ಫೆಬ್ರವರಿ ತಿಂಗಳಿನಲ್ಲಿ ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಖ್ಯಾತ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಇಂಡಿಯಾ ಹೊಸ ಗ್ರಾಹಕರನ್ನು ಆಕರ್ಷಿಸಲು ಫೆಬ್ರವರಿ ತಿಂಗಳಿನಲ್ಲಿ ಹಲವಾರು ಕೊಡುಗೆಗಳನ್ನು ನೀಡುತ್ತಿದೆ. ಈ ಕೊಡುಗೆಗಳ ಅಡಿಯಲ್ಲಿ ಕಂಪನಿಯು ಆಕರ್ಷಕ ರಿಯಾಯಿತಿಗಳನ್ನು ನೀಡುತ್ತಿದೆ.

ಫೆಬ್ರವರಿ ತಿಂಗಳಿನಲ್ಲಿ ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಹ್ಯುಂಡೈ ಕಾರುಗಳಲ್ಲಿ ಯಾವ ಕೊಡುಗೆಗಳು ಲಭ್ಯವಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಹ್ಯುಂಡೈ ಕಂಪನಿಯ ಜನಪ್ರಿಯ ಹ್ಯಾಚ್‌ಬ್ಯಾಕ್ ಕಾರ್ ಆದ ಸ್ಯಾಂಟ್ರೊ ಕಾರಿನ ಎರಾ ಮಾದರಿಯ ಮೇಲೆ ರೂ.20,000 ರಿಯಾಯಿತಿ ನೀಡಲಾಗುತ್ತಿದೆ. ಇತರ ಎಲ್ಲ ಮಾದರಿಗಳ ಮೇಲೆ ರೂ.30,000 ನಗದು ರಿಯಾಯಿತಿ ನೀಡಲಾಗುತ್ತದೆ. ಇದರ ಜೊತೆಗೆ ಈ ಕಾರಿನ ಮೇಲೆ ರೂ.15 ಸಾವಿರಗಳ ವಿನಿಮಯ ಬೋನಸ್ ಹಾಗೂ ರೂ.5,000ಗಳ ಕಾರ್ಪೊರೇಟ್ ರಿಯಾಯಿತಿ ನೀಡಲಾಗುತ್ತದೆ.

ಫೆಬ್ರವರಿ ತಿಂಗಳಿನಲ್ಲಿ ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್ ಕಾರಿನ ಬಗ್ಗೆ ಹೇಳುವುದಾದರೆ ಕಂಪನಿಯು ಈ ಕಾರಿನ 1.0-ಲೀಟರ್ ಟರ್ಬೊ-ಪೆಟ್ರೋಲ್ ಮಾದರಿಯ ಮೇಲೆ ರೂ.45,000ಗಳ ನಗದು ರಿಯಾಯಿತಿ ನೀಡುತ್ತಿದೆ. ಇದರ ಜೊತೆಗೆ ಹ್ಯುಂಡೈ ಕಂಪನಿಯು ಈ ಕಾರಿನ ಇತರ ಎಲ್ಲ ಮಾದರಿಗಳ ಮೇಲೆ ರೂ.15,000ಗಳಷ್ಟು ನಗದು ರಿಯಾಯಿತಿಯನ್ನು ನೀಡುತ್ತಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಫೆಬ್ರವರಿ ತಿಂಗಳಿನಲ್ಲಿ ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ನಗದು ರಿಯಾಯಿತಿಯ ಹೊರತಾಗಿ ಕಂಪನಿಯು ರೂ.10,000ಗಳ ವಿನಿಮಯ ಬೋನಸ್ ಹಾಗೂ ರೂ.5,000ಗಳ ಕಾರ್ಪೊರೇಟ್ ರಿಯಾಯಿತಿ ನೀಡಲಾಗುತ್ತದೆ. ಕಾಂಪ್ಯಾಕ್ಟ್ ಸೆಡಾನ್ ಹ್ಯುಂಡೈ ಒರಾ ಬಗ್ಗೆ ಹೇಳುವುದಾದರೆ ಕಂಪನಿಯು ಈ ಕಾರಿನ 1.0-ಲೀಟರ್ ಟರ್ಬೊ-ಪೆಟ್ರೋಲ್ ಮಾದರಿಯ ಮೇಲೆ ರೂ.50,000 ರಿಯಾಯಿತಿ ನೀಡುತ್ತದೆ.

