ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೌಲಭ್ಯ ಒದಗಿಸುತ್ತಿವೆ ಹ್ಯುಂಡೈ ಕಂಪನಿಯ ಮೊಬೈಲ್ ಮೆಡಿಕಲ್ ವ್ಯಾನ್‌ಗಳು

ಹ್ಯುಂಡೈ ಮೋಟಾರ್ಸ್ ಇಂಡಿಯಾ ಕಂಪನಿಯ ಸಮಾಜಮುಖಿ ಅಂಗವಾದ ಹ್ಯುಂಡೈ ಫೌಂಡೇಶನ್ ತನ್ನ ಸಾಮಾಜಿಕ ಕಾರ್ಯಕ್ರಮದ ಭಾಗವಾಗಿ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಸ್ಪರ್ಷ್ ಸಂಜೀವನಿ ಎಂಬ ಹೆಸರಿನ ಮೊಬೈಲ್ ಮೆಡಿಕಲ್ ವ್ಯಾನ್ ಅನ್ನು ನಡೆಸುತ್ತಿದೆ.

ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೌಲಭ್ಯ ಒದಗಿಸುತ್ತಿವೆ ಹ್ಯುಂಡೈ ಕಂಪನಿಯ ಮೊಬೈಲ್ ಮೆಡಿಕಲ್ ವ್ಯಾನ್‌ಗಳು

ಹ್ಯುಂಡೈ ಕಂಪನಿಯ ಈ ಮೊಬೈಲ್ ಮೆಡಿಕಲ್ ವ್ಯಾನ್‌ಗಳು ಹಳ್ಳಿಗಳಿಗೆ ಹೋಗಿ ಗ್ರಾಮಸ್ಥರಿಗೆ ಉಚಿತ ಆರಂಭಿಕ ವೈದ್ಯಕೀಯ ಸೌಲಭ್ಯವನ್ನು ಒದಗಿಸುತ್ತವೆ. ಈ ವೈದ್ಯಕೀಯ ಅಭಿಯಾನದ ಭಾಗವಾಗಿರುವ ಮೊಬೈಲ್ ಮೆಡಿಕಲ್ ವ್ಯಾನ್‌ಗಳಿಗೆ ಸಂಬಂಧಿಸಿದ ವೀಡಿಯೊವನ್ನು ಹ್ಯುಂಡೈ ಕಂಪನಿಯು ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ ಲೋಡ್ ಮಾಡಿದೆ.

ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೌಲಭ್ಯ ಒದಗಿಸುತ್ತಿವೆ ಹ್ಯುಂಡೈ ಕಂಪನಿಯ ಮೊಬೈಲ್ ಮೆಡಿಕಲ್ ವ್ಯಾನ್‌ಗಳು

ಕಂಪನಿಯ ಪ್ರಕಾರ ಈ ಮೊಬೈಲ್ ಮೆಡಿಕಲ್ ವ್ಯಾನ್‌ಗಳು ಪ್ರತಿದಿನ ಎರಡು ಗ್ರಾಮಗಳಿಗೆ ಭೇಟಿ ನೀಡಿ ಸುಮಾರು 100 ಜನರಿಗೆ ಚಿಕಿತ್ಸೆ ನೀಡುತ್ತವೆ. ರೋಗಿಗಳಿಗೆ ಪ್ರಾಥಮಿಕ ಪರೀಕ್ಷೆಯನ್ನು ನಡೆಸಲು ವೈದ್ಯಕೀಯ ಸಿಬ್ಬಂದಿಗಳ ತಂಡವು ಈ ಮೊಬೈಲ್ ವ್ಯಾನ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ.

MOST READ: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೌಲಭ್ಯ ಒದಗಿಸುತ್ತಿವೆ ಹ್ಯುಂಡೈ ಕಂಪನಿಯ ಮೊಬೈಲ್ ಮೆಡಿಕಲ್ ವ್ಯಾನ್‌ಗಳು

ಗುಣಪಡಿಸಲಾಗದ ಅಥವಾ ಗಂಭೀರವಾದ ಕಾಯಿಲೆ ಕಂಡುಬಂದಲ್ಲಿ ಅಂತಹವರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತದೆ. ವೈದ್ಯಕೀಯ ವ್ಯಾನ್‌ಗಳು ರೋಗಿಗಳ ಕಾಯಿಲೆಯ ಮಾಹಿತಿಯನ್ನು ಇರಿಸಿಕೊಳ್ಳುವಷ್ಟು ಸಮರ್ಥವಾಗಿವೆ.

ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೌಲಭ್ಯ ಒದಗಿಸುತ್ತಿವೆ ಹ್ಯುಂಡೈ ಕಂಪನಿಯ ಮೊಬೈಲ್ ಮೆಡಿಕಲ್ ವ್ಯಾನ್‌ಗಳು

ವ್ಯಾನ್‌ನಲ್ಲಿ ಚಿಕಿತ್ಸೆ ಪಡೆಯಲು ಬರುವ ರೋಗಿಗಳಿಗೆ ಆರೋಗ್ಯ ಕಾರ್ಡ್ ಸಹ ನೀಡಲಾಗುತ್ತದೆ. ಈ ಕಾರ್ಡ್'ನಲ್ಲಿ ರೋಗಿಗಳ ರೋಗ ಹಾಗೂ ಔಷಧಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ದಾಖಲಿಸಲಾಗುತ್ತದೆ.

MOST READ: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೌಲಭ್ಯ ಒದಗಿಸುತ್ತಿವೆ ಹ್ಯುಂಡೈ ಕಂಪನಿಯ ಮೊಬೈಲ್ ಮೆಡಿಕಲ್ ವ್ಯಾನ್‌ಗಳು

ಗ್ರಾಮೀಣ ಪ್ರದೇಶಗಳಲ್ಲಿ ಆಸ್ಪತ್ರೆಗಳ ಕೊರತೆ ಇದ್ದು, ಜನರು ಚಿಕಿತ್ಸೆ ಪಡೆಯಲು ಬಹಳ ದೂರ ಪ್ರಯಾಣಿಸಬೇಕಾಗುತ್ತದೆ. ಈ ಕಾರಣಕ್ಕೆ ಹ್ಯುಂಡೈ ಕಂಪನಿಯು ಈ ಮೊಬೈಲ್ ವ್ಯಾನ್‌ಗಳ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಚಿಕಿತ್ಸೆ ನೀಡುತ್ತಿದೆ.

ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೌಲಭ್ಯ ಒದಗಿಸುತ್ತಿವೆ ಹ್ಯುಂಡೈ ಕಂಪನಿಯ ಮೊಬೈಲ್ ಮೆಡಿಕಲ್ ವ್ಯಾನ್‌ಗಳು

ಈ ವರ್ಷದ ಜನವರಿ ತಿಂಗಳಿನಲ್ಲಿ ಕಂಪನಿಯು ರಾಜಸ್ಥಾನದ ಅಲ್ವಾರ್'ನಿಂದ ಹ್ಯುಂಡೈ ಮೊಬೈಲ್ ಮೆಡಿಕಲ್ ವ್ಯಾನ್ ಅನ್ನು ಆರಂಭಿಸಿತು. ಹ್ಯುಂಡೈನ ಮೊಬೈಲ್ ಮೆಡಿಕಲ್ ವ್ಯಾನ್‌ನಲ್ಲಿ ಬ್ಲಡ್ ಶುಗರ್, ಬಿಪಿ, ಮಲೇರಿಯಾ, ಡೆಂಗ್ಯೂ ಇತ್ಯಾದಿಗಳನ್ನು ಪರೀಕ್ಷಿಸುವ ಸೌಲಭ್ಯವಿದೆ.

MOST READ: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೌಲಭ್ಯ ಒದಗಿಸುತ್ತಿವೆ ಹ್ಯುಂಡೈ ಕಂಪನಿಯ ಮೊಬೈಲ್ ಮೆಡಿಕಲ್ ವ್ಯಾನ್‌ಗಳು

ಈ ವ್ಯಾನ್ ಮೂಲಕ ವಿವಿಧ ರೋಗಗಳನ್ನು ತಡೆಗಟ್ಟುವ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಸಹ ನಡೆಸಲಾಗುತ್ತದೆ. ಕರೋನಾ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿರುವ ಹ್ಯುಂಡೈ ಫೌಂಡೇಶನ್ ತಮಿಳುನಾಡು ಸರ್ಕಾರಕ್ಕೆ ರೂ.10 ಕೋಟಿಗಳ ದೇಣಿಗೆ ನೀಡಿದೆ.

ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೌಲಭ್ಯ ಒದಗಿಸುತ್ತಿವೆ ಹ್ಯುಂಡೈ ಕಂಪನಿಯ ಮೊಬೈಲ್ ಮೆಡಿಕಲ್ ವ್ಯಾನ್‌ಗಳು

ಇದರ ಜೊತೆಗೆ ರೂ.5 ಕೋಟಿ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಒದಗಿಸಿದೆ. ಇವುಗಳಲ್ಲಿ ಹೈ ಫ್ಲೋ ಆಕ್ಸಿಜನ್ ಮಿಷಿನ್'ಗಳು, ಆಕ್ಸಿಜನ್ ಕಾನ್ಸೆಂಟ್ರೆಟರ್ ಹಾಗೂ ಇನ್ನಿತರ ವೈದ್ಯಕೀಯ ಉಪಕರಣಗಳು ಸೇರಿವೆ.

MOST READ: ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೌಲಭ್ಯ ಒದಗಿಸುತ್ತಿವೆ ಹ್ಯುಂಡೈ ಕಂಪನಿಯ ಮೊಬೈಲ್ ಮೆಡಿಕಲ್ ವ್ಯಾನ್‌ಗಳು

ಕರೋನಾ ವೈರಸ್ ಎರಡನೇ ಅಲೆಯ ಕಾರಣಕ್ಕೆ ಜಾರಿಗೊಳಿಸಲಾಗಿರುವ ಲಾಕ್‌ಡೌನ್ ಹಿನ್ನೆಲೆಯಲ್ಲಿ ಹ್ಯುಂಡೈ ಕಂಪನಿಯು ತನ್ನ ವಾಹನಗಳ ಮೇಲಿನ ವಾರಂಟಿ ಹಾಗೂ ಫ್ರೀ ಸರ್ವೀಸ್ ಅವಧಿಯನ್ನು ವಿಸ್ತರಿಸುವ ಮೂಲಕ ಗ್ರಾಹಕರ ನೆರವಿಗೆ ಧಾವಿಸಿದೆ.

ಲಾಕ್‌ಡೌನ್ ಸಮಯದಲ್ಲಿ ವಾರಂಟಿ ಅವಧಿ ಮುಗಿಯುವ ಗ್ರಾಹಕರಿಗೆ ಹ್ಯುಂಡೈ ಕಂಪನಿಯು ವಾರಂಟಿ ಅವಧಿಯನ್ನು ಎರಡು ತಿಂಗಳ ಕಾಲ ವಿಸ್ತರಿಸಿದೆ. ಹ್ಯುಂಡೈ ಕಂಪನಿಯು ತನ್ನ ಗ್ರಾಹಕರಿಗಾಗಿ ಡಿಜಿಟಲ್ ಪ್ಲಾಟ್ ಫಾರಂ ಅನ್ನು ಆರಂಭಿಸಿದೆ.

MOST READ: ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೌಲಭ್ಯ ಒದಗಿಸುತ್ತಿವೆ ಹ್ಯುಂಡೈ ಕಂಪನಿಯ ಮೊಬೈಲ್ ಮೆಡಿಕಲ್ ವ್ಯಾನ್‌ಗಳು

ಈ ಯೋಜನೆಯ ಮೂಲಕ ಗ್ರಾಹಕರು ಮನೆಯಲ್ಲಿ ಕುಳಿತುಕೊಂಡೇ ತಮ್ಮ ನೆಚ್ಚಿನ ಹ್ಯುಂಡೈ ಕಾರನ್ನು ಖರೀದಿಸಬಹುದು. ಕಂಪನಿಯು ಕಳೆದ ವರ್ಷದ ಲಾಕ್‌ಡೌನ್‌ ಅವಧಿಯಲ್ಲಿ ಈ ಯೋಜನೆಯನ್ನು ಆರಂಭಿಸಿತು.

Most Read Articles

Kannada
English summary
Hyundai offers medical facility to villagers through mobile medical vans. Read in Kannada.
Story first published: Sunday, May 30, 2021, 12:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X