ಆಕ್ಸಿಜನ್ ಉತ್ಪಾದನಾ ಘಟಕ ತೆರೆಯಲು ಹಣಕಾಸಿನ ನೆರವು ನೀಡಲು ಮುಂದಾದ ಹ್ಯುಂಡೈ

ಭಾರತದಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಕರೋನಾ ವೈರಸ್ ಸೋಂಕಿತರು ಪರದಾಡುವಂತಾಗಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ವಿಶ್ವದ ಹಲವು ರಾಷ್ಟ್ರಗಳು ಭಾರತಕ್ಕೆ ಸಹಾಯ ಮಾಡಲು ಮುಂದಾಗಿವೆ.

ಆಕ್ಸಿಜನ್ ಉತ್ಪಾದನಾ ಘಟಕ ತೆರೆಯಲು ಹಣಕಾಸಿನ ನೆರವು ನೀಡಲು ಮುಂದಾದ ಹ್ಯುಂಡೈ

ಶತ್ರು ರಾಷ್ಟ್ರ ಪಾಕಿಸ್ತಾನದಿಂದ ಚೀನಾವರೆಗೆ ಹಲವು ದೇಶಗಳು ಭಾರತಕ್ಕೆ ಸಹಾಯ ಮಾಡಲು ಮುಂದೆ ಬಂದಿವೆ. ಅಮೆರಿಕಾ, ಸಿಂಗಾಪುರ್, ಕೆನಡಾ ಸೇರಿದಂತೆ ಕೆಲವು ದೇಶಗಳು ಆಕ್ಸಿಜನ್ ಉತ್ಪಾದನಾ ಉಪಕರಣ, ಔಷಧಿ, ಹಣಕಾಸಿನ ನೆರವು ಸೇರಿದಂತೆ ಹಲವು ರೀತಿಯಲ್ಲಿ ನೆರವನ್ನು ನೀಡುತ್ತಿವೆ.

ಆಕ್ಸಿಜನ್ ಉತ್ಪಾದನಾ ಘಟಕ ತೆರೆಯಲು ಹಣಕಾಸಿನ ನೆರವು ನೀಡಲು ಮುಂದಾದ ಹ್ಯುಂಡೈ

ಕೆಲವು ವಾಹನ ತಯಾರಕ ಕಂಪನಿಗಳು ಸಹ ಸಹಾಯ ಹಸ್ತ ಚಾಚುತ್ತಿವೆ. ಭಾರತದಲ್ಲಿ ಎದುರಾಗಿರುವ ಆಕ್ಸಿಜನ್ ಕೊರತೆಯನ್ನು ನಿವಾರಿಸಲು ದೇಶದ ಪ್ರಮುಖ ವಾಹನ ತಯಾರಕ ಕಂಪನಿಗಳಲ್ಲಿ ಒಂದಾದ ಹ್ಯುಂಡೈ ಮೋಟಾರ್ ಸಹಾಯ ಮಾಡಲು ಮುಂದಾಗಿದೆ.

MOSTREAD: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಆಕ್ಸಿಜನ್ ಉತ್ಪಾದನಾ ಘಟಕ ತೆರೆಯಲು ಹಣಕಾಸಿನ ನೆರವು ನೀಡಲು ಮುಂದಾದ ಹ್ಯುಂಡೈ

ಕಂಪನಿಯು ಕರೋನಾ ಪರಿಹಾರ ನಿಧಿಗೆ ರೂ.20 ಕೋಟಿ ದೇಣಿಗೆ ನೀಡುವುದಾಗಿ ತಿಳಿಸಿದೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಹ್ಯುಂಡೈ ಕಂಪನಿಯು ಈ ಮೊತ್ತವನ್ನು ಮೀಸಲಿಟ್ಟಿದೆ.

ಆಕ್ಸಿಜನ್ ಉತ್ಪಾದನಾ ಘಟಕ ತೆರೆಯಲು ಹಣಕಾಸಿನ ನೆರವು ನೀಡಲು ಮುಂದಾದ ಹ್ಯುಂಡೈ

ಹ್ಯುಂಡೈ ಕಂಪನಿಯು ತಮಿಳುನಾಡು, ಮಹಾರಾಷ್ಟ್ರ, ದೆಹಲಿ, ಹರಿಯಾಣ ಹಾಗೂ ತೆಲಂಗಾಣ ರಾಜ್ಯಗಳಲ್ಲಿರುವ ಪ್ರಮುಖ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಘಟಕಗಳನ್ನು ನಿರ್ಮಿಸಲು ಈ ಪರಿಹಾರ ನಿಧಿಯನ್ನು ಬಳಸಲು ನಿರ್ಧರಿಸಿದೆ.