ಫೆಬ್ರವರಿ ತಿಂಗಳಿನಲ್ಲಿ ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಈ ಕಾರಿನ 1.2-ಲೀಟರ್ ಪೆಟ್ರೋಲ್ ಹಾಗೂ 1.2-ಲೀಟರ್ ಡೀಸೆಲ್ ಮಾದರಿಗಳ ಮೇಲೆ ರೂ.20,000ಗಳ ನಗದು ರಿಯಾಯಿತಿಯನ್ನು ನೀಡಲಾಗುತ್ತದೆ. ಅದರ ಸಿಎನ್‌ಜಿ ಮಾದರಿಯ ಮೇಲೆ ಯಾವುದೇ ರಿಯಾಯಿತಿ ನೀಡುತ್ತಿಲ್ಲ. ಈ ಕಾರಿನ ಮೇಲೆ ರೂ.15 ಸಾವಿರಗಳ ವಿನಿಮಯ ಬೋನಸ್ ಹಾಗೂ ರೂ.5,000ಗಳ ಕಾರ್ಪೊರೇಟ್ ರಿಯಾಯಿತಿ ನೀಡಲಾಗುತ್ತದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಫೆಬ್ರವರಿ ತಿಂಗಳಿನಲ್ಲಿ ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಹ್ಯುಂಡೈ ಎಲಾಂಟ್ರಾ ಪೆಟ್ರೋಲ್ ಆಟೋಮ್ಯಾಟಿಕ್ ಮಾದರಿಗಳ ಮೇಲೆ ರೂ.30,000 ಹಾಗೂ ಪೆಟ್ರೋಲ್ ಮ್ಯಾನುಯಲ್ ಮಾದರಿಗಳ ಮೇಲೆ ರೂ.70,000ಗಳ ರಿಯಾಯಿತಿ ನೀಡಲಾಗುತ್ತದೆ. ಹ್ಯುಂಡೈ ಕಂಪನಿಯು ಡೀಸೆಲ್ ಮಾದರಿಗಳ ಮೇಲೆ ಯಾವುದೇ ನಗದು ರಿಯಾಯಿತಿಯನ್ನು ನೀಡುತ್ತಿಲ್ಲ.

ಫೆಬ್ರವರಿ ತಿಂಗಳಿನಲ್ಲಿ ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಹ್ಯುಂಡೈ ಎಲಾಂಟ್ರಾದ ಎಲ್ಲಾ ಮಾದರಿಗಳ ಮೇಲೆ ರೂ.30,000ಗಳ ವಿನಿಮಯ ಬೋನಸ್ ನೀಡಲಾಗುತ್ತದೆ. ದೇಶಿಯ ಮಾರುಕಟ್ಟೆಯಲ್ಲಿರುವ ಹ್ಯುಂಡೈ ಕಂಪನಿಯ ಏಕೈಕ ಎಲೆಕ್ಟ್ರಿಕ್ ಕಾರ್ ಆದ ಕೋನಾ ಇವಿಯ ಬಿಳಿ ಬಣ್ಣದ ಕಾರಿನ ಮೇಲೆ ರೂ.50,000ಗಳ ನಗದು ರಿಯಾಯಿತಿ ನೀಡಲಾಗುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಫೆಬ್ರವರಿ ತಿಂಗಳಿನಲ್ಲಿ ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಈ ಕಾರಿನ ಎಲ್ಲಾ ಇತರ ಬಣ್ಣಗಳ ಮೇಲೆ ರೂ.1.5 ಲಕ್ಷಗಳ ನಗದು ರಿಯಾಯಿತಿ ನೀಡಲಾಗುತ್ತದೆ. ಹ್ಯುಂಡೈ ಕೋನಾ ಇವಿ ಮೇಲೆ ಯಾವುದೇ ರೀತಿಯ ವಿನಿಮಯ ಬೋನಸ್ ಅಥವಾ ಕಾರ್ಪೊರೇಟ್ ರಿಯಾಯಿತಿ ನೀಡುತ್ತಿಲ್ಲ. ಹ್ಯುಂಡೈ ಅಕ್ಸೆಂಟ್ ಪ್ರೈಮ್ ಮೇಲೆ ರೂ.50,000ಗಳ ರಿಯಾಯಿತಿ ನೀಡಲಾಗುತ್ತದೆ.

ಫೆಬ್ರವರಿ ತಿಂಗಳಿನಲ್ಲಿ ಹ್ಯುಂಡೈ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಸರ್ಕಾರಿ ನೌಕರರು, ವೈದ್ಯರು, ನೋಂದಾಯಿತ ದಾದಿಯರು ಹಾಗೂ ಔಷಧ ಕಂಪನಿಗಳ ಉದ್ಯೋಗಿಗಳಿಗೆ ಕಂಪನಿಯು ಹೆಚ್ಚುವರಿ ರೂ.3 ಸಾವಿರಗಳ ರಿಯಾಯಿತಿ ನೀಡುತ್ತಿದೆ. ಗಮನಿಸಬೇಕಾದ ಸಂಗತಿಯೆಂದರೆ ಇತರ ಹ್ಯುಂಡೈ ಕಾರುಗಳಾದ ಐ 20, ವೆನ್ಯೂ, ವರ್ನಾ, ಕ್ರೆಟಾ ಹಾಗೂ ಟಕ್ಸನ್ ಕಾರುಗಳ ಮೇಲೆ ಯಾವುದೇ ರಿಯಾಯಿತಿ ನೀಡುತ್ತಿಲ್ಲ.

Most Read Articles

Kannada
English summary
Hyundai offering huge discount on cars in February. Read in Kannada.
Story first published: Friday, February 5, 2021, 21:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X