈ ಹೆಸರನ್ನು ನೀಡಲಾಗಿದೆ ಎಂದು ಹೇಳಲಾಗಿದೆ. ಹ್ಯುಂಡೈ ಸ್ಟಾರಿಯಾ ಅತ್ಯಂತ ಆಕರ್ಷಕ ಮತ್ತು ಅತ್ಯಾಧುನಿಕ ಎಂಪಿವಿ ಆಗಿದೆ, ಇದರಿಂದ ಸ್ಟಾರಿಯಾ ಕಿಂಡರ್ ಬಹುಶಃ ವಿಶ್ವದ ಅತ್ಯುತ್ತಮ ಸ್ಕೂಲ್ ಬಸ್ ಗಳಲ್ಲಿ ಒಂದಾಗಿದೆ.

ಅಕ್ಟೋಬರ್ ತಿಂಗಳ ಮಾರಾಟ ಅಂಕಿ ಅಂಶ ಬಿಡುಗಡೆಗೊಳಿಸಿದ Hyundai

ಸ್ಕೂಲ್ ಬಸ್ ಅನ್ನು ಸಾಮಾನ್ಯ ಆವೃತ್ತಿಯಿಂದ ಪ್ರತ್ಯೇಕಿಸಲು ಹೊರಭಾಗದಲ್ಲಿ ಸಾಕಷ್ಟು ಬದಲಾವಣೆಗಳಿವೆ. ಸ್ಟಾರಿಯಾ ಕಿಂಡರ್ ರೂಫ್ ಮೇಲೆ, ಮುಂದೆ ಮತ್ತು ಹಿಂಭಾಗದಲ್ಲಿ, ಡ್ರೈವರ್ ಸೈಡ್ ಡೋರಿನ ಮೇಲೆ ಸ್ಟಾಪ್ ಚಿಹ್ನೆಯೊಂದಿಗೆ ಲೈಟ್ ಬಾರ್‌ಗಳನ್ನು ಪಡೆಯುತ್ತದೆ. ಇನ್ನು ಈ ಸ್ಕೂಲ್ ಬಸ್ ಪ್ರಕಾಶಮಾನವಾದ ಹಳದಿ ಬಣ್ಣದಿಂದ ಕೂಡಿದೆ. ಹ್ಯುಂಡೈ ಸ್ಟಾರಿಯಾ ಕಿಂಡರ್ ಮಿನಿ ಸ್ಕೂಲ್ ಬಸ್ - 11 ಆಸನಗಳು ಮತ್ತು 15 ಆಸನಗಳು- ಎರಡು ರೂಪಾಂತರಗಳಲ್ಲಿ ಲಭ್ಯವಿದೆ.

ಅಕ್ಟೋಬರ್ ತಿಂಗಳ ಮಾರಾಟ ಅಂಕಿ ಅಂಶ ಬಿಡುಗಡೆಗೊಳಿಸಿದ Hyundai

ಎಲ್ಲಾ ಆಸನಗಳಿಗೆ ಎತ್ತರ-ಹೊಂದಾಣಿಕೆ ಮಾಡಬಹುದಾದ ಸೀಟ್‌ಬೆಲ್ಟ್‌ಗಳೊಂದಿಗೆ. ಇದು ಎಲ್ಲಾ ವಯಸ್ಸಿನ ಮತ್ತು ಗಾತ್ರದ ಮಕ್ಕಳು ಕ್ಯಾಬಿನ್‌ನಲ್ಲಿ ಸುರಕ್ಷಿತವಾಗಿ ಕುಳಿತುಕೊಳ್ಳಲು ಸಾಧ್ಯವಾಗುವಂತೆ ಮಾಡುತ್ತದೆ. ಇದರ ಸೀಟ್ ಬೆಲ್ಟ್ ಮಾನಿಟರಿಂಗ್ ಸಿಸ್ಟಂ ಕೂಡ ಇದೆ, ಇದು ಚಾಲಕನನ್ನು ಅಲರ್ಟ್ ವಾರ್ನಿಂಗ್ ನೀಡುತದೆ. ಮುಂಭಾಗದ ಕಲಿಷನ್ ಅವೈಡನ್ಸ್ ಅಸಿಸ್ಟ್, ಲೇನ್-ಕೀಪ್ ಅಸಿಸ್ಟ್, ಬ್ಲೈಂಡ್-ಸ್ಪಾಟ್ ಲಿಷನ್ ಅವೈಡನ್ಸ್ ಮತ್ತು ಹಿಂಭಾಗದ ಟ್ರಾಫಿಕ್ ಮಾನಿಟರಿಂಗ್ ವ್ಯವಸ್ಥೆಯಂತಹ ಸುರಕ್ಷತಾ ವೈಶಿಷ್ಟ್ಯಗಳು ಇದರಲ್ಲಿ ಲಭ್ಯವಿದೆ.

Most Read Articles

Kannada
English summary
Hyundai motor india sold 37021 units in domestic market during october 2021 details
Story first published: Wednesday, November 3, 2021, 17:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X