5 ನಿಮಿಷ ಚಾರ್ಜ್ ಮಾಡಿದರೆ 100ಕಿ.ಮೀ ಮೈಲೇಜ್ ನೀಡುವ ಹ್ಯುಂಡೈ ಐಯಾನಿಕ್ 5 ಇವಿ ಕಾರು ಅನಾವರಣ

ಜಾಗತಿಕ ಮಟ್ಟದಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ದಕ್ಷಿಣ ಕೊರಿಯಾದ ಹ್ಯುಂಡೈ ಮೋಟಾರ್ಸ್ ಕಂಪನಿಯು ತನ್ನ ಹೊಚ್ಚ ಹೊಸ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಐಯಾನಿಕ್ 5 ಕ್ರಾಸ್ಓವರ್ ಎಸ್‌ಯುವಿ ಮಾದರಿಯ ಉತ್ಪಾದನಾ ಆವೃತ್ತಿಯನ್ನು ಅನಾವರಣಗೊಳಿಸಿದೆ.

ಹ್ಯುಂಡೈ ಐಯಾನಿಕ್ 5 ಇವಿ ಕಾರು ಅನಾವರಣ

ಕೊನಾ ಇವಿ ಮೂಲಕ ಈಗಾಗಲೇ ಜಾಗತಿಕ ಮಾರುಕಟ್ಟೆಗಳಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಹ್ಯುಂಡೈ ಮೋಟಾರ್ಸ್ ಕಂಪನಿಯು ಶೀಘ್ರದಲ್ಲೇ ಗ್ರಾಹಕರ ಬೇಡಿಕೆಯೆಂತೆ ಮತ್ತಷ್ಟು ಹೊಸ ಇವಿ ಕಾರು ಉತ್ಪನ್ನಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲು ಸಿದ್ದವಾಗುತ್ತಿದ್ದು, ಮಹತ್ವಾಕಾಂಕ್ಷೆಯ ಐಯಾನಿಕ್ 5 ಎಲೆಕ್ಟ್ರಿಕ್ ಕಾರು ಮಾದರಿಯನ್ನು ಇದೀಗ ಅನಾವರಣಗೊಳಿಸಿದೆ. 2025ರ ವರೆಗೆ 23 ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲು ಉದ್ದೇಶಿಸಿರುವ ಹ್ಯುಂಡೈ ಕಂಪನಿಯು ಹೊಸ ಐಯಾನಿಕ್ 5 ಕಾರನ್ನು ಫ್ಯೂಚರಿಸ್ಟಿಕ್ ವಿನ್ಯಾಸಗಳೊಂದಿಗೆ ಅಭಿವೃದ್ದಿಗೊಳಿಸಿದೆ.

ಹ್ಯುಂಡೈ ಐಯಾನಿಕ್ 5 ಇವಿ ಕಾರು ಅನಾವರಣ

ವಿಸ್ತೃತ ವೀಲ್‌ಬೇಸ್‌ನ ಕಾರಣದಿಂದಾಗಿ ಐಯಾನಿಕ್ 5 ಕಾರು ಹಲವಾರು ವಿಶಿಷ್ಟ್ಯತೆಗಳೊಂದಿಗೆ ಅಭಿವೃದ್ದಿಗೊಂಡಿದ್ದು, ಹೊಸ ಎಲೆಕ್ಟ್ರಿಕ್ ಕಾರನ್ನು ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್ (ಇ-ಜಿಎಂಪಿ) ತಂತ್ರಜ್ಞಾನದಡಿ ನಿರ್ಮಾಣ ಮಾಡಲಾಗಿದೆ.

ಹ್ಯುಂಡೈ ಐಯಾನಿಕ್ 5 ಇವಿ ಕಾರು ಅನಾವರಣ

ಮುಂಬರುವ ಐಯಾನಿಕ್ 6 ಸಲೂನ್ ಮತ್ತು ಐಯಾನಿಕ್ 7 ಎಸ್‌ಯುವಿ ಕೂಡಾ ಒಂದೇ ವಾಸ್ತುಶಿಲ್ಪವನ್ನು ಆಧರಿಸಿ ನಿರ್ಮಾಣಗೊಳ್ಳಲಿದ್ದು, ಡ್ಯಾಶ್‌ಬೋರ್ಡ್‌ನಲ್ಲಿ ಡ್ಯುಯಲ್ ಸ್ಕ್ರೀನ್ ಸೆಟಪ್‌ನೊಂದಿಗೆ ಬ್ಲ್ಯೂ ಲಿಂಕ್ ಕಾರ್ ಕನೆಕ್ಟ್ ಒಳಗೊಂಡ 12 ಇಂಚಿನ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಸಮಾನವಾದ ದೊಡ್ಡ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನೀಡಿರುವುದು ಕಾರಿನ ಕ್ಯಾಬಿನ್‌ಗೆ ಆಕರ್ಷಕ ಲುಕ್ ನೀಡಿದೆ.

ಹ್ಯುಂಡೈ ಐಯಾನಿಕ್ 5 ಇವಿ ಕಾರು ಅನಾವರಣ

ಐಯಾನಿಕ್ 5 ಕಾರು ಮಾದರಿಯು 4635 ಎಂಎಂ ಉದ್ದ, 1890 ಎಂಎಂ ಅಗಲ, 1605 ಎಂಎಂ ಎತ್ತರ ಮತ್ತು 3000 ಎಂಎಂ ವೀಲ್‌ಬೇಸ್‌ನೊಂದಿಗೆ ವಿಶಾಲವಾದ ಕ್ಯಾಬಿನ್ ಒದಗಿಸಲಿದ್ದು, ಹೊಸ ಕಾರು ಗ್ರಾಹಕರ ಬೇಡಕೆಯೆಂತೆ ಎರಡು ಪವರ್‌ಟ್ರೇನ್ ಸೆಟಪ್ ಮತ್ತು ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿದೆ.

