ಅಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ ಹೊಸ Hyundai Casper ಸಣ್ಣ ಎಸ್‍ಯುವಿ

Hyundai ಕಂಪನಿಯು ಹೊಸ Casper ಮೈಕ್ರೋ ಎಸ್‍ಯುವಿಯು ಮುಂದಿನ ತಿಂಗಳು ಜಾಗತಿಕ ಮಟ್ಟದಲ್ಲಿ ಪಾದಾರ್ಪಣೆ ಮಾಡಲಿದೆ. ಈ ಹೊಸ Hyundai Casper ಸಣ್ಣ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

ಅಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ ಹೊಸ Hyundai Casper ಸಣ್ಣ ಎಸ್‍ಯುವಿ

ಹೊಸ Hyundai Casper ಸಣ್ಣ ಎಸ್‍ಯುವಿಯು ಈ ವರ್ಷದ ಅಂತ್ಯದಲ್ಲಿ ದಕ್ಷಿಣ ಕೊರಿಯಾದಲ್ಲಿ ಮಾರಾಟವಾಗಲಿದೆ, ಹ್ಯುಂಡೈ ಕೊರಿಯಾದಲ್ಲಿ ಕ್ಯಾಸ್ಪರ್ ನೇಮ್‌ಪ್ಲೇಟ್ ಅನ್ನು ಟ್ರೇಡ್‌ಮಾರ್ಕ್ ಆಗಿ ನೋಂದಾಯಿಸಿದೆ. ಹ್ಯುಂಡೈ ಕ್ಯಾಸ್ಪರ್ ಭಾರತದಲ್ಲಿ ಮತ್ತು ಇತರ ಮಾರುಕಟ್ಟೆಗಳಲ್ಲಿ ವಿಭಿನ್ನ ಹೆಸರಿನೊಂದಿಗೆ ಬರಬಹುದು. ಇದು ಹ್ಯುಂಡೈಯ ಚಿಕ್ಕ ಎಸ್‍ಯುವಿಯಾಗಿದ್ದು, ಸಬ್-ಮೀಟರ್ ಎಸ್‍ಯುವಿಗಿಂತ ಕೆಳಗಿರುತ್ತದೆ. ಕ್ಯಾಸ್ಪರ್ ಹ್ಯುಂಡೈನ ಕೆ1 ಕಾಂಪ್ಯಾಕ್ಟ್ ಕಾರ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಇದು ಪ್ರಸ್ತುತ ಗ್ರ್ಯಾಂಡ್ ಐ10 ನಿಯೋಸ್ ಮತ್ತು ಸ್ಯಾಂಟ್ರೊಗೆ ಆಧಾರವಾಗಿದೆ.

ಅಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ ಹೊಸ Hyundai Casper ಸಣ್ಣ ಎಸ್‍ಯುವಿ

ಇನ್ನು ಈ Hyundai Casper 3,595 ಎಂಎಂ ಉದ್ದ, 1,595 ಎಂಎಂ ಅಗಲ ಮತ್ತು 1,575 ಎಂಎಂ ಎತ್ತರವನ್ನು ಹೊಂದಿರಲಿದೆ ಇದು ಸ್ಯಾಂಟ್ರೊ ಹ್ಯಾಚ್‌ಬ್ಯಾಕ್‌ಗಿಂತ ಚಿಕ್ಕದಾಗಿದೆ. Casper ಮಾದರಿಯು ಮಾರುತಿ ಸುಜುಕಿ ಇಗ್ನಿಸ್, ಮಹೀಂದ್ರಾ ಕೆಯುವಿ 100 ಎನ್‌ಎಕ್ಸ್‌ಟಿ ಮತ್ತು ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಟಾಟಾ ಎಚ್‌ಬಿಎಕ್ಸ್ ಕಾನ್ಸೆಪ್ಟ್ ಆಧಾರಿತ ಮೈಕ್ರೊ ಎಸ್‌ಯುವಿಗಿಂತ ಚಿಕ್ಕದಾಗಿರುತ್ತದೆ.

ಅಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ ಹೊಸ Hyundai Casper ಸಣ್ಣ ಎಸ್‍ಯುವಿ

ಹೊಸ Hyundai ಎಎಕ್ಸ್1 ಮಿನಿ ಎಸ್‌ಯುವಿ ಜಿಜಿಎಂ ಉತ್ಪಾದನಾ ಘಟಕದಲ್ಲಿ ಉತ್ಪಾದಿಸಲಾಗುವುದು.ಕಾರಿನ ಪ್ರಾಯೋಗಿಕ ಉತ್ಪಾದನೆಯನ್ನು ಈಗಾಗಲೇ ಪ್ರಾರಂಭಿಸಲಾಗಿದ್ದು, ಸಾಮೂಹಿಕ ಉತ್ಪಾದನೆಯು ಸೆಪ್ಟೆಂಬರ್ 15 ರಿಂದ ಪ್ರಾರಂಭವಾಗಲಿದೆ.

ಅಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ ಹೊಸ Hyundai Casper ಸಣ್ಣ ಎಸ್‍ಯುವಿ

Hyundai ಆರಂಭದಲ್ಲಿ ಸಣ್ಣ ಎಸ್‌ಯುವಿಯ ಪೆಟ್ರೋಲ್ ಆವೃತ್ತಿಯನ್ನು ಪರಿಚಯಿಸಲಿದ್ದು, ಅದರ ನಂತರ 2023 ರಲ್ಲಿ ಎಲೆಕ್ಟ್ರಿಕ್ ಮಾದರಿಯಾಗಿ ಪರಿಚಯಿಸಲಿದೆ. ಈ ಮೈಕ್ರೊ ಎಸ್‍ಯುವಿಯು ಬೋರ್ಗ್‌ವರ್ನರ್ ಇಂಟಿಗ್ರೇಟೆಡ್ ಡ್ರೈವ್ ಮಾಡ್ಯೂಲ್ (ಐಡಿಎಂ) ಅನ್ನು ಪಡೆಯುತ್ತದೆ, ಇದು ಮಾಡ್ಯುಲರ್ ಘಟಕದಲ್ಲಿ ಎಲೆಕ್ಟ್ರಿಕ್ ಮೋಟರ್, ಗೇರ್‌ಬಾಕ್ಸ್ ಮತ್ತು ಪವರ್ ಎಲೆಕ್ಟ್ರಾನಿಕ್ ಅನ್ನು ಒಳಗೊಂಡಿರುತ್ತದೆ.

ಅಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ ಹೊಸ Hyundai Casper ಸಣ್ಣ ಎಸ್‍ಯುವಿ

ವರದಿಗಳ ಪ್ರಕಾರ, ಹೊಸ Hyundai Casper ಸಣ್ಣ ಎಸ್‍ಯುವಿಯು ಎರಡು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ, -1.0-ಲೀಟರ್ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು ಹೊಸ 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 76 ಬಿಎಚ್‌ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿರುತ್ತದೆ.

ಅಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ ಹೊಸ Hyundai Casper ಸಣ್ಣ ಎಸ್‍ಯುವಿ

ಇದರೊಂದಿಗೆ ಯೋಸ್ ಟರ್ಬೊ ಮತ್ತು ಔರಾ ಟರ್ಬೊ ಮಾದರಿಯಲ್ಲಿರುವ 1.0-ಲೀಟರ್ 3-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಬಹುದು. ಈ ಟರ್ಬೋ ಎಂಜಿನ್ 100 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಂಜಿನ್ ನೊಂದಿಗೆ 4-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.

ಅಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ ಹೊಸ Hyundai Casper ಸಣ್ಣ ಎಸ್‍ಯುವಿ

ಇಂಡಿಯಾ-ಸ್ಪೆಕ್ Hyundai Casper ಸಣ್ಣ ಎಸ್‍ಯುವಿಯಲ್ಲಿ ಸ್ಯಾಂಟ್ರೊದ 1.1L 4-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಬಹುದು. ಈ ಎಂಜಿನ್ 69 ಬಿಹೆಚ್‍ಪಿ ಪವರ್ ಮತ್ತು 99 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಅಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ ಹೊಸ Hyundai Casper ಸಣ್ಣ ಎಸ್‍ಯುವಿ

ಇದರೊಂದಿಗೆ ಗ್ರ್ಯಾಂಡ್ ಐ 10 ನಿಯೋಸ್‌ಗೆ ನೀಡುವ ಪೆಟ್ರೋಲ್ ಎಂಜಿನ್ ಅನ್ನು ಕೂಡ ಬಳಬಹುದು. ಈ ಎಂಜಿನ್ 82 ಬಿಹೆಚ್‌ಪಿ ಪವರ್ ಮತ್ತು 114 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿಯನ್ನು ಒಳಗೊಂಡಿರುವ ಸಾಧ್ಯತೆಯಿದೆ. ಇನ್ನು ಟಾಪ್-ಸ್ಪೆಕ್ ಮಾದರಿಯು 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಪಡೆಯಬಹುದು.

ಅಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ ಹೊಸ Hyundai Casper ಸಣ್ಣ ಎಸ್‍ಯುವಿ

ಹೊಸ Hyundai Casper ಸಣ್ಣ ಎಸ್‍ಯುವಿಯು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಕನೆಕ್ಟಿವಿಟಿ ಕಾರ್ ಟೆಕ್, ಕೀಲೆಸ್ ಎಂಟ್ರಿ, ಇಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್, ರಿವರ್ಸ್ ಕ್ಯಾಮೆರಾ ಇತ್ಯಾದಿಗಳೊಂದಿಗೆ ಹೊಸ ಮೈಕ್ರೋ ಎಸ್‌ಯುವಿಯು 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಪಡೆಯುವ ಸಾಧ್ಯತೆಯಿದೆ.

ಅಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ ಹೊಸ Hyundai Casper ಸಣ್ಣ ಎಸ್‍ಯುವಿ

ಇನ್ನು Hyundai ಕಂಪನಿಯು Creta ಮಾರಾಟದ ವೇಗವನ್ನು ಮತ್ತಷ್ಟು ಹೆಚ್ಚಿಸಲು ಕಂಪನಿಯು 2022ರ ಅಂತ್ಯದ ವೇಳೆಗೆ ಕ್ರೆಟಾಕ್ಕೆ ಮಿಡ್-ಲೈಫ್ ಅಪ್‌ಡೇಟ್ ನೀಡಲು ಯೋಜಿಸಿದೆ. ಹ್ಯುಂಡೈ ಕಂಪನಿಯು ಈ ತಿಂಗಳ ಕೊನೆಯಲ್ಲಿ ಬ್ರೆಜಿಲ್‌ನಲ್ಲಿ 2022ರ Hyundai Creta facelift ಎಸ್‌ಯುವಿಯನ್ನು ಇದೇ ತಿಂಗಳ 25 ರಂದು ಪರಿಚಯಿಸಲಿದೆ, Hyundai ಕಂಪನಿಯು ಬ್ರೆಜಿಲ್ ನಲ್ಲಿರುವ ಕಂಪನಿಯ ಪಿರಾಸಿಕ್ಯಾಬಾ ಕಾರು ತಯಾರಕ ಘಟಕದಲ್ಲಿ 2022ರ Creta ಎಸ್‍ಯುವಿಯ ಉತ್ಪಾದನೆಯನ್ನು ಪ್ರಾರಂಭಿಸಿದೆ.

ಅಕರ್ಷಕ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ ಹೊಸ Hyundai Casper ಸಣ್ಣ ಎಸ್‍ಯುವಿ

ಇನ್ನು Hyundai Casper ಸಣ್ಣ ಎಸ್‍ಯುವಿಯು ವೃತ್ತಾಕಾರದ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಸುತ್ತಿನ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿಸಿ, ದೊಡ್ಡ ಗ್ರಿಲ್, ಎಲ್ಇಡಿ ಡಿಆರ್‌ಎಲ್‌ಗಳ ತೆಳುವಾದ ಸ್ಟ್ರಿಪ್ ಟರ್ನ್ ಇಂಡಿಕೇಟರ್‌ಗಳು, ಸ್ಪ್ಲಿಟ್ ಟೈಲ್ ಲ್ಯಾಂಪ್ಸ್, ರೂಫ್ ಮೇಲೆ ಜೋಡಿಸಲಾದ ಸ್ಪಾಯ್ಲರ್ ಜೊತೆಗೆ ಟೈಲ್ ಗೇಟ್ ಅನ್ನು ಹೊಂದಿದೆ. Hyundai Casper ಮೈಕ್ರೋ ಎಸ್‍ಯುವಿಯು ಆಕರ್ಷಕ ಬಾಕ್ಸಿ ವಿನ್ಯಾಸವನ್ನು ಹೊಂದಿದೆ,

Article Published On: Monday, August 23, 2021, 19:27 [IST]
English summary
Hyundai planning to unveil new small suv casper on coming next month details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+