MOSTREAD: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಆಕ್ಸಿಜನ್ ಉತ್ಪಾದನಾ ಘಟಕ ತೆರೆಯಲು ಹಣಕಾಸಿನ ನೆರವು ನೀಡಲು ಮುಂದಾದ ಹ್ಯುಂಡೈ

ಮಾರುತಿ ಸುಜುಕಿ ಕಂಪನಿಯು ಸಹ ಹರಿಯಾಣದಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ ಇದೇ ರೀತಿ ಆಕ್ಸಿಜನ್ ಉತ್ಪಾದಿಸುವುದಾಗಿ ತಿಳಿಸಿತ್ತು. ಭಾರತದಲ್ಲಿ ಎದುರಾಗಿರುವ ಆಕ್ಸಿಜನ್ ಕೊರತೆಯನ್ನು ನೀಗಿಸಲು ಕೆಲಸ ಮಾಡುವುದಾಗಿ ಮಾರುತಿ ಸುಜುಕಿ ಕಂಪನಿ ಹೇಳಿದೆ.

ಆಕ್ಸಿಜನ್ ಉತ್ಪಾದನಾ ಘಟಕ ತೆರೆಯಲು ಹಣಕಾಸಿನ ನೆರವು ನೀಡಲು ಮುಂದಾದ ಹ್ಯುಂಡೈ

ಆಕ್ಸಿಜನ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಹ್ಯುಂಡೈ ಕಂಪನಿಯು ಕರೋನಾ ಪರಿಹಾರ ನಿಧಿಗೆ ರೂ.20 ಕೋಟಿ ನೀಡಲು ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ. ಇದರಿಂದ ದೇಶದಲ್ಲಿ ಉಂಟಾಗಿರುವ ಆಕ್ಸಿಜನ್ ಕೊರತೆ ನಿವಾರಣೆಯಾಗಿ ಜನರು ಪ್ರಾಣ ಕಳೆದುಕೊಳ್ಳುವುದು ತಪ್ಪಲಿದೆ.

MOSTREAD: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಆಕ್ಸಿಜನ್ ಉತ್ಪಾದನಾ ಘಟಕ ತೆರೆಯಲು ಹಣಕಾಸಿನ ನೆರವು ನೀಡಲು ಮುಂದಾದ ಹ್ಯುಂಡೈ

ಆಸ್ಪತ್ರೆಗಳಲ್ಲಿ ಮೂಲಸೌಕರ್ಯಗಳನ್ನು ನವೀಕರಿಸಲು ಅಗತ್ಯ ಬಿದ್ದರೆ ತನ್ನ ಸಿಬ್ಬಂದಿಯನ್ನು ನಿಯೋಜಿಸುವುದಾಗಿ ಹ್ಯುಂಡೈ ಕಂಪನಿ ತಿಳಿಸಿದೆ. ಇದರ ಜೊತೆಗೆ ಅಗತ್ಯವಿದ್ದರೆ ಟ್ರಸ್ಟ್ ಮೂಲಕ ಹೆಚ್ಚುವರಿ ಹಣ ನೀಡುವುದಾಗಿ ಕಂಪನಿ ತಿಳಿಸಿದೆ.

ಆಕ್ಸಿಜನ್ ಉತ್ಪಾದನಾ ಘಟಕ ತೆರೆಯಲು ಹಣಕಾಸಿನ ನೆರವು ನೀಡಲು ಮುಂದಾದ ಹ್ಯುಂಡೈ

ಈ ಬಗ್ಗೆ ಮಾತನಾಡಿರುವ ಹ್ಯುಂಡೈ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಟ್ರಸ್ಟ್ ಸಿಇಒ ಎಸ್ಎಸ್ ಕಿಮ್'ರವರು, ಕೋವಿಡ್ 19 ವೈರಸ್ ಎರಡನೇ ಅಲೆ ಭಾರತಕ್ಕೆ ದೊಡ್ಡ ಅಪಾಯವನ್ನುಂಟು ಮಾಡುತ್ತಿದೆ. ಇದರಿಂದಾಗಿ ದೇಶದ ಹಲವು ಪ್ರಮುಖ ನಗರಗಳು ಕಷ್ಟಕರ ಪರಿಸ್ಥಿತಿಯನ್ನು ಎದುರಿಸುತ್ತಿವೆ ಎಂದು ಹೇಳಿದ್ದಾರೆ.

Most Read Articles

Kannada
English summary
Hyundai Motors to give Rs.20 crore to corona relief fund. Read in Kannada.
Story first published: Thursday, April 29, 2021, 11:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X