ಹ್ಯುಂಡೈ ಐಯಾನಿಕ್ 5 ಇವಿ ಕಾರು ಅನಾವರಣ

ಹೊಸ ಕಾರನ್ನು ಹ್ಯುಂಡೈ ಕಂಪನಿಯು 58 ಕಿ.ವ್ಯಾ ಮತ್ತು 72.6 ಕಿ.ವ್ಯಾ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲು ನಿರ್ಧರಿಸಿದ್ದು, ಆರಂಭಿಕ ಮಾದರಿಯು 167 ಬಿಹೆಚ್‌ಪಿ ಉತ್ಪಾದಿಯೊಂದಿಗೆ ಕೇವಲ 8.5 ಸೆಕೆಂಡುಗಳಲ್ಲಿ ಗಂಟೆಗೆ ಸೊನ್ನೆಯಿಂದ ನೂರು ಕಿಮೀ ವೇಗವನ್ನು ತಲುಪುತ್ತದೆ.

ಹ್ಯುಂಡೈ ಐಯಾನಿಕ್ 5 ಇವಿ ಕಾರು ಅನಾವರಣ

ದೊಡ್ಡ ಬ್ಯಾಟರಿ ಪ್ಯಾಕ್‌ ಜೋಡಣೆ ಹೊಂದಿರುವ ಐಯಾನಿಕ್ 5 ಮಾದರಿಯು 302 ಬಿಹೆಚ್‌ಪಿ ಮತ್ತು 605 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಈ ಕೇವಲ 5.2 ಸೆಕೆಂಡುಗಳಲ್ಲಿ ಗಂಟೆಗೆ 0-100 ಕಿ.ಮೀ ವೇಗದೊಂದಿಗೆ ಪ್ರತಿ ಗಂಟೆಗೆ 185 ಕಿ.ಮೀ ಟಾಪ್ ಸ್ಪೀಡ್ ತಲುಪುತ್ತದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹ್ಯುಂಡೈ ಐಯಾನಿಕ್ 5 ಇವಿ ಕಾರು ಅನಾವರಣ

ಐಯಾನಿಕ್ 5 ಕಾರು ಬ್ಯಾಟರಿ ಪ್ಯಾಕ್ ಆಧಾರದ ಪ್ರತಿ ಚಾರ್ಜ್‌ಗೆ 470-480 ಕಿ.ಮೀ ಮೈಲೇಜ್ ಹಿಂದಿಗಿರುಗಿಸಲಿದ್ದು, ಆಧುನಿಕ ತಂತ್ರಜ್ಞಾನ ಪ್ರೇರಿತ ಚಾರ್ಜಿಂಗ್ ಸೌಲಭ್ಯದೊಂದಿಗೆ ಕೇವಲ 5 ನಿಮಿಷಗಳ ಕಾಲ ಚಾರ್ಜ್ ಮಾಡುವ ಮೂಲಕ ಗರಿಷ್ಠ 100 ಕಿ.ಮೀ ಮೈಲೇಜ್ ಪಡೆದುಕೊಳ್ಳಬಹುದಾಗಿದೆ.

ಹ್ಯುಂಡೈ ಐಯಾನಿಕ್ 5 ಇವಿ ಕಾರು ಅನಾವರಣ

ಹ್ಯುಂಡೈ ಕಂಪನಿಯು ಹೊಸದಾಗಿ ನಿರ್ಮಾಣ ಮಾಡಿರುವ ಎಲೆಕ್ಟ್ರಿಕ್-ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್ ಕಂಪನಿಯ ಭವಿಷ್ಯದ ಕಾರು ಮಾದರಿಗಳ ನಿರ್ಮಾಣಕ್ಕೆ ಉತ್ತಮ ವೇದಿಕೆಯಾಗಿದ್ದು, ಐಯಾನಿಕ್ 5 ಕಾರು ಇದೇ ವರ್ಷಾಂತ್ಯದೊಳಗೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಬಿಡುಗಡೆಯಾಗಲಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಹ್ಯುಂಡೈ ಐಯಾನಿಕ್ 5 ಇವಿ ಕಾರು ಅನಾವರಣ

ಭಾರತದಲ್ಲಿ ಸದ್ಯಕ್ಕೆ ಕೊನಾ ಮಾದರಿಯ ಮಾರಾಟವನ್ನು ಹೆಚ್ಚಿಸುವತ್ತ ಮಾತ್ರ ಯೋಜನೆ ಹೊಂದಿರುವ ಹ್ಯುಂಡೈ ಕಂಪನಿಯು ಮುಂದಿನ ಕೆಲವು ವರ್ಷಗಳಲ್ಲಿ ಹಂತ ಹಂತವಾಗಿ ಬಜೆಟ್ ಮಾದರಿಗಳಿಂದ ಫ್ಯೂಚರಿಸ್ಟಿಕ್ ವಿನ್ಯಾಸವುಳ್ಳ ಎಲೆಕ್ಟ್ರಿಕ್ ಕಾರುಗಳನ್ನು ವಿಶ್ವಾದ್ಯಂತ ಮಾರಾಟ ಮಾಡುವ ಗುರಿಹೊಂದಿದೆ.

Most Read Articles

Kannada
English summary
Hyundai Revealed Ionic 5 Electric Car With 470 Km Range. